HOME » NEWS » Tech » GOOGLE LAUNCHES A NEW SOCIAL NETWORKING APP CALLED SHOELACE HAS

Google Shoelace: ಗೂಗಲ್​ನಿಂದ ಹೊಸ ಆ್ಯಪ್ ಬಿಡುಗಡೆ​; ಏನಿದರ ವಿಶೇಷತೆ?

Google Shoelace: ಗೂಗಲ್​ ತಯಾರಿಸಿದ ‘ಶೂಲೆಸ್​‘ ಆ್ಯಪ್​ನಲ್ಲಿ​ ಯೋಗ, ಸೈಕ್ಲಿಂಗ್​, ಸ್ವಿಮ್ಮಿಂಗ್​ ಮುಂತಾದ ಆ್ಯಕ್ಟಿವಿಟಿಗಳ ಆಯ್ಕೆಯನ್ನು ನೀಡಿದೆ.

Harshith AS | news18
Updated:July 18, 2019, 6:22 PM IST
Google Shoelace: ಗೂಗಲ್​ನಿಂದ ಹೊಸ ಆ್ಯಪ್ ಬಿಡುಗಡೆ​; ಏನಿದರ ವಿಶೇಷತೆ?
‘ಶೂಲೆಸ್‘​ ಆ್ಯಪ್
  • News18
  • Last Updated: July 18, 2019, 6:22 PM IST
  • Share this:
ಪ್ರತಿಷ್ಠಿತ ಗೂಗಲ್​ ಸಂಸ್ಥೆ ಇದೀಗ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಹಕರಿಗಾಗಿ ಈ ಬಾರಿ ‘ಶೂಲೆಸ್​‘ ಹೆಸರಿನ ಹೊಸ ಆ್ಯಪ್​ವೊಂದನ್ನು ತಯಾರಿಸಿದ್ದು, ಜನಪ್ರಿಯ ತಾಣಗಳಿಗೆ ಪೈಪೋಟಿನೀಡಲು ಸಿದ್ಧವಾಗಿದೆ.

ಗೂಗಲ್​ ತಯಾರಿಸಿದ ಸೋಷಿಯಲ್​ ನೆಟ್​​ವರ್ಕ್​ ‘ಶೂಲೆಸ್‘​ ಆ್ಯಪ್ ಹೊಸ ಆಯ್ಕೆಗಳನ್ನು ​ಹೊಂದಿದ್ದು. ವ್ಯಕ್ತಿಗಳ ನಡುವೆ ಸಂವಾದ ಸೃಷ್ಠಿಸಲು ಮತ್ತು ಹೊಸ ಸ್ನೇಹಿತರನ್ನು ಪಡೆಯ ಈ ಆ್ಯಪ್​ ಸಹಕಾರಿಯಾಗಿದೆ. ಜೊತೆಗೆ ಬಳಕೆದಾರರಿಗೆ ವಿವಿಧ ಆ್ಯಕ್ಟಿವಿಟಿಗಳ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿಯ ಫ್ಯಾನ್ ಆದ್ರಾ WWE ಚಾಂಪಿಯನ್ ಜಾನ್ ಸೀನಾ?; ಹೌದೆನ್ನುತ್ತಿದೆ ಈ ಫೋಟೋ

 

ಗೂಗಲ್​ ತಯಾರಿಸಿದ ‘ಶೂಲೆಸ್​‘ ಆ್ಯಪ್​ನಲ್ಲಿ​ ಯೋಗ, ಸೈಕ್ಲಿಂಗ್​, ಸ್ವಿಮ್ಮಿಂಗ್​ ಮುಂತಾದ ಆ್ಯಕ್ಟಿವಿಟಿಗಳ ಆಯ್ಕೆಯನ್ನು ನೀಡಿದೆ. ಅಂತೆಯೇ, ಅಂಡ್ರಾಯ್ಡ್​​​ ಮತ್ತು ಐಓಎಸ್​​​ ಅಪರೇಟಿಂಗ್​ ಸಿಸ್ಟಮ್​​ ಬಳಕೆದಾರರಿಗೆ ಈ ಆ್ಯಪ್​ ಲಭ್ಯವಿರಲಿದೆ. ಜೊತೆಗೆ ಸ್ನೇಹಿತರನ್ನು ಮತ್ತು ಅಪರಿಚಿತ ಸ್ನೇಹಿತರನ್ನು ಆಹ್ವಾನಿಸುವ ಆಯ್ಕೆಯಿದೆ. ಮಾತ್ರವಲ್ಲದೆ ನಿಮ್ಮ ಸ್ನೇಹಿತರಿಗೆ ಅನುಗುಣವಾದ ಆಸಕ್ತಿದಾಯಕ ಇವೆಂಟ್​ ಮತ್ತು ಆಕ್ಟಿವಿಟಿಗಳನ್ನು ಇದರಲ್ಲಿ ನೀಡಲಾಗಿದೆ.

‘ಶೂಲೆಸ್‘​ ಆ್ಯಪ್​​ನಲ್ಲಿ ಸ್ನೇಹಿತರ ಆಯ್ಕೆಯು ವಿಶೇಷವಾಗಿದೆ.  ಬಳಕೆದಾರರು ತಮ್ಮ ಅಭಿರುಚಿಗೆ ಸರಿಹೊಂದುವವರನ್ನು ನಿಮ್ಮ ಸ್ನೇಹಿತರಾಗಲು ಈ ಆ್ಯಪ್​ ನೆರವಾಗಲಿದೆ.

ಗೂಗಲ್​ ಸಂಸ್ಥೆಯ ‘ಶೂಲೆಸ್​ ಆ್ಯಪ್​​ ನ್ಯೂಯಾರ್ಕ್​ನಲ್ಲಿ ಮಾತ್ರ ಲಭ್ಯವಿದೆ. ಆದರೆ ಭಾರತ ಸೇರಿದಂತೆ ಉಳಿದ ರಾಷ್ಟ್ರಗಳಿಗೆ ಯಾವಾಗ ಬರಲಿದೆ ಎನ್ನುವ ಮಾಹಿತಿಯನ್ನು ಕಂಪೆನಿ ಹೊರಹಾಕಿಲ್ಲ.
First published: July 13, 2019, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories