ಈಗಂತೂ ಈ ಸ್ಮಾರ್ಟ್ಫೋನ್ (Smart Phone) ತಯಾರಕ ಕಂಪನಿಗಳು (Company) ಒಂದರ ಮೇಲೆ ಇನ್ನೊಂದು ಎಂಬಂತೆ ಹೊಸ ಹೊಸ ಫೀಚರ್ ಗಳಿರುವ ಸ್ಮಾರ್ಟ್ಫೋನ್ ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ (Market) ಬಿಡುಗಡೆ ಮಾಡುತ್ತಲೇ ಇವೆ. ಸ್ಮಾರ್ಟ್ಫೋನ್ ಕೊಳ್ಳುವ ಗ್ರಾಹಕರು ಸಹ ಈ ಎಲ್ಲಾ ಬಿಡುಗಡೆಯಾದ ಫೋನ್ ಗಳ ಬೆಲೆಗಳನ್ನು ಮತ್ತು ಅವುಗಳ ವೈಶಿಷ್ಟ್ಯತೆಗಳನ್ನು ಹೋಲಿಕೆ ಮಾಡಿ ನೋಡಿ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸ್ಮಾರ್ಟ್ಫೋನ್ ಕೊಳ್ಳುವವವರಿಗೆ ಮತ್ತೊಂದು ಸಿಹಿ ಸುದ್ದಿ ಇದೆ ನೋಡಿ. ಜಾಗತಿಕ ಬಿಡುಗಡೆಯ ಭಾಗವಾಗಿ, ಗೂಗಲ್ ಪಿಕ್ಸೆಲ್ 6ಎ (Google Pixel 6A) ಜುಲೈ 28 ರಿಂದ ಭಾರತದಲ್ಲಿ ಲಭ್ಯವಾಗಲಿದೆ.
ಗೂಗಲ್ ವಿನ್ಯಾಸಗೊಳಿಸಿದ ಪಿಕ್ಸೆಲ್ 6ಎ ಸ್ಮಾರ್ಟ್ ಫೋನ್
ಮೇ ತಿಂಗಳಲ್ಲಿ ಗೂಗಲ್ ಐ/ಒ ನಲ್ಲಿ ಘೋಷಿಸಲಾದ ಈ ಸ್ಮಾರ್ಟ್ಫೋನ್ ಗಳ ಬೆಲೆ 43,999 ರೂಪಾಯಿ ಆಗಿತ್ತು. ಈ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವ ಇಚ್ಚೆಯುಳ್ಳವರು ಇದನ್ನು ಇ-ಕಾಮರ್ಸ್ ಸೈಟ್ ಆದ ಫ್ಲಿಪ್ಕಾರ್ಟ್ ನಲ್ಲಿ ಮುಂಚಿತವಾಗಿ ಕಾಯ್ದಿರಿಸಿ 39,999 ರೂಪಾಯಿಗಳಿಗೆ ಇದನ್ನು ಪಡೆಯಬಹುದು.
ತಮ್ಮದೇ ಆದ ಚಿಪ್ ಅನ್ನು ವಿನ್ಯಾಸಗೊಳಿಸುವ ಆಪಲ್ ನೊಂದಿಗೆ ಗೂಗಲ್ ಸೇರಿಕೊಂಡಿದೆ. ಪಿಕ್ಸೆಲ್ 6ಎ ಗೂಗಲ್ ಟೆನ್ಸರ್ ಚಿಪ್ ನಿಂದ ಚಾಲಿತವಾಗಿದೆ, ಇದು ಗೂಗಲ್ ವಿನ್ಯಾಸಗೊಳಿಸಿದ ಮೊದಲನೆಯದು, ಇದು ಪಿಕ್ಸೆಲ್ 6ಎ ಅನ್ನು ಸೂಪರ್-ಫಾಸ್ಟ್ ಮತ್ತು ಸ್ಪಂದನಶೀಲ ವಾಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಸ್ಮಾರ್ಟ್ ಫೋನಿನ ವೈಶಿಷ್ಟ್ಯಗಳೇನು?
ಭದ್ರತೆಗಾಗಿ ಟೈಟಾನ್ ಎಂ2 ಚಿಪ್, ಐದು ವರ್ಷಗಳ ಭದ್ರತಾ ನವೀಕರಣಗಳು, ಅಡಾಪ್ಟಿವ್ ಬ್ಯಾಟರಿ ಮತ್ತು ಮ್ಯಾಜಿಕ್ ಎರೇಸರ್ ಸೇರಿದಂತೆ ಕ್ಯಾಮೆರಾ ವೈಶಿಷ್ಟ್ಯಗಳನ್ನು ಸಹ ಈ ಹೊಸ ಸ್ಮಾರ್ಟ್ಫೋನ್ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 6GB RAM, 50MP ಕ್ಯಾಮೆರಾ, 5000mAh ಬ್ಯಾಟರಿ; 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ 5G ಸ್ಮಾರ್ಟ್ಫೋನ್!
ಇನ್ನೂ ಈ ಸ್ಮಾರ್ಟ್ಫೋನ್ ಗಳ ವೈಶಿಷ್ಟ್ಯಗಳ ವಿಚಾರಕ್ಕೆ ಬಂದರೆ ಪಿಕ್ಸೆಲ್ 6ಎ ಸ್ಮಾರ್ಟ್ಫೋನ್ 6.1 ಇಂಚಿನ ಎಫ್ಎಚ್ಡಿ ಪ್ಲಸ್ ಒಎಲ್ಇಡಿ ಪರದೆಯೊಂದಿಗೆ 90 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ 12 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದ್ದು, ಮ್ಯಾಜಿಕ್ ಎರೇಸರ್ ಮತ್ತು ನೈಟ್ಸೈಟ್ ನಂತಹ ಅನೇಕ ವೈಶಿಷ್ಟ್ಯತೆಗಳನ್ನು ಈ ಸ್ಮಾರ್ಟ್ಫೋನ್ ಹೊಂದಿದೆ ಎಂದು ಹೇಳಲಾಗುತ್ತಿದೆ.
ಟೆನ್ಸರ್ ಜಿಎಸ್ 101 ಚಿಪ್ಸೆಟ್ ಪಿಕ್ಸೆಲ್ 6 ರ ಸಿರೀಸ್ ಗೆ ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ನೀಡುತ್ತದೆ. ಆಂಡ್ರಾಯ್ಡ್ 12 ರ ಚಾಲನೆ ಹೊಂದಿರುವ ಈ ಮಾದರಿಯು 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುವ 4,306 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ರೆಕಾರ್ಡರ್, ಲೈವ್ ಕ್ಯಾಪ್ಷನ್ ಮತ್ತು ಲೈವ್ ಟ್ರಾನ್ಸ್ಲೇಟ್ ಸೇರಿದಂತೆ ಹೆಚ್ಚು ನಿಖರವಾದ ಸ್ಪೀಚ್ ರೆಕಗ್ನಿಷನ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪಿಕ್ಸೆಲ್ 6ಎ ಇದ್ದಿಲು ಮತ್ತು ಸೀಮೆಸುಣ್ಣ ಹೀಗೆ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ ಸಹ ಬಿಡುಗಡೆಯಾಗಲಿದೆ
ಪಿಕ್ಸೆಲ್ 6ಎ ಜೊತೆಗೆ, ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ ಅನ್ನು 19,990 ರೂಪಾಯಿಗೆ ಬಿಡುಗಡೆ ಮಾಡಿದೆ. ಇದು ನಿಮ್ಮ ಕಿವಿಯ ಆಕಾರಕ್ಕೆ ಸರಿಯಾಗಿ ಹೊಂದಿಕೊಳ್ಳಲು ಸೈಲೆಂಟ್ ಸೀಲ್ ನೊಂದಿಗೆ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಒಳಗೊಂಡಿದೆ ಮತ್ತು ಇಯರ್ ಬಡ್ ಗಳು ಹಿಗ್ಗಿಸುವುದರೊಂದಿಗೆ ನಿಮ್ಮ ಕಿವಿಯಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತವೆ.
ಇದನ್ನೂ ಓದಿ: ಜುಲೈ 23, 24ಕ್ಕೆ Amazon Prime Day ಸೇಲ್ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಈ ಮೊಬೈಲ್ಗಳು ಲಭ್ಯ
ಪಿಕ್ಸೆಲ್ ಬಡ್ಸ್ ಪ್ರೊ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವುದರಿಂದ 11 ಗಂಟೆಗಳ ಆಲಿಸುವ ಸಮಯವನ್ನು ಅಥವಾ ಸಕ್ರಿಯ ನಾಯ್ಸ್ ಕ್ಯಾನ್ಸಲೇಶನ್ ಜೊತೆಗೆ 7 ಗಂಟೆಗಳವರೆಗೆ ಆಲಿಸುವ ಸಮಯವನ್ನು ನೀವು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ