ರೋಗಿಯ ಅಂತಿಮ ದಿನವನ್ನೂ ಹೇಳುತ್ತಾ ಗೂಗಲ್?


Updated:June 19, 2018, 2:22 PM IST
ರೋಗಿಯ ಅಂತಿಮ ದಿನವನ್ನೂ ಹೇಳುತ್ತಾ ಗೂಗಲ್?

Updated: June 19, 2018, 2:22 PM IST
ನ್ಯೂಯಾರ್ಕ್​: ಮನುಷ್ಯನ ಆಯುಷ್ಯವನ್ನು ಪತ್ತೆಹಚ್ಚು ಸಾಧ್ಯವೇ? ಈ ಪ್ರಶ್ನೆಗೆ ಟೆಕ್​ ದೈತ್ಯ ಗೂಗಲ್​ ಶೀಘ್ರದಲ್ಲೇ ಉತ್ತರಿಸಲಿದ್ದು, ಕೃತಕ ಬುದ್ಧಿಮತ್ತೆ ಸಾಧನಗಳ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಗೂಗಲ್​ ಹೊಸ ವಿಸ್ಮಯ ಮೂಡಿಸಲು ಸಿದ್ಧವಾಗಿದೆ. ಜ್ಞ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕೆಲ ದಿನಗಳ ಹಿಂದೆ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು, ಈ ವೇಳೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಕೇವಲ ಶೇ.9.3ರಷ್ಟು ಮಾತ್ರ ಬದುವ ಸಾದ್ಯತೆಯಿದೆ ಎಂದು ಹೇಳಿದ್ದರು. ಬಳಿಕ ಗೂಗಲ್​ನ ಎಐ ತಂತ್ರಜ್ಞಾನದೊಂದಿಗೆ ಮೆಡಿಕಲ್​ ಚೆಕ್​ಅಪ್​ ಹೊಂದಿರುವ ಚಿಪ್​ ಮೂಲಕ ಮಹಿಳೆಯ 175,639 ಅಂಕಿ ಅಂಶಗಳ ದಾಖಲೆಯನ್ನು ಪರಿಶೀಲನೆಗೆ ಒಳಪಡಿಸಲಾಯಿತು.

ಮಹಿಳೆಯ ದತ್ತಾಂಶಗಳನ್ನು ಪರಿಶೀಲನೆ ನಡೆಸಿದ ಗೂಗಲ್​, ಶೇ.19.9ರಷ್ಟು ಮಹಿಳೆ ಬದುಕುವ ಸಾಧ್ಯತೆಯಿದೆ ಎಂದು ಹೇಳಿರುವುದನ್ನು ಕಳೆದ ಮೇ ನಲ್ಲಿ ಗೂಗಲ್​ ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿತ್ತು. ಈ ವರದಿ ಹೊರ ಹಾಕಿದ ಕೆಲವೇ ದಿನಗಳಲ್ಲಿ ಮಹಿಳೆ ಮೃತಪಟ್ಟಿದ್ದರು.

ಗೂಗಲ್​ ಈಗಾಗಲೇ ರೋಗಿಯ ಆರೋಗ್ಯ ದಾಖಲೆಯನ್ನು ಪರಿಶೀಲಿಸುವ ಎಐ ತಂತ್ರಜ್ಞಾನದ ಸಾಫ್ಟ್​ವೇರ್​ನ್ನು ಅಭಿವೃದ್ಧಿ ಪಡಿಸಿದ್ದು, ಈ ಸಾಫ್ಟ್​ವೇರ್​ ಪ್ರಕಾರ ರೋಗಿ ಆರೋಗ್ಯ, ಆಸ್ಪತ್ರೆಗೆ ದಾಖಲಾದ ಬಳಿಕ ಆತ ಎಷ್ಟು ದಿನಗಳ ಕಾಲ ಆಸ್ಪತ್ರೆ ಚಿಕಿತ್ಸೆಗೆ ಒಳಪಡಬೇಕು ಸೇರಿದಂತೆ ಎಲ್ಲಾ ಮಾಹಿತಿಯನ್ನು ಇದು ಕಲೆಹಾಕಿ ಆತನ ಆರೋಗ್ಯದ ಕುರಿತಾದ ಸಂಪೂರ್ಣ ಮಾಹಿತಿಯನ್ನೇ ಹೊರ ಹಾಕುತ್ತದೆ.

ಇಷ್ಟಕ್ಕೆ ನಿಲ್ಲದ ಈ ಅಧ್ಯಯನ ಒಂದು ಹೆಜ್ಜೆ ಮುಂದುವರಿದಿದ್ದು, ಕೃತಕ ಬುದ್ಧಿಮತ್ತೆ ಸಾಧನದಿಂದ ಆ ವ್ಯಕ್ತಿ ಎಷ್ಟು ದಿನಗಳ ಕಾಲ ಬದುಕಬಹುದು ಎಂಬುದನ್ನೂ ಸಹ ಗೂಗಲ್​ ಹೇಳತೊಡಗಿದೆ. ಗೂಗಲ್​ನ ಈ ನಿಖರ ಮಾಹಿತಿ ಶೇರ್​ ಮಾಡುವ ಪ್ರಕ್ರಿಯೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದ್ದು, ಈಗಿರುವ ತಂತ್ರಜ್ಞಾನಕ್ಕಿಂತ ಅತ್ಯಂತ ವೇಗವಾಗಿ ಗೂಗಲ್​ ಕೆಲಸ ನಿರ್ವಹಿಸುತ್ತದೆ.

ರೋಗಿಗಳ ದಾಖಲೆಯನ್ನು ಪರಿಶೀಲಿಸುವ ಕುರಿತು ಗೂಗಲ್​ ಈಗಾಗಲೇ ಸಾಕಷ್ಟು ಜಾಗ್ರತೆಯನ್ನು ವಹಿಸುತ್ತೇವೆ. ಕಳೆದ ವರ್ಷ ಆಲ್ಫಬೆಟ್​ ಎಐ ಲ್ಯಾಬ್​ನ ಡೀಪ್​ ಮೈಂಡ್​ ಎಂಬ ಸಂಸ್ಥೆ ರೋಗಿಗಳಿಗೆ ತಿಳಿಸದರೆ ಖಾಸಾಗಿ ಮಾಹಿತಿಯನ್ನು ಬಳಸಿಕೊಂಡಿತ್ತು. ಹೀಗಾಗಿ ಗೂಗಲ್​ ರೋಗಿಯ ಒಪ್ಪಿಗೆಯ ಮೇರೆಗೆ ಮಾಹಿಯನ್ನು ಪಡೆದುಕೊಂಡು ತನ್ನ ರಿಸರ್ಚ್​ ನಡೆಸುತ್ತಿದೆ.

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಗೂಗಲ್​, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್​ ಫ್ರಾನ್ಸಿಸ್ಕೊ, ಮತ್ತು ಚಿಕಾಗೋ ಯುನಿವರ್ಸಿಟಿಯೊಂದಿಗಿನ ಡೀಲ್​ನ್ನು ಕಡಿದುಕೊಂಡಿತ್ತು.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ