Google Signup: ಸೈನಪ್ ಮಾಡುವಾಗ ಅಸ್ಪಷ್ಟವಾದ ಭಾಷೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ಯಾ ಗೂಗಲ್?

ಬಳಕೆದಾರರು ಹೊಸ ಗೂಗಲ್ ಖಾತೆ ತೆರೆಯುವ ಸಂಬಂಧ ಸೈನಪ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗೂಗಲ್ ಸಂಸ್ಥೆಯು ತೀಕ್ಷ್ಣ ಹಾಗೂ ವ್ಯಾಪಕವಾಗಿ ಡೇಟಾ ಅನ್ನು ಸಂಸ್ಕರಿಸುವುದನ್ನು ಉತ್ತೇಜಿಸುವ ನಿಮಿತ್ತ ಸಿದ್ಧಪಡಿಸಿರುವ ಅಂಶಗಳು, ಹೆಚ್ಚು ಮೋಸಗೊಳಿಸುವ ವಿನ್ಯಾಸಗಳು, ದಾರಿ ತಪ್ಪಿಸುವಂತಹ ಆಯ್ಕೆಗಳು ಮತ್ತು ಅಸ್ಪಷ್ಟವಾದ ಭಾಷೆಯಿಂದ ಕೂಡಿರುವುದಾಗಿ ಆಕ್ರೋಶ ವ್ಯಕ್ತವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಬೆಳಕಿಗೆ ಬಂದಿರುವ ವಿದ್ಯಮಾನವೊಂದರ ಪ್ರಕಾರ, ಯುರೋಪ್ (Europe) ಬಳಕೆದಾರರ ಕೆಲ ಗುಂಪುಗಳು ಟೆಕ್ ದೈತ್ಯ ಗೂಗಲ್ (Tech giant Google) ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿ ಅದರ ವಿರುದ್ಧ ಗೌಪ್ಯತೆಗೆ ಸಂಬಂಧಿಸಿದಂತೆ ದೂರೊಂದನ್ನು ದಾಖಲಿಸಿದ್ದಾರೆನ್ನಲಾಗಿದೆ. ಬಳಕೆದಾರರು ಹೊಸ ಗೂಗಲ್ ಖಾತೆ (Google Account) ತೆರೆಯುವ ಸಂಬಂಧ ಸೈನಪ್ (Signup) ಮಾಡಿಕೊಳ್ಳುವ ಸಂದರ್ಭದಲ್ಲಿ ಗೂಗಲ್ ಸಂಸ್ಥೆಯು ತೀಕ್ಷ್ಣ ಹಾಗೂ ವ್ಯಾಪಕವಾಗಿ ಡೇಟಾ (Data) ಅನ್ನು ಸಂಸ್ಕರಿಸುವುದನ್ನು ಉತ್ತೇಜಿಸುವ ನಿಮಿತ್ತ ಸಿದ್ಧಪಡಿಸಿರುವ ಅಂಶಗಳು, ಹೆಚ್ಚು ಮೋಸಗೊಳಿಸುವ ವಿನ್ಯಾಸಗಳು, ದಾರಿ ತಪ್ಪಿಸುವಂತಹ ಆಯ್ಕೆಗಳು ಮತ್ತು ಅಸ್ಪಷ್ಟವಾದ ಭಾಷೆಯಿಂದ (Language) ಕೂಡಿರುವುದಾಗಿ ಆಕ್ರೋಶ ವ್ಯಕ್ತವಾಗಿದೆ.

ಶಂಕಿತ ಉಲ್ಲಂಘನೆಗಳ ಮೇಲೆ ಕ್ರಮ
ಗೂಗಲ್ ಪ್ರತಿಪಾದಿಸಿಕೊಳ್ಳುವ ತನ್ನ ಕ್ಲೈಮುಗಳಿಗೆ ವ್ಯತಿರಿಕ್ತವಾಗಿ, ತನ್ನ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸಲು ಬಯಸುವ ಗ್ರಾಹಕರನ್ನು ಹಾಗೆ ಮಾಡಲು ತಡೆಯುತ್ತಿದೆ ಎಂದು ಯುರೋಪಿಯನ್ ಗ್ರಾಹಕ ಸಂಘಟನೆಯ (BEUC) ಸಮನ್ವಯದ ಅಡಿಯಲ್ಲಿ ಗ್ರಾಹಕ ಗುಂಪುಗಳು ಹೇಳಿರುವುದಾಗಿ ವರದಿಯಾಗಿದೆ. ಇದರಿಂದಾಗಿ ಹಿನ್ನಡೆ ಅನುಭವಿಸಿದಂತಾಗಿರುವ ಟೆಕ್ ದೈತ್ಯವು ಇದೀಗ ಯುರೋಪಿಯನ್ ಯುನಿಯನ್ನಿನ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (GDPR) ಅಡಿಯಲ್ಲಿ ವಿಶ್ಲೇಷಣೆ ನಡೆಸುತ್ತಿದ್ದು ಶಂಕಿತ ಉಲ್ಲಂಘನೆಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ.

ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (GDPR) ಗೆ ಅಗತ್ಯವಿರುವಂತೆ ವಿನ್ಯಾಸ ಮತ್ತು ಪೂರ್ವನಿಯೋಜಿತವಾಗಿ ನೀಡಬೇಕಾದ ಗೌಪ್ಯತೆಯನ್ನು ನೀಡುವ ಬದಲು ಗೂಗಲ್ ಖಾತೆಗೆ ಸೈನ್ ಅಪ್ ಮಾಡಿದಾಗ ಅದು ತನ್ನ ನಿಗಾ ಇರಿಸುವ ವ್ಯವಸ್ಥೆಯತ್ತ ಗ್ರಾಹಕರನ್ನು ಅನವಶ್ಯಕವಾಗಿ ನಡೆಸಿಕೊಂಡು ಹೋಗುತ್ತಿದೆ ಎಂದು ದೂರುದಾರರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಯುರೋಪಿಯನ್ ಗ್ರಾಹಕ ಸಂಘಟನೆಯ ಉಪ ಮಹಾನಿರ್ದೇಶಕ ಉರ್ಸುಲಾ ಪಾಚ್ಲ್ ಹೇಳಿದ್ದೇನು?
"ಗೂಗಲ್ ತಾನು ಸದಾ ಪ್ರತಿಪಾದಿಸುವ ಗ್ರಾಹಕರ ಗೌಪ್ಯತೆಯನ್ನು ರಕ್ಷಿಸುವ ಹೇಳಿಕೆಯ ವಿರುದ್ಧ ಎಂಬಂತೆ, ಹತ್ತಾರು ಮಿಲಿಯನ್ ಯುರೋಪಿಯನ್ನರು ಗೂಗಲ್ ಖಾತೆಗೆ ಸೈನ್ ಅಪ್ ಮಾಡಿದಾಗ ಅದು ಅವರ ಮೇಲೆ ಸದಾ ನಿಗಾ ಇರುವಂತೆ ಅವರನ್ನು ತ್ವರಿತ ಟ್ರ್ಯಾಕ್‌ನಲ್ಲಿ ಇರಿಸಿದೆ" ಎಂದು ಯುರೋಪಿಯನ್ ಗ್ರಾಹಕ ಸಂಘಟನೆಯ ಉಪ ಮಹಾನಿರ್ದೇಶಕ ಉರ್ಸುಲಾ ಪಾಚ್ಲ್ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: WhatsApp: ಅಪ್ಪಿ ತಪ್ಪಿಯೂ ಈ 3 ಫೋಟೋ ಮತ್ತು ವಿಡಿಯೋವನ್ನ ಶೇರ್​ ಮಾಡಬೇಡಿ! ಜೈಲು ಸೇರುತ್ತೀರಾ, ಹುಷಾರ್​

ಈ ಬಗ್ಗೆ ಮಾತನಡಿರುವ ಪಾಚ್ಲ್ ಅವರು "ನೀವು ಮಾಡುವ ಎಲ್ಲವನ್ನೂ ಗೂಗಲ್ ತನ್ನ ಗಮನದಲ್ಲಿರುವಂತೆ ಅಥವಾ ಅದರ ಮೇಲ್ವಿಚಾರಣೆ ಮಾಡಲು ಒಂದು ಸರಳ ಹಂತವನ್ನು ತೆಗೆದುಕೊಳ್ಳುತ್ತದೆ. ಒಂದು ವೇಳೆ ನೀವು ಗೌಪ್ಯತೆ ಸ್ನೇಹಿ ಸೆಟ್ಟಿಂಗ್‌ಗಳಿಂದ ಪ್ರಯೋಜನ ಪಡೆಯಲು ಬಯಸಿದರೆ, ಅದಕ್ಕಾಗಿ ನೀವು ಸುದೀರ್ಘ ಪ್ರಕ್ರಿಯೆ ಮತ್ತು ಅಸ್ಪಷ್ಟವಾದ ಹಾಗೂ ತಪ್ಪುದಾರಿಗೆಳೆಯುವ ಆಯ್ಕೆಗಳ ವಿವಿಧ ಹಂತಗಳ ಮೂಲಕ ನ್ಯಾವಿಗೇಟ್ ಮಾಡಬೇಕಾಗುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೌಪ್ಯತೆ ರಕ್ಷಣೆಯು ಗ್ರಾಹಕರಿಗೆ ಡೀಫಾಲ್ಟ್ ಮತ್ತು ಸುಲಭವಾದ ಆಯ್ಕೆ
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನೀವು ಗೂಗಲ್ ಖಾತೆಯನ್ನು ರಚಿಸಿದಾಗ, ಅದರ ವಿನ್ಯಾಸದ ಮೂಲಕ ನೀವು ಪೂರ್ವನಿಯೋಜಿತವಾಗಿ ರೂಪಿಸಲಾದ ವ್ಯವಸ್ಥೆಯಡಿಯಲ್ಲಿ ಅದರ ಕಣ್ಗಾವಲಿನಲ್ಲಿರುತ್ತೀರಿ. ವಾಸ್ತವದಲ್ಲಿ, "ಗೌಪ್ಯತೆ ರಕ್ಷಣೆಯು ಗ್ರಾಹಕರಿಗೆ ಡೀಫಾಲ್ಟ್ ಮತ್ತು ಸುಲಭವಾದ ಆಯ್ಕೆಯಾಗಿರಬೇಕು" ಎಂದು ಸಂಘಟನೆ ಒತ್ತಿ ಹೇಳಿದೆ.ಗ್ರಾಹಕರು ಸ್ವಯಂಪ್ರೇರಣೆಯಿಂದ ಗೂಗಲ್ ಖಾತೆಯನ್ನು ರಚಿಸಲು ಆಯ್ಕೆ ಮಾಡಬಹುದು ಅಥವಾ ಅವರು ಕೆಲವು ಗೂಗಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಿದಾಗ ಅದಕ್ಕೆ ಪೂರಕವಾಗಿ ಒಂದು ಖಾತೆಯನ್ನು ರಚಿಸಿಕೊಳ್ಳಬಹುದಾದ ಅನಿವಾರ್ಯತೆಗೆ ಒಳಪಡಬಹುದು.

ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸೆಟ್ಟಿಂಗ್‌ಗಳನ್ನು 'ಆಫ್' ಮಾಡುವ ಆಯ್ಕೆಯನ್ನು ಗೂಗಲ್ ಗ್ರಾಹಕರಿಗೆ ನೀಡಿಲ್ಲ ಎಂಬುದು ಸತ್ಯ.ಗ್ರಾಹಕರು ಹೆಚ್ಚು ಗೌಪ್ಯತೆ ಸ್ನೇಹಿ ಆಯ್ಕೆಗಳನ್ನು ಸಕ್ರಿಯಗೊಳಿಸಲು ಬಯಸಿದರೆ, ಅದಕ್ಕಾಗಿ ಅವರು ಹಸ್ತಚಾಲಿತ ದೀರ್ಘ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಾ ಹೋಗಬೇಕು, ಈ ಸಂದರ್ಭದಲ್ಲಿ ಅವರು ಹಲವು ಕ್ಲಿಕ್ ಗಳನ್ನು ಮಾಡಬೇಕು ಮತ್ತು ಹಲವು ಹಂತಗಳನ್ನು ದಾಟಬೇಕು. ಈ ಸಂದರ್ಭದಲ್ಲಿ ಅವರು ಹಲವು ಅಸ್ಪಷ್ಟ ಭಾಷೆ, ತಾಪುದಾರಿಗೆಳೆವ ವಿನ್ಯಾಸಗಳನ್ನು ಎದುರಿಸಬೇಕಾಗುತ್ತದೆ ಎಂದು ಯುರೋಪಿಯನ್ ಗ್ರಾಹಕ ಗುಂಪುಗಳು ಆರೋಪಿಸಿವೆ.

ಇದನ್ನೂ ಓದಿ: Instagram: ಇನ್‌ಸ್ಟಾಗ್ರಾಮ್ ಬಳಸುತ್ತಿದ್ದೀರಾ? ಈ ಹೊಸ 7 ಫೀಚರ್ ಗಳನ್ನು ಒಮ್ಮೆ ಟ್ರೈ ಮಾಡಿ

ಇದುವರೆಗೂ ಗೌಪ್ಯತೆ ದೂರಿನ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ."ಗೂಗಲ್ ತನ್ನ ಅಪರಾಧಗಳನ್ನು ಪುನರಾವರ್ತಿಸುತ್ತಿದೆ. ನಾವು ಗೂಗಲ್‌ ಸ್ಥಳ-ಟ್ರ್ಯಾಕಿಂಗ್ ಮಾಡುವ ಅಭ್ಯಾಸಗಳ ವಿರುದ್ಧ ದೂರುಗಳನ್ನು ಸಲ್ಲಿಸಿ ಈಗಾಗಲೇ ಮೂರು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ ಮತ್ತು ಈ ಬಗ್ಗೆ ಡೇಟಾ ಸಂರಕ್ಷಣಾ ಆಯುಕ್ತರು ಇನ್ನೂ ಯಾವುದೇ ನಿರ್ಧಾರ ಅಥವಾ ಆದೇಶವನ್ನಾಗಲಿ ನೀಡಿಲ್ಲ " ಎಂದು ಪಾಚ್ಲ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು "ಈ ಪ್ರಕರಣವು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ, ಇದಕ್ಕಾಗಿ ಯುರೋಪಿಯನ್ ಯುನಿಯನ್ನಿನಾದ್ಯಂತ ಡೇಟಾ ಸಂರಕ್ಷಣಾ ಅಧಿಕಾರಿಗಳ ನಡುವಿನ ಸಹಕಾರಕ್ಕೆ ಯುರೋಪಿಯನ್ ಡೇಟಾ ಸಂರಕ್ಷಣಾ ಮಂಡಳಿಯು ಆದ್ಯತೆ ನೀಡಬೇಕು ಮತ್ತು ಬೆಂಬಲಿಸಬೇಕು" ಎಂದು ಕರೆ ನೀಡಿದ್ದಾರೆನ್ನಲಾಗಿದೆ.
Published by:Ashwini Prabhu
First published: