Work From Home: ಉದ್ಯೋಗಿಗಳಿಗೆ ಲಾಪ್​ಟಾಪ್​ ಖರೀದಿಸಲು 75 ಸಾವಿರ ರೂಪಾಯಿ ನೀಡಿದ ಗೂಗಲ್

Google: ಕೊರೋನಾ ಲಾಕ್​ಡೌನ್​ನಿಂದಾಗಿ ಮನೆಯಿಂದ ಕೆಲಸ ಮಾಡುತ್ತಿರುವ ಗೂಗಲ್​ ಉದ್ಯೋಗಿಗಳಿಗೆ ಕೆಲವು ಅಗತ್ಯ ವಸ್ತುಗಳು ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರ ಮೇಲೆ ಹೊರ ಹೆಚ್ಚಿರುತ್ತದೆ. ಈ ಕಠಿಣ ಕಾಲದಲ್ಲಿ ನೌಕರರ ಮನೋಸ್ಥೈರ್ಯ ಹೆಚ್ಚಿಸಲು  ಸಂಸ್ಥೆ ಅವರಿಗೆ ಸಹಾಯ ಮಾಡುತ್ತಿದೆ.

news18-kannada
Updated:May 27, 2020, 1:51 PM IST
Work From Home: ಉದ್ಯೋಗಿಗಳಿಗೆ ಲಾಪ್​ಟಾಪ್​ ಖರೀದಿಸಲು 75 ಸಾವಿರ ರೂಪಾಯಿ ನೀಡಿದ ಗೂಗಲ್
ಗೂಗಲ್​
  • Share this:
ಮಹಾಮಾರಿ ಕೊರೋನಾದಿಂದಾಗಿ ಹಲವು ಕಂಪೆನಿಗಳು ಬಾಗಿಲು ಮುಚ್ಚಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿದೆ. ಅದರಂತೆ ಪ್ರತಿಷ್ಠಿತ ಸಂಸ್ಥೆಯಾದ ಗೂಗಲ್​ ಕೂಡ ತಮ್ಮ ಉದ್ಯೋಗಿಗಳ ಸುರಕ್ಷತೆಗಾಗಿ ಮನೆಯಿಂದಲೇ ಕೆಲಸ ಮಾಡಿಸುತ್ತಿದೆ. ಅದರ ಜೊತೆಗೆ ಪ್ರತಿಯೋಬ್ಬ ಉದ್ಯೋಗಿಗೆ ಅವರ ಅವಶ್ಯಕತೆಗೆ ತಕ್ಕಂತೆ ಲಾಪ್​​ಟಾಪ್​​ ಖರೀದಿಸಲು 75 ಸಾವಿರ ರೂಪಾಯಿ ನೀಡಿದೆ.

ಈ ಬಗ್ಗೆ ಮಾತನಾಡಿದ್ದ  ಗೂಗಲ್​​ ಸಿಇಒ ಸುಂದರ್​ ಪಿಚೈ ‘ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಸರಿಯಾದ ಲಾಪ್​ಟಾಪ್​​, ಅಗತ್ಯ ಉಪಕರಣ ಮತ್ತು ಪೀಠೋಪಕರಣಗಳನ್ನು ಖರೀದಿಸಲು 75 ಸಾವಿರ ರೂಪಾಯಿಯನ್ನು ಗೂಗಲ್​ ಸಂಸ್ಥೆಯ ವತಿಯಿಂದ ನೀಡುತ್ತಿದ್ದೇವೆ' ಎಂದು ಹೇಳಿದರು.

ನಂತರ ಮಾತನಾಡಿದ್ದ ಅವರು ‘ಕೊರೋನಾ ಲಾಕ್​ಡೌನ್​ನಿಂದಾಗಿ ಮನೆಯಿಂದ ಕೆಲಸ ಮಾಡುತ್ತಿರುವ ಗೂಗಲ್​ ಉದ್ಯೋಗಿಗಳಿಗೆ ಕೆಲವು ಅಗತ್ಯ ವಸ್ತುಗಳು ಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರ ಮೇಲೆ ಹೊರ ಹೆಚ್ಚಿರುತ್ತದೆ. ಈ ಕಠಿಣ ಕಾಲದಲ್ಲಿ ನೌಕರರ ಮನೋಸ್ಥೈರ್ಯ ಹೆಚ್ಚಿಸಲು  ಸಂಸ್ಥೆ ಅವರಿಗೆ ಸಹಾಯ ಮಾಡುತ್ತಿದೆ‘ ಎಂದರು

‘ಗೂಗಲ್​ ರೋಡ್​ ಮ್ಯಾಪ್​ ಮೂಲಕ ಕಾರ್ಯ ಮಾಡುತ್ತಿದೆ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿಶ್ವದಾದ್ಯಂತ ಹೆಚ್ಚಿನ ಕಂಪೆನಿಗಳು ಜುಲೈ 6 ನಂತರ ತೆರೆಯುವ ಸಾಧ್ಯತೆಗಳಿವೆ. ಗೂಗಲ್​​ ತನ್ನ ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ‘ ಎಂದರು.

ಸ್ಮಾರ್ಟ್​ಫೋನ್​ನಲ್ಲಿ ಜಾಹೀರಾತು ಕಿರಿಕಿರಿ ನೀಡುತ್ತಿದೆಯಾ? ತಪ್ಪಿಸಲು ಹೀಗೆ ಮಾಡಿ

ವೆಸ್ಪಾ ಸ್ಕೂಟರಿನ ಡಿಸೈನ್ ಕಾಪಿ ಮಾಡಿದ ಚೀನಾ!; ಇದು ಬೇಕಿತ್ತಾ?
First published: May 27, 2020, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading