Google Invests: ಏರ್​ಟೆಲ್​ನಲ್ಲಿ ಗೂಗಲ್​ನಿಂದ 7,500 ಕೋಟಿ ಹೂಡಿಕೆ! ಟೆಕ್ ದೈತ್ಯ ಗೂಗಲ್ ಒಪ್ಪಂದದ ಉದ್ದೇಶಗಳೇನು?

5ಜಿ, ಸ್ಮಾರ್ಟ್‌ಫೋನ್‌ಗಳ (Smart phone) ತಯಾರಿ, ಕ್ಲೌಡ್ ಮೂಲಸೌಕರ್ಯ ಹೀಗೆ ಹಲವಾರು ಯೋಜನೆಗಳನ್ನು ಜೊತೆಯಾಗಿ ನಡೆಸುವ ಒಪ್ಪಂದಗಳಿಗೆ ಸಂಸ್ಥೆಗಳು ಕೈಜೋಡಿಸಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಟೆಕ್ ದೈತ್ಯ ಗೂಗಲ್ (Google), ಏರ್‌ಟೆಲ್‌ (Airtel) ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ (Investment)ಯನ್ನು ಮಾಡುವುದಾಗಿ ಘೋಷಿಸಿದೆ. $1 ಬಿಲಿಯನ್‌ನಲ್ಲಿ (ಅಂದಾಜು 7500 ಕೋಟಿಗಳು) ಸುಮಾರು 700 ಮಿಲಿಯನ್ ಡಾಲರ್‌ ಏರ್‌ಟೆಲ್‌ನಲ್ಲಿ 1.28% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ವಿನಿಯೋಗವಾಗುತ್ತದೆ. ಉಳಿದ 300 ಮಿಲಿಯನ್ ಡಾಲರ್ ಅನ್ನು ಐದು ವರ್ಷಗಳ ವಾಣಿಜ್ಯ ಒಪ್ಪಂದ (Agreement) ವನ್ನು ನಡೆಸಲು ವಿನಿಯೋಗವಾಗಲಿದ್ದು 5ಜಿ, ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳ (Smart phone) ತಯಾರಿ, ಕ್ಲೌಡ್ ಮೂಲಸೌಕರ್ಯ ಹೀಗೆ ಹಲವಾರು ಯೋಜನೆಗಳನ್ನು ಜೊತೆಯಾಗಿ ನಡೆಸುವ ಒಪ್ಪಂದಗಳಿಗೆ ಸಂಸ್ಥೆಗಳು ಕೈಜೋಡಿಸಲಿವೆ ಎನ್ನಲಾಗಿದೆ.


ಒಪ್ಪಂದವು ಇನ್ನೂ ಕೂಡ ನಿಯಂತ್ರಕ ಅನುಮೋದನೆಗೆ ಒಳಪಡಬೇಕಾಗಿದ್ದು ಈ ಒಪ್ಪಂದದ ಕೆಲವೊಂದು ಪ್ರಮುಖ ಅಂಶಗಳು ಹಾಗೂ ಸಂಭವನೀಯ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳೋಣ.


ಭಾರತಿ ಏರ್‌ಟೆಲ್‌ನಲ್ಲಿ 1.28% ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿರುವ ಟೆಕ್ ದೈತ್ಯ ಗೂಗಲ್:


ಮೊದಲೇ ತಿಳಿಸಿರುವಂತೆ $1 ಬಿಲಿಯನ್‌ನಲ್ಲಿ (7,500 ಕೋಟಿ) $700 ಮಿಲಿಯನ್ ಅನ್ನು (5260 ಕೋಟಿ) ಅನ್ನು ಭಾರತಿ ಏರ್‌ಟೆಲ್‌ನಲ್ಲಿ 1.28% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಸಂಸ್ಥೆ ವಿನಿಯೋಗಿಸಲಿದ್ದು ಅಂದರೆ ಗೂಗಲ್ ಈ ಒಪ್ಪಂದದ ನಂತರ ಏರ್‌ಟೆಲ್‌ನ 1.28% ಪಾಲನ್ನು ತನ್ನದಾಗಿಸಿಕೊಳ್ಳಲಿದೆ. ಪ್ರತಿ ಷೇರಿಗೆ 734 ರೂ. ದರದಂತೆ ಗೂಗಲ್ ಏರ್‌ಟೆಲ್‌ನಲ್ಲಿ 1.28% ಪಾಲನ್ನು ಪಡೆದುಕೊಳ್ಳಲಿದೆ.


ಇದನ್ನೂ ಓದಿ: Google Search: ಗೂಗಲ್​ನಲ್ಲಿ ಈ ವಿಷಯಗಳನ್ನು ಸರ್ಚ್​ ಮಾಡುವ ಮುನ್ನ ಎಚ್ಚರ!

$300 ಮಿಲಿಯನ್ ಅನ್ನು ವಾಣಿಜ್ಯ ಒಪ್ಪಂದಗಳಿಗಾಗಿ ವಿನಿಯೋಗಿಸಲಾಗುವುದು:


ಉಳಿದ $300 ಮಿಲಿಯನ್ (2,250 ಕೋಟಿ ರೂಗಳು) ಮುಂದಿನ ಐದು ವರ್ಷಗಳ ಕಾಲ ಗೂಗಲ್ ಹಾಗೂ ಏರ್‌ಟೆಲ್ ಜೊತೆಯಾಗಿ ನಡೆಸುವ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಲಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು, ಗುಣಮಟ್ಟದ ಗ್ರಾಹಕ ಅನುಭವವನ್ನು ಒದಗಿಸಲು ಹಾಗೂ ಲಭ್ಯತೆ, ಪ್ರವೇಶ ಮತ್ತು ಡಿಜಿಟಲ್ ಸೇರ್ಪಡೆಯಂತಹ ಸಮಸ್ಯೆಗಳನ್ನು ಪರಿಹರಿಸಲು ನೈಪುಣ್ಯತೆಯನ್ನು ತರುವುದಕ್ಕಾಗಿ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳನ್ನು ಒದಗಿಸಲು ಎರಡೂ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸುವ ಯೋಜನೆಗಳನ್ನು ಹಮ್ಮಿಕೊಂಡಿವೆ.


ಗೂಗಲ್ ಹಾಗೂ ಏರ್‌ಟೆಲ್ ನಡುವೆ ಐದು ವರ್ಷಗಳ ಒಪ್ಪಂದ:


ಗೂಗಲ್ ಹಾಗೂ ಏರ್‌ಟೆಲ್ ನಡುವೆ 5 ವರ್ಷಗಳ ವಾಣಿಜ್ಯ ಒಪ್ಪಂದ ನಡೆಸುವ ಕುರಿತು ವ್ಯವಹಾರವಾಗಿದೆ. ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ ಕಾರ್ಯನಿರ್ವಹಿಸುವ ಯೋಜನೆಗಳು ಹಾಗೂ ಉಪಕ್ರಮಗಳನ್ನು ಈ ಡೀಲ್ ಒಳಗೊಂಡಿವೆ. ನವೀನ ಮಾದರಿಯ ಕೈಗೆಟುಕುವ ರೀತಿಯಲ್ಲಿರುವ ಕಾರ್ಯಕ್ರಮಗಳು ಅಂತೆಯೇ ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯ ಲಭ್ಯತೆ ಅದೇ ರೀತಿ ಡಿಜಿಟಲ್ ಸೇರ್ಪಡೆಯನ್ನು ವೇಗಗೊಳಿಸುವ ಉದ್ದೇಶ ಹೊಂದಿರುವ ಇತರ ಕೊಡುಗೆಗಳ ಮೂಲಕ ಏರ್‌ಟೆಲ್ ಗ್ರಾಹಕರಿಗೆ ಒದಗಿಸಲಿರುವ ಹಲವಾರು ಶ್ರೇಣಿಗಳ ಆಫರ್‌ಗಳ ಕುರಿತು ಕಂಪನಿಗಳು ಯೋಜನೆಗಳನ್ನು ಹಂಚಿಕೊಂಡಿವೆ.


ಕನೆಕ್ಟೆಡ್ ಇಂಡಿಯಾದಲ್ಲಿ ಗೂಗಲ್-ಏರ್‌ಟೆಲ್ ಜೊತೆಯಾಗಿ ಕಾರ್ಯನಿರ್ವಹಿಸಲಿವೆ:


ಒಪ್ಪಂದವನ್ನು ಕುರಿತು ಘೋಷಿಸುವ ಸಮಯದಲ್ಲಿ ಗೂಗಲ್ ಹಾಗೂ ಏರ್‌ಟೆಲ್ ಎರಡೂ ಕಂಪನಿಗಳು ಡಿಜಿಟಲ್ ರೂಪಾಂತರದ ಪ್ರಯಾಣದಲ್ಲಿ ವ್ಯವಹಾರಗಳನ್ನು ಸಬಲೀಕರಣಗೊಳಿಸುವ ಕನೆಕ್ಟೆಡ್ ಇಂಡಿಯಾ (ಸಂಪರ್ಕಿತ ಭಾರತ) ಪ್ರಾಮುಖ್ಯತೆಯನ್ನು ಗುರುತಿಸಲಾಗುತ್ತದೆ ಎಂದು ತಿಳಿಸಿವೆ. ಪ್ರತಿಯೊಂದು ಸ್ಥಳಗಳಲ್ಲಿರುವ ಗ್ರಾಹಕರಿಗೆ ಬಲವಾದ ಸದೃಢವಾದ ಡಿಜಿಟಲ್ ಪರಿಸರ ವ್ಯವಸ್ಥೆ ಒದಗಿಸುವುದರ ಕುರಿತು ಒಳನೋಟಗಳನ್ನು ಹಂಚಿಕೊಂಡಿವೆ. ನವೀನ ಮಾದರಿಯ ಡಿಜಿಟಲ್ ಸೇವೆಗಳೊಂದಿಗೆ ಗ್ರಾಹಕರು ಹಾಗೂ ವ್ಯವಹಾರಗಳಿಗೆ ಸೇವೆಯನ್ನೊದಗಿಸುವ ಮುಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಬದ್ಧರಾಗಿರುವುದಾಗಿ ಸಂಸ್ಥೆಗಳು ತಿಳಿಸಿದ್ದು, ಭಾರತದ ಅವಶ್ಯಕತೆಗಳನ್ನು ಅನನ್ಯವಾಗಿ ಪೂರ್ತಿಗೊಳಿಸುವ ಡಿಜಿಟಲ್ ಪರಿಹಾರಗಳನ್ನು ನಿರ್ಮಿಸಲು ಜೊತೆಯಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿವೆ.


ಕೈಗೆಟುಕುವ ದರದಲ್ಲಿ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಲಭ್ಯತೆ:


ಭಾರತದಲ್ಲಿರುವ ಬಳಕೆದಾರರಿಗೆ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ದೊರೆಯುವಂತೆ ಮಾಡುವ ಒಪ್ಪಂದಗಳ ಕುರಿತು ಏರ್‌ಟೆಲ್ ಹಾಗೂ ಗೂಗಲ್ ಸುಳಿವು ನೀಡಿವೆ. ಬೇರೆ ಬೇರೆ ಫೋನ್ ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸ್ಮಾರ್ಟ್‌ಫೋನ್ ಖರೀದಿಗೆ ಉಂಟಾಗಿರುವ ತೊಂದರೆಗಳನ್ನು ನಿವಾರಿಸುವ ಗುರಿಯನ್ನು ಸಂಸ್ಥೆಗಳು ಹೊಂದಿವೆ. ಭಾರತದಲ್ಲಿ ಇನ್ನಷ್ಟು ಅಗ್ಗದ ದರದಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳು ದೊರೆಯುವಂತೆ ಮಾಡಲು ಸಂಸ್ಥೆಗಳು ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡಿವೆ.


ಏರ್‌ಟೆಲ್‌ನಿಂದ ಬಜೆಟ್ ಬೆಲೆಯ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್:


ಕೈಗೆಟಕುವ ಬೆಲೆಯಲ್ಲಿ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಏರ್‌ಟೆಲ್ ಹೊಂದಿದ್ದು ಈ ದಿಸೆಯಲ್ಲಿ ಗೂಗಲ್ ಸಂಸ್ಥೆಗೆ ನೆರವಾಗಲಿದೆ ಎಂಬುದಾಗಿ ಒಪ್ಪಂದವು ತಿಳಿಸಿದೆ. ಸ್ಮಾರ್ಟ್‌ಫೋನ್‌ಗಳನ್ನು ಇನ್ನಷ್ಟು ಅಗ್ಗದ ದರದಲ್ಲಿ ದೊರೆಯುವಂತೆ ಮಾಡಲು ಎರಡೂ ಕಂಪನಿಗಳು ಜೊತೆಯಾಗಿ ಕೆಲಸ ಮಾಡಲಿವೆ. ಆದರೂ, ಏರ್‌ಟೆಲ್ ಸಂಸ್ಥೆ ಗೂಗಲ್‌ನ ಸಹಾಯದಿಂದ ಆ್ಯಂಡ್ರಾಯ್ಡ್ ಆಧಾರಿತ ಡಿವೈಸ್‌ಗಳನ್ನು ಬಿಡುಗಡೆ ಮಾಡಲಿದೆಯೇ..? ಎಂಬುದನ್ನು ಕಾದು ನೋಡಬೇಕಾಗಿದೆ.


ಇದನ್ನೂ ಓದಿ: Google Search: ಗೂಗಲ್​​ನಲ್ಲಿ ಅಪ್ಪಿತಪ್ಪಿಯೂ ಈ ವಿಷಯಗಳನ್ನು ಸರ್ಚ್ ಮಾಡಬೇಡಿ...!

ಗೂಗಲ್-ಏರ್‌ಟೆಲ್ ಜೊತೆಯಾಗಿ 5ಜಿ ಕವರೇಜ್ ಹಾಗೂ ಇತರ ಮಾನದಂಡಗಳ ಅಭಿವೃದ್ಧಿಗೆ ಶ್ರಮಿಸಲಿವೆ:


ಏರ್‌ಟೆಲ್ ಹಾಗೂ ಗೂಗಲ್ ಜೊತೆಯಾಗಿ ಭಾರತದ ನೆಟ್‌ವರ್ಕ್ ಡೊಮೇನ್ ಬಳಕೆಯನ್ನು 5ಜಿ ಹಾಗೂ ಇತರ ಮಾನದಂಡಗಳಿಗೆ ಏರಿಸಲಿವೆ. ಏರ್‌ಟೆಲ್ ಈಗಾಗಲೇ ಗೂಗಲ್‌ನ 5ಜಿ ಸಿದ್ಧ ವಿಕಸಿತ ನೆಟ್‌ವರ್ಕ್ ಹಾಗೂ ಸಾಫ್ಟ್‌ವೇರ್ ವ್ಯಾಖ್ಯಾನಿತ ನೆಟ್‌ವರ್ಕ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದೆ ಎನ್ನಲಾಗಿದ್ದು, ಇನ್ನಷ್ಟು ಉತ್ತಮ ನೆಟ್‌ವರ್ಕ್ ಗುಣಮಟ್ಟವನ್ನು ಒದಗಿಸಲು ಇನ್ನಷ್ಟು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿಕೆ ತಿಳಿಸಿದೆ.


ಭಾರತದ ಕ್ಲೌಡ್ ಮೂಲಸೌಕರ್ಯ ಹೆಚ್ಚಿಸಲಿದೆ:


ಎರಡು ಕಂಪನಿಗಳು ತಮ್ಮ ಡಿಜಿಟಲ್ ರೂಪಾಂತರದ ಪ್ರಯಾಣವನ್ನು ವೇಗಗೊಳಿಸಲು ಭಾರತದಲ್ಲಿ ಕ್ಲೌಡ್ ಪರಿಸರ ವ್ಯವಸ್ಥೆಯನ್ನು ರೂಪಿಸಲು ಮತ್ತು ಬೆಳೆಸಲು ಗಮನಹರಿಸುತ್ತವೆ ಎಂಬುದಾಗಿ ಹೇಳಿಕೆ ತಿಳಿಸಿದೆ.


Published by:Pavana HS
First published: