• Home
  • »
  • News
  • »
  • tech
  • »
  • Google Update: ಗೂಗಲ್ ಪರಿಚಯಿಸಿದ 9 ಹೊಸ ಫೀಚರ್ಸ್ ಇಲ್ಲಿದೆ ನೋಡಿ

Google Update: ಗೂಗಲ್ ಪರಿಚಯಿಸಿದ 9 ಹೊಸ ಫೀಚರ್ಸ್ ಇಲ್ಲಿದೆ ನೋಡಿ

ಗೂಗಲ್ ಶಾಫಿಂಗ್

ಗೂಗಲ್ ಶಾಫಿಂಗ್

Google Shopping: ಹೊಸ ‌ವೈಶಿಷ್ಟ್ಯಗಳೊಂದಿಗೆ ಬಂದ ಗೂಗಲ್‌ ಶಾಪಿಂಗ್ ಪ್ರಸ್ತುತ ಈ ಶಾಪಿಂಗ್‌ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಗೂಗಲ್‌ ಹೊಸ 9 ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

  • Share this:

    ವಿಶ್ವದಾದ್ಯಂತ ಜನಪ್ರಿಯ ಸರ್ಚ್‌ ಎಂಜಿನ್‌ ಆಗಿರುವ ಗೂಗಲ್‌, ತನ್ನ ವೆಬ್‌ ಬ್ರೌಸರ್‌ ಕ್ರೋಮ್‌ ಮೂಲಕ ಹಲವಾರು ವಿಷಯಗಳ ಹುಡುಕಾಟಕ್ಕೆ ಸಹಾಯ ಮಾಡುತ್ತದೆ.ಏನೇ ಹುಡುಕು (Search) ಬೇಕಿದ್ದರೂ, ಒಂದು ವಿಚಾರದ ಬಗ್ಗೆ ತಿಳಿಯಬೇಕಾದರೂ ಪಟ್ಟನೇ ಗೂಗಲ್‌ ಕ್ರೋಮ್‌ ಮೇಲೆ ನಮ್ಮ ಕೈ ಹೋಗುತ್ತದೆ. ಇಷ್ಟೇ ಅಲ್ಲ ಗೂಗಲ್‌ ಶಾಪಿಂಗ್‌ (Google Shopping) ಮಾಡಲೂ ಕೂಡ ಸಹಾಯ ಮಾಡುತ್ತಿದೆ ಎಂಬುದರ ಬಗ್ಗೆ ನಿಮಗೆಲ್ಲಾ ಗೊತ್ತಿದೆ.ಆನ್‌ಲೈನ್ ಶಾಪಿಂಗ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡುವ ವೈಶಿಷ್ಟ್ಯದೊಂದಿಗೆ ಗೂಗಲ್ ಕ್ರೋಮ್ (Google Chrome) ಬಂದಿದ್ದು, ಆನ್‌ಲೈನ್ ಶಾಪಿಂಗ್ (Online Shoping) ಪ್ಲಾಟ್‌ಫಾರ್ಮ್‌ಗಳಿಂದ ನೀವು ಖರೀದಿಸಲು (Buy) ಬಯಸುವ ಎಲ್ಲಾ ಉತ್ಪನ್ನಗಳ ಬೆಲೆ ಮತ್ತು ಇತರೆ ವಿಚಾರಗಳ ಬಗ್ಗೆ ತಿಳಿಸುತ್ತದೆ.


    ಹೊಸ ‌ವೈಶಿಷ್ಟ್ಯಗಳೊಂದಿಗೆ ಬಂದ ಗೂಗಲ್‌ ಶಾಪಿಂಗ್
    ಪ್ರಸ್ತುತ ಈ ಶಾಪಿಂಗ್‌ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ಗೂಗಲ್‌ ಹೊಸ 9 ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ವರ್ಧಿತ ಶಾಪಿಂಗ್ ಅನುಭವವನ್ನು ನೀಡಲು ಸರ್ಚ್ ಎಂಜಿನ್ ತನ್ನ ಶಾಪಿಂಗ್ ಗ್ರಾಫ್ ಮತ್ತು AI- ವರ್ಧಿತ ಮಾದರಿಯನ್ನು ಬಳಸಲು ಒಂಬತ್ತು ಹೊಸ ಮಾರ್ಗಗಳನ್ನು ಘೋಷಿಸಿದೆ.ಹಾಗಾದರೆ ಗೂಗಲ್‌ ಪರಿಚಯಿಸಿರುವ ಆ ಒಂಬತ್ತು ಫೀಚರ್‌ ಯಾವುವೆಂದು ನಾವಿಲ್ಲಿ ತಿಳಿಯೋಣ.


    1) ಶಾಪ್‌ ಎಂಬ ಪದದ ಮೂಲಕ ಹುಡುಕಿ
    ಶಾಪ್‌ ಎಂದು ನಮೂದಿಸಿ ಬೇಕಿರುವ ಐಟಂ ಅನ್ನು ಹುಡುಕಿದರೆ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಮತ್ತು ಹತ್ತಿರದ ದಾಸ್ತಾನುಗಳಿಗೆ ದೃಶ್ಯ ಫೀಡ್ ಅನ್ನು ಹೊಸ ವೈಶಿಷ್ಟ್ಯ ತೋರಿಸುತ್ತದೆ.


    2) ಟ್ರೆಂಡಿಂಗ್ ನಲ್ಲಿ ಯಾವುದಿದೆ ಎಂಬುದನ್ನು ನೋಡಿ
    ಇದು ಗೂಗಲ್‌ ಶಾಪಿಂಗ್‌ ನಲ್ಲಿ ಹೊಸ ವೈಶಿಷ್ಟ್ಯವಾಗಿದ್ದು, ಇದು ಯಾವ ಉತ್ಪನ್ನ ಟ್ರೆಂಡಿಂಗ್‌ ನಲ್ಲಿದೆ ಎಂಬುದನ್ನು ತೋರಿಸುತ್ತದೆ. ಯುಎಸ್‌ ನಲ್ಲಿ ಈಗಾಗ್ಲೇ ಈ ಫೀಚರ್ ಸ್ಟೈಲ್ ಮತ್ತು ಬ್ರ್ಯಾಂಡ್‌ಗಳನ್ನು ಅನ್ವೇಷಿಸಲು ಬಳಕೆದಾರರಿಗೆ ಸಹಾಯ ಮಾಡುತ್ತಿದೆ.


    3) 3D ಶಾಪಿಂಗ್ ‌
    3D ಶಾಪಿಂಗ್ ಎಂಬ ಗೂಗಲ್‌ನ ಹೊಸ ವೈಶಿಷ್ಟ್ಯತೆ ವಿಭಿನ್ನವಾಗಿದ್ದು, ಉತ್ಪನ್ನಗಳ 3D ದೃಶ್ಯಗಳನ್ನು ನಿರ್ಮಿಸುತ್ತದೆ. ಇದು ಶಾಪಿಂಗ್‌ ಸೈಟ್‌ ನಲ್ಲಿರುವ ಉತ್ಪನ್ನಗಳ 360 ಡಿಗ್ರಿ ಸ್ಪಿನ್‌ಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಈ ಹೊಸ ತಂತ್ರಜ್ಞಾನ ಲಭ್ಯವಾಗಲಿದೆ.


    ಇದನ್ನೂ ಓದಿ: ನಿಮ್ಮ ಫೇಸ್​​​ಬುಕ್ ಖಾತೆ ಸೇಫ್ ಆಗಿರಲು ಈ 5 ಟ್ರಿಕ್ ಫಾಲೋ ಮಾಡಿ


    4) ಸಂಕೀರ್ಣ ಖರೀದಿಗಳಿಗೆ ಸಹಾಯ ಪಡೆಯಿರಿ
    ಈ ಹೊಸ ಖರೀದಿ ಮಾರ್ಗದರ್ಶಿ ವೈಶಿಷ್ಟ್ಯವು ವ್ಯಾಪಕ ಶ್ರೇಣಿಯ ವಿಶ್ವಾಸಾರ್ಹ ಮೂಲಗಳಿಂದ ವರ್ಗದ ಕುರಿತು ಸಹಾಯಕವಾದ ಒಳನೋಟಗಳನ್ನು ಒಂದೇ ಸ್ಥಳದಲ್ಲಿ ಹಂಚಿಕೊಳ್ಳುತ್ತದೆ.


    ಇದನ್ನೂ ಓದಿ: ಪ್ರತಿದಿನ 2GB ಡೇಟಾ, 28 ದಿನಗಳ ವ್ಯಾಲಿಡಿಟಿ! ಈ ಹೊಸ ಪ್ರಿಪೇಯ್ಡ್​ ಪ್ಲಾನ್​ನಲ್ಲಿದೆ ಮತ್ತಷ್ಟು ಬೆನಿಫಿಟ್ಸ್​


    ಇದು ಬಳಕೆದಾರರಿಗೆ ಸಂಶೋಧನೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಎಲ್ಲಾ ಸಂಭಾವ್ಯ ಅಂಶಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಬಳಕೆದಾರರಿಗೆ ತೋರಿಸುತ್ತದೆ. ಇದು ಶೀಘ್ರದಲ್ಲೇ ಯುಸ್‌ ನಲ್ಲಿ ಲಾಂಚ್ ಆಗಲಿದೆ.


    5) ಇತರ ವ್ಯಾಪಾರಿಗಳು ಏನು ಯೋಚಿಸುತ್ತಾರೆ ಎಂಬುದನ್ನು ‌ತಿಳಿಸುತ್ತದೆ
    ಗೂಗಲ್ ಅಪ್ಲಿಕೇಶನ್‌ನಲ್ಲಿನ ಈ ಹೊಸ ವೈಶಿಷ್ಟ್ಯವು ವೆಬ್‌ಪುಟದ ಬಳಕೆದಾರರು ಅಥವಾ ಅವರು ಸಂಶೋಧನೆ ಮಾಡುತ್ತಿರುವ ಉತ್ಪನ್ನದ ಸಾಧಕ-ಬಾಧಕಗಳಂತಹ ಸ್ಟಾರ್ ರೇಟಿಂಗ್‌ಗಳ ಕುರಿತು ‌ಮಾಹಿತಿ ನೀಡುತ್ತದೆ. ಈ ವೈಶಿಷ್ಟ್ಯತೆ ಮುಂಬರುವ ತಿಂಗಳುಗಳಲ್ಲಿ ಯುಎಸ್ ನಲ್ಲಿ ಪ್ರಾರಂಭವಾಗುತ್ತವೆ.


    6) ವೈಯಕ್ತೀಕ ಶಾಪಿಂಗ್‌ ಅನ್ನು ಸೆಟ್‌ ಮಾಡಿಕೊಳ್ಳಬಹುದು
    ಶೀಘ್ರದಲ್ಲೇ, ಬಳಕೆದಾರರು ತಮ್ಮ ಹಿಂದಿನ ಶಾಪಿಂಗ್ ಅಭ್ಯಾಸಗಳ ಆಧಾರದ ಮೇಲೆ ವೈಯಕ್ತೀಕರಿಸಿದ ಶಾಪಿಂಗ್ ಫಲಿತಾಂಶಗಳನ್ನು ನೋಡಬಹುದು. ಇಲ್ಲಿ ಬಳಕೆದಾರರು ತಮ್ಮ ಆದ್ಯತೆ ಮತ್ತು ನಿಯಂತ್ರಣಗಳನ್ನು ನೇರವಾಗಿ ಗೂಗಲ್‌ಗೆ ತಿಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ.


    7) ಹೊಸ ಫಿಲ್ಟರ್‌ಗಳೊಂದಿಗೆ ಶಾಪಿಂಗ್ ಮಾಡಿ
    ಗೂಗಲ್‌ ಶಾಪಿಂಗ್‌ ನಲ್ಲಿ ನೀವು ಈಗ ಫಿಲ್ಟರ್‌ ಗಳ ಸಹಾಯದಿಂದ ಕೂಡ ಶಾಪಿಂಗ್ ಮಾಡಬಹುದು. ಉದಾಹರಣೆಗೆ, ಜೀನ್ಸ್ ಖರೀದಿಸುತ್ತಿದ್ದರೆ, ನೀವು,‌ ವೈಡ್‌ ಲೆಗ್‌, ಬೂಟ್ಕಟ್‌, ಪೆನ್ಸಿಲ್‌ ಪ್ಯಾಂಟ್‌ ಹೀಗೆ ಬೇಕಾದ್ದ ಫಿಲ್ಟರ್‌ ಆರಿಸಿಕೊಳ್ಳಬಹುದು.


    8) ಬಳಕೆದಾರರ ಸೂಚನೆ ಮೇಲೆ ಶಾಪಿಂಗ್
    ಗೂಗಲ್ ಅಪ್ಲಿಕೇಶನ್‌ನಲ್ಲಿ ‌ ಬಳಕೆದಾರರು ಶಾಪಿಂಗ್ ಮಾಡುತ್ತಿರುವ ಮತ್ತು ಇತರರು ಏನು ಹುಡುಕಿದ್ದಾರೆ ಎಂಬುದರ ಆಧಾರದ ಮೇಲೆ ನೀವು ಶಾಪಿಂಗ್‌ ಮಾಡಬಹುದು. ಅಂದರೆ ಬಳಕೆದಾರರು ಸೂಚಿಸಿದ ಶೈಲಿಗಳನ್ನು ನೋಡಿ ಖರೀದಿಸಬಹುದು.


    9) ಬೇಕಾದ ಲುಕ್‌ ಅನ್ನು ಶಾಫ್‌ ಮಾಡಬಹುದು
    ಈ ವೈಶಿಷ್ಟ್ಯವು ಬಳಕೆದಾರರಿಗೆ ಒಂದು ಕಂಪ್ಲೀಟ್‌ ಔಟ್‌ಫಿಟ್ ‌ ಜೋಡಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಬಾಂಬರ್ ಜಾಕೆಟ್ ಎಂದು ಹೇಳಿದರೆ, ಈ ಹೊಸ ಫೀಚರ್ ಬಳಕೆದಾರರಿಗೆ ಬಾಂಬರ್ ಜಾಕೆಟ್‌ಗಳ ಚಿತ್ರಗಳನ್ನು ಮತ್ತು ಹುಡುಕಾಟದೊಳಗೆ ಅವುಗಳನ್ನು ಎಲ್ಲಿ ಖರೀದಿಸಬೇಕು ಎಂಬುದಕ್ಕೆ ಸ್ಥಳಗಳೊಂದಿಗೆ ಪೂರಕ ಪೀಸ್‌ಗಳನ್ನು ತೋರಿಸುತ್ತದೆ.

    First published: