ಭಾರತೀಯರು ಗೂಗಲ್​ನಲ್ಲಿ ಅತೀ ಹೆಚ್ಚಾಗಿ ಇದನ್ನೇ ಹುಡುಕಾಡುತ್ತಾರಂತೆ..!

ಈ ವರದಿಯಲ್ಲಿ ತಿಳಿಸಿರುವಂತೆ ಗೂಗಲ್​ನಲ್ಲಿ Near Me’(ನನ್ನ ಹತ್ತಿರದ) ಶೋಧವು ಶೇ.75 ರಷ್ಟು ಹೆಚ್ಚಾಗಿದ್ದು, ಹಾಗೆಯೇ ಕೆಲಸದ ಹುಡುಕಾಟ ಶೇ.100ರಷ್ಟು ಜಾಸ್ತಿಯಾಗಿದೆ ಎಂದು ತಿಳಿಸಿದೆ.

zahir | news18
Updated:May 12, 2019, 3:51 PM IST
ಭಾರತೀಯರು ಗೂಗಲ್​ನಲ್ಲಿ ಅತೀ ಹೆಚ್ಚಾಗಿ ಇದನ್ನೇ ಹುಡುಕಾಡುತ್ತಾರಂತೆ..!
ಪ್ರಾತಿನಿಧಿಕ ಚಿತ್ರ
  • News18
  • Last Updated: May 12, 2019, 3:51 PM IST
  • Share this:
ಡಿಜಿಟಲ್ ಯುಗದಲ್ಲಿ ಪ್ರತಿಯೊಂದರ ಮಾಹಿತಿ ಪಡೆಯಲು ಒಂದೇ ಒಂದು ಕ್ಲಿಕ್ ಸಾಕು. ಹೌದು, ಗೂಗಲ್ ಸರ್ಚ್​ ಇಂಜಿನ್ ಒಂದಿದ್ದರೆ ಯಾವುದೇ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಗೂಗಲ್​ನಲ್ಲಿರದ ವಿಷಯವಿಲ್ಲ ಎಂಬ ಆಧುನಿಕ ನಾಣ್ಣುಡಿಯೊಂದು ಪ್ರಚಲಿತದಲ್ಲಿದೆ. ಅಂದರೆ ಭಾರತ ಸೇರಿದಂತೆ ವಿಶ್ವದೆಲ್ಲಡೆ ಗೂಗಲ್ ಮೊರೆ ಹೋಗುವವರೇ ಹೆಚ್ಚು. ಅದರಲ್ಲೂ ಭಾರತೀಯ ಯುವ ತಲೆಮಾರು 2018 ರಲ್ಲಿ ಗೂಗಲ್​ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು ಎಂಬ ವರದಿಯನ್ನು ಗೂಗಲ್ ಇಯರ್ ಇನ್​ ಸರ್ಚ್​ ಇಂಡಿಯಾ: ಇನ್​ಸೈಟ್ಸ್ ಫರ್ ಬ್ರ್ಯಾಂಡ್ಸ್​ ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ ಹೆಚ್ಚಿನ ಭಾರತೀಯರು ಗೂಗಲ್​ನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ. ಒಟ್ಟು ಹುಡುಕಾಟದ ಶೇ.40 ರಷ್ಟು ಮಂದಿ ಡೇಟಿಂಗ್ ಪಾಟರ್ನರ್​ಗಾಗಿ ಸರ್ಚ್​ ಇಂಜಿನ್​ನಲ್ಲಿ ಜಾಲಾಡಿದ್ದಾರೆ. ಇದೇ ವೇಳೆ ಮದುವೆ ಸಂಬಂಧಕ್ಕಾಗಿ ಅಂತರ್ಜಾಲದ ಮೊರೆ ಹೋದವರು ಕೇವಲ ಶೇ.13 ರಷ್ಟು ಮಂದಿ ಮಾತ್ರ. ಅಂದರೆ ದೇಶದ ಯುವ ಜನಾಂಗ ಮದುವೆಗಿಂತ ಡೇಟಿಂಗ್​ನತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ.

2017 ಕ್ಕೆ ಹೋಲಿಸಿದರೆ ಕಳೆದ ವರ್ಷ ಭಾರತದಲ್ಲಿ ಮ್ಯಾಟ್ರಿಮೊನಿಗಿಂತ ಡೇಟಿಂಗ್ ಪಾರ್ಟನರ್​ ಹುಡುಕಾಟ ಹೆಚ್ಚಾಗಿರುವುದು ಕಂಡು ಬಂದಿದೆ. ಇದು ಕೇವಲ ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇಂಟರ್ನೆಟ್​ ಸೌಲಭ್ಯವಿರುವ ಸಣ್ಣ ಪುಟ್ಟ ಪಟ್ಟಣಗಳ ಜನರೂ ಸಹ, ತಮ್ಮ ಪಾಲುದಾರರ ಹುಡುಕಾಟ ನಡೆಸುತ್ತಿದ್ದಾರೆ ಎಂದು ಇನ್​ಸೈಟ್ಸ್ ಫರ್ ಬ್ರ್ಯಾಂಡ್ಸ್ ಅಭಿಪ್ರಾಯಪಟ್ಟಿದೆ.

ಈ ವರದಿಯಲ್ಲಿ ತಿಳಿಸಿರುವಂತೆ ಗೂಗಲ್​ನಲ್ಲಿ 'Near Me’(ನನ್ನ ಹತ್ತಿರದ) ಶೋಧವು ಶೇ.75 ರಷ್ಟು ಹೆಚ್ಚಾಗಿದ್ದು, ಹಾಗೆಯೇ ಕೆಲಸದ ಹುಡುಕಾಟ ಶೇ.100ರಷ್ಟು ಜಾಸ್ತಿಯಾಗಿದೆ ಎಂದು ತಿಳಿಸಿದೆ. ಹಾಗೆಯೇ ಪ್ರತಿವರ್ಷ 4 ಕೋಟಿ ಭಾರತೀಯರು ಹೋಮ್ ಇಂಟರ್ನೆಟ್​ ಬಳಕೆಯ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಇತರೆ ನಗರಗಳಲ್ಲೂ ಮೆಟ್ರೋ ನಗರಗಳಿಗಿಂತ ಆನ್​ಲೈನ್ ಹುಡುಕಾಟ ವೇಗವಾಗಿ ಬೆಳೆಯುತ್ತಿದೆ. ಮೆಟ್ರೋ ನಗರಗಳಿಗೆ ಹೋಲಿಸಿದರೆ, ಇತರೆ ನಗರಗಳ ಜನರು ವಿಮೆ, ಸೌಂದರ್ಯ ಮತ್ತು ಪ್ರವಾಸೋದ್ಯಮದ ಕುರಿತು ಅಂತರ್ಜಾಲದಲ್ಲಿ ಹೆಚ್ಚು ಶೋಧನೆ ಮಾಡುತ್ತಿದ್ದಾರೆ ಎಂಬ ವಿಷಯ ಈ ವರದಿಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಕೇವಲ 5 ವರ್ಷಗಳಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ನರ್ಸ್​!

First published:May 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...