Google: ಗೂಗಲ್​ ಸಹಾಯದಿಂದ ಕಳೆದುಹೋದ ಸ್ಮಾರ್ಟ್​ಫೋನ್​ ಪತ್ತೆಹಚ್ಚಬಹುದು!

ಸಾಕಷ್ಟು ಜನರಿಗೆ ತಿಳಿದಿಲ್ಲ. ಕಳೆದುಕೊಂಡ ಸ್ಮಾರ್ಟ್​ಫೋನ್​ಗಳನ್ನು ತಾವೇ ಹುಡುಕಬಹುದು!. ಅದು ಯಾವ ಪ್ರದೇಶದದಲ್ಲಿದೆ ತಿಳಿಯಬಹುದು ಎಂದು!. ಈ ಸರಳ ವಿಧಾನದ ಮೂಲಕ ಸ್ಮಾರ್ಟ್​ಫೋನ್​ ಪತ್ತೆ ಹಚ್ಚಬಹುದಾಗಿದೆ.

news18-kannada
Updated:September 23, 2020, 8:21 AM IST
Google: ಗೂಗಲ್​ ಸಹಾಯದಿಂದ ಕಳೆದುಹೋದ ಸ್ಮಾರ್ಟ್​ಫೋನ್​ ಪತ್ತೆಹಚ್ಚಬಹುದು!
ಸ್ಮಾರ್ಟ್​ಫೋನ್​
  • Share this:
ನಗರದಲ್ಲಿ ಸ್ಮಾರ್ಟ್​ಫೋನ್​ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ನಮಗೆ ಗೊತ್ತಿಲ್ಲದಂತೆ ಕಳ್ಳರು ಮೊಬೈಲ್​ ಎಗರಿಸುತ್ತಾರೆ. ಮೆಟ್ರೋ, ಬಸ್ಸಿನಲ್ಲಿ ಚಲಿಸುವ ವೇಳೆಗೆ ಗೊಚರಕ್ಕೆ ಬಾರದಂತೆ ಮೊಬೈಲ್​ ಎಗರಿಸಿ ಮಾಯವಾಗುತ್ತಾರೆ. ಇಂತಹ ಘಟನೆಗಳು ತಕ್ಷಣಕ್ಕೆ ನಮಗೆ ಗೊತ್ತಾಗದಿದ್ದರು, ಮೊಬೈಲ್​ ಕಳೆದುಕೊಂಡ ಬಳಿಕ ಚಿಂತೆಗೆ ದೂಡುವಂತೆ ಮಾಡುತ್ತದೆ. ತಕ್ಷಣಕ್ಕೆ ಏನು ತೋಚದೆ ಕೊನೆಗೆ ಪೋಲೀಸ್​ ಠಾಣೆಯಲ್ಲಿ ದೂರು ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರ ನೆರವಿನಿಂದ ಕೆಲಮೊಮ್ಮೆ ಸ್ಮಾರ್ಟ್​ಫೋನ್​ಗಳು ಮರಳಿ ಸಿಗುತ್ತದೆ. ಆದರೆ ಶೇ 50 ರಷ್ಟು ಸ್ಮಾರ್ಟ್​ಫೋನ್​ಗಳು ಮತ್ತೆ ಕೈ ಸೇರುವುದು ಬಹಳ ವಿರಳ. ಹಾಗಾಗಿ ತಕ್ಷಣ ಸ್ಮಾರ್ಟ್​ಫೋನ್​ ಕಳೆದುಕೊಂಡರೆ ಮೊದಲು ಏನು ಮಾಡಬೇಕು? ಆ ಸ್ಮಾರ್ಟ್​ಫೋನ್​​ ಅನ್ನು ಹುಡುಕುವುದು ಹೇಗೆ? ಇಲ್ಲಿದೆ ಮಾಹಿತಿ.

ಸಾಕಷ್ಟು ಜನರಿಗೆ ತಿಳಿದಿಲ್ಲ. ಕಳೆದುಕೊಂಡ ಸ್ಮಾರ್ಟ್​ಫೋನ್​ಗಳನ್ನು ತಾವೇ ಹುಡುಕಬಹುದು!. ಅದು ಯಾವ ಪ್ರದೇಶದದಲ್ಲಿದೆ ತಿಳಿಯಬಹುದು ಎಂದು!. ಈ ಸರಳ ವಿಧಾನದ ಮೂಲಕ ಸ್ಮಾರ್ಟ್​ಫೋನ್​ ಪತ್ತೆ ಹಚ್ಚಬಹುದಾಗಿದೆ.

ಕೆಲವು ಸುಳಿವುಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್ ಇಂಟರ್​​​ನೆಟ್​​ ಸಂಪರ್ಕವನ್ನು ಹೊಂದಿರಬೇಕು. ಮಾತ್ರವಲ್ಲದೆ, Google ಖಾತೆ ಲಾಗಿನ್ ಇರಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

ಕಳೆದು ಹೋದ ಸ್ಮಾರ್ಟ್​ಫೋನನ್ನು ಹೀಗೆ​ ಟ್ರ್ಯಾಕ್​ ಮಾಡಿ:

  1. ಸ್ಮಾರ್ಟ್​ಫೋನ್​ ಕಳೆದು ಹೋದರೆ ಗೂಗಲ್​ ಐಡಿಯೊಂದಿಗೆ ಜಿಮೇಲ್​​.ಕಾಮ್​​ನಲ್ಲಿ ನಿಮ್ಮ ಕಂಪ್ಯೂಟರ್​ಗೆ ಲಾಗಿನ್​​ ಮಾಡಿ.

  2. ನಂತರ ನಿಮ್ಮ ಹೆಸರಿನ ಪಕ್ಕದಲ್ಲಿ ತೋರಿಸುವ ಪ್ರೊಫೈಲ್​​ ಚಿತ್ರದ ಮೇಲೆ ಕ್ಲಿಕ್​​ ಮಾಡುವ ಮೂಲಕ ಗೂಗಲ್​​ ಖಾತೆಗೆ ತೆರಳಿ.
  3. ನಂತರ ಸೆಕ್ಯುರಿಟಿ ಆಯ್ಕೆಯ ಮೂಲಕ ಫೈಂಡ್​​ ಎ ಲಾಸ್ಟ್​ ಅಥವಾ ಸ್ಟೋಲನ್​ ಫೋನ್​​ ಆಯ್ಕೆಯ ಮೇಲೆ ಕ್ಲಿಕ್​ ಮಾಡಿರಿ. ಆ ಮೂಲಕ ಫೋನ್​ ಟ್ರ್ಯಾಕ್​ ಮಾಡಲು ಸಾಧ್ಯವಾಗುತ್ತದೆ.

  4. ಗೂಗಲ್​ ಸಹಾಯದ ಮೂಲಕ ಕಳೆದು ಹೋದ ಫೋನ್​ ಅನ್ನು ಗೂಗಲ್​ ಮ್ಯಾಪ್​ ಮೂಲಕ ತೋರಿಸುತ್ತದೆ. ಜೊತೆಗೆ ಯಾವ ಸ್ಥಳದಲ್ಲಿದೆ ಎಂಬುದನ್ನು ತಿಳಿಸುತ್ತದೆ.

  5. ಟ್ರ್ಯಾಕ್​ ಮಾಡುವ ಮೂಲಕ ಸ್ಮಾರ್ಟ್​ಫೋನ್​​​ ರಿಂಗ್​ಟೋನ್​​​ ಅನ್ನು ಪ್ಲೇ ಮಾಡಬಹುದಾಗಿದೆ. ಇದಕ್ಕಾಗಿ ಪ್ಲೇ ಸೌಂಡ್​​​ ಆಯ್ಕೆಯನ್ನುಕ್ಕಿಕ್​​ ಮಾಡಬೇಕು.


ನೆನಪಿನಲ್ಲಿಡಿ:

  • ಇಂಟರ್​ನೆಟ್​ ಸಂಪರ್ಕವಿದ್ದರೆ ಮಾತ್ರ ಗೂಗಲ್​ ಮತ್ತು ಜಿಮೇಲ್​ ಖಾತೆಯ ಮೂಲಕ ಕಳೆದು ಹೋದ ಸ್ಮಾರ್ಟ್​ಫೋನ್​ ಅನ್ನು ಹುಡುಕಾಡಬಹುದು.

  • ಟ್ರ್ಯಾಕ್ ಮಾಡುವ ವೇಳೆ ಗೂಗಲ್​ ಮ್ಯಾಪ್​​ನಲ್ಲಿ ತೋರಿಸುವ ಗುರುತು ಹಸಿರು ಬಣ್ಣದ್ದಾಗಿದ್ದರೆ ಸ್ಮಾರ್ಟ್​ಫೋನ್​ನಲ್ಲಿ ಇಂಟರ್​ನೆಟ್​ ಸಂಪರ್ಕವಿದೆ ಎಂದು ಅರ್ಥ, ಬೂದು ಬಣ್ಣ ತೋರಿಸಿದರೆ ಇಂಟರ್​ನೆಟ್​ ಸಂಪರ್ಕ ಕಡಿತಗೊಂಡಿದೆ ಎಂದು ಅರ್ಥ.

  • ಸ್ಮಾರ್ಟ್​ಫೋನ್​ ಕಳೆದುಹೋಗಿದ್ದು, ಸಿಮ್​ ಕಾರ್ಡ್​ ಅದರಿಂದ ಬೇರ್ಪಟ್ಟರೆ. ಕೊನೆಯ ಬಾರಿಗೆ ಯಾವ ಸ್ಥಳದಲ್ಲಿ ಇಂಟರ್​ನೆಟ್​ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಯಬಹುದಾಗಿದೆ.

Published by: Harshith AS
First published: September 23, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading