Google features: ನಿಮ್ಮ ಮುಖದಿಂದಲೇ ಸ್ಮಾರ್ಟ್​​ಫೋನನ್ನು ನಿಯಂತ್ರಿಸಬಹುದು!

Google: ಟೆಕ್‌ಕ್ರಂಚ್ ಪ್ರಕಾರ, 'ಪ್ರಾಜೆಕ್ಟ್ ಆಕ್ಟಿವೇಟ್' ಮತ್ತು 'ಕ್ಯಾಮೆರಾ ಸ್ವಿಚ್‌ಗಳು' ಬಳಕೆದಾರರು ಕಸ್ಟಮ್ ಪದಗುಚ್ಛವನ್ನು ಮಾತನಾಡುವುದು ಅಥವಾ ಸ್ವಿಚ್ ಇಂಟರ್‌ಫೇಸ್ ಬಳಸಿ ನ್ಯಾವಿಗೇಟ್ ಮಾಡುವಂತಹ ಕೆಲಸಗಳನ್ನು ಕೇವಲ ಮುಖದ ಸನ್ನೆಗಳ ಮೂಲಕ ನಿರ್ವಹಿಸಲು ಅವಕಾಶ ನೀಡುತ್ತದೆ.

Google

Google

 • Share this:
  ಅಮೆರಿಕನ್ ಟೆಕ್ ದೈತ್ಯ ಗೂಗಲ್ ಮಾತು (Talk) ಅಥವಾ ದೈಹಿಕ ನ್ಯೂನತೆ (physical disabilities) ಹೊಂದಿರುವ ಜನರಿಗೆ ಎರಡು ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಇತ್ತೀಚೆಗೆ ಬಿಡುಗಡೆಯಾದ ವೈಶಿಷ್ಟ್ಯಗಳ ಮೂಲಕ, ಬಳಕೆದಾರರು ಈಗ ತಮ್ಮ ಆಂಡ್ರಾಯ್ಡ್-ಚಾಲಿತ (Android) ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಂಡ್ಸ್-ಫ್ರೀ (Hand Free) ಆಗಿ ಬಳಸಬಹುದಾಗಿದೆ.

  ಟೆಕ್‌ಕ್ರಂಚ್ ಪ್ರಕಾರ, 'ಪ್ರಾಜೆಕ್ಟ್ ಆಕ್ಟಿವೇಟ್' ಮತ್ತು 'ಕ್ಯಾಮೆರಾ ಸ್ವಿಚ್‌ಗಳು' ಬಳಕೆದಾರರು ಕಸ್ಟಮ್ ಪದಗುಚ್ಛವನ್ನು ಮಾತನಾಡುವುದು ಅಥವಾ ಸ್ವಿಚ್ ಇಂಟರ್‌ಫೇಸ್ ಬಳಸಿ ನ್ಯಾವಿಗೇಟ್ ಮಾಡುವಂತಹ ಕೆಲಸಗಳನ್ನು ಕೇವಲ ಮುಖದ ಸನ್ನೆಗಳ ಮೂಲಕ ನಿರ್ವಹಿಸಲು ಅವಕಾಶ ನೀಡುತ್ತದೆ.

  'ಕ್ಯಾಮೆರಾ ಸ್ವಿಚ್‌ಗಳು' ಈಗಿರುವ ಸ್ವಿಚ್ ಆಕ್ಸೆಸ್‌ಗೆ ಒಂದು ವೈಶಿಷ್ಟ್ಯವಾಗಿದ್ದು, ಆದರೀಗ ಬಳಕೆದಾರರಿಗೆ ಕೇವಲ ಮುಖವನ್ನು ಬಳಸಿ ಆಂಡ್ರಾಯ್ಡ್ ಫೋನಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.

  ಕ್ಯಾಮೆರಾ ಸ್ವಿಚ್‌ಗಳು ಬಳಕೆದಾರರಿಗೆ ಮುಖದ ಗೆಸ್ಚರ್ (ಎಡ, ಬಲ, ಅಥವಾ ಮೇಲಕ್ಕೆ ನೋಡುವುದು; ನಗುವುದು, ನಿಮ್ಮ ಹುಬ್ಬುಗಳನ್ನು ಏರಿಸುವುದು, ಅಥವಾ ನಿಮ್ಮ ಬಾಯಿ ತೆರೆಯುವುದು) ನಿರ್ದಿಷ್ಟ ಕ್ರಿಯೆಗೆ ಅನುಮತಿಸುತ್ತದೆ. ಪ್ರತಿ ಗೆಸ್ಚರ್‌ನ ಪ್ರಚೋದನೆಯು ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಜನರು ಕಸ್ಟಮೈಸ್ ಮಾಡಬಹುದಾಗಿದೆ.

  ಬಳಕೆದಾರರನಿಗೆ ಬೇಕಾಆದಂತೆ ಅದು ಕಾರ್ಯ ನಿರ್ವಹಿಸುತ್ತದೆ. ಮುಂದಕ್ಕೆ ಅಥವಾ ಹಿಂದಕ್ಕೆ ಸ್ಕ್ರೋಲಿಂಗ್, ಮನೆ ಅಥವಾ ಹಿಂದಕ್ಕೆ ನ್ಯಾವಿಗೇಟ್ ಮಾಡುವುದು, ದೀರ್ಘ ಒತ್ತುವಿಕೆಯ ಮೂಲಕ ಸರಳವಾದ ಕಾರ್ಯಗಳನ್ನು ನಿಯೋಜಿಸುತ್ತದೆ.

  'ಪ್ರಾಜೆಕ್ಟ್ ಆಕ್ಟಿವೇಟ್' ಎನ್ನುವುದು ಗೂಗಲ್‌ನ ಇನ್ನೊಂದು ಹೊಸ ಫೀಚರ್ ಆಗಿದೆ ಮತ್ತು ಇದು ಕ್ಯಾಮೆರಾ ಸ್ವಿಚ್‌ಗಳು ಬಳಸುವ ಅದೇ ಮುಖದ ಸನ್ನೆಗಳನ್ನು ಬಳಸಲು ನಿಮಗೆ ಅನುವು ಮಾಡಿಕೊಡುತ್ತದೆ, ಆದರೆ ನಿಮ್ಮ ಫೋನ್ ಹೇಳುವಂತೆ ನೀವು ಹೆಚ್ಚು ಸಂಕೀರ್ಣವಾದ ಫ್ರೀ ಸೆಟ್​ ಆ್ಯಕ್ಷನ್​ ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ .

  ಈ ಎರಡು ಹೊಸ ಫೀಚರ್‌ಗಳ ಮೇಲೆ, ದೃಷ್ಟಿಹೀನತೆ ಹೊಂದಿರುವವರಿಗಾಗಿ ಗೂಗಲ್ ತನ್ನ ಲುಕೌಟ್ ಆಪ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ. ನಿಮಗೆ ಪರಿಚಯವಿಲ್ಲದಿದ್ದಲ್ಲಿ, ನಿಮ್ಮ ಫೋನ್ ಅನ್ನು ವಿಷಯದ ಕಡೆಗೆ ತೋರಿಸಲು ಮತ್ತು ಫೋನ್ ಅದನ್ನು ವಿವರಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

  ಹೊಸ ವೈಶಿಷ್ಟ್ಯಗಳು ಸ್ಮಾರ್ಟ್‌ಫೋನ್‌ನ ಮುಂಭಾಗದ ಕ್ಯಾಮೆರಾವನ್ನು ಅವಲಂಬಿಸಿವೆ, ಇದು ಬಳಕೆದಾರರ ಮುಖವನ್ನು ಪರಿಗಣಿಸಿ ಕಾರ್ಯನಿರ್ವಹಿಸುತ್ತದೆ.

  ಗೂಗಲ್​ ಹೊಸ ಫೀಚರ್ಸ್​ ಅನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಇರುತ್ತದೆ. ಮಾತ್ರವಲ್ಲದೆ ನೂತನ ಫೀಚರ್ಸ್​ಸಿದ್ಧಪಡಿಸಿ ಸ್ಮಾರ್ಟ್​ಫೋನ್​ ಅಪ್​​ಡೇಟ್​ ಮಾಡುವ ಮೂಲಕ ಗ್ರಾಹಕರಿಗೆ ಎನಾದರು ಒಂದು ಹೊಸ ಕೊಡುಗೆ ನೀಡುತ್ತಿರುತ್ತದೆ. ಅದರಂತೆ ಇದೀಗ ಮುಖದ ಚರ್ಯೆಯಿಂದಲೇ ಸ್ಮಾರ್ಟ್​ಫೋನ್​ ನಿಯಂತ್ರಿಸಬಹುದಾದ ಫೀಚರ್​ ಅನ್ನು ಪರಿಚಯಿಸುತ್ತಿದೆ.

  ಇದನ್ನು ಓದಿ ⇒ Instagram: ಪ್ರೊಫೆಷನಲ್‌ ಹಾಗೂ ವೈಯಕ್ತಿಕ ಖಾತೆಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೆಡ್ಯೂಲ್‌ ಮಾಡುವುದು ಹೇಗೆ?

  ಇನ್ಮುಂದೆ ಎಲ್ಲಾ ಫೋನ್​​ಗಳಿಗೂ ಯುಎಸ್​ಬಿ-ಸಿ ಚಾರ್ಜರ್​!

  ಐಫೋನ್ (Iphone)​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳ (Android Smartphone) ಚಾರ್ಜರ್​ಗೆ ವಿಭಿನ್ನವಾಗಿದೆ. ಇದರ ನಡುವೆ ವೈರ್​ಲೆಸ್​ ಚಾರ್ಜರ್​ಗಳು ಕೂಡ ಮಾರುಕಟ್ಟೆಗೆ ಆಗಮಿಸುತ್ತಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಟೈಪ್​- ಸಿ ಚಾರ್ಜರ್​ (USB -C Charger) ನೀಡಲಾಗುತ್ತಿದೆ. ಹೀಗಿರುವಾಗ ಇದನ್ನು ಗಮನಿಸಿದ ಯುರೋಪಿಯನ್​ ಕಮಿಷನ್​ ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ (Ipad)​ ಹಾಗೂ ಇಯರ್​ ಫೋನ್​​ಗಳಿಗೆ (Earphone) ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

  ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲಿ ನಾನಾ ವಿಧಧ ಚಾರ್ಜರ್​ಗಳಿವೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳ ಚಾರ್ಜರ್​ ಭಿನ್ನವಾಗಿದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಅಷ್ಟು ಮಾತ್ರವಲ್ಲದೆ, ಆ್ಯಂಡ್ರಾಯ್ಡ್​ ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ (Micro USB) ಬಳಸುತ್ತಿದ್ದಾರೆ. ಈ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್​ಗಳನ್ನು ಹಿಡಿದುಕೊಂಡು ಹೋಗಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಯುರೋಪಿಯನ್​ ಕಮಿಷನ್​ ಎಲ್ಲಾ ಫೋನ್​, ಐಪ್ಯಾಡ್​, ಇಯರ್​ಫೋನ್​ಗೂ ಒಂದೇ ಚಾರ್ಜರ್​ ನೀಡುವ ಆದೇಶ ಹೊರಡಿಸಿದೆ.

  ಯುರೋಪಿಯನ್​ ಕಮಿಷನ್​ ಹೇಳಿರುವಂತೆ ಮೊಬೈಲ್​ ಫೋನ್​, ಟ್ಯಾಬ್ಲೆಟ್​ ಮತ್ತು ಹೆಡ್​ಫೋನ್​ ಸಾಮಾನ್ಯ ಜಾರ್ಜಿಂಗ್​ ಪೋರ್ಟ್​​ ಇರಬೇಕೆಂದು ಸೂಚಿಸಿದೆ. ಅಂತೆಯೇ ಯುಎಸ್​ಬಿ-ಸಿ ಕನೆಕ್ಟರ್​ ಎಲ್ಲಾ ಸ್ಮಾರ್ಟ್​ಫೋನ್​ಗಳು, ಟ್ಯಾಬ್ಲೆಟ್​ಗಳು, ಹೆಡ್​ಫೋನ್​ಗಳು, ಫೋರ್ಟಬಲ್​ ಸ್ಪೀಕರ್​ಗಳು ಮತ್ತು ಹ್ಯಾಂಡ್​​ಹೆಲ್ಡ್​ ವಿಡಿಯೋಗೇಮ್​ ಕನ್ಸೋಲ್​ಗಳಿಗೆ  ಪ್ರಮಾಣಿತ ಪೋರ್ಡ್​ ನೀಡಬೇಕು ಎಂದಿದೆ.

  ಈ ವಿಚಾರ ತಿಳಿದು ಆ್ಯಪ್​ ಸಂಸ್ಥೆ ಯುರೋಪಿಯನ್​ ಕಮಿಷನ್ ಹೊರಡಿಸಿರುವ ಆದೇಶವನ್ನು ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಿಕ್​ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಮತ್ತು ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂದಿದೆ.
  Published by:Harshith AS
  First published: