ಅನೇಕರು ಸ್ಮಾರ್ಟ್ಫೋನಿನಲ್ಲಿರುವ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಫೋಟೋ ಚೆನ್ನಾಗಿ ಬರುವುದಿಲ್ಲವೆಂದು ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗುವ ಕೆಲವು ಬ್ಯೂಟಿ ಕ್ಯಾಮೆರಾ ಆ್ಯಪ್ಗಳ ಮೊರೆ ಹೋಗುತ್ತಾರೆ. ವಿಶೇಷ ಫೀಚರ್ಗಳನ್ನು ಒಳಗೊಂಡಿರುವ ಈ ಆ್ಯಪ್ಗಳನ್ನು ಸ್ಮಾರ್ಟ್ಪೋನ್ಗಳಿಗೆ ಅಳವಡಿಸಿಕೊಂಡು, ನಂತರ ಅದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಈ ಆ್ಯಪ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದರೀಗ ಬ್ಯೂಟಿ ಕ್ಯಾಮೆರಾ ಆ್ಯಪ್ಗಳ ಬಗ್ಗೆ ಗೂಗಲ್ ಮಾಹಿತಿಯೊಂದನ್ನ ಹೊರ ಹಾಕಿದೆ. ಈ ಆ್ಯಪ್ಗಳು ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಹೇಳಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಾಕಷ್ಟು ಆ್ಯಪ್ಗಳು ದೊರಕುತ್ತವೆ. ಯಾರು ಬೇಕಾದರು ಆ್ಯಪ್ ಅಭಿವೃದ್ಧಿ ಪಡಿಸಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಬಿಡಬಹುದಾಗಿದೆ. ಅದರಂತೆ ಬ್ಯೂಟಿ ಕ್ಯಾಮೆರಾ ಆ್ಯಪ್ಗಳು ಕೂಡ ಹಲವಾರಿದೆ. ಅನೇಕರು ಆ್ಯಪ್ಗಳ ಬಗ್ಗೆ ಪರೀಕ್ಷಿಸದೆ ವಿಶೇಷ ಫೀಚರ್ ಇರುವ ಬ್ಯೂಟಿ ಕ್ಯಾಮೆರಾ ಆ್ಯಪ್ಗಳನ್ನು ಡೌನ್ ಲೋಡ್ ಮಾಡಿ ಬಳಸುತ್ತಿದ್ದಾರೆ. ಆದರೆ ಈ ಆ್ಯಪ್ಗಳೇ ಆವರ ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡುತ್ತಿವೆ ಎಂದು ಗೂಗಲ್ ಹೇಳಿದೆ.
ಈ ಬಗ್ಗೆ ಪರೀಕ್ಷಿಸಿದ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಒಟ್ಟು 36 ಬ್ಯೂಟಿ ಕ್ಯಾಮೆರಾ ಆ್ಯಪ್ಗಳನ್ನು ಡಿಲೀಟ್ ಮಾಡಿದೆ. ಬ್ಯೂಟಿ ಫಿಲ್ಟರ್ ಕ್ಯಾಮೆರಾ ಆ್ಯಪ್, ಫೋಟೋ ಕೊಲಾಜ್ ಆ್ಯಪ್, ಕಾರ್ಟೂನ್ ಫೋಟೋ ಎಡಿಟರ್ ಸೇರಿದಂತೆ ಕೆಲವು ಆ್ಯಪ್ಗಳನ್ನು ತೆಗೆದು ಹಾಕಿದೆ.
ಗೂಗಲ್ ನೀಡಿರುವ ಹೇಳಿಕೆ ಪ್ರಕಾರ ಬ್ಯೂಟಿ ಕ್ಯಾಮೆರಾ ಆ್ಯಪ್ಗಳನ್ನು ದುರುದ್ದೇಶಕ್ಕಾಗಿ ತಯಾರಿಸಲಾಗಿದೆಯಂತೆ. ಹಾಗಾಗಿ ಈ ಆ್ಯಪ್ಗಳನ್ನು ಬಳಸುತ್ತಿರುವ ಬಳಕೆದಾರರು ಕೂಡಲೇ ಡಿಲೀಟ್ ಮಾಡಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.
ವೈಟ್ ಓಪ್ಸ್ ಎಂಬ ಕಂಪೆನಿ ಪ್ಲೇ ಸ್ಟೋರ್ನಲ್ಲಿರುವ ಬ್ಯೂಟಿ ಕ್ಯಾಮೆರಾ ಆ್ಯಪ್ಗಳ ಬಗ್ಗೆ ಪಟ್ಟಿ ಮಾಡಿ ಗೂಗಲ್ಗೆ ದೂರು ಸಲ್ಲಿಸಿತ್ತು. ಬಳಕೆದಾರರಿಗೆ ಈ ಆ್ಯಪ್ಗಳು ಜಾಹೀರಾತುಗಳ ಜೊತೆಗೆ ಸುರಕ್ಷಿತವಲ್ಲದ ಯುಆರ್ಎಲ್ಗಳನ್ನು ಪ್ರದರ್ಶಿಸುತ್ತವೆ. ಇವುಗಳ ಮೇಲೆ ಕ್ಲಿಕ್ ಮಾಡಿದಂತೆ, ಅವರ ವೈಯ್ಯಕ್ತಿಕ ಮಾಹಿತಿ ಸೋರಿಕೆಯಯಾಗುವ ಮೂಲಕ ಸ್ಮಾರ್ಟ್ಫೋನ್ ಹ್ಯಾಕ್ ಆಗುವ ಅಪಾಯವಿದೆ.
ಕನ್ನಡಿಗರು ಹೆಮ್ಮೆಪಡೋ ದಾಖಲೆ ಬರೆದ ನಮ್ಮ ಯಶ್: ಇದು ಅಂತಿಂತ ಸಾಮಾನ್ಯ ರೆಕಾರ್ಡ್ ಅಲ್ಲ!
Viral: ರಾಧಿಕಾ ಪಂಡಿತ್ ಹರಿಬಿಟ್ಟಿದ್ದ ಪೋಸ್ಟ್ವೊಂದಕ್ಕೆ ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದರು ಚಿರು! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ