Google​ ಪರಿಚಯಿಸುತ್ತಿದೆ ಹೊಸ ವಾಲೆಟ್​​ ಆ್ಯಪ್​! ಹಾಗಿದ್ರೆ, Google Pay ಬಳಕೆಗೆ ಸಿಗೋಲ್ವಾ?

Google Wallet app: ಈಗಾಗಲೇ ಬಹುಪಾಲು ಜನರು ಪೇಮೆಂಟ್​​ ಆನ್​ಲೈನ್​ ಆ್ಯಪ್​​ಗಳನ್ನು ಬಳಸುತ್ತಿದ್ದಾರೆ. ಅದರ ಮೂಲಕ ಆಹಾರ ಇನ್ನಿತರ ಸಾಮಾಗ್ರಿ ಖರೀದಿಸುವಾಗ ಹಣ ಪಾವತಿಸಲು ಆನ್​ಲೈನ್​ ಪೇಮೆಂಟ್​ ಸೇವೆಯನ್ನು ಬಳಸುತ್ತಿದ್ದಾರೆ.

ಗೂಗಲ್​ ವಾಲೆಟ್

ಗೂಗಲ್​ ವಾಲೆಟ್

  • Share this:
    ಗೂಗಲ್ (Google)​ ಹಲವಾರು ಸೇವೆಗಳನ್ನು ಬಳಕೆದಾರಿಗೆ ಪರಿಚಯಿಸಲು ಮುಂದಾಗಿದೆ. ಗೂಗಲ್​ ಈ ವರ್ಷದ I/O ಡೆವಲಪರ್​ ಕಾನ್ಫರೆನ್ಸ್​​ನಲ್ಲಿ (Developer Conference) ಹಲವು ಉತ್ಪನ್ನಗಳ ಜೊತೆಗೆ ಗ್ರಾಹಕರ ಎದುರು ಬರಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಗೂಗಲ್​ ತನ್ನ ಬಳಕೆದಾರರಿಗೆ ಹೊಸ ವಾಲೆಟ್ ಆ್ಯಪ್​ (Wallet app)​ ಅನ್ನು ಪರಿಚಯಿಸಲಿದೆ. ಗೂಗಲ್​ ವಾಲೆಟ್ ಆ್ಯಪ್​​ ಹೆಸರಿನಲ್ಲಿ ಇದು ಬಳಕೆಗೆ ಸಿಗಲಿದೆ. ಅಂದಹಾಗೆಯೇ ಡಿಜಿಟಲ್​​ ವರ್ಷನ್​ನಲ್ಲಿ (Digital Version) ಸಿಗುವ ಈ ಆ್ಯಪ್​ನ ಸಹಾಯದಿಂದ ಹಣವನ್ನು  ಜೋಪಾನವಾಗಿ ಇದರಲ್ಲಿ ಇಡಬಹುದಾಗಿದೆ.

    ಮಾಹಿತಿಯಂತೆ, ಸದ್ಯದಲ್ಲೇ ಗೂಗಲ್​ ವಾಲೆಟ್​ ಆ್ಯಪ್​ ಬರಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ 40 ದೇಶಗಳಲ್ಲಿ ಈ ಆ್ಯಪ್​ ಬಳಕೆಗೆ ಸಿಗಲಿದೆ. ಈ ನಿಟ್ಟಿನಲ್ಲಿ ಗೂಗಲ್​ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಡಿಜಿಟಲ್​ ಸೇವೆಗೆ ಪುಷ್ಟಿಕರಿಸುವಂತಿದೆ. ಅದರಲ್ಲೂ ಕೊರೊನಾ ಕಾಲಘಟ್ಟದಲ್ಲಿ ಇದರ ಸೇವೆಯ ಪ್ರಯೋಜನ ಗೊತ್ತಾಗಲಿದೆ.

    ಈಗಾಗಲೇ ಬಹುಪಾಲು ಜನರು ಪೇಮೆಂಟ್​​ ಆನ್​ಲೈನ್​ ಆ್ಯಪ್​​ಗಳನ್ನು ಬಳಸುತ್ತಿದ್ದಾರೆ. ಅದರ ಮೂಲಕ ಆಹಾರ ಇನ್ನಿತರ ಸಾಮಾಗ್ರಿ ಖರೀದಿಸುವಾಗ ಹಣ ಪಾವತಿಸಲು ಆನ್​ಲೈನ್​ ಪೇಮೆಂಟ್​ ಸೇವೆಯನ್ನು ಬಳಸುತ್ತಿದ್ದಾರೆ.

    ಹೊಸ ವಾಲೆಟ್​ ಆ್ಯಪ್​ ಅನ್ನು ಸ್ಟೋರ್​ ಬ್ಯಾಂಕ್​ ಅಡಿಯಲ್ಲಿ ಬಳಸಬಹುದಾಗಿದೆ. ಇದರಿಂದಾಗಿ ಬಳಕೆದಾರರು ವೇಗದ ಮತ್ತು ಸುಲಭವಾದ ಸೇವೆಯನ್ನು ಪಡೆಯಲ್ಲಿದ್ದಾರೆ. ಅಷ್ಟು ಮಾತ್ರವಲ್ಲದೆ, ಈ ಕಾರ್ಡ್​ ಎಲ್ಲಾ ಕಡೆಗಳಲ್ಲಿ ಬಳಸಬಹುದಾಗಿದೆ. ಜೊತೆಗೆ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು.

    ಇದನ್ನೂ ಓದಿ: Google: ವೈಯ್ಯಕ್ತಿಕ ಸಾಲ ನೀಡುವ ಆ್ಯಪ್​ ಬಳಸುವವರಿಗೆ ಹೊಸ ರೂಲ್ಸ್​​ ಪಾಲಿಸುವಂತೆ ಹೇಳಿದ ಗೂಗಲ್!

    ಬ್ಯಾಂಕ್ ಕಾರ್ಡ್‌ಗಳನ್ನು ಮಾತ್ರವಲ್ಲದೆ ಎಲಲಾ ರೀತಿಯ ಕಾರ್ಡ್ ಅನ್ನು ಸಂಗ್ರಹಿಸಬಹುದು. ಈ ಅಪ್ಲಿಕೇಶನ್ ಭವಿಷ್ಯದಲ್ಲಿ ಡಿಜಿಟಲ್ ಐಡಿಗಳಿಗೆ ಬೆಂಬಲವನ್ನು ಪಡೆಯುತ್ತದೆ ಎಂದು ಗೂಗಲ್​ ದೃಢಪಡಿಸಿದೆ, ಇದು NFC ಮೂಲಕ ನಿಮ್ಮ ಫೋನ್ ಅನ್ನು ನೀಡದೆಯೇ ನಿಮ್ಮನ್ನು ಗುರುತಿಸಲು ಸುಲಭವಾಗುತ್ತದೆ.

    ಅಚ್ಚರಿಯ ವಿಚಾರವೆಂದರೆ ವಿಮಾನದಲ್ಲಿ ತೆರಲಲು ಬೋರ್ಡಿಂಗ್​ ಪಾಸ್​​ಗಾಗಿ ಈ ಆ್ಯಪ್​ ಆನ್ನು ಬಳಸಬಹುದಾಗಿದೆ. ಮಾತ್ರವಲ್ಲದೆದೆ ವಿಮಾನ ವಿಳಂಬ ಮತ್ತು ದಿನಾಂಕ ಬದಲಾವಣೆಯ ಬಗ್ಗೆಯೂ ಇದು ಬಳಕೆದಾರರಿಗೆ ತಿಳಿಸಲು ಸಹಾಯ ಮಾಡುತ್ತದೆ. ಹೊಸ ವಾಲೆಟ್​​ ಆ್ಯಪ್​ ಈ ತರಹದ ಸೇವೆಯನ್ನು ಒದಗಿಸುವ ಮೂಲಕ ಬಳಕೆದಾರರಿಗೆ ಸ್ನೇಹಿಯಾಗಿರುವ ಮೂಲಕ ಕಾರ್ಯನಿರ್ವಹಿಸಲಿದೆ.

    ಗೂಗಲ್​ ಪ್ರತಿಯೋಬ್ಬನ ಖಾಸಗಿ ಮಾಹಿತಿಯನ್ನು ರಕ್ಷಿಸುವಲ್ಲಿ ಕಂಪನಿ ಭರವಸೆ ನೀಡುತ್ತದೆ ಎಂದು ಹೇಳಿದೆ. ಜೊತೆಗೆ ಡಿಜಿಟಲ್​ ಆಫೀಸು ಮತ್ತು ಹೋಟೆಕ್​ ಕೀ ಸೇರಿದಂತೆಯೇ ಇಂತಹ ಹಲವಾರು ಸೇವೆಗಳನ್ನು ಈ ಆ್ಯಪ್​​  ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Apple Foldable Phone: ಸ್ಯಾಮ್​ಸಂಗ್ ಫೋಲ್ಡೆಬಲ್​ಗಿಂತ ಆ್ಯಪಲ್ ಮಡಚುವ ಫೋನ್ ಇಷ್ಟೊಂದು ಗ್ರ್ಯಾಂಡ್ ಆಗಿ ಬರಲಿದ್ಯಾ?

    ಹೊಸ ಗೂಗಲ್​ ವಾಲೆಟ್ ಆ್ಯಪ್​​​​ ಬಂದಾಗ ಗೂಗಲ್​ ಪೇ ಆ್ಯಪ್​​ ಬಳಕೆಗೆ ಸಿಗುತ್ತದೆಯೇ? ಅಥವಾ ಡಿಲೀಟ್ ಆಗುತ್ತದೆಯೇ ಎಂಬ ಗೊಂದಲವಿದೆ, ಆದರೆ ಗೂಗಲ್​ ಪೇ ಆ್ಯಪ್​ ಅನ್ನು ಬಹುತೇಕ ಜನರು ಬಳಸುತ್ತಿದ್ದಾರೆ. ಇದರ ಮೂಲಕ ದೈನಂದಿನ ವ್ಯವಹಾರ ನನಡೆಸುತ್ತಿದ್ದಾರೆ. ಆದರೆ ಹೊಸ ಗೂಗಲ್​ ವಾಲೆಟ್​ ಬಂದಾಗ, ಗೂಗಲ್​ ಪೇ ಅನ್ನು ಮೂಲೆ ಗುಂಪನ್ನಾಗಿ ಮಾಡುವುದಿಲ್ಲ ಎಂದು ಗೂಗಲ್ ಹೇಳಿದೆ.

    ಈಗಾಗಲೇ ಅನೇಕ ದೇಶಗಳಲ್ಲಿ ಗೂಗಲ್​ ಪೇ ಆ್ಯಪ್​ ಬಳಕೆಗೆ ಸಿಗುತ್ತಿದೆ. ಇದದರ ಮೂಲಕ ಹಣ ಪಾವತಿಯ ಜೊತೆಗೆ, ಫೋನ್​ ರೀಚಾರ್ಜ್​, ಗ್ಯಾಸ್​​, ಕರೆಂಟ್​ ಬಿಲ್​ ಹೀಗೆ ನಾನಾ ಸೇವೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ಹಣ ವರ್ಗಾವಣೆ, ಬ್ಯಾಂಕ್​ ಟ್ರಾನ್ಸ್​ಫರ್​, ಸೆಲ್ಫ್​ ಟ್ರಾನ್ಸ್​ಫರ್​, ಸ್ಕ್ಯಾನ್​ ಕ್ಯೂ ಆರ್​ ಕೋಡ್​ ಸೇವೆಯನ್ನು ನೀಡುತ್ತಾ ಬಂದಿದೆ.
    Published by:Harshith AS
    First published: