ಭಾರತದಲ್ಲಿ ದೊಡ್ಡ ಟೆಕ್ ಕಂಪನಿಯೆಂದರೆ (Tech Company) ಅದು ಗೂಗಲ್ (Google) ಅಂತಾನೂ ಹೇಳ್ಬಹುದು. ಆದರೆ ಇದೀಗ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಪ್ರಸಿದ್ಧ ಗೂಗಲ್ಗೆ 1337.76 ಕೋಟಿ ದಂಡ ವಿಧಿಸಿದೆ. ಆದರೆ ಈ ದಂಡವನ್ನು ಉದ್ದೇಶಿಸಿ ಗೂಗಲ್ ಸಂಸ್ಥೆ ರಾಷ್ಟ್ರೀಯ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಮೊರೆಹೋಗಿದೆ. ಆಂಡ್ರಾಯ್ಡ್ ಮೊಬೈಲ್ (Android Mobile) ಸಾಧನಗಳಿಗೆ ಸಂಬಂದಿಸಿದಂತೆ ಗೂಗಲ್ ಪ್ರಬಲ ಸ್ಥಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ದುರುಪಯೋಗಪಡಿಸಿಕೊಂಡ ಕಾರಣ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್ಗೆ ಈ ರೀತಿ ದಂಡ ವಿಧಿಸಲಾಗಿದೆ ಎಂದಿದ್ದಾರೆ. ಇನ್ನು ಗೂಗಲ್ ತನ್ನ ಮೋಸದ ವ್ಯಾಪಾರನ್ನು ನಿಲ್ಲಿಸಿ ನ್ಯಾಯೋಚಿತ ವ್ಯಾಪಾರವನ್ನು ನಡೆಸಬೇಕೆಂದು ಭಾರತೀಯ ಸ್ಪರ್ಧಾತ್ಕಕ ಸಂಸ್ಥೆ ಆದೇಶ ನೀಡಿತ್ತು. ಆದರೆ ಈ ಆದೇಶದ ಕುರಿತಾಗಿ ಗೂಗಲ್ ಇದೀಗ ನ್ಯಾಯಮಂಡಳಿಯ ಮೊರೆ ಹೋಗಿದೆ ಎಂದು ಹೇಳಬಹುದು.
ಗೂಗಲ್ ತನ್ನ ವ್ಯವಹಾರದಲ್ಲಿ ಗ್ರಾಹಕರಿಗೆ ಅನ್ಯಾಯ ಮಾಡಿದೆ ಮತ್ತು ಆಂಡ್ರಾಯ್ಡ್ ಬಳಕೆದಾರರ ದೂರುಗಳನ್ನು ಗಮನಿಸಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್ಗೆ 1337.76 ಕೋಟಿ ರೂಪಾಯಿ ದಂಡ ವಿಧಿಸಿದೆ.
ಈ ಬಗ್ಗೆ ಗೂಗಲ್ ವಕ್ತಾರರ ಮಾತು
ಈ ಕುರಿತಂತೆ ಗೂಗಲ್ ಕಂಪನಿಯ ವಕ್ತಾರರು ಮಾಹಿತಿ ನೀಡಿದ್ದು, ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ನಿರ್ಧಾರದ ಕುರಿತು ನಾವು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ.
ಇದನ್ನೂ ಓದಿ: ಆ್ಯಪಲ್ನ ಈ ಸಾಧನಗಳನ್ನು ಭಾರೀ ಅಗ್ಗದಲ್ಲಿ ಖರೀದಿಸಿ, ಡಿಸೆಂಬರ್ 31ರಿಂದ ಡಿಸ್ಕೌಂಟ್ ಸೇಲ್ ಆರಂಭ
ಈ ಆದೇಶವು ನಮ್ಮ ಭಾರತೀಯ ಬಳಕೆದಾರರ ಆಂಡ್ರಾಯ್ಡ್ನ ಭದ್ರತಾ ಫೀಚರ್ಸ್ಗಳನ್ನು ನಂಬುವ ವ್ಯವಹಾರಗಳಿಗೆ ಮತ್ತು ಮೊಬೈಲ್ ಸಾಧನಗಳ ಬೆಲೆ ಏರಿಕೆ ವಿಷಯದಲ್ಲಿ ಭಾರೀ ನಷ್ವವನ್ನು ತರುತ್ತದೆ ಎಂದು ಹೇಳಿದ್ದಾರೆ. ಈ ಉದ್ದೇಶದಿಂದ ನಾವು ಈ ಎಲ್ಲ ವಿಷಯಗಳನ್ನು ಗಮನಿಸಿ ರಾಷ್ಟ್ರೀಯ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ದೂರನ್ನು ನೀಡಲಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ