ಗೂಗಲ್ (Google) ತನ್ನ ಪ್ರಮುಖ ಯೂಟ್ಯೂಬ್ (Youtube) ಅಪ್ಲಿಕೇಶನ್ನ, ಸ್ಲಿಮ್ಡ್ ಆವೃತ್ತಿಯಾದ ಯೂಟ್ಯೂಬ್ ಗೋ (Youtube Go) ಅನ್ನು ಸ್ಥಗಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಯೂಟ್ಯೂಬ್ ಗೋ ಅನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಆಗಸ್ಟ್ನಿಂದ ಯೂಟ್ಯೂಬ್ ಗೋ ಲಭ್ಯವಿರುವುದಿಲ್ಲ ಎಂದು ಗೂಗಲ್ ಘೋಷಿಸಿದೆ. ಮುಖ್ಯ ಅಪ್ಲಿಕೇಶನ್ಗೆ ಲೈಟ್ವೇಯ್ಟ್ ಪರ್ಯಾಯವಾಗಿದ್ದ ಯೂಟ್ಯೂಬ್ ಗೋ ಸ್ಥಗಿತಗೊಳ್ಳಲಿದೆ, ಏಕೆಂದರೆ ಅದು ವರ್ಷಗಳು ಕಳೆದಂತೆ ಅನಾವಶ್ಯಕವಾಗಿದೆ ಎಂದು ಯೂಟ್ಯೂಬ್ ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ (Blog Post) ಹೇಳಿದೆ. ಯೂಟ್ಯೂಬ್ ಗೋ ಅನ್ನು ಪ್ರಾಥಮಿಕವಾಗಿ, ಮುಖ್ಯ ಅಪ್ಲಿಕೇಶನ್ ಅನ್ನು ಚಲಾಯಿಸಲು ಹೆಣಗಾಡುವ, ಕಳಪೆ ನೆಟ್ವರ್ಕ್ (Network) ಸಂಪರ್ಕ ಮತ್ತು ಕಡಿಮೆ ಮಟ್ಟದ ಮೊಬೈಲ್ಗಳನ್ನು (Mobile) ಹೊಂದಿರುವ ಬಳಕೆದಾರರಿಗಾಗಿ ಅಭಿವೃದ್ಧಿಪಡಿಸಲಾಗಿತ್ತು.
“ಈ ದಿನ, ಯೂಟ್ಯೂಬ್ ಗೋ ಆಗಸ್ಟ್ನ ಆರಂಭದಲ್ಲಿ ಅಂತ್ಯ ಕಾಣುತ್ತಿದೆ ಎಂಬುದನ್ನು ನಾವು ಘೋಷಿಸುತ್ತಿದ್ದೇವೆ. ಯೂಟ್ಯೂಬ್ ಅನ್ನು ಆಕ್ಸೆಸ್ ಮಾಡಲು, ಯೂಟ್ಯೂಬ್ ಗೋ ಬಳಕೆದಾರರು, ಮುಖ್ಯ ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಥವಾ ತಮ್ಮ ಬ್ರೌಸರ್ಗಳಲ್ಲಿ youtube.com ಗೆ ಭೇಟಿ ನೀಡಬೇಕು ಎಂದು ಶಿಫಾರಸ್ಸು ಮಾಡುತ್ತಿದ್ದೇವೆ. ಯೂಟ್ಯೂಬ್ ಗೋ ಗೆ ಹೋಲಿಸಿದರೆ, ಮುಖ್ಯ ಅಪ್ಲಿಕೇಶನ್ ಯೂಟ್ಯೂಬ್, ಉತ್ತಮ ಒಟ್ಟಾರೆ ಗ್ರಾಹಕ ಅನುಭವ ನೀಡುತ್ತದೆ ಮತ್ತು ಬಹಳಷ್ಟು ಮಂದಿ ಬೇಡಿಕೆ ಇಟ್ಟಿರುವ ಯೂಟ್ಯೂಬ್ ಗೋ ನಲ್ಲಿ ಲಭ್ಯವಿಲ್ಲದ ಫೀಚರ್ಗಳನ್ನು ಕೂಡ ನೀಡುತ್ತದೆ. ಅಂದರೆ, ಕಮೆಂಟ್ ಮಾಡುವ, ಪೋಸ್ಟ್ ಮಾಡುವ, ಕಂಟೆಂಟ್ ರಚಿಸುವ ಮತ್ತು ಡಾರ್ಕ್ ಥೀಮ್ಗಳನ್ನು ಬಳಸುವ ಸೌಲಭ್ಯವನ್ನು ನೀಡುತ್ತದೆ” ಎಂದು ಕಂಪನಿ ತನ್ನ ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ ನೀಡಿದೆ.
ಮುಖ್ಯ ಯೂಟ್ಯೂನ್ ಅಪ್ಲಿಕೇಶನ್ ಮೇಲೆ ಗಮನ ಕೇಂದ್ರೀಕರಣಇತ್ತೀಚಿನ ದಿನಗಳಲ್ಲಿ, ಪ್ರಮುಖ ಅಪ್ಲಿಕೇಶನ್ನಲ್ಲಿ ಅನೇಕ, ಕಾರ್ಯಕ್ಷಮತೆಗೆ ಸಂಬಂಧಿಸಿದ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಯೂಟ್ಯೂಬ್ ಹೇಳಿದೆ. ಈ ಅಪ್ಗ್ರೇಡ್ಗಳು , ಮುಖ್ಯ ಅಪ್ಲಿಕೇಶನ್ , ಎಂಟ್ರಿ ಲೆವೆಲ್ ಅಥವಾ ಕಡಿಮೆ ಮಟ್ಟದ ಸಾಧನಗಳಲ್ಲಿ ಹಾಗೂ ನೆಟ್ವರ್ಕ್ನಲ್ಲಿರುವ ಬಳಕೆದಾರಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿಯು ಹೇಳಿದೆ.
ಇದನ್ನೂ ಓದಿ: Car Tyre: ಈ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ನಿಮ್ಮ ಕಾರಿನ ಟೈರ್ ಪಂಕ್ಚರ್ ಆಗುವುದಿಲ್ಲ!
“ಯೂಟ್ಯೂಬ್ , ಮುಖ್ಯ ಅಪ್ಲಿಕೇಶನ್ ಯೂಟ್ಯೂಬ್ನ ಸುಧಾರಣೆಗಳಿಗಾಗಿ ಹೂಡಿಕೆ ಮಾಡಿದೆ. ಅದು ಈ ಸಂದರ್ಭಗಳಲ್ಲಿ ಹೆಚ್ಚು ಚೆನ್ನಾಗಿ ಕೆಲಸ ಮಾಡುವಂತೆ ಮತ್ತು ಇಡೀ ಸಮುದಾಯಕ್ಕೆ ಉತ್ತಮ ಬಳಕೆದಾರರ ಅನುಭವವನ್ನು ನೀಡುವಂತೆ ಮಾಡುತ್ತದೆ. ಮುಖ್ಯವಾಗಿ, ನಾವು ಎಂಟ್ರಿ ಮಟ್ಟದ ಸಾಧನಗಳಿಗೆ ಅಥವಾ ನಿಧಾನಗತಿಯ ನೆಟ್ವರ್ಕ್ಗಳಲ್ಲಿ ಯುಟ್ಯೂಬ್ ವೀಕ್ಷಿಸುವವರಿಗೆ ಕಾರ್ಯಕ್ಷಮತೆಯನ್ನು ಸುಧಾರಿಸಿದ್ದೇವೆ” ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
“ಸೀಮಿತ ಡೇಟಾ ಉಳ್ಳ ವೀಕ್ಷಕರಿಗೆ ಮೊಬೈಲ್ ಡೇಟಾ ಬಳಕೆ ಕಡಿಮೆ ಆಗುವಂತೆ ಸಹಾಯ ಮಾಡಲು, ನಾವು ಹೆಚ್ಚುವರಿ ಯೂಸರ್ ಕಂಟ್ರೋಲ್ಗಳನ್ನು ಸಿದ್ಧಪಡಿಸುತ್ತಿದ್ದೇವೆ- ಹಾಗಾಗಿ ಹೆಚ್ಚಿನ ಅಪ್ಡೇಟ್ಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ” ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: Smartphone: ಬ್ಯಾಟರಿ ಬೇಗ ಖಾಲಿಯಾಗಲು ಈ 20 ಆ್ಯಪ್ಗಳು ಕಾರಣ!
ಯೂಟ್ಯೂಬ್ ಗೋ ಬಳಕೆದಾರರು ಮುಖ್ಯ ಅಪ್ಲಿಕೇಶನನ್ನು ಇನ್ಸ್ಟಾಲ್ ಮಾಡಬೇಕೆಂದು ಯೂಟ್ಯೂಬ್ ಒತ್ತಾಯಿಸುತ್ತಿದೆ. ಏಕೆಂದರೆ ಅದರಲ್ಲಿ ಕಮೆಂಟ್ ಮಾಡುವ, ಪೋಸ್ಟ್ ಮಾಡುವ, ಕಂಟೆಂಟ್ ರಚಿಸುವ ಅವಕಾಶ ಇರುತ್ತದೆ. “ಮುಖ್ಯ ಯೂಟ್ಯೂಬ್ ಅಪ್ಲಿಕೇಶನ್ ಬಳಸುವುದರಿಂದ, ಯೂಟ್ಯೂಬ್ ಗೋ ಬಳಕೆದಾರರು, ರಚನೆ ಮತ್ತು ಸಮುದಾಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಹಾಗೂ ಒಟ್ಟಾರೆ ಸುಧಾರಿತ ಅನುಭವಕ್ಕೆ ತೆರೆದುಕೊಂಡಂತಾಗುತ್ತದೆ” ಎಂದು ಕಂಪೆನಿಯು ತನ್ನ ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಇದೀಗ ಯೂಟ್ಯೂಬ್ ಗೋ ಅನ್ನು ಸ್ಥಗಿತಗೊಳಿಸುತ್ತಿರುವ ಸಂಗತಿ, ಖಂಡಿತವಾಗಿಯೂ ಆ್ಯಂಡಾಯ್ಡ್ ಗೋ ನ ಭವಿಷ್ಯದ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆ್ಯಂಡಾಯ್ಡ್ ಗೋ , ಆ್ಯಂಡಾಯ್ಡ್ನ ಸ್ಲಿಮ್ಡ್ ಆವೃತ್ತಿಯಾಗಿದ್ದು, ಕಡಿಮೆ ಮಟ್ಟದ ಮತ್ತು ಕಡಿಮೆ ದರದ ಫೋನ್ಗಳು ವೇಗವಾಗಿ ರನ್ ಆಗಲು ಅವಕಾಶ ಮಾಡಿಕೊಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ