Hangouts: ಐಫೋನ್, ಹೊಸ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಕ್ಲಾಸಿಕ್ ಹ್ಯಾಂಗೌಟ್ಸ್ ಅಪ್ಲಿಕೇಶನ್ ತೆಗೆದು ಹಾಕಿದ ಗೂಗಲ್

Hangouts: ಈ ಅಪ್ಲಿಕೇಶನ್ ಇನ್ನು ಮುಂದೆ ಹುಡುಕಾಟ ಫಲಿತಾಂಶಗಳಲ್ಲಿ ಗೋಚರಿಸುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಆದರೆ ಈಗಾಗಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಂಡವರಿಗೆ ಪ್ರಸ್ತುತ ಆ್ಯಪ್ ಲಭ್ಯವಿದೆ.

ಹ್ಯಾಂಗೌಟ್ / Hangouts

ಹ್ಯಾಂಗೌಟ್ / Hangouts

  • Share this:
    ಗೂಗಲ್ (Google) ಸಂಸ್ಥೆಯು ಕ್ಲಾಸಿಕ್ ಗೂಗಲ್ ಹ್ಯಾಂಗೌಟ್ (Hangouts) ಅಪ್ಲಿಕೇಷನ್ ಅನ್ನು ಐಫೋನ್ (Iphone) ಮತ್ತು ಹೊಸ ಆ್ಯಂಡ್ರಾಯ್ಡ್ (Android) ಬಳಕೆದಾರರಿಗಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಗೂಗಲ್ ಚಾಟ್ಸ್ (Google Chats) ಕಾರ್ಯಸ್ಥಳದ ಗ್ರಾಹಕರಿಗಾಗಿ ಹಳೆಯ ಹ್ಯಾಂಗೌಟ್ಸ್ ಅನ್ನು ಬದಲಾಯಿಸುತ್ತಿದೆ. ಪರಿವರ್ತನೆಯ ಭಾಗವಾಗಿ, ಗೂಗಲ್ ಈಗ ಹಳೆಯ ಹ್ಯಾಂಗೌಟ್ಸ್ ಮೊಬೈಲ್ ಅಪ್ಲಿಕೇಶನ್‌ಗಳನ್ನು (Mobile Applications) ನಿಷ್ಕ್ರಿಯಗೊಳಿಸುವುದಾಗಿ ಹೇಳಿದೆ ಮತ್ತು ಹೊಸ ಬಳಕೆದಾರರಿಗಾಗಿ ಆ್ಯಪಲ್ ಆ್ಯಪ್ ಸ್ಟೋರ್ (Apple App Store) ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಅಪ್ಲಿಕೇಶನ್ ಅನ್ನು ಹಿಂತೆಗೆದುಕೊಳ್ಳಲಾಗಿದೆ.

    ಈ ಅಪ್ಲಿಕೇಶನ್ ಇನ್ನು ಮುಂದೆ ಹುಡುಕಾಟ ಫಲಿತಾಂಶಗಳಲ್ಲಿ ಗೋಚರಿಸುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಆದರೆ ಈಗಾಗಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಂಡವರಿಗೆ ಪ್ರಸ್ತುತ ಆ್ಯಪ್ ಲಭ್ಯವಿದೆ.

    ಗೂಗಲ್ ವರ್ಕ್‌ಸ್ಪೇಸ್ ಬಳಕೆದಾರರಿಗಾಗಿ ಕ್ಲಾಸಿಕ್ ಹ್ಯಾಂಗ್‌ಔಟ್‌ಗಳಿಂದ ಗೂಗಲ್ ಚಾಟ್‌ಗೆ ವಲಸೆಯ ಅಂತಿಮ ಹಂತಕ್ಕೆ ಹೋಗಲು ಈಗ ಸಿದ್ಧವಾಗಿದೆ ಎಂದು ಸರ್ಚ್ ಇಂಜಿನ್ ಘೋಷಿಸಿದೆ.

    9to5Googleನಲ್ಲಿನ ವರದಿಯ ಪ್ರಕಾರ, ಆ್ಯಪ್ ಸ್ಟೋರ್‌ನಲ್ಲಿ ಹ್ಯಾಂಗೌಟ್ಸ್ ಅಪ್ಲಿಕೇಶನ್‌ಗಾಗಿ ಹುಡುಕಾಟವು ಇನ್ನು ಮುಂದೆ ಅಪ್ಲಿಕೇಶನ್ ಪಟ್ಟಿಯನ್ನು ತೆರೆಯುವುದಿಲ್ಲ ಮತ್ತು ನೇರ ಲಿಂಕ್ ಅನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ ಎಂದಿದೆ.

    ಈಗಾಗಲೇ ವರ್ಕ್ ಸ್ಪೆಸ್ ಗ್ರಾಹಕರಿಗೆ ಚಾಟ್ ಅನ್ನು ಡೀಫಾಲ್ಟ್ ಅಪ್ಲಿಕೇಶನ್ ಮಾಡಲು ಪ್ರಾರಂಭಿಸುವುದಾಗಿ ಗೂಗಲ್ ಹೇಳಿದ ನಂತರ ಇದು ಕಾರ್ಯರೂಪಕ್ಕೆ ಬರುತ್ತದೆ. ಹ್ಯಾಂಗೌಟ್ಸ್ ಅಪ್ಲಿಕೇಶನ್ ಅನ್ನು ಯಾರು ಈಗಾಗಲೇ ಹೊಂದಿರುವವರೋ ಅವರ ಡಿವೈಸ್‌ಗಳಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತದೆ. ಆದರೂ, ನೀವು ಅಪ್ಲಿಕೇಶನ್ ಅನ್ನು ತೆರೆದಾಗಲೆಲ್ಲಾ ಇದು "ಜಿಮೇಲ್‌ನಲ್ಲಿ ಗೂಗಲ್ ಚಾಟ್‌ಗೆ ಹೋಗಿ" ಎಂಬ ಎಚ್ಚರಿಕೆ ನೋಟಿಫಿಕೇಷನ್ ಬರುತ್ತಿರುತ್ತದೆ.

    ಇದನ್ನೂ ಓದಿ: Redmi: ಜಾಗತಿಕವಾಗಿ ಬಿಡುಗಡೆಯಾದ ರೆಡ್‌ಮಿಯ 3 ಸ್ಮಾರ್ಟ್‌ಫೋನ್‌ಗಳು

    ಡೀಫಾಲ್ಟ್ ಚಾಟ್ ಅಪ್ಲಿಕೇಶನ್ ನಂತರ ಬಳಕೆದಾರರು ವೆಬ್‌ನಲ್ಲಿ ಜಿಮೇಲ್‌ನಲ್ಲಿ ಕ್ಲಾಸಿಕ್ ಹ್ಯಾಂಗ್‌ಔಟ್ಸ್‌ಗೆ ಭೇಟಿ ನೀಡಿದಾಗ ಅಥವಾ ಕ್ಲಾಸಿಕ್ ಹ್ಯಾಂಗ್‌ಔಟ್ಸ್ ಮೊಬೈಲ್ ಅಪ್ಲಿಕೇಶನ್‌ಗಳು, ಅವುಗಳನ್ನು ಚಾಟ್‌ಗೆ ನಿರ್ದೇಶಿಸಲಾಗುತ್ತದೆ ಎಂದು ಕಂಪನಿಯು ಬ್ಲಾಗ್‌ಪೋಸ್ಟ್‌ನಲ್ಲಿ ಘೋಷಿಸಿದೆ.

    ಡೊಮೇನ್‌ಗಳನ್ನು "ಚಾಟ್ ಆದ್ಯತೆ" ಗೆ ಅಪ್‌ಗ್ರೇಡ್ ಮಾಡಿದ ನಂತರ, hangouts.google.com ಹೊರತುಪಡಿಸಿ ಎಲ್ಲಾ ಕ್ಲಾಸಿಕ್ ಹ್ಯಾಂಗೌಟ್ಸ್ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಹೆಚ್ಚುವರಿಯಾಗಿ, "ಚಾಟ್ ಮತ್ತು ಕ್ಲಾಸಿಕ್ ಹ್ಯಾಂಗೌಟ್ಸ್ ಸೆಟ್ಟಿಂಗ್‌ಗಳನ್ನು ನಿರ್ವಾಹಕ ಕನ್ಸೋಲ್‌ನಿಂದ ತೆಗೆದುಹಾಕಲಾಗುತ್ತದೆ.

    ಹಳೆಯ ಬಳಕೆದಾರರಿಗೆ, ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇನ್ನೂ ಆ್ಯಪ್ ಲಭ್ಯವಿದೆ. ಆದರೆ ಹೊಸ ಬಳಕೆದಾರರಿಗೆ, ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ ಪಟ್ಟಿಯನ್ನು ತೋರಿಸುವುದಿಲ್ಲ. ಐಫೋನ್ ಮತ್ತು ಐಪ್ಯಾಡ್ ಅಪ್ಲಿಕೇಶನ್‌ನಲ್ಲಿ ತೆಗೆದು ಹಾಕಲಾಗಿರುವುದು ಹೊಸ ಬೆಳವಣಿಗೆಯಾಗಿದೆ ಮತ್ತು ಹ್ಯಾಂಗೌಟ್ಸ್ ಅನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಇದು ಗೂಗಲ್‌ನ ಒಂದು ದೊಡ್ಡ ಹೆಜ್ಜೆಯಾಗಿದೆ.

    ವಿಪರ್ಯಾಸವೆಂದರೆ, ಐಪ್ಯಾಡ್‌ನಲ್ಲಿ Hangouts ತನ್ನ ಸ್ವತಂತ್ರ ಅಪ್ಲಿಕೇಶನ್ ಅಥವಾ ಜಿಮೇಲ್‌ನಲ್ಲಿ ಚಾಟ್‌ಗಿಂತ ಉತ್ತಮ ಅನುಭವವನ್ನು ಹೊಂದಿದೆ. ಹಳೆಯ ಕ್ಲೈಂಟ್ ಡ್ಯುಯಲ್-ಪೇನ್ UI ಅನ್ನು ಹೊಂದಿದೆ, ಅಲ್ಲಿ ಸಂಭಾಷಣೆಗಳು ಎಡಭಾಗದಲ್ಲಿ ಗೋಚರಿಸುತ್ತವೆ ಮತ್ತು ತೆರೆದ ಥ್ರೆಡ್ ಬಲಭಾಗದಲ್ಲಿದೆ. ಇಂದು ಐಪ್ಯಾಡ್‌ಗಾಗಿ ಜಿಮೇಲ್/ಚಾಟ್ ಕೇವಲ ವಿಸ್ತರಿಸಿದ ಫೋನ್ ಅಪ್ಲಿಕೇಶನ್ ಆಗಿದೆ. ಜನರು ಕ್ಲಾಸಿಕ್ ಹ್ಯಾಂಗ್‌ಔಟ್‌ಗಳನ್ನು ಬಳಸುವುದನ್ನು ಮುಂದುವರಿಸಲು ಇದು ಒಂದು ಕಾರಣವಾಗಿರಬಹುದು.

    ಇದನ್ನೂ ಓದಿ: Space Hotel: ಐದು ವರ್ಷದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ ಬಾಹ್ಯಾಕಾಶ ಹೋಟೆಲ್!

    ಗೂಗಲ್ ಕಳೆದ ವಾರ Workspace ಬಳಕೆದಾರರನ್ನು Chats ಮತ್ತು Spacesಗೆ ಸ್ಥಳಾಂತರಿಸಲು ಪ್ರಾರಂಭಿಸಿದೆ. ವೈಯಕ್ತಿಕ/ಉಚಿತ ಖಾತೆಗಳಿಗಾಗಿ ಹ್ಯಾಂಗೌಟ್ಸ್ ನಿಷ್ಕ್ರಿಯಗೊಳಿಸುವುದಕ್ಕಾಗಿ ಗೂಗಲ್ ಕಂಪನಿಯು ನಿಖರವಾದ ಟೈಮ್‌ಲೈನ್ ಅನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಬಳಕೆದಾರರು ಈ ಮಧ್ಯಾಹ್ನದವರೆಗೆ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯತೆಯನ್ನು ಪಡೆಯಬಹುದು ಎಂದಿದ್ದಾರೆ.

    ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲಾದ ಸ್ಕ್ಯಾಮರ್‌ಗಳು ಮತ್ತು ವಂಚನೆ ಪ್ರೊಫೈಲ್‌ಗಳನ್ನು ಗುರುತಿಸಲು ಸಹಾಯ ಮಾಡಿದ ಯಂತ್ರ ಕಲಿಕೆಯಲ್ಲಿನ ತನ್ನ ಪರಿಣತಿಯನ್ನು ಬಳಸಿಕೊಂಡು ಕಳೆದ ವರ್ಷದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ನಕಲಿ ಗೂಗಲ್ ನಕ್ಷೆಗಳ ಪ್ರೊಫೈಲ್‌ಗಳನ್ನು ತೆಗೆದುಹಾಕಿರುವುದಾಗಿ Google ಇತ್ತೀಚೆಗೆ ಘೋಷಿಸಿತು.
    Published by:Harshith AS
    First published: