Foldable ಡಿವೈಸ್‌ಗಳ ಮೇಲೆ ಚಿತ್ತ ನೆಟ್ಟಿರುವ ಗೂಗಲ್; 2023 ಕ್ಕೆ ಲಾಂಚ್ ಆಗೋದು ಪಕ್ಕಾ

ಸರ್ಚ್ ದೈತ್ಯ ಗೂಗಲ್ ಇನ್ನೂ ಕೂಡ ತನ್ನ ಫೋಲ್ಡೇಬಲ್ ಡಿವೈಸ್‌ ಮೇಲೆ ಕೆಲವೊಂದು ಆವಿಷ್ಕಾರಗಳನ್ನು ಮಾಡುತ್ತಿದ್ದು, ಮುಂದಿನ ವರ್ಷ 2023 ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೆಚ್ಚಿನ ಫೋನ್‌ಗಳ ಉತ್ಪಾದನೆ ಚೈನಾದಲ್ಲೇ ನಡೆಯುತ್ತಿತ್ತು ಆದರೆ ಮೂಲಗಳ ಪ್ರಕಾರ ಗೂಗಲ್ ಉತ್ಪಾದನೆಯನ್ನು ಬೇರೆಡೆಗೆ ಸ್ಥಳಾಂತರಿಸಲಿದೆ ಎಂದು ಕೆಲವೊಂದು ಮೂಲಗಳು ಉಲ್ಲೇಖಿಸಿವೆ.  

ಫೋಲ್ಡೇಬಲ್ ಡಿವೈಸ್‌

ಫೋಲ್ಡೇಬಲ್ ಡಿವೈಸ್‌

  • Share this:
ಫೋಲ್ಡೇಬಲ್ ಫೋನ್ ಅನ್ನು (Foldable Phone) ಲಾಂಚ್ ಮಾಡುವ ಯೋಜನೆಯನ್ನು ಗೂಗಲ್ ಕೈಬಿಟ್ಟಿಲ್ಲವೆಂದು ತೋರುತ್ತಿದೆ, ಏಕೆಂದರೆ ವರದಿಯ ಪ್ರಕಾರ ಸರ್ಚ್ ದೈತ್ಯ ಇನ್ನೂ ಕೂಡ ತನ್ನ ಫೋಲ್ಡೇಬಲ್ ಡಿವೈಸ್‌ ಮೇಲೆ ಕೆಲವೊಂದು ಆವಿಷ್ಕಾರಗಳನ್ನು ಮಾಡುತ್ತಿದ್ದು, ಮುಂದಿನ ವರ್ಷ 2023 ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೆಚ್ಚಿನ ಫೋನ್‌ಗಳ ಉತ್ಪಾದನೆ ಚೈನಾದಲ್ಲೇ (China) ನಡೆಯುತ್ತಿತ್ತು ಆದರೆ ಮೂಲಗಳ ಪ್ರಕಾರ ಗೂಗಲ್ ಉತ್ಪಾದನೆಯನ್ನು ಬೇರೆಡೆಗೆ ಸ್ಥಳಾಂತರಿಸಲಿದೆ ಎಂದಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಸಾಂಕ್ರಾಮಿಕ ಪ್ರೇರಿತ ಪೂರೈಕೆ ಸರಪಳಿ ಅಡೆತಡೆಗಳಿಂದಾಗಿ ಗೂಗಲ್ (Google) ಈಗಾಗಲೇ ತನ್ನ ಡಿವೈಸ್ ಉತ್ಪಾದನೆ (Device manufacturing) ಕಾರ್ಯಾಚರಣೆಗಳನ್ನು ಚೀನಾದಿಂದ ಬೇರೆ ಭಾಗಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎಂದು ಕೆಲವೊಂದು ಮೂಲಗಳು ಉಲ್ಲೇಖಿಸಿವೆ.

ಡಿವೈಸ್ ಉತ್ಪಾದನೆಯನ್ನು ಬೇರೆಡೆಗೆ ಸ್ಥಳಾಂತರಿಸಲಿರುವ ಗೂಗಲ್:
 ಸಾಫ್ಟ್‌ವೇರ್ ದೈತ್ಯ ಅರ್ಧದಷ್ಟು ಉನ್ನತ ಮಟ್ಟದ ಡಿವೈಸ್ ಉತ್ಪಾದನೆಯನ್ನು ಮುಂದಿನ ವರ್ಷ ವಿಯೆಟ್ನಾಂನಲ್ಲಿ ಪ್ರಾರಂಭಿಸಲು ನಿಶ್ಚಯಿಸಿದೆ ಎಂಬುದಾಗಿ ವರದಿಯಾಗಿದೆ. ಆದರೆ ಕೆಲವೊಂದು ಡಿವೈಸ್‌ಗಳ ಸುಧಾರಿತ ಹಾಗೂ ಸಂಕೀರ್ಣ ಉತ್ಪಾದನೆಗೆ ಚೀನಾದ ನೆರವು ಬೇಕಾಗುತ್ತದೆ ಎಂಬುದಾಗಿ ವರದಿ ಉಲ್ಲೇಖಿಸಿದೆ. ಡಿವೈಸ್ ಆಕಾರವು ಇತ್ತೀಚೆಗೆ ಲಾಂಚ್ ಆದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 ವಿನ್ಯಾಸಕ್ಕೆ ಸಮನಾಗಿರುತ್ತದೆ ಎಂಬ ನಿರೀಕ್ಷೆ ಇದೆ. ಫೋಲ್ಡೇಬಲ್ ಡಿವೈಸ್ ದಪ್ಪ ಹಿಡಿಕೆಗಳನ್ನು ಒಳಗೊಂಡಿರುವ ನಿರೀಕ್ಷೆ ಇದೆ.

ಫೋಲ್ಡೇಬಲ್ ಡಿವೈಸ್‌ಗಳ ಮೇಲೆ ಗೂಗಲ್ ಕೇಂದ್ರೀಕೃತ:
ಗೂಗಲ್ 2023 ಕ್ಕೆ ಫೋಲ್ಟೇಬಲ್ ಡಿವೈಸ್ ಅನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಹಾಗೂ ಫೋಲ್ಡೇಬಲ್ ಸ್ಕ್ರೀನ್ ಸಂಯೋಜಿತ ತಂತ್ರಜ್ಞಾನವು ಚೀನಾದಲ್ಲಿರುವ ಪ್ರಮುಖ ಪೂರೈಕೆದಾರರಿಗೆ ಸಮೀಪದಲ್ಲಿರುವಂತೆ ಉತ್ಪಾದನೆಯು ನೆರವೇರಬೇಕು ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಿದೆ. ಗೂಗಲ್ ತೈವಾನ್ ಮೂಲದ ಫಾಕ್ಸ್‌ಕಾನ್‌ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ವರದಿಯ ಪ್ರಕಾರ ಈ ಫೋನ್‌ಗಳು ಫೋಲ್ಡೇಬಲ್ ಆಕಾರದಲ್ಲಿರಬಹುದು ಎಂಬುದಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:  Smart Phones: ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು

ಆ್ಯಪಲ್‌ ಬಿಡುಗಡೆ ಮಾಡಲಿರುವ ಐಫೋನ್ 14 ಸೀರೀಸ್:
ಜನಪ್ರಿಯ ಬ್ರ್ಯಾಂಡ್ ಎಂದೆನಿಸಿರುವ ಆ್ಯಪಲ್ ಕೂಡ ಭಾರತದಲ್ಲಿ ಐಫೋನ್ 14 ಸೀರೀಸ್ ಅನ್ನು ಉತ್ಪಾದಿಸುವ ಯೋಜನೆಯಲ್ಲಿದೆ. ಆದರೆ ಹೊಸ ಐಫೋನ್‌ಗಳ ಪ್ರಮುಖ ಉತ್ಪಾದನೆಯು ಚೀನಾದಲ್ಲಿ ನಡೆಯುತ್ತದೆ. ಭಾರತಕ್ಕೆ ಸ್ಥಳಾಂತರಿಸುವುದು ಆ್ಯಪಲ್‌ಗೆ ಸಹಕಾರಿಯಾಗಿರಬಹುದು ಇದು ಭವಿಷ್ಯದ ಉತ್ಪಾದನೆಯ ಸಾಮರ್ಥ್ಯವನ್ನು ನಿರ್ಣಯಿಸಲು ಸಹಕಾರಿಯಾಗಿದೆ ಎಂಬುದಾಗಿ ತಿಳಿಸಲಾಗಿದೆ.

ಪಿಕ್ಸೆಲ್ 7 ಹಾಗೂ ಐಫೋನ್ 14 ಘೋಷಣೆ:
ಇದರ ನಡುವೆಯೇ ವರ್ಷದ ಎರಡು ದೊಡ್ಡ ಟೆಕ್ ಲಾಂಚ್‌ಗಳು ಬಾಕಿ ಉಳಿದಿವೆ. ಮುಂಬರುವ ವಾರಗಳಲ್ಲಿ ಗೂಗಲ್ ತನ್ನ ಹೊಸ ಪಿಕ್ಸೆಲ್ 7 ಸೀರೀಸ್ ಅನ್ನು ಘೋಷಿಸಲಿದೆ, ಆ್ಯಪಲ್ ಕೂಡ ಸಪ್ಟೆಂಬರ್ 7 ರಂದು ತನ್ನ ಹೊಸ ಐಫೋನ್ 14 ಸೀರೀಸ್ ಅನ್ನು ಬಿಡುಗಡೆ ಮಾಡಲಿದೆ ಎಂಬುದಾಗಿ ಬಲ್ಲ ಮೂಲಗಳು ಹೇಳಿವೆ. ಪಿಕ್ಸೆಲ್ ಡಿವೈಸ್‌ಗಳ ಲಾಂಚ್ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ಈ ಎರಡೂ ಪ್ರಮುಖ ಲಾಂಚ್‌ಗಳ ಕುರಿತಾಗಿರುವ ಮಾಹಿತಿ ಸೋರಿಕೆಯಾಗಿರುವುದಂತೂ ನಿಜ.

ಇದನ್ನೂ ಓದಿ:  pTron Force X10: ಬರೀ 99 ರೂಪಾಯಿಗೆ ಖರೀದಿಸಿ ಈ ಸ್ಮಾರ್ಟ್​ವಾಚ್​! ಈ ಅವಕಾಶ ಮತ್ತೆ ಸಿಗಲ್ಲ

ಭಾರತದಲ್ಲಿ ಐಫೋನ್ 14 ಲಾಂಚ್ ಫಿಕ್ಸ್; ಪಿಕ್ಸೆಲ್ 7 ಲಾಂಚ್ ಸಾಧ್ಯತೆ ಕಡಿಮೆ:
ಐಫೋನ್ 14 ಶ್ರೇಣಿಗಳು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಪಿಕ್ಸೆಲ್ 7 ಸೀರೀಸ್ ಭಾರತಕ್ಕೆ ಬರುವ ನಿರೀಕ್ಷೆ ಇಲ್ಲ. ತನ್ನ ಪ್ರಮುಖ ಫೋನ್‌ಗಳ ಬಿಡುಗಡೆಯನ್ನು ಈ ಹಿಂದೆಯೇ ನಿಲ್ಲಿಸಿರುವ ಗೂಗಲ್ ಇದಕ್ಕೆ ಸಾಕ್ಷಿಯಾಗಿ ಪಿಕ್ಸೆಲ್ 4, ಪಿಕ್ಸೆಲ್ 5, ಪಿಕ್ಸೆಲ್ 6 ಅನ್ನು ಭಾರತಕ್ಕೆ ಬಿಡುಗಡೆ ಮಾಡಿಲ್ಲ. ಅದಾಗ್ಯೂ ಸರ್ಚ್ ದೈತ್ಯ ಗೂಗಲ್ ತನ್ನ ನಿರ್ಧಾರವನ್ನು ಬದಲಾಯಿಸುವ ನಿರೀಕ್ಷೆ ಇದ್ದು ಪಿಕ್ಸೆಲ್ 7 ಅನ್ನು ಭಾರತದಲ್ಲಿ ಘೋಷಿಸುವ ಸಾಧ್ಯತೆಗಳಿವೆ, ಆದರೆ ಇನ್ನೊಂದು ಕಡೆಯಲ್ಲಿ ಈ ಸಾಧ್ಯತೆಗಳು ತುಂಬಾ ಕಡಿಮೆ ಎಂದೂ ಹೇಳಬಹುದು.
Published by:Ashwini Prabhu
First published: