ನಿಮ್ಮ ಜಾಗದ ಸುತ್ತಳತೆ ಅಳೆಯಲು ಗೂಗಲ್​ ಅರ್ಥ್​ ಹೊಸ ಅಪ್​ಡೇಟ್​

news18
Updated:June 26, 2018, 1:39 PM IST
ನಿಮ್ಮ ಜಾಗದ ಸುತ್ತಳತೆ ಅಳೆಯಲು ಗೂಗಲ್​ ಅರ್ಥ್​ ಹೊಸ ಅಪ್​ಡೇಟ್​
news18
Updated: June 26, 2018, 1:39 PM IST
ಭೂಮಿಯ ಮತ್ತೊಂದು ಮಜಲನ್ನು ನೋಡಲೆಂದೇ ಸೃಷ್ಟಿಸಲ್ಪಟ್ಟ 'ಗೂಗಲ್​ ಅರ್ಥ್​' ಇದೀಗ ಬಹು ಬೇಡಿಕೆಯ ಅಪ್​ಡೇಟ್​ ಬಿಟ್ಟಿದ್ದು, ಇನ್ನು ಮುಂದೆ ಗೂಗಲ್​ ಅರ್ಥ್​ ಬಳಸಿಕೊಂಡು ಸೀಮಿತ ಪ್ರದೇಶದ ಉದ್ದಗಲವನ್ನು ನಾವು ಪಡೆಯಬಹುದು.

ಇತ್ತೀಚೆಗೆ ಗೂಗಲ್ ಅರ್ಥ್ ಮತ್ತಷ್ಟು ಅಪ್‌ಡೇಟ್ ಆಗಿದೆ. 3D ವೀವ್( ನೋಟ), ಸಂವಾದಾತ್ಮಕ ಪ್ರವಾಸ ಯೋಜನೆಗಳು ಸೇರಿ ಹಲವು ಆಯ್ಕೆಗಳು ಈಗ ಗೂಗಲ್ ಅರ್ಥ್ ಆಪ್‌ನಲ್ಲಿ ಸೇರಿಕೊಂಡಿವೆ. ಇದಕ್ಕೆ ಸೇರಿಕೊಂಡ ಮತ್ತೊಂದು ಅಪ್​ಡೇಟ್​ ಎಂದರೆ ಒಂದು ಸ್ಥಳ ಅಥವಾ ಪ್ರದೇಶದ ದೂರು ಮತ್ತು ವಿಸ್ತಿರ್ಣವನ್ನು ಇದೀಗ ಅರ್ಥ್​ ಆ್ಯಪ್​ನಲ್ಲಿ ನಾವು ವೀಕ್ಷಿಸಬಹುದು.

ಮಾಪನ ಉಪಕರಣ ಎಂಬ ಹೊಸ ಆಯ್ಕೆಯನ್ನು ಅರ್ಥ್​ನಲ್ಲಿ ಅಳವಡಿಸಲಾಗಿದ್ದು, ಈ ಮೂಲಕ ಉತ್ತರ ಧ್ರುವದಿಂದ ನಿಮ್ಮ ಮನೆಗಿರುವ ಅಥವಾ ನೀವು ಕ್ರಮಿಸಬೇಕಿರುವ ಪ್ರದೇಶದ ದೂರ, ವಿಸ್ತೀರ್ಣ ಸೇರಿದಂತೆ ಸುತ್ತಳತೆಯಿಂದ ಹಿಡಿದು ಒಂದು ಪ್ರದೇಶದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬಹುದು.

ಅಲ್ಲಿರುವ ಚುಕ್ಕಿಗಳನ್ನು ಜತೆಗೂಡಿಸುತ್ತಾ ಆ್ಯಪ್​ ಬಳಕೇದಾರರು ತನ್ನ ಪ್ರದೇಶದ ಚಿತ್ರಣವನ್ನು ಪಡೆದುಕೊಳ್ಳಬಹುದು. ಈ ಅಪ್​ಡೇಟ್​ ಸೋಮವಾರದಿಂದಲೇ ಕ್ರೋಮ್​ಗೆ ಬಂದಿದೆ. ಈ ವಾರದೊಳಗೆ ಆ್ಯಂಡ್ರಾಯ್ಡ್​ ಗ್ರಾಹಕರಿಗೆ ಮತ್ತು ಕೆಲವೇ ದಿನಗಳಲ್ಲಿ ಆ್ಯಪಲ್​ ಬಳಕೇದಾರರಿಗೆ ಅಪ್​ಡೇಟ್​ ಒದಗಿಸುವುದಾಗಿ ಸಂಸ್ಥೆ ಹೇಳಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ