HOLI 2019: ಬಣ್ಣಗಳ ಹಬ್ಬವನ್ನು​ ನೆನಪಿಸಿಕೊಂಡ ‘ಗೂಗಲ್​ ಡೂಡಲ್​‘

ಉತ್ತರ ಭಾರತದಲ್ಲಿ ಮಾತ್ರ ಆಚರಣಿಯಲ್ಲಿದ್ದ ಹೋಳಿ ಹಬ್ಬವಿಂದು ದೇಶದಾದ್ಯಂತ ಪಸರಿಸಿದೆ. ದೇಶದ ಉದ್ದಗಲಕ್ಕೂ ಹೋಳಿ ಆಚರಣೆಯನ್ನು ಮಾಡುತ್ತಿದ್ದಾರೆ. ವಿವಿಧ ಬಣ್ಣಗಳ ಓಕುಳಿಯನ್ನು ಹಚ್ಚಿಕೊಂಡು ಜೀವನವು ಕಲರ್​ಫುಲ್​ ಆಗಿರಲಿ ಎಂದು ಹರಸುತ್ತಾರೆ.

news18
Updated:March 21, 2019, 3:08 PM IST
HOLI 2019: ಬಣ್ಣಗಳ ಹಬ್ಬವನ್ನು​ ನೆನಪಿಸಿಕೊಂಡ ‘ಗೂಗಲ್​ ಡೂಡಲ್​‘
‘ಗೂಗಲ್​ ಡೂಡಲ್​‘
  • News18
  • Last Updated: March 21, 2019, 3:08 PM IST
  • Share this:
ಭಾರತ ಹಬ್ಬ ಒಂದಾದ ಹೋಳಿ ಸಂಭ್ರಮಾಚರಣೆಯನ್ನು ಗೂಗಲ್ ತನ್ನ​ ಡೂಡಲ್​ನಲ್ಲಿ​ ನೆನಪಿಸಿಕೊಂಡಿದೆ. ಬಣ್ಣಗಳ ಹಬ್ಬವೆಂದು ಪ್ರತೀತಿ ಪಡೆದ ಹೋಳಿ ಹಬ್ಬದ ಚಿತ್ತಾರವನ್ನು ಡೂಡಲ್​ನಲ್ಲಿ ಪ್ರಕಟಿಸುವ ಮೂಲಕ  ಗೂಗಲ್ ಗೌರವ ಸೂಚಿಸಿದೆ.

ದೇಶದಾದ್ಯಂತ ಬಣ್ಣದೋಕೂಳಿಯ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪರಂಪರಾಗತವಾಗಿ ಬಂದಂತಹ ಹೋಳಿ ಹಬ್ಬ ಏಕತೆಯ ಸಂಕೇತವಾಗಿದೆ. ಹಿರಿಯರು- ಕಿರಿಯರು ಎಂಬ ಭೇದ-ಭಾವವಿಲ್ಲದೆ ಬಣ್ಣವನ್ನು ಎರಚಿಕೊಂಡು ಸಂಭ್ರಮ ಮಾಡುತ್ತಾರೆ.

ಇದನ್ನೂ ಓದಿ: ಇಂದು ದೆಹಲಿಗೆ ಸಿದ್ದರಾಮಯ್ಯ; ರಾಜ್ಯದಲ್ಲಿ ರಾಹುಲ್​ ಸ್ಪರ್ಧೆಗೆ 4 ಕ್ಷೇತ್ರಗಳ ಹೆಸರು ಪ್ರಸ್ತಾಪ? ಯಾವುವು ಆ ನಾಲ್ಕು ಕ್ಷೇತ್ರಗಳು?

ಉತ್ತರ ಭಾರತದಲ್ಲಿ ಮಾತ್ರ ಆಚರಣಿಯಲ್ಲಿದ್ದ ಹೋಳಿ ಹಬ್ಬವಿಂದು ದೇಶದಾದ್ಯಂತ ಪಸರಿಸಿದೆ. ದೇಶದ ಉದ್ದಗಲಕ್ಕೂ ಹೋಳಿ ಆಚರಣೆಯನ್ನು ಮಾಡುತ್ತಿದ್ದಾರೆ. ವಿವಿಧ ಬಣ್ಣಗಳ ಓಕುಳಿಯನ್ನು ಹಚ್ಚಿಕೊಂಡು ಜೀವನವು ಕಲರ್​ಫುಲ್​ ಆಗಿರಲಿ ಎಂದು ಹರಸುತ್ತಾರೆ.

ಗೂಗಲ್​ ಪ್ರತಿಬಾರಿಯು ವಿಶ್ವದ ವಿಶೇಷ ದಿನಗಳನ್ನು ತನ್ನ ಡೂಡಲ್​ನಲ್ಲಿ ನೆನಪಿಸಿಕೊಳ್ಳುತ್ತದೆ. ಹಾಗೆಯೇ,  ಹೋಳಿ ಹಬ್ಬದ ಸಂಸ್ಕೃತಿಯನ್ನು ಕೂಡ  ಡೂಡಲ್​ ನೆನಪಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ತೋರ್ಪಡಿಸಿದೆ.

First published:March 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ