• Home
 • »
 • News
 • »
 • tech
 • »
 • Technology: ಪ್ರಸಿದ್ಧ ಭೂವಿಜ್ಞಾನಿ ಮೇರಿ ಥಾರ್ಪ್ ಅವರ ಜೀವಮಾನ ಸಾಧನೆಗೆ ಗೂಗಲ್ ಡೂಡಲ್​ನಿಂದ ಗೌರವ

Technology: ಪ್ರಸಿದ್ಧ ಭೂವಿಜ್ಞಾನಿ ಮೇರಿ ಥಾರ್ಪ್ ಅವರ ಜೀವಮಾನ ಸಾಧನೆಗೆ ಗೂಗಲ್ ಡೂಡಲ್​ನಿಂದ ಗೌರವ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗೂಗಲ್ ಡೂಡಲ್ ನಲ್ಲಿ ಬರುವಂತಹ ಚಿತ್ರಗಳು ಏನಾದರೊಂದು ಅರ್ಥವನ್ನು ಹೊಂದಿರುತ್ತೆ. ಅದೇ ರೀತಿ ಇದು ಯಾವುದೋ ಮಾಹಿತಿಯನ್ನೋ, ಸಂಭ್ರಮವನ್ನೋ ಈ ಡೂಡಲ್ ಮೂಲಕ ಹಂಚುತ್ತಾರೆ. ಹಾಗಿದ್ರೆ ಇಂದು ಹಾಕಿದ ಚಿತ್ರ ಯಾವುದು, ಅದರ ಅರ್ಥ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.​

 • Share this:

   ಏನಪ್ಪಾ ಈ ಗೂಗಲ್ (Google)​ ತನ್ನ ಸರ್ಚ್ (Search)​ ಆಪ್ಷನ್​ನಲ್ಲಿ ಕಲರ್​ಫುಲ್ ಫೋಟೋ ಹಾಕ್ತಿದೆ ಅನ್ಕೊಂಡ್ರಾ ಹೌದು ಗೂಗಲ್ ಡೂಡಲ್ (google Doodle) ಎಂಬ ತಂತ್ರಜ್ಞಾನ ದಿನದಲ್ಲಿ ಯಾವುದಾದರೊಂದು ವಿಶೇಷತೆಯ ಆಚರಣೆಗಳು ಇದ್ದರೆ ಗೂಗಲ್ ತನ್ನ ಡೂಡಲ್​ನೊಂದಿಗೆ ಫೋಟೋ ಹಾಕುವ ಮೂಲಕ ಗೂಗಲ್​ ಕೂಡ ಆ ಸಂಭ್ರಮವನ್ನು ಆಚರಿಸುತ್ತದೆ. ಇತ್ತೀಚೆಗೆ ಡೂಡಲ್​ನಲ್ಲಿ ಗೂಗಲ್ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಚಿತ್ರವನ್ನು ಹಾಕಿತ್ತು. ನಂತರದಲ್ಲಿ ಫಿಫಾ ಫುಟ್​ಬಾಲ್ ವಿಶ್ವಕಪ್ 2022 ಗೆ (Fifa Worldcup) ಸಂಬಂಧಿಸಿದ ಚಿತ್ರವನ್ನು ಹಾಕಲಾಗಿತ್ತು. ಇದೀಗ ಮತ್ತೊಂದು ಹೊಸ ಚಿತ್ರವನ್ನು ಹಾಕಿದೆ. ಗೂಗಲ್ ಡೂಡಲ್​ನಲ್ಲಿ ಹಾಕುವಂತಹ ಪ್ರತಿಯೊಂದು ಚಿತ್ರಕ್ಕೂ ಅದರದೇ ಆದಂತಹ ಅರ್ಥಗಳಿವೆ. 


  ಹೌದು ಗೂಗಲ್ ಡೂಡಲ್ ನಲ್ಲಿ ಬರುವಂತಹ ಚಿತ್ರಗಳು ಏನಾದರೊಂದು ಅರ್ಥವನ್ನು ಹೊಂದಿರುತ್ತೆ. ಅದೇ ರೀತಿ ಇದು ಯಾವುದೋ ಮಾಹಿತಿಯನ್ನೋ, ಸಂಭ್ರಮವನ್ನೋ ಈ ಡೂಡಲ್ ಮೂಲಕ ಹಂಚುತ್ತಾರೆ. ಹಾಗಿದ್ರೆ ಇಂದು ಹಾಕಿದ ಚಿತ್ರ ಯಾವುದು, ಅದರ ಅರ್ಥ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.​


  ಗೂಗಲ್ ಡೂಡಲ್​​ನಲ್ಲಿ ಮೇರಿ ಥಾರ್ಪ್ ಜೀವಮಾನ ಸಾಧನೆಗೆ ಗೌರವ:


  ಮೇರಿ ಥಾರ್ಪ್ ಅವರು ಅಮೆರಿಕದ ಭೂವಿಜ್ಞಾನಿ ಮತ್ತು ಸಮುದ್ರಶಾಸ್ತ್ರದ ಕಾರ್ಟೋಗ್ರಾಫರ್ ಆಗಿದ್ದರು​. ಕಾಂಟಿನೆಂಟಲ್​ ಡ್ರಿಫ್ಟ್​ ಥಿಯರಿಗಳನ್ನು ಸಾಬೀತುಪಡಿಸುವಲ್ಲಿ ಮೇರಿ ಥಾರ್ಪ್ ಅವರು ಮಹತ್ವದ ಪಾತ್ರ ವಹಿಸಿದ್ದರು. 1998ರ ನವೆಂಬರ್ 21ರಂದು ಲೈಬ್ರರಿ ಆಫ್​ ಕಾಂಗ್ರೆಸ್​ ಇವರನ್ನು 20ನೇ ಶತಮಾನದ ಶ್ರೇಷ್ಠ ಕಾರ್ಟೋಗ್ರಾಫರ್​ಗಳಲ್ಲಿ (ನಕ್ಷಾ ತಜ್ಞೆ) ಒಬ್ಬರೆಂದು ಗುರುತಿಸಿತು. ಈ ಪ್ರಯುಕ್ತ ಗೂಗಲ್​ ಡೂಡಲ್​ ಮೂಲಕ ಇವರ ಜೀವಮಾನ ಸಾಧನೆಯನ್ನು ಗೂಗಲ್​ ಗೌರವಿಸಿ ಸಂಭ್ರಮಿಸುತ್ತಿದೆ.


  ಇದನ್ನೂ ಓದಿ: ಫಿಫಾ ಫುಟ್​ಬಾಲ್ ವರ್ಲ್ಡ್​ಕಪ್ ಪ್ರಿಯರಿಗಾಗಿ ಜಿಯೋದಿಂದ ವಿಶೇಷ ಡೇಟಾ ಆಫರ್!


  ಮೂವರು ಸೇರಿ ರಚಿಸಿದ ಚಿತ್ರ:


  ಇಂದಿನ ಡೂಡಲ್‌ನಲ್ಲಿ ಕೈಟ್ಲಿನ್ ಲಾರ್ಸೆನ್, ರೆಬೆಕಾ ನೆಸೆಲ್ ಮತ್ತು ಡಾ ಟಿಯಾರಾ ಮೂರ್ ಅವರು ಸೇರಿ ಮಾಡಿದಂತೆ ಮೇರಿ ಥಾರ್ಪ್ ಅವರ ಜೀವನದ ಸಾಧನೆಯನ್ನು ಇದು ಬಿಂಬಿಸುತ್ತದೆ. ಗೂಗಲ್ ಬಳಕೆದಾರರು  ಡೂಡಲ್ ಅನ್ನು ಕ್ಲಿಕ್ ಮಾಡಿದರೆ ಇದು ಮೇರಿ ಥಾರ್ಪ್ ಅವರ ಜೀವನ ಮತ್ತು ವೃತ್ತಿಜೀವನವನ್ನು ವಿವರಿಸುವ ಹಲವಾರು ಕಥೆಗಳನ್ನು ತೋರಿಸುತ್ತದೆ.  ಈ ಚಿತ್ರದ ಅರ್ಥ ಏನು?


  ಹೀಜೆನ್ ಅಟ್ಲಾಂಟಿಕ್ ಸಾಗರದಲ್ಲಿ ಸಾಗರದ ಆಳದ ಡೇಟಾವನ್ನು ಥಾರ್ಪ್ ಸಂಗ್ರಹಿಸಿದರು,  ನಂತರದಲ್ಲಿಈ ಡೇಟಾವನ್ನು ಇಟ್ಟುಕೊಂಡು ಥಾರ್ಪ್ ಸಾಗರದ ತಳದ ನಕ್ಷೆಗಳನ್ನು ಸ್ವತಃ ರಚಿಸಲು ಆರಂಭಿಸಿದರು. ಎಕೋ ಸೌಂಡರ್‌ಗಳಿಂದ ಅಂದರೆ ನೀರಿನ ಆಳವನ್ನು ಕಂಡುಹಿಡಿಯಲು ಬಳಸುವ ಸೋನಾರ್‌ಗಳ ಮೂಲಕ ಹೊಸ ಸಂಶೋಧನೆಗಳನ್ನು ಮಾಡಲು ಮತ್ತು ಮಧ್ಯ ಅಟ್ಲಾಂಟಿಕ್ ರಿಡ್ಜ್ ಅನ್ನು ಕಂಡುಹಿಡಿಯಲು ಆಕೆಗೆ ಸಹಾಯವಾಯಿತು.


  ಅವರು ಈ ಸಂಶೋಧನೆಗಳನ್ನು ಮಾಡಿದ ನಂತರ ಅದನ್ನು ಹೀಜೆನ್‌ ಬಳಿಗೆ ತಂದರು, ಹೀಜೆನ್ ಇದನ್ನು ಹುಡುಗಿ ತಯಾರಿಸಿದರಿಂದ ನಿರಾಕರಿಸಿದರು. ಆದರೂ ಥಾರ್ಪ್ ಅವರು ಈ ವಿ-ಆಕಾರದ ಬಿರುಕುಗಳನ್ನು ಭೂಕಂಪದ ಕೇಂದ್ರಬಿಂದು ನಕ್ಷೆಗಳೊಂದಿಗೆ ಹೋಲಿಸಿದಾಗ, ಹೀಜೆನ್​ಗೆ ಸತ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಥಾರ್ಪ್‌ಬಗ್ಗೆ ಚಿತ್ರಿಸಲಾಗಿರುವ ಗೂಗಲ್ ಪುಟದ ವರದಿಯಲ್ಲಿ ಹೇಳುತ್ತದೆ.


  ಲೈಬ್ರೆರಿ ಆಫ್ ಕಾಂಗ್ರೆಸ್​ನಲ್ಲಿ ಮೇರಿ ಥಾರ್ಪ್ ಅವರ ಸಂಶೋಧನೆ:


  1957 ರಲ್ಲಿ, ಮೇರಿ ಥಾರ್ಪ್ ಮತ್ತು ಹೀಜೆನ್ ಉತ್ತರ ಅಟ್ಲಾಂಟಿಕ್‌ ಸಾಗರದಾಳದ ನಕ್ಷೆಯನ್ನು  ತಯಾರಿಸಿ ಆ ಬಗ್ಗೆ ಸಂಶೋಧನೆ ನಡೆಸಿದರು. ಈ ಕುರಿತ ವರದಿಯನ್ನು ವಿಶ್ವದ ಮೊದಲ ವಿಶ್ವ ನಕ್ಷೆ – ದಿ ವರ್ಲ್ಡ್ ಓಷನ್ ಫ್ಲೋರ್ ಎಂಬ ಶೀರ್ಷಿಕೆಯಲ್ಲಿ ನ್ಯಾಷನಲ್​ ಜಿಯಾಗ್ರಫಿಕ್​ನಲ್ಲಿ ಪ್ರಕಟಿಸಿತು. ನಂತರ ಆ ನಕ್ಷೆಯನ್ನು 1995ರಲ್ಲಿ ಲೈಬ್ರರಿ ಆಫ್​ ಕಾಂಗ್ರೆಸ್​ ಗೆ ಮೇರಿ ಒಪ್ಪಿಸಿದರು.

  Published by:Prajwal B
  First published: