ಗೂಗಲ್ (Google) ಪ್ರತೀ ಬಾರಿ ತನ್ನ ಬಳಕೆದಾರರಿಗಾಗಿ ಏನಾದರು ಮಾಹಿತಿಯನ್ನು ನೀಡುತ್ತಲೇ ಇರುತ್ತದೆ. ಅತೀ ದೊಡ್ಡ ಟೆಕ್ ಕಂಪೆನಿಯಾಗಿರುವ (Tech Company) ಗೂಗಲ್ ಕ್ಷಣಮಾತ್ರದಲ್ಲಿ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ನೀಡುವಂತಹ ವೇದಿಕೆಯೆಂದರೆ ತಪ್ಪಾಗಲಾರದು. ಗೂಗಲ್ ಪ್ರತೀ ಬಾರಿ ತನ್ನ ಡೂಡಲ್ ಮೂಲಕ ಏನಾದರು ಸಂಭ್ರಮಾಚರಣೆಗಳನ್ನು, ಪ್ರಸಿದ್ಧ ವ್ಯಕ್ತಿಗಳ ಹುಟ್ಟುಹಬ್ಬ ಸಂಭ್ರಮವನ್ನು ಫೋಟೋ ಅಥವಾ ಆ್ಯನಿಮೇಶನ್ (Animation) ಮಾಡುವ ಮೂಲಕ ಆಚರಿಸುತ್ತದೆ. ಇದೀಗ ಒಲಿಂಪಿಕ್ ವೈಯಕ್ತಿಕ ಅಥ್ಲೀಟ್ನಲ್ಲಿ ಭಾರತ ದೇಶಕ್ಕೆ ಮೊದಲ ಪದಕ ತಂದುಕೊಟ್ಟಂತಹ ಖಾಷಭಾ ದಾದಾಸಾಹೇಬ್ ಜಾಧವ್ (Khashaba Dadasaheb Jadhv) ಅವರ 97 ನೇ ಜನ್ಮದಿನವನ್ನು ಜನವರಿ 15 ರಂದು ಗೂಗಲ್ ತನ್ನ ಡೂಡಲ್ನಲ್ಲಿ (Google Doodle) ಆಚರಿಸುತ್ತಿದೆ.
ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕಕೊಟ್ಟಂತಹ ಕೆ.ಡಿ ಜಾಧವ್ ಅವರ ಜನ್ಮದಿನವನ್ನು ಇದೀಗ ಗೂಗಲ್ ತನ್ನ ಡೂಡಲ್ ಮೂಲಕ ಆಚರಿಸುತ್ತಾ ಇದೆ. ಹಾಗಿದ್ರೆ ಖಾಶಬ್ ದಾದಾಸಾಹೇಬ್ ಅವರ ಸಾಧನಗಳೇನು, ಗೂಗಲ್ ಡೂಡಲ್ನಲ್ಲಿ ಅಂತದ್ದೇನಿದೆ ಎಂಬುದನ್ನು ಈ ಲೇಖನದಲ್ಲಿ ನೋಡಿ.
ಖಾಷಭಾ ದಾದಾಸಾಹೇಬ್ ಜಾಧವ್ ಅವರ ಜನನ
ಕುಸ್ತಿಪಟು ಖಾಷಭಾ ದಾದಾಸಾಹೇಬ್ ಜಾಧವ್ ಅವರು ಮಹಾರಾಷ್ಟ್ರದ ಗೋಲೇಶ್ವರ ಗ್ರಾಮದಲ್ಲಿ ಜನವರಿ 15 ರಂದು, 1926 ರಲ್ಲಿ ಜನಿಸಿದರು. ಇವರ ತಂದೆ ಸಹ ಕುಸ್ತಿಪಟುವೇ ಆದ್ದರಿಂದ ಇವರ ಈ ಸಾಧನೆಗೆ ಕಾರಣವಾಯಿತು.
ಇದನ್ನೂ ಓದಿ: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್; ಈ ಸ್ಮಾರ್ಟ್ಫೋನ್ಗಳ ಮೇಲೆ ಬಂಪರ್ ರಿಯಾಯಿತಿ
ಒಲಿಂಪಿಕ್ಸ್ನಲ್ಲಿ ಭಾರಕ್ಕೆ ಬಂದ ಮೊದಲ ವೈಯಕ್ತಿಕ ಪದಕ
1952ರ ಒಲಿಂಪಿಕ್ಸ್ನಲ್ಲಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದ ಕಂಚಿನ ಪದಕ ವಿಜೇತರಲ್ಲಿ ಖಾಷಭಾವು ಸಹ ಒಬ್ಬರಾಗಿ ಸಮ್ಮಾನ ಪಡೆದರು.10 ಕ್ರೀಡೆಗಳ ಪೈಕಿ, ಹಾಕಿ ತಂಡದ ಚಿನ್ನದ ಪದಕ ಮತ್ತು ಖಾಷಭಾವುರ ವೈಯಕ್ತಿಕ ಪದಕ, ಇವೆರಡೇಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ಭಾರತದ ಸಾಧನೆಯಾಯಿತು. ಈ ಕಂಚಿನ ಪದಕ ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಕಂಚಿನ ಪದಕವಾಗಿತ್ತು
ಕಂಚಿನ ಪದಕ ಪಡೆಯಲು ಕಾರಣ
ಕೆ.ಡಿ ಜಾಧವ್ ಅವರು ಬಾಂಟಂವೇಯ್ಟ್ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ 5 ಪಂದ್ಯಾಟವನ್ನು ಗೆದ್ದು ನೋಡುಗರಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದರು. ಆದರೆ ಜಪಾನಿನ ಸೊಹಾಚಿ ಇಚಿ ವಿರುದ್ಧ ಜಾಧವ್ ಅವರು ಸೋತರು. ಪಂದ್ಯದ ನಿಯಮದಂತೆ 2 ಪಂದ್ಯಾಟಗಳ ನಡುವೆ 30 ನಿಮಿಷಗಳ ಬಿಡುವು ನೀಡಬೇಕಿತ್ತು, ಆದರೆ ವಿರಾಮ ನೀಡದೆಯೇ ಖಾಷಾಭಾ ದಾದಾಸಾಹೇಬ್ ಜಾಧವ್ ಅವರಿಗೆ ರಷ್ಯಾದ ರಷೀದ್ ಮೊಮ್ಮದ್ ಬಿಯೋವ್ ವಿರುದ್ಧ ಸ್ಪರ್ಧಿಸಲು ಆದೇಶ ನೀಡಿದರು. ಆದರೆ ಈ ಸಂದರ್ಭದಲ್ಲಿ ಜಾಧವ್ ಅವರ ಪರವಾಗಿ ಮಾತನಾಡಲು ಅಲ್ಲಿ ಭಾರತದ ಯಾವುದೇ ಅಧಿಕಾರಿಗಳು ಇರಲಿಲ್ಲ. ಆದ್ದರಿಂದ ಸ್ವಲ್ಪವೂ ವಿರಾಮವಿಲ್ಲದೇಯೇ ಆಡಬೇಕಾಯಿತು.
ಆದರೆ ಇದರ ಮೊದಲೇ ಆಡಿ ಕದಣಿದಿದ್ದ ಖಾಷಭಾ ದಾದಾಸಾಹೇಬ್ ಜಾಧವ್ ಅವರು ಸೆಮಿಫೈನಲ್ಸ್ನಲ್ಲಿ ರಷೀದ್ ವಿರುದ್ಧ ಆಡಬೇಕಾಯಿರು. ದುರದೃಷ್ಟವಶಾತ್ ಜಾಧವ್ ಅವರು ಈ ಪಂದ್ಯಾಟದಲ್ಲಿ ಸೋತರು. ಈ ಪಂದ್ಯಾಟದಲ್ಲಿ ಸೋತ ಕಾರಣಕ್ಕೆ ಸೊಹಾಚಿ ಇಚಿ ಬಂಗಾರದ ಪದಕ, ರಷೀದ್ ಬೆಳ್ಳಿ ಪದಕ ಹಾಗೂ ಖಾಷಭಾ ದಾದಾಸಾಹೇಬ್ ಜಾಧವ್ ಅವರು ಕಂಚಿನ ಪದಕ ಗೆದ್ದರು.
ಏನಿದೆ ಗೂಗಲ್ ಡೂಡಲ್ನಲ್ಲಿ?
ಗೂಗಲ್ ಡೂಡಲ್ ಇದೀಗ ಜನವರಿ 15 ರಂದು ಖಾಷಭಾ ದಾದಾಸಾಹೇಬ್ ಜಾಧವ್ ಅವರ ಜನ್ಮದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಡೂಡಲ್ನಲ್ಲಿ ಆ್ನಿಮೇಶನ್ನಂತಹ ಚಿತ್ರವನ್ನು ಹಾಕಿದ್ದಾರೆ. ಈ ಚಿತ್ರದಲ್ಲಿ ಕುಸ್ತಿ ಪಟುವಿನ ಚಿತ್ರ ಮತ್ತು ಖಾಷಭಾ ದಾದಾಸಾಹೇಬ್ ಜಾಧವ್ ಅವರು ಬುಕ್ ಹಿಡಿದುಕೊಂಡಿರುವಂತೆ ಅವರ ಚಿತ್ರವನ್ನು ಬರೆಯಲಾಗಿದೆ.
ಈ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ಒಲಿಂಪಿಕ್ಸ್ ಪಂದ್ಯಾಟದಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಕ್ರೀಡೆಯಲ್ಲಿ ಪದಕ ತಂದುಕೊಟ್ಟ ಖಾಷಭಾ ದಾದಾಸಾಹೇಬ್ ಜಾಧವ್ ಅವರ ಜೀವನ ಚರಿತ್ರೆಯನ್ನು ಓದಬಹುದಾಗಿದೆ. ಮತ್ತು ಅವರ ಕೆಲವು ಸಾಧನೆಯ ಚಿತ್ರಗಳನ್ನು ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ