2020ನೇ ವರ್ಷ ಇಂದಿಗೆ ಕೊನೆಗೊಳ್ಳುತ್ತಿದೆ. ನಾಳೆಯಿಂದ 2021ನೇ ವರ್ಷವನ್ನು ಸಂಭ್ರಮಿಸಲಿದ್ದೇವೆ. ವಿಶ್ವದಾದ್ಯಂತ ಜನರು ನೂತನ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ಕುತೂಹಲದಲ್ಲಿದ್ದಾರೆ. ಟೈಕ್ ದೈತ್ಯ ಗೂಗಲ್ ಕೂಡ ಡೂಡಲ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸುವ ಮೂಲಕ ನೂತನ ವರ್ಷದ ಆಚರಣೆಗೆ ಕಾದುಕುಳಿತಿದೆ.
ಗೂಗಲ್ ತನ್ನ ಡೂಡಲ್ ಅನ್ನು ವಿನ್ಯಾಸಗೊಳಿಸಿದೆ. ಗೂಗಲ್ ಪದಗಳ ಸುತ್ತ ಬಣ್ಣ ಬಣ್ಣದ ಲೈಟಿಂಗ್ನಿಂದ ವಿನ್ಯಾಸಗೊಳಿಸಿದೆ. ಜೊತೆಗೆ ಗಡಿಯಾರವನ್ನಿರಿಸಿ ನೂತನ ವರ್ಷಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎಂಬುದನ್ನು ಹೇಳಿದೆ.
ವಿಶ್ವದಾದ್ಯಂತ ಜನರು ಹೊಸ ವರ್ಷವನ್ನು ಬರ ಮಾಡಿಕೊಳ್ಳುವ ಕುತೂಹಲದಲ್ಲಿದ್ದಾರೆ. 2021 ವರ್ಷ ಉತ್ತಮವಾಗಿರಲಿ. ಯಾರಿಗೂ ಯಾವುದೇ ನೋವು ಬಾರದಂತಿರಲಿ ಎಂದು ಆಶಿಸುತ್ತಿದ್ದಾರೆ.
2020ನೇ ವರ್ಷ ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತ ವರ್ಷವಾಗಿದೆ. ಕೊರೋನಾ ಎಂಬ ಮಹಾಮಾರಿ ಈ ವರ್ಷ ಸಾಕಷ್ಟು ಜನರನ್ನು ಬಳಿ ಪಡೆದುಕೊಂಡಿದೆ. ಮಾತ್ರವಲ್ಲದೆ, ಸಂಕಷ್ಟ ತಂದೊಡ್ಡಿತ್ತು. ಹಾಗಾಗಿ ಹೊಸ ವರ್ಷವು ಎಲ್ಲರಿಗೂ ಸುಖ-ಸಂತೋಷ ನೀಡಲಿ ಎಂಬುದು ಅನೇಕರ ಆಶಯ.
ಜನಪ್ರಿಯ ಗೂಗಲ್ ವಿಶೇಷ ದಿನವನ್ನು ಸ್ಮರಿಸುತ್ತಲೇ ಇರುತ್ತದೆ. ಹಬ್ಬ, ಕವಿ, ವಿಜ್ನಾನಿಗಳ ಹುಟ್ಟುಹಬ್ಬ ಹೀಗೆ ಎಲ್ಲವನ್ನು ವಿಶೇಷ ಡೂಡಲ್ ರಚಿಸಿ ಸ್ಮರಿಸುತ್ತಿರುತ್ತದೆ. ಅದರಂತೆ ಇದೀಗ ಹೊಸ ವರ್ಷವನ್ನು ಸ್ವಾಗತಿಸಲು ವಿಶೇಷ ಡೂಡಲ್ ರಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ