• Home
  • »
  • News
  • »
  • tech
  • »
  • Google Doodle: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್

Google Doodle: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್

ಗೂಗಲ್ ಡೂಡಲ್​ನಲ್ಲಿರುವ ಫೋಟೋ

ಗೂಗಲ್ ಡೂಡಲ್​ನಲ್ಲಿರುವ ಫೋಟೋ

ಈ ಬಾರಿಯ ಫಿಫಾ ವಿಶ್ವಕಪ್ 2022 ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ಇದರ ಸಂಬಂಧ ಚಿತ್ರಗಳನ್ನು ಡೂಡಲ್ ಅನಿಮೇಟೆಡ್ ಇಮೇಜ್ ಮೂಲಕ ಹಂಚಿಕೊಂಡಿದೆ. ಇದು ಗ್ರಾಹಕರು ಸರ್ಚ್ ಇಂಜಿನ್​ ಆಗಿರುವಂತಹ ಗೂಗಲ್​ಗೆ ಬಂದು ಆ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಈ ಬಾರಿಯ ವಿಶ್ವಕಪ್​ಗೆ ಸಂಬಂಧಿಸಿದ ಸುದ್ದಿಯನ್ನು ನೀಡುತ್ತದೆ.

ಮುಂದೆ ಓದಿ ...
  • Share this:

    ಗೂಗಲ್ ಡೂಡಲ್​ (Google Doodle) ಯಾವಾಗಲೂ ಏನಾದರೊಂದು ಅದರಲ್ಲಿ ವಿಶೇಷತೆಯನ್ನು ಹೊಂದಿರುತ್ತದೆ. ಡೂಡಲ್​ನಲ್ಲಿ ಒಂದು ಅನಿಮೇಟೆಡ್ ಇಮೇಜ್ (Animated Image) ಅನ್ನು ಹಾಕುವ ಮೂಲಕ ಆ ದಿನ ಸ್ಪೆಷಲ್ ಅನ್ನು ಆಚರಿಸುತ್ತದೆ. ಇದೀಗ ಇಂದು ಫಿಫಾ ವಿಶ್ವಕಪ್ ಆರಂಭ ವಾಗುತ್ತಿದೆ. ಇದನ್ನು ಗೂಗಲ್ ತನ್ನ ಡೂಡಲ್​ನಲ್ಲಿ ಫೋಟೋ ಹಾಕುವ ಮೂಲಕ ಜನರಿಗೆ ತಿಳಿಸಲು ಹೊರಟಿದೆ. ಬಹುನಿರೀಕ್ಷಿತ ಫಿಫಾ ವಿಶ್ವಕಪ್‌ 2022 ಫುಟ್​​ಬಾಲ್‌ (FIFA World Cup 2022) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಫುಟ್​​ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಕತಾರ್ (Qatar) ಫುಟ್​ಬಾಲ್ ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧವಾಗಿ ನಿಂತಿದೆ. ಫುಟ್​ಬಾಲ್ (Football) ಫೀವರ್​ಗೆ ನವೆಂಬರ್ 20ಕ್ಕೆ ಚಾಲನೆ ಸಿಗಲಿದ್ದು ಡಿಸೆಂಬರ್ 18 ರಂದು ಕೊನೆಗೊಳ್ಳುತ್ತದೆ.


    ಈ ಬಾರಿಯ ಫಿಫಾ ವಿಶ್ವಕಪ್ 2022 ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ಇದರ ಸಂಬಂಧ ಚಿತ್ರಗಳನ್ನು ಡೂಡಲ್ ಅನಿಮೇಟೆಡ್ ಇಮೇಜ್ ಮೂಲಕ ಹಂಚಿಕೊಂಡಿದೆ. ಇದು ಗ್ರಾಹಕರು ಸರ್ಚ್ ಇಂಜಿನ್​ ಆಗಿರುವಂತಹ ಗೂಗಲ್​ಗೆ ಬಂದು ಆ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಈ ಬಾರಿಯ ವಿಶ್ವಕಪ್​ಗೆ ಸಂಬಂಧಿಸಿದ ಸುದ್ದಿಯನ್ನು ನೀಡುತ್ತದೆ.


    ರಾತ್ರಿ 7:30 ಕ್ಕೆ ವಿಶ್ವಕಪ್ ಉದ್ಘಾಟನೆ:


    ಇಂದು ಫಿಫಾ ಫುಟ್​ಬಾಲ್ ವಿಶ್ವಕಪ್ ಪಂದ್ಯವು ಉದ್ಘಾಟನೆ ಮೂಲಕ ಪ್ರಾರಂಭಗೊಳ್ಳುತ್ತದೆ ಎಂದು ಹೇಳಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7:30ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 3.30ಕ್ಕೆ ಮೊದಲ ಪಂದ್ಯ, ಎರಡನೇ ಪಂದ್ಯ ಸಂಜೆ 6.30ಕ್ಕೆ, ಮೂರನೇ ಪಂದ್ಯ 9.30ಕ್ಕೆ ಹಾಗೂ ಮಧ್ಯರಾತ್ರಿ ನಾಲ್ಕನೇ ಪಂದ್ಯ 12.30ಕ್ಕೆ ಈ ರೀತಿ ಪಂದ್ಯಗಳು ನಡೆಯಲಿದೆ. ಡಿಸೆಂಬರ್ 18 ರಂದು ಫೈನಲ್ ಸ್ಪರ್ಧೆಯನ್ನು ಮಾಡುವುದಾಗಿ ಯೋಜಿಸಲಾಗಿದೆ.


    ಇದನ್ನೂ ಓದಿ: ಇನ್ಮುಂದೆ ಪ್ಯಾರಾಚೂಟ್​ ಮೂಲಕ ಬಾಹ್ಯಾಕಾಶಕ್ಕೆ ಹೋಗ್ಬಹುದು! ಇಸ್ರೊದಿಂದ ಹೊಸ ಅನ್ವೇಷಣೆ


    ಈ ಪಂದ್ಯದ ನೇರಪ್ರಸಾರ:


    ಈ ಬಾರಿಯ ಫುಟ್​ಬಾಲ್ ವಿಶ್ವಕಪ್ ಪಂದ್ಯದ ನೇರಪ್ರಸಾರವು ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ  ಮಾಡಲಾಗುತ್ತದೆ. ಅದೇ ಸಮಯದಲ್ಲಿ ವೂಟ್ ಅಪ್ಲಿಕೇಶನ್ ಡಿಜಿಟಲ್‌ನಲ್ಲಿ ನೇರ ಪ್ರಸಾರವಾಗುತ್ತದೆ ಎಂದು ತಿಳಿಸಿದ್ದಾರೆ.


    Google Doodle celebrates FIFA football with a special photo See that picture here pjl
    ಗೂಗಲ್ ಡೂಡಲ್​ನಲ್ಲಿರುವ ಫೋಟೋ


    60 ಸಾವಿರ ಆಸನಗಳ ವ್ಯವಸ್ಥೆ:


    ಅಲ್ ಬೇತ್ ಸ್ಟೇಡಿಯಂನಲ್ಲಿ  ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದ್ದು, ಇಲ್ಲಿ ಸುಮಾರು 60 ಸಾವಿರ ಆಸನ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಉದ್ಘಾಟನಾ ಸಮಾರಂಭಕ್ಕಾಗಿ ಪ್ರಸಿದ್ಧ ಬಾಯ್ ಬ್ಯಾಂಡ್‌ನ ಏಳು ಸದಸ್ಯರಲ್ಲಿ ಒಬ್ಬರಾದ ಜಂಗ್‌ಕುಕ್ ಪ್ರದರ್ಶನ ನೀಡಲಿದ್ದಾರೆ ಎಂದು ದಕ್ಷಿಣ ಕೊರಿಯಾದ ಬಿಟಿಎಸ್ ಹೇಳಿದೆ.


    ಹಂತ ಹಂತದಲ್ಲಿ ಪಂದ್ಯಾಟ:


    ಈ ಬಾರಿಯ ಫುಟ್​ಬಾಲ್ ವಿಶ್ವಕಪ್ ಪಂದ್ಯಾಟಕ್ಕೆ ಪೈಪೋಟಿ ನೀಡಲು 32 ತಂಡಗಳು ಆಗಮಿಸಲಿವೆ. ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ ಹಂತಕ್ಕೆ ಪ್ರವೇಶಿಸಲಿವೆ. 8 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ಗಳ ಬಳಿಕ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ.


    ಹಿಂದಿನ ವಿಶ್ವಕಪ್​ಗಿಂತ ಈ ಬಾರಿ ಟಿಕೆಟ್ ಬೆಲೆ ದುಬಾರಿ:


    ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ಫುಟ್​ಬಾಲ್ ವಿಶ್ವಕಪ್ ಅನ್ನು ಆಯೋಜಿಸಲಾಗಿತ್ತು ಅಲ್ಲಿನ ಟಿಕೆಟ್ ದರಕ್ಕೆ ಹೋಲಿಸಿದಾಗ ಈ ಬಾರಿ ಟಿಕೆಟ್ ದರ ಶೇಕಡಾ 40% ರಷ್ಟು ಏರಿಕೆಯಾಗಿದೆ. ಅಂದು ಸುಮಾರು 214 ಪೌಂಡ್​ಗಳಾಗಿದ್ದರೆ (ಭಾರತದಲ್ಲಿ 20 ಸಾವಿರ ರೂಪಾಯಿ) ಇದೀಗ ಕತಾರ್​ನಲ್ಲಿ ಇದು 286 ಪೌಂಡ್​ಗಳಿಗೆ ( ಭಾರತದ 28 ಸಾವಿರ ರೂಪಾಯಿ) ಏರಿಕೆಯಾಗಿದೆ.


    ಹಾಗಿದ್ರೆ 2018ರಲ್ಲಿ ನಡೆದ ವಿಶ್ವಕಪ್​ನ ಟಿಕೆಟ್​ಗಿಂತ ಶೇಕಡಾ 59% ನಷ್ಟು ಏರಿಕೆಯಾಗಿದೆ. ಅಲ್ಲದೆ ಫೈನಲ್‌ ಪಂದ್ಯದ ಅತ್ಯಂತ ದುಬಾರಿ ಟಿಕೆಟ್‌ ಬೆಲೆ 686 ಪೌಂಡ್‌ (ಭಾರತದ 66,689 ರೂಪಾಯಿ.) ಆಗಿದೆ. ಇದು ಕಳೆದ 20 ವರ್ಷಗಳ ವಿಶ್ವಕಪ್‌ ಫುಟ್​ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ದರ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ.

    Published by:Prajwal B
    First published: