ಸ್ಮಾರ್ಟ್ಫೋನ್ಗಳು ಇತ್ತೀಚಿನ ಕಾಲಮಾನದಲ್ಲಿ ಪ್ರತಿಯೊಬ್ಬರ ಅವಶ್ಯಕ ಸಾಧನವಾಗಿಬಿಟ್ಟಿದೆ. ಎಷ್ಟೋ ಜನರಿಗೆ ಈ ಮೊಬೈಲ್ಗಳಿಲ್ಲದೇ ದಿನವೇ ಹೋಗಲ್ಲ ಎಂಬಂತಾಗಿದೆ. ಆದರೆ ಈ ಸ್ಮಾರ್ಟ್ಫೋನ್ಗಳಲ್ಲಿ ಆ್ಯಪ್ಗಳಿಲ್ಲದಿದ್ದರೇ ಮೊಬೈಲ್ ಇದ್ದೂ ಇಲ್ಲದ ಹಾಗೇ. ಯಾವುದೇ ಕೆಲಸವಾಗ್ಬೇಕಾದ್ರೂ ಮೊಬೈಲ್ ಅಪ್ಲಿಕೇಶನ್‌ಗಳು (Mobile Application) ಅತ್ಯಗತ್ಯವಾಗಿದೆ. ಆದರೆ ಇದನ್ನೇ ಕೆಲವರು ಲಾಭವನ್ನಾಗಿಟ್ಟುಕೊಂಡು ಕುತಂತ್ರಗಳನ್ನು ಮಾಡಲಾರಂಭಿಸಿದ್ದಾರೆ. ಆದರೆ ಇದನ್ನು ತಡೆಗಟ್ಟುವ ಉದ್ದೇಶದಿಂದ ಗೂಗಲ್ (Google) ಹೊಸ ನಿರ್ಧಾರಕ್ಕೆ ಮುಂದಾಗಿದೆ. ಬಳಕೆದಾರರು ತಮಗೆ ಅಗತ್ಯಕ್ಕೆ ತಕ್ಕಂತೆ ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ (Apple App Store) ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುತ್ತಾರೆ. ಆದರೆ ಕೆಲವೊಂದು ಆ್ಯಪ್ ಗಳು ಫೇಕ್ ಆಗಿ ಕ್ರಿಯೇಟ್ ಆಗಿರುತ್ತದೆ.
ಹೌದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಬಳಕೆದಾರರಿಗೆ ಹಲವಾರು ಅಪ್ಲಿಕೇಶನ್ಗಖು ಕಾನಸಿಗುತ್ತವೆ. ಆದರೆ ಇವುಗಳಲ್ಲಿ ಯಾವುದು ಫೇಕ್ ಯಾವುದು ರಿಯಲ್ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ಇದರಲ್ಲಿ ಕೆಲವೊಂದು ಅಪ್ಲಿಕೇಶನ್‌ಗಳು ಬಳಕೆದಾರರನ್ನು ದಾರಿತಪ್ಪಿಸುವ ಉದ್ದೇಶವನ್ನು ಬಹೊಂದಿರುತ್ತದೆ. ಇದೀಗ ಗೂಗಲ್ ಅಂತಹ 12 ಜನಪ್ರಿಯ ಆ್ಯಪ್ಗಳನ್ನು ಡಿಲೀಟ್ ಮಾಡಿದೆ. ನೋಡಿದ್ರೆ ನೀವು ಶಾಕ್ ಆಗ್ತೀರಾ.
ಗೂಗಲ್ನಿಂದ ಎಚ್ಚರಿಕೆ
ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 12 ಜನಪ್ರಿಯ ಆ್ಯಪ್ಗಳನ್ನು ತೆಗೆದುಹಾಕಿದ್ದು, ಈ ಅಪ್ಲಿಕೇಶನ್‌ಗಳು ಅಪಾಯಕಾರಿ ಎಂದು ಸಾಬೀತಾಗಿರುವ ಕಾರಣ ಅವುಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿದೆ. ಮುಖ್ಯ ವಿಷಯವೇನೆಂದರೆ ಈ ತೆಗೆದು ಹಾಕಲಾದ ಆ್ಯಪ್ಗಳೆಲ್ಲವೂ ಲಕ್ಷಾಂತರ ಡೌನ್ಲೋಡ್ಗಳನ್ನು ಪಡೆದುಕೊಂಡಿದೆ.
ಗೂಗಲ್ ತೆಗೆದುಹಾಕಲಾದ ಆ್ಯಪ್ಗಳು ಯಾವುದೆಲ್ಲಾ?
ಗೂಗಲ್ ಪ್ಲೇ ಸ್ಟೋರ್ನಲ್ಲಿ ಬಳಕೆದಾರರನ್ನು ಮೋಸ ಮಾಡುತ್ತಿದ್ದ ಆ್ಯಪ್ಗಳಲ್ಲಿ ಹೆಚ್ಚಾಗಿ ಫಿಟ್ನೆಸ್ಗೆ ಸಂಬಂಧಪಟ್ಟ ಆ್ಯಪ್ಗಳೇ ಇದೆ. ಇದರಲ್ಲಿ ಲಕ್ಕಿ ಸ್ಟೆಪ್ ಎಂಬ ಆ್ಯಪ್ 10 ಮಿಲಿಯನ್ ಇನ್‌ಸ್ಟಾಲ್ ಅನ್ನು ಪಡೆದುಕೊಂಡಿದೆ. ವಾಕಿಂಗ್ ಜಾಯ್ ಆ್ಯಪ್ ಇದು 5 ಮಿಲಿಯನ್ ಇನ್‌ಸ್ಟಾಲ್ ಅನ್ನು ಪಡೆದಿದೆ. ಹಾಗೆಯೇ ಲಕ್ಕಿ ಹ್ಯಾಬಿಟ್ ಎಂಬ ಆ್ಯಪ್ 5 ಮಿಲಿಯನ್ ಇನ್‌ಸ್ಟಾಲ್ ಅನ್ನು ಹೊಂದಿದೆ.
ಗೇಮಿಂಗ್ ಅಪ್ಲಿಕೇಶನ್‌ಗಳು
ಇನ್ನು ಗೂಗಲ್ನ ಗೇಮಿಂಗ್ ಅಪ್ಲಿಕೇಶನ್ಗಳಲ್ಲಿ ಗೋಲ್ಡನ್ ಹಂಟ್ ಆ್ಯಪ್ 100K ಇನ್‌ಸ್ಟಾಲ್ ಆಗಿದ್ದರೆ, ರಿಫ್ಲೆಕ್ಟರ್ ಸಹ 100K ಇನ್‌ಸ್ಟಾಲ್ ಅನ್ನು ಹೊಂದಿದೆ. ಇನ್ನು ಸೆವೆನ್ ಗೋಲ್ಡನ್ ವೂಲ್ಫ್ ಬ್ಲ್ಯಾಕ್‌ಜಾಕ್ ಎಂಬ ಆ್ಯಪ್ ಕೂಡ 100K ಇನ್‌ಸ್ಟಾಲ್ ಅನ್ನು ಪಡೆದುಕೊಂಡಿದೆ. ಇದೀಗ ಗೂಗಲ್ ಈ ಎಲ್ಲಾ ಆ್ಯಪ್ಗಳನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.
ಇದರೊಂದಿಗೆ ಅನ್‌ಲಿಮಿಟೆಡ್ ಸ್ಕೋರ್ 50K ಇನ್‌ಸ್ಟಾಲ್ ಆಗಿದ್ದರೆ, ಬಿಗ್ ಡಿಸಿಶನ್ 50K ಇನ್‌ಸ್ಟಾಲ್ ಹೊಂದಿದೆ ಹಾಗೂ ಜುವೆಲ್ ಸೀ ಲಕ್ಸ್ ಪ್ರೂಟ್ಸ್ ಗೇಮ್, ಲಕ್ಕಿ ಕ್ಲೋವರ್ ಆ್ಯಪ್, ಕಿಂಗ್ ಬ್ಲಿಟ್ಜ್ ಮತ್ತು ಲಕ್ಕಿ ಹಮ್ಮರ್ ಆ್ಯಪ್ಗಳನ್ನು ಸಹ ಗೂಗಲ್ ಡಿಲೀಟ್ ಮಾಡಿದೆ.
ಕಾರಣವೇನು ಗೊತ್ತಾ?
ಲಕ್ಷಾಂತರ ಬಳಕೆದಾರರು ಈ ಫಿಟ್ನೆಸ್ ಮತ್ತು ಗೇಮಿಂಗ್ಗೆ ಸಂಬಂಧಿಸಿದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಇದರಲ್ಲಿ 12 ಅಪ್ಲಿಕೇಶನ್ಗಳನ್ನು ಅಪಾಯಕಾರಿ ಅಪ್ಲಿಕೇಶನ್ಗಳೆಂದು ಗುರುತಿಸಲಾಗಿದೆ. ಈ ಆ್ಯಪ್ಗಳು ಅಪಾಯಕಾರಿ ವೆಬ್ಸೈಟ್ಗಳ ಲಿಂಕ್ಗಳನ್ನು ಕ್ಲಿಕ್ ಮಾಡಿಸಲು ಬಳಕೆದಾರರನ್ನು ಪ್ರೇರೇಪಿಸಿದೆ. ಇದನ್ನು ನೋಡಿದ ಬಳಕೆದಾರರು ಆ ಲಿಂಕ್ ಅನ್ನು ಓಪನ್ ಮಾಡಿ, ಅದರಲ್ಲಿ ನೀಡಲಾಗಿರುವ ಪ್ರಶ್ನೆಗಳಿಗೆ ಡೀಟೇಲ್ಸ್ ಅನ್ನು ಭರ್ತಿ ಮಾಡಿ, ಮೋಸದ ಜಾಲಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2023; ಹೊಸ ಲ್ಯಾಪ್ಟಾಪ್ ಅನಾವರಣ ಮಾಡಿದ ಕಂಪೆನಿ!
ಈ ನಿಷೇಧಿತ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ವಾಕಿಂಗ್ ಮತ್ತು ವ್ಯಾಯಾಮದ ವಿಷಯದಲ್ಲಿ ಅಂಕಗಳನ್ನು ಗಳಿಸಬಹುದಾದ ಆಯ್ಕೆಗಳನ್ನು ನೀಡಿ ನಂತರ ಬಹುಮಾನದ ಭರವಸೆ ನೀಡಿವೆ. ಇದನ್ನು ನಂಬಿದ ಬಳಕೆದಾರರು ಹಣವನ್ನು ಪಡೆಯಲು ನೀಡಲಾದ ಸೈಟ್ ಗೆ ಪ್ರವೇಶ ಪಡೆದಾಗ ಯಾವುದೇ ಬಹುಮಾನವನ್ನು ಕ್ಲೈಮ್ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಎಷ್ಟೋ ಜನರು ಮೋಸ ಹೋಗಿದ್ದಾರೆ. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಗಮನಿಸಿದ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಹೊರಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ