Google Chrome: ಹೊಸ ಅವತಾರದಲ್ಲಿ ಗೂಗಲ್​ ಕ್ರೋಮ್​.. 8 ವರ್ಷಗಳ ಬಳಿಕ ಲೋಗೋದಲ್ಲಿ ಹೀಗೊಂದು ಬದಲಾವಣೆ!

New Logo: ಹೊಸ ಗೂಗಲ್​ ಕ್ರೋಮ್​ ಲೋಗೋವನ್ನು ವಿಂಡೋಸ್ 10 ಮತ್ತು 11 ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ಐಕಾನ್ ಈ ರೂಪಾಂತರಗಳಲ್ಲಿ ಉತ್ತಮವಾಗಿ ಕಾಣುತ್ತದೆ.

Google Chrome / ಗೂಗಲ್​ ಕ್ರೋಮ್

Google Chrome / ಗೂಗಲ್​ ಕ್ರೋಮ್

  • Share this:
    ಬದಲಾವಣೆ ಪ್ರಕೃತಿಯ ನಿಯಮ. ಹಾಗಾಗಿ ಕೆಲವೊಂದು ಸಂಗತಿಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಪ್ರಾಣಿಗಳು (Animals), ಮನುಷ್ಯರು (Human beings), ಭೂಮಿ (Earth), ತಂತ್ರಜ್ಞಾನವು (Technology) ಕೂಡ ಬದಲಾವಣೆಯಾಗುತ್ತದೆ. ಅದರಂತೆಯೇ ಇದೀಗ ಜನಪ್ರಿಯ ಗೂಗಲ್​ ಕ್ರೋಮ್​ನಲ್ಲಿಯೂ (Google Chrome) ಬದಲಾವಣೆ ಕಂಡಿದೆ. ಹೌದು. 2014 ರ ನಂತರ ಗೂಗಲ್ ಕ್ರೋಮ್ ತನ್ನ ಲೋಗೋವನ್ನು(Logo) ಬದಲಾಯಿಸುತ್ತಿದೆ. ಕ್ರೋಮ್​ಗಾಗಿ ಕೆಲಸ ಮಾಡುವ ಡಿಸೈನರ್ ಎಲ್ವಿನ್ ಹು (Elvin Hu) ಅವರು ತಮ್ಮ ಟ್ವಿಟರ್ (Twitter) ಹ್ಯಾಂಡಲ್​ನಲ್ಲಿ ಹೊಸ ಲೋಗೋದ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಹೊಗ ಲೋಗೋ ತೊಡಲಿರುವ ಗೂಗಲ್​

    ಎಲ್ವಿನ್​ ಅವರು, ‘ನಾವು 8 ವರ್ಷಗಳಲ್ಲಿ ಮೊದಲ ಬಾರಿಗೆ Chrome ನ ಬ್ರ್ಯಾಂಡ್ ಐಕಾನ್ ಅನ್ನು ರಿಫ್ರೆಶ್ ಮಾಡುತ್ತಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ. ಹೊಸ ಐಕಾನ್ ಶೀಘ್ರದಲ್ಲೇ ನಿಮ್ಮ ಸಾಧನದಲ್ಲಿ ಗೋಚರಿಸುತ್ತದೆ. ಹೊಸ ಲೋಗೋದಲ್ಲಿ, ಮೂರು ಬಣ್ಣಗಳು - ಕೆಂಪು, ಹಳದಿ ಮತ್ತು ಹಸಿರು ಬಣ್ಣದಿಂದ ಕೂಡಿದೆ. ಅಲ್ಲದೆ, ಮಧ್ಯದಲ್ಲಿ ನೀಲಿ ವೃತ್ತವು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ.

    ಪ್ರತಿ OS ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ

    ಎಲ್ವಿನ್​ ಅವರು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಅಕ್ಕಪಕ್ಕದಲ್ಲಿ ಹಾಕುವುದು ವಿಚಿತ್ರವಾದ ಭಾವನೆಯನ್ನು ನೀಡುತ್ತದೆ ಎಂದು ಅವರು ತಮ್ಮ ಟ್ವಿಟರ್​ನಲ್ಲಿ ಉಲ್ಲೇಖಿಸಿದ್ದಾರೆ, ಆದ್ದರಿಂದ ತಂಡವು ಮ್ಯಾನ್ ಐಕಾನ್​ಗಾಗಿ ಅಂತಹ ವಿನ್ಯಾಸವನ್ನು ರಚಿಸಿದೆ. ತಂಡವು ಇದನ್ನು ನಿರ್ದಿಷ್ಟವಾಗಿ ಆಪರೇಟಿಂಗ್ ಸಿಸ್ಟಮ್​ಗಾಗಿ ಮಾಡಿದೆ. ಅಂದರೆ ಇದು ಇತರ ಐಕಾನ್​ಗಳಿಗಿಂತ ಹೆಚ್ಚು ವರ್ಣರಂಜಿತವಾಗಿ ಕಾಣುತ್ತದೆ. ಆದಾಗ್ಯೂ, ಮೇಕ್ ಆಪರೇಟಿಂಗ್ ಸಿಸ್ಟಂನಲ್ಲಿ ಲೋಗೋ ಚಿಕ್ಕದಾಗಿ ಕಾಣಿಸುತ್ತದೆ.

    ಎಲ್ಲ ಸೌಲಭ್ಯಗಳು ದೊರೆಯಲಿವೆ

    ಹೊಸ ಗೂಗಲ್​ ಕ್ರೋಮ್​ ಲೋಗೋವನ್ನು ವಿಂಡೋಸ್ 10 ಮತ್ತು 11 ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ಐಕಾನ್ ಈ ರೂಪಾಂತರಗಳಲ್ಲಿ ಉತ್ತಮವಾಗಿ ಕಾಣುತ್ತದೆ.

    ಇದನ್ನು ಓದಿ: Electric car ಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದೀರಾ? ಯಾವ ಕಾರು ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    ಬದಲಾವಣೆಯ ಹಿಂದಿನ ಕಾರಣವನ್ನು ವಿವರಿಸಿದ ಆಲ್ವಿನ್, ಇದು ಹೇಗೆ ಸೂಕ್ತ ಎಂದು ನೀವು ಕೇಳಬಹುದು ಎಂದು ಹೇಳಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ, ಎಲ್ಲಾ ರೀತಿಯ ಆಪರೇಟಿಂಗ್ ಸಿಸ್ಟಮ್​ಗಳಿಗೆ ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲು ಬಯಸುತ್ತೇನೆ. ಇದು Windows ನಲ್ಲಿ ಸ್ಥಳೀಯ ವಿಂಡೋ ಮುಚ್ಚುವಿಕೆ, Mac OS ನಲ್ಲಿ ಡೇ-ಒನ್ M1 ಬೆಂಬಲ, iOS/Android ನಲ್ಲಿ ವಿಜೆಟ್​ಗಳು ಮತ್ತು Android ನಲ್ಲಿ Material U ನೊಂದಿಗೆ ಬರುತ್ತದೆ. ನಮ್ಮ ಬ್ರ್ಯಾಂಡ್ ತನ್ನ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.





    ಇದನ್ನು ಓದಿ: Realme 9 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ 12 ದಿನಗಳು ಬಾಕಿ..! ವಿವರ ಇಲ್ಲಿದೆ ನೋಡಿ

    ಕ್ರೋಮ್​ ಲೋಗೋ ಬದಲಾವಣೆಯ ಸುದ್ದಿಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಈ ಕುರಿತು ಜನರಿಂದ ಮೀಮ್​ಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಹಳೆಯ ಮತ್ತು ಹೊಸ ಲೋಗೋ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ನೆಟಿಜನ್​ಗಳು ನಂಬುತ್ತಾರೆ.
    Published by:Harshith AS
    First published: