Sundar Pichai | ನನ್ನ ದಿನಚರಿ ಎಲ್ಲ ಸಾಂಪ್ರದಾಯಿಕ ಮನೆಗಳಲ್ಲಿ ಇರುವಂತೆಯೇ ಇತ್ತು; ಗೂಗಲ್ ಸಿಇಒ ಸುಂದರ್ ಪಿಚೈ

Google CEO Sundar Pichai: ಸುಂದರ್ ಪಿಚೈ, ಚೆನ್ನೈನಲ್ಲಿ ಬೆಳೆದು ಕನಸುಗಳನ್ನು ನನಸಾಗಿಸಿಕೊಳ್ಳುವ ಸಲುವಾಗಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದಿದೆ ಎಂದು ವೈಯಕ್ತಿಕ ಓದು ಬದುಕನ್ನು ವಿವರಿಸುತ್ತಾರೆ.

ಗೂಗಲ್ ಸಿಇಒ ಸುಂದರ್ ಪಿಚೈ

ಗೂಗಲ್ ಸಿಇಒ ಸುಂದರ್ ಪಿಚೈ

 • Share this:
  Google CEO Sundar Pichai: ಸಾಮಾನ್ಯವಾಗಿ ಭಾರತೀಯ ಸಾಂಪ್ರದಾಯಿಕ ಮನೆಗಳಲ್ಲಿ ಬೆಳ್ಳಂಬೆಳಗ್ಗೆ ಏಳುವುದು ರೂಢಿ. ಈ ಅಭ್ಯಾಸವು ನನ್ನಲ್ಲಿಯೂ ಇತ್ತು. ನಾನು ಬೆಳಿಗ್ಗೆ ಬೇಗನೇ ಎದ್ದೇಳುತ್ತಿದ್ದೆ ಎನ್ನುತ್ತಾರೆ ಗೂಗಲ್ ಸಿಇಒ ಸುಂದರ್ ಪಿಚೈ.

  ನೀವು ದೇಸಿ ಮನೆಯಲ್ಲಿ ಬೆಳೆದಿದ್ದರೆ, ಪ್ರಪಂಚದಾದ್ಯಂತ ಏನೇ ಇರಲಿ, ಪೋಷಕರು ಮಕ್ಕಳಿಗೆ ನೀಡುವ ಸಲಹೆ ಎಂದರೆ ಬೇಗನೆ ಎದ್ದೇಳಿ ಎಂದು. ಜೊತೆಗೆ ವಾಕ್ ಹೋಗಿ, ಹಣ್ಣುಗಳನ್ನು ತಿನ್ನಿರಿ, ಫೋನ್ ಬಳಸಬೇಡಿ ಹೀಗೆ ದೇಸಿ ಪೋಷಕರು ಧಾರ್ಮಿಕವಾಗಿ ಈ ಸಲಹೆಯನ್ನು ನೀಡುತ್ತಾರೆ ಮತ್ತು ಅನುಸರಿಸುತ್ತಾರೆ. ಇದರಲ್ಲಿ ಪತ್ರಿಕೆಗಳನ್ನು ಓದುವುದು ಮತ್ತು ಟೀ ಕುಡಿಯುತ್ತಾ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಒಳಗೊಂಡಿರುತ್ತದೆ.ಬಹುತೇಕ ಮೂಲ ಸಂಸ್ಕೃತಿಯಂತೆಯೇ, 'ನೀವು ಮುಂಜಾನೆ ಎದ್ದರೆ, ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ' ಎಂಬ ಈ ಸಂಪ್ರದಾಯವು ತಲೆಮಾರಿನಿಂದ ತಲೆಮಾರಿಗೆ ಬಂದಿದೆ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಕೂಡ ಬೆಳಗ್ಗಿನ ದಿನಚರಿಯನ್ನು ಅನುಸರಿಸುತ್ತಾರೆ. ಈ ದಿನಚರಿಯು ನನಗೂ ಹೋಲುತ್ತದೆ ಎಂದು ಹೇಳುತ್ತಾರೆ.

  2016 ರಲ್ಲಿ ರೀಕೋಡ್‍ಗೆ ನೀಡಿದ ಸಂದರ್ಶನದಲ್ಲಿ, ಪಿಚೈ ಗೂಗಲ್‍ಗೆ ಹೋಗುತ್ತಿದ್ದಾಗ, ಅವರು ತಮ್ಮ ಬೆಳಗಿನ ದಿನಚರಿಯ ಬಗ್ಗೆ ವಿವರಿಸಿದರು. ಪಿಚೈ ಕೂಡ ಬೇಗನೆ ಏಳುವತ್ತ ಗಮನ ಹರಿಸುತ್ತಾರೆ. ಪಿಚೈ ಸಂದರ್ಶನದಲ್ಲಿ ತನ್ನ ದಿನವನ್ನು ಬೇಗನೆ ಆರಂಭಿಸಲು ಇಷ್ಟಪಡುತ್ತೇನೆ ಆದರೆ ಪ್ರತಿದಿನ ಬೆಳಿಗ್ಗೆ 6:30 ರಿಂದ 7 ಗಂಟೆಗೆ ಮುಂಚಿತವಾಗಿ ಅಲ್ಲ ಎನ್ನುತ್ತಾರೆ.

  ಬಹುತೇಕ ಭಾರತೀಯ ಮನೆಗಳಲ್ಲಿ ಬೆಳ್ಳಂಬೆಳಗ್ಗೆ ದಿನಪತ್ರಿಕೆಯನ್ನು ಕೈಯಲ್ಲಿ ಹಿಡಿದು ಕೂರುವುದು ಸಾಮಾನ್ಯ ಸಂಗತಿ. ನಾನು ವಾಲ್ ಸ್ಟ್ರೀಟ್ ಜರ್ನಲ್ ಓದುತ್ತೇನೆ ಮತ್ತು ಕೆಲವೊಮ್ಮೆ ನ್ಯೂಯಾರ್ಕ್ ಟೈಮ್ಸ್ ಅನ್ನು ಆನ್‍ಲೈನ್‍ನಲ್ಲಿ ಓದುತ್ತೇನೆ ಎನ್ನುತ್ತಾರೆ.

  ಸಂದರ್ಶನದಲ್ಲಿ, ಪಿಚೈ ಅವರು ಭಾರತದಲ್ಲಿ ಬೆಳೆದ ಕಾರಣ ಮತ್ತು ಈ ಬೆಳಗಿನ ದಿನಚರಿಯನ್ನು ಮಾಡುವ ಅಭ್ಯಾಸವು ವರ್ಷಗಳ ನಂತರವೂ ತಮ್ಮೊಂದಿಗೆ ಅಂಟಿಕೊಂಡಿದೆ ಮತ್ತು ಟೀ ಕುಡಿಯುವುದನ್ನು ಸಹ ಒಳಗೊಂಡಿದೆ ಎಂದು ಉಲ್ಲೇಖಿಸಿದ್ದಾರೆ. ಏನು ತಿಂಡಿ ಮಾಡಬೇಕೆಂದು ತಿಳಿಯದಿದ್ದಾಗ ಅವರ ಉಪಹಾರವು ಟೋಸ್ಟ್, ಆಮ್ಲೆಟ್ ಮತ್ತು ಚಹಾ. ಇದು ನನಗೆ ಸರಿಹೊಂದುವುದಿಲ್ಲ. ಹಾಗಾಗಿ ತಡವಾಗಿಯಾದರೂ ಬೇರೆ ಕಂಡುಕೊಳ್ಳುತ್ತೇನೆ. "ನಾನು ಬೆಳಗಿನ ವ್ಯಕ್ತಿಯಲ್ಲ, ಹಾಗಾಗಿ ನನ್ನ ಪೇಪರ್ ಮತ್ತು ನನ್ನ ಚಹಾದೊಂದಿಗೆ ಏಳಲು ನಾನು ಸಮಯ ತೆಗೆದುಕೊಳ್ಳುತ್ತೇನೆ.

  ಸುಂದರ್ ಪಿಚೈ, ಚೆನ್ನೈನಲ್ಲಿ ಬೆಳೆದು ಕನಸುಗಳನ್ನು ನನಸಾಗಿಸಿಕೊಳ್ಳುವ ಸಲುವಾಗಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದಿದೆ ಎಂದು ವೈಯಕ್ತಿಕ ಓದು ಬದುಕನ್ನು ವಿವರಿಸುತ್ತಾರೆ. ಪಿಚೈ ಪ್ರಸ್ತುತ ಗೂಗಲ್‍ನ ಮಾತೃ ಸಂಸ್ಥೆ ಆಲ್ಫಾಬೆಟ್‍ನ ಮುಖ್ಯಸ್ಥರಾಗಿದ್ದಾರೆ. ಸುಂದರ್ ಪಿಚೈ ಇದೀಗ ವಿಶ್ವದ ಟೆಕ್ ದೈತ್ಯರಲ್ಲಿ ಒಬ್ಬರಾಗಿದ್ದಾರೆ.

  27 ವರ್ಷಗಳ ಹಿಂದೆ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕೋರ್ಸ್‍ಗಾಗಿ ಭಾರತದಿಂದ ಅಮೆರಿಕಕ್ಕೆ ಹೋದಾಗ ಎದುರಿಸಿದ ಸವಾಲುಗಳನ್ನು ಪಿಚೈ ಜೂನ್ 2020 ರಲ್ಲಿ ವಿವರಿಸಿದರು. ನನ್ನ ತಂದೆಯು ಅವರ ಒಂದು ವರ್ಷದ ಸಂಬಳವನ್ನು ಅಮೆರಿಕದ ನನ್ನ ವಿಮಾನ ಟಿಕೆಟ್‍ಗೆ ಖರ್ಚು ಮಾಡಿದರು ಹಾಗಾಗಿ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸುವ ಮೂಲಕ ನಾನು ಸ್ಟ್ಯಾನ್‍ಫೋರ್ಡ್ ಗೆ ಹಾಜರಾಗಲು ಸಾಧ್ಯವಾಯಿತು ಎಂದು ಪಿಚೈ ಹೇಳಿದರು, ಅವರು ಅಂತಿಮವಾಗಿ ಕ್ಯಾಲಿಫೋರ್ನಿಯಾದಲ್ಲಿ ಬಂದಿಳಿದಾಗ, ಅವರು ಊಹಿಸಿದಂತೆ ಇರಲಿಲ್ಲ.

  ಇದನ್ನು ಓದಿ: Smartphones: ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಖರೀದಿಸಬೇಕೇ..? ಹಾಗಾದರೆ ಇಲ್ಲಿವೆ ನೋಡಿ

  ಚೆನ್ನೈನಲ್ಲಿ ಬೆಳೆದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದಿದ ಪಿಚೈ, ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ವಾರ್ಟನ್ ಶಾಲೆಯಿಂದ ಎಂಬಿಎ ಪಡೆದಿದ್ದಾರೆ. ಅವರು 2004 ರಲ್ಲಿ ಗೂಗಲ್ ಸಂಸ್ಥೆಗೆ ಸೇರಿಕೊಂಡರು ಮತ್ತು ಗೂಗಲ್ ಟೂಲ್‍ಬಾರ್ ಮತ್ತು ನಂತರ ಗೂಗಲ್ ಕ್ರೋಮ್‍ನ ಅಭಿವೃದ್ಧಿಗೆ ಕಾರಣರಾದರು, ಇದು ವಿಶ್ವದ ಅತ್ಯಂತ ಜನಪ್ರಿಯ ಇಂಟರ್ನೆಟ್ ಬ್ರೌಸರ್ ಆಗಿ ಬೆಳೆಯಿತು.
  First published: