ಪ್ರಸಿದ್ಧ ಟೆಕ್ನಾಲಜಿ ಕಂಪನಿಗಳಲ್ಲಿ (Technology) ಗೂಗಲ್ (Google) ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ (Smartphone) ಬಳಕೆದಾರರು ಯಾವುದೇ ವಿಷಯಗಳನ್ನು ಸರ್ಚ್ ಮಾಡಬೇಕಾದರು ಗೂಗಲ್ ಅನ್ನೇ ಅನುಸರಿಸುತ್ತಾರೆ. ಕ್ಷಣಮಾತ್ರದಲ್ಲಿ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ನೀಡುವಂತಹ ಒಂದು ಟೆಕ್ ಕಂಪನಿಯಿದ್ದರೆ ಅದು ಗೂಗಲ್. ಈ ಕಂಪನಿ ದಿನದಿಂದ ದಿನಕ್ಕೆ ತನ್ನ ಬಳಕೆದಾರರಿಗಾಗಿ ಏನಾದರು ಅಪ್ಡೇಟ್ಸ್ಗಳನ್ನು ನೀಡುತ್ತಲೇ ಇದೆ. ಇದೀಗ ಬಳಕೆದಾರರಿಗಾಗಿ ಹೊಸ ಫೀಚರ್ ಅನ್ನು ಒದಗಿಸುತ್ತಿದೆ. ಇನ್ನು ಮುಂದೆ ದೇಶದ ಯಾವುದೇ ಭಾಷೆಗಳಲ್ಲಿ ಮಾಹಿತಿ ಬೇಕಾದರು ಸರ್ಚ್ ಮಾಡಬಹುದು ಮತ್ತು ಅದೇ ಭಾಷೆಯಲ್ಲಿ ಮಾಹಿತಿಯನ್ನು ಕೂಡ ಪಡೆಯಬಹುದು. ಇದರ ಜೊತೆಗೆ ವಾಯ್ಸ್ ಸರ್ಚ್ (Voice Search) ಮಾಡುವಂತಹ ಆಯ್ಕೆ ಕೂಡ ಇದೆ.
ಇನ್ಮುಂದೆ ಭಾರತದಲ್ಲಿ ಗೂಗಲ್ನಲ್ಲಿ 100 ಭಾಷೆಗಳಲ್ಲಿ ಯಾವುದೇ ವಿಷಯವನ್ನು ಟೆಕ್ಸ್ಟ್, ವಾಯ್ಸ್ ಮೂಲಕ ಸರ್ಚ್ ಮಾಡುವಂತಹ ಅವಕಾಶವನ್ನು ಕಲ್ಪಿಸುವಂತೆ ಗೂಗಲ್ ಅಭಿವೃದ್ಧಿಪಡಿಸುತ್ತಿದೆ ಎಂದು ಗೂಗಲ್ನ ಸಿಇಒ ಸುಂದರ್ ಪಿಚೈ ಅವರು ತಿಳಿಸಿದ್ದಾರೆ. ಇದು ಬಳಕೆದಾರರ ಅನುಕೂಲಕ್ಕಾಗಿ ಅಪ್ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಸಿಇಒ ಭಾರತಕ್ಕೆ ಆಗಮನ
‘10 ವರ್ಷಗಳಲ್ಲಿ ಭಾರತದ ಡಿಜಿಟಲೈಸೇಷನ್ ಮಾಡುವ ಉದ್ದೇಶದಿಂದ ನಾವು ಘೋಷಿಸಿದ್ದ 10 ಶತಕೋಟಿ ಡಾಲರ್ ನಿಧಿ ಉತ್ತಮವಾಗಿ ಬಳಕೆಯಾಗುತ್ತಿರುವುದನ್ನು ಕಾಣಲು ಮತ್ತು ಹೊಸ ದಾರಿಗಳನ್ನು ಹಂಚಿಕೊಳ್ಳಲು ನಾನಿಲ್ಲಿಗೆ ಆಗಮನಿಸಿದ್ದೇನೆ. ಭಾರತದ ಡಿಜಿಟಲ್ ಯುಗವನ್ನು ಇನ್ನಷ್ಟು ಅಭಿವೃದ್ಧಿಯನ್ನು ಮಾಡುವ ಉದ್ದೇಶಕ್ಕಾಗಿ ನಾವು ನೆರವು ನೀಡುತ್ತಿದ್ದೇವೆ’ ಎಂದು ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಲಾನ್ ಮಸ್ಕ್ ಅವರ ಟ್ವಿಟರ್ ಒಡೆತನ ಕೈತಪ್ಪುತ್ತಾ? ಜನ ಏನ್ ಹೇಳ್ತಾರೆ ನೀವೇ ನೋಡಿ
ಜನರಿಗೆ ಬೇಕಾದ ಭಾಷೆಯಲ್ಲಿ ಸರ್ಚ್ ಮಾಡುವ ಅವಕಾಶ
ಹೌದು, ಇದುವರೆಗೆ ಗೂಗಲ್ನಲ್ಲಿ ಕೆಲವೊಂದಿಷ್ಟು ಭಾಷೆಗಳಲ್ಲಿ ಮಾತ್ರ ಸರ್ಚ್ ಮಾಡಿ ಅದರ ಉತ್ತರವನ್ನು ಪಡೆಯಬಹುದಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ಭಾಷೆಗಳ ಸಂಖ್ಯೆಯನ್ನು 100ಕ್ಕೆ ಏರಿಸಿದ್ದಾರೆ. ಈ ಮೂಲಕ ಜನರು ಅವರಿಗೆ ಬೇಕಾದ ಭಾಷೆಗಳಲ್ಲಿ ಸರ್ಚ್ ಮಾಡುವಂತಹ ಅವಕಾಶವನ್ನು ಕಲ್ಪಿಸುತ್ತದೆ. ಇದರ ಬಗ್ಗೆ ಗೂಗಲ್ ಎಐ ಮಾದರಿ ಮೂಲಕ ಅಭಿವೃದ್ಧಿ ಮಾಡಲು ಯೋಜನೆ ನಡೆಸುತ್ತಿದೆ.
773 ಜಿಲ್ಲೆಗಳಿಂದ ದತ್ತಾಂಶ ಸಂಗ್ರಹ
ಭಾಷಾ ಅನುವಾದ ಮತ್ತು ಸರ್ಚ್ ತಂತ್ರಜ್ಞಾನವನ್ನು ಗೂಗಲ್ನಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ದೇಶದ 773 ಜಿಲ್ಲೆಗಳಿಂದ ಮಾತಿನ ಡೇಟಾಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿ ಬೆಂಗಳೂರಿನ ಐಐಎಸ್ಸಿ ಜತೆ ಸಹಭಾಗಿತ್ವ ಹೊಂದಲಾಗಿದೆ ಎಂದು ಗೂಗಲ್ ತಿಳಿಸಿದೆ. ಅಲ್ಲದೆ, ಭಾರತದಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟಪ್ಗಳಲ್ಲಿ ಹೂಡಿಕೆ ಮಾಡಲು ಗೂಗಲ್ ಸಿದ್ಧತೆ ನಡೆಸುತ್ತಿದೆ ಎಂದೂ ಹೇಳಿದೆ.
ಗೂಗಲ್ನಲ್ಲಿ ಇನ್ಮುಂದೆ ಆನ್ಲೈನ್ ಪ್ರೊಡಕ್ಟ್ಗಳ ಬೆಲೆ ಇಳಿಕೆಯಾದರೂ ನಾಟಿಫಿಕೇಶನ್ ಬರ್ತದೆ
ಇದುವರೆಗೆ ಯಾವುದೇ ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಖರೀದಿ ಮಾಡಬೇಕಿದ್ದರೂ ಇಕಾಮರ್ಸ್ ವೆಬ್ಸೈಟ್ ಅಥವಾ ಗೂಗಲ್ಗೆ ಹೋಗಿ ಖರೀದಿ ಮಾಡುತ್ತಿದ್ದರು. ಇನ್ನೂ ಕೆಲವರು ಕೆಲವೊಂದು ಪ್ರೊಡಕ್ಟ್ಗಳ ಬೆಲೆ ಕಡಿಮೆ ಆಗ್ಬೇಕೆಂದು ಕಾಯ್ತಾ ಇರ್ತಾರೆ.
ಹೀಗಿರುವಾಗ ಗೂಗಲ್ ಅಥವಾ ವೆಬ್ಸೈಟ್ಗಳನ್ನು ರಿಫ್ರೆಶ್ ಮಾಡುವ ಮೂಲಕ ಬೆಲೆ ಕಡಿಮೆಯಾಗಿದೆಯಾ ಎಂದು ನೋಡಬೇಕಿತ್ತು. ಆದರೆ ಇನ್ಮುಂದೆ ಗೂಗಲ್ ಕ್ರೋಮ್ ಮೂಲಕ ಬಳಕೆದಾರರಿಗೆ ನಾಟಿಫಿಕೇಶನ್ ಹೋಗುತ್ತದೆ. ಇದು ಗೂಗಲ್ ತಂದಿರುವಂತಹ ಹೊಸ ಫೀಚರ್ ಆಗಿದೆ. ಇನ್ಮುಂದೆ ಯಾವುದೇ ಪ್ರೊಡಕ್ಟ್ ಬಗ್ಗೆ ನೀವು ಗೂಗಲ್ನಲ್ಲಿ ಹುಡುಕಿದಾಗ ಟ್ರ್ಯಾಕ್ ಮಾಡಿ ನಂತರ ಆ ಪ್ರೊಡಕ್ಟ್ನ ಬೆಲೆ ಕಡಿಮೆಯಾದಾಗ ಬಳಕೆದಾರರಿಗೆ ಜಿಮೇಲ್ ಮೂಲಕ ನಾಟಿಫಿಕೇಶನ್ ಅನ್ನು ಗೂಗಲ್ ಕ್ರೋಮ್ ವತಿಯಿಂದ ಕಳುಹಿಸುತ್ತದೆ. ಇದು ಗೂಗಲ್ನ ಹೊಸ ಅಪ್ಡೇಟ್ಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ