ಆರೋಗ್ಯಕ್ಕಾಗಿ ಗೂಗಲ್; ಭಾರತಕ್ಕೂ ಬಂತು ಹೆಲ್ತ್ ಸರ್ಚ್


Updated:February 28, 2018, 5:22 PM IST
ಆರೋಗ್ಯಕ್ಕಾಗಿ ಗೂಗಲ್; ಭಾರತಕ್ಕೂ ಬಂತು ಹೆಲ್ತ್ ಸರ್ಚ್

Updated: February 28, 2018, 5:22 PM IST
- ನ್ಯೂಸ್18 ಕನ್ನಡ

ನವದೆಹಲಿ(ಫೆ. 28): ಎಲ್ಲಕ್ಕಿಂತ ದೊಡ್ಡ ಭಾಗ್ಯ ಎಂದರೆ ಅದು ಆರೋಗ್ಯ ಭಾಗ್ಯ. ಹಣಕ್ಕಿಂತ ಆರೋಗ್ಯವೇ ಮುಖ್ಯ ಎಂತಾರೆ ದೊಡ್ಡವರು. ಗೂಗಲ್ ಸರ್ಚ್​ನಲ್ಲಿ ಆರೋಗ್ಯದ ಬಗ್ಗೆ ಹುಡುಕಾಟ ನಡೆಸುವ ಪ್ರಮಾಣ ದಿನೇದಿನೇ ಹೆಚ್ಚಾಗುತ್ತಿದೆಯಂತೆ. ಎಲ್ಲದಕ್ಕೂ ಗೂಗಲ್ ಮಾಡಿದರೆ ಉತ್ತರ ಸಿಗುತ್ತದೆ. ಇದೀಗ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೂಗಲ್ ಸರ್ಚ್​ನಲ್ಲಿ ಸಿಂಪ್ಟಮ್ ಸರ್ಚ್ ಎಂಬ ಹೊಸ ಫೀಚರ್ ಅಳವಡಿಸಿದೆ. ಸ್ಮಾರ್ಟ್​ಫೋನ್ ಬಳಕೆದಾರರಿಗೆ ಈ ಫೀಚರ್ ಲಭ್ಯವಿರಲಿದೆ.

ಏನಿದು ಸಿಂಪ್ಟಮ್ ಸರ್ಚ್..?
ನಮಗೆ ಕೆಮ್ಮಿನ ತೊಂದರೆ ಇದ್ದರೆ ನಾವು ಸಾಮಾನ್ಯವಾಗಿ “Cough treatment” ಇತ್ಯಾದಿ ಸರ್ಚ್ ಮಾಡುತ್ತೇವೆ. ಗೂಗಲ್​ನ ಹೊಸ ಫೀಚರ್​ನಲ್ಲಿ ಹೀಗೆ ಸರ್ಚ್ ಮಾಡಿದಾಗ ಕೆಮ್ಮಿಗೆ ಸಂಬಂಧಿಸಿದ ಕಾಯಿಲೆಗಳ ಪಟ್ಟಿ ಬರುತ್ತದೆ. ಅದರಲ್ಲಿ ಸ್ವಯಂ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಲಭ್ಯವಿರುತ್ತದೆ.

ದೇಶದ ಪ್ರಸಿದ್ಧ ಆಸ್ಪತ್ರೆಗಳು ಗೂಗಲ್​ನ ಹೊಸ ಫೀಚರ್​ಗೆ ಕೊಡುಗೆ ನೀಡಿವೆ. ರೋಗ ಲಕ್ಷಣ, ಚಿಕಿತ್ಸೆ ಬಗ್ಗೆ ಇವರು ಗೂಗಲ್​ಗೆ ಮಾಹಿತಿ ನೆರವಾಗುತ್ತಿವೆ. ಹಾಗಂತ, ಗಂಭೀರ ರೋಗವಿದ್ದರೆ ಖಂಡಿತವಾಗಿ ಗೂಗಲ್ ಸರ್ಚನ್ನು ನಂಬದೇ ಸೀದಾ ತಜ್ಞ ವೈದ್ಯರ ಬಳಿಗೇ ಹೋಗಿ ಸಲಹೆ ಪಡೆದುಕೊಳ್ಳುವುದನ್ನು ಮರೆಯದಿರಿ. ಪ್ರಾಥಮಿಕ ಮತ್ತು ಸಾಮಾನ್ಯ ಮಾಹಿತಿಗಾಗಿ ಗೂಗಲ್ ಬಳಕೆ ಇರಲಿ.
First published:February 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ