Dangerous apps: 136 ಅಪಾಯಕಾರಿ ಆ್ಯಪ್​ಗಳನ್ನ ಬ್ಯಾನ್ ಮಾಡಿದ ಗೂಗಲ್ ಪ್ಲೇ ಸ್ಟೋರ್.. ನಿಮ್ಮ ಫೋನ್​​ನಲ್ಲಿದೆಯಾ?

Google Playstore bans 136 apps: ಗೂಗಲ್ ತನ್ನ ಪ್ಲೇ ಸ್ಟೋರ್​ನಲ್ಲಿ ಹಣ ದೋಚುವಂತಹ ಸುಮಾರು 136 ಆ್ಯಪ್‌ಗಳನ್ನು ಗುರುತಿಸಿದ್ದು, ತಕ್ಷಣವೇ ಬ್ಯಾನ್​ ಮಾಡಿದೆ. ಆದಾಗ್ಯೂ, ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಅನನ್ಯವಾಗಿರುವುದರಿಂದ ಬಳಕೆದಾರರು ತಕ್ಷಣವೇ ಎಚ್ಚರಿಕೆಯಿಂದಿರಬೇಕು ಎಂದಿದೆ.

Photo: Google

Photo: Google

  • Share this:
    Google bans 136 apps: ಜಿಂಪೇರಿಯಂನಲ್ಲಿನ ಭದ್ರತಾ ತಜ್ಞರು ಪ್ರಪಂಚದಾದ್ಯಂತ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ ಬಳಕೆದಾರರಿಂದ ಲಕ್ಷಾಂತರ ಡಾಲರ್​ಗಳನ್ನು ಕದ್ದಂತಹ ಮತ್ತೊಂದು ಮಾಲ್ವೇರ್ ಅನ್ನು ಪತ್ತೆಹಚ್ಚಿದ್ದಾರೆ. ಅಪಾಯಕಾರಿ ವಿಚಾರವೆಂದರೆ ಬಹುತೇಕ ಸ್ಮಾರ್ಟ್​ಫೋನ್‌ ಬಳಕೆದಾರರು  ಕೆಲವೊಂದು ಅಪ್ಲಿಕೇಶನ್​​​ಗಳಲ್ಲಿ ಈ ಮಾಲ್ವೇರ್​ ಅನ್ನು ಪತ್ತೆಹಚ್ಚಿದ್ದು,​ ಅದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ, ಮಾತ್ರವಲ್ಲದೆ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ಕಂಡುಬರುವ ಈ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ಡಿಲೀಟ್​ ಮಾಡುವಂತೆ ಹೇಳಿದ್ದಾರೆ.

    ಗೂಗಲ್ ತನ್ನ ಪ್ಲೇ ಸ್ಟೋರ್​ನಲ್ಲಿ ಹಣ ದೋಚುವಂತಹ ಸುಮಾರು 136 ಆ್ಯಪ್‌ಗಳನ್ನು ಗುರುತಿಸಿದ್ದು, ತಕ್ಷಣವೇ ಬ್ಯಾನ್​ ಮಾಡಿದೆ. ಆದಾಗ್ಯೂ, ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಅನನ್ಯವಾಗಿರುವುದರಿಂದ ಬಳಕೆದಾರರು ತಕ್ಷಣವೇ ಎಚ್ಚರಿಕೆಯಿಂದಿರಬೇಕು ಎಂದಿದೆ. ಗೂಗಲ್ ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಹ್ಯಾಂಡಿ ಟ್ರಾನ್ಸ್‌ಲೇಟರ್ ಪ್ರೊ, ಹಾರ್ಟ್ ರೇಟ್ ಮತ್ತು ಪಲ್ಸ್ ಟ್ರ್ಯಾಕರ್, ಜಿಯೋಸ್ಪಾಟ್: ಜಿಪಿಎಸ್ ಲೊಕೇಶನ್ ಟ್ರ್ಯಾಕರ್, ಐಕೇರ್ - ಲೊಕೇಶನ್, ಮೈ ಚಾಟ್ ಟ್ರಾನ್ಸ್‌ಲೇಟರ್ ಸೇರಿದ್ದು ಇದರಲ್ಲಿ ಮಾಲ್ವೇರ್​ ಒಳಗೊಂಡಿರುವುದನ್ನು ಪತ್ತೆ ಹಚ್ಚಿ ಕೂಡಲೇ ಡಿಲೀಟ್​ ಮಾಡಿದೆ.

    ಜಿಂಪೀರಿಯಮ್ ಝೆಡ್​​ಲಾಬ್ಸ್‌ನ ಭದ್ರತಾ ಸಂಶೋಧಕರು ಇತ್ತೀಚೆಗೆ ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಹೆಸರಿನ ಆಕ್ರಮಣಕಾರಿ ಮೊಬೈಲ್ ಪ್ರೀಮಿಯಂ ಸೇವೆಗಳ ಅಭಿಯಾನವನ್ನು ಪತ್ತೆ ಹಚ್ಚಿದ್ದಾರೆ, ಇದು ಜಾಗತಿಕವಾಗಿ 10 ಮಿಲಿಯನ್ ಗೂಗಲ್ ಆಂಡ್ರಾಯ್ಡ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಸಂಶೋಧಕರು ಹೇಳುವಂತೆ ಸಾಮಾನ್ಯ ಆನ್‌ಲೈನ್ ಹಗರಣಗಳು ಫಿಶಿಂಗ್ ತಂತ್ರಗಳ ಲಾಭವನ್ನು ಪಡೆದುಕೊಳ್ಳುತ್ತವೆ, ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ ಅನನ್ಯವಾಗಿದೆ ಅದು ದುರುದ್ದೇಶಪೂರಿತ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಹಿಂದೆ ಟ್ರೋಜನ್‌ಗಳಂತೆ ಕಾರ್ಯನಿರ್ವಹಿಸುತ್ತದೆ, ಇದು ಬಳಕೆದಾರರ ಪರಸ್ಪರ ಕ್ರಿಯೆಯ ಲಾಭ ಮತ್ತು ಹರಡುವಿಕೆಗೆ ಅನುಕೂಲವಾಗುವಂತೆ ಮಾಡುತ್ತದೆ ಎಂದಿದ್ದಾರೆ.

    ‘‘ಬಳಕೆದಾರರು ತಮ್ಮ ಅರಿವಿಲ್ಲದೆ ಚಂದಾದಾರರಾಗಿರುವ ಪ್ರೀಮಿಯಂ ಸೇವೆಗಾಗಿ ತಿಂಗಳಿಗೊಮ್ಮೆ ಶುಲ್ಕ ವಿಧಿಸಿದಾಗ ಈ ತಪ್ಪು ವಿಶ್ವಾಸದ ಬಗ್ಗೆ ತಿಳಿಯುತ್ತದೆ” ಎಂದು ಭದ್ರತಾ ಸಂಶೋಧನಾ ಸಂಸ್ಥೆಯು ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದೆ. ದೋಷ​​ ಹೊಂದಿರುವ ದುರುದ್ದೇಶಪೂರಿತ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿರುಪದ್ರವವಾಗಿ ಗೋಚರಿಸುತ್ತದೆ ಎಂದು ತಿಳಿಸಿದೆ.

    2020ರ ನವೆಂಬರ್​ನಿಂದ ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್‌ ಬಳಸಿ ಕೈಚಳಕ ತೋರಿಸುತ್ತಿದೆ. ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಆರಂಭದಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಥರ್ಡ್​​ ಪಾರ್ಟಿ ಅಪ್ಲಿಕೇಶನ್ ಸ್ಟೋರ್‌ಗಳ ಮೂಲಕ ಕಾಣಿಸಿಕೊಂಡಿದೆ, ಸದ್ಯ ಅದನ್ನೆಲ್ಲಾ ಗೂಗಲ್​ ಗುರುತಿಸಿ ಪ್ಲೇ ಸ್ಟೋರ್‌ನಿಂದ ತೆಗೆದುಹಾದಿದೆ.

    ಗೂಗಲ್ ಪ್ಲೇ ಸ್ಟೋರ್ ಈ ಮಾಲ್ವೇರ್​ಗಳನ್ನು ಹೊಂದಿರುವ ಆ್ಯಪ್​ಗಳು ಇಲ್ಲದೇ ಹೋದರು ಥರ್ಡ್​ ಪಾರ್ಟಿ ಆಪ್ ಸ್ಟೋರ್‌ಗಳಲ್ಲಿ ಹಾಗೆಯೇ ಉಳಿದುಕೊಂಡಿದೆ. ಹಾಗಾಗಿ ಬಳಕೆದಾರರಿಗೆ ಹೆಚ್ಚು ತೊಂದರೆಯಾಗುತ್ತಿದೆ, ನೀವು ಡೌನ್ ಲೋಡ್. ಆ್ಯಪ್ ಅನ್​​ಇನ್​ಸ್ಟಾಲ್​ ಮಾಡುವ ಮೂಲಕ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

    ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ (Grifthorse Android Trojan) ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

    Zimperium zLabs ವಿವರಿಸಿದಂತೆ ಟ್ರೋಜನ್ ಆಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೆ ಅಪಾಯವನ್ನುಂಟುಮಾಡುತ್ತದೆ, ಇದು ಆ್ಯಪ್​ಗಳ ಕುರಿತಾಗಿ ಅನುಮಾನವಿಲ್ಲದ ಬಳಕೆದಾರನ್ನು ಟಾರ್ಗೆಟ್​ ಮಾಡುತ್ತದೆ. ಸ್ಥಳೀಯ ಭಾಷೆಯೊಂದಿಗೆ ಬಳಕೆದಾರನ ಐಪಿ ವಿಳಾಸದ ಭೌಗೋಳಿಕ ಸ್ಥಳವನ್ನು ಆಧರಿಸಿ ಆಯ್ದ ದುರುದ್ದೇಶಪೂರಿತ ಪುಟಗಳನ್ನು ಒದಗಿಸುವ ಮೂಲಕ 70 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ.    ಬಹುತೇಕರು ಸ್ಮಾರ್ಟ್​ಫೋನ್ ಪರದೆಯ ಮೇಲೆ ಮೂಡಿದ ಬಹುಮಾನ ಸಂದೇಶ ಮತ್ತು ಅದನ್ನು ಗೆದ್ದಿದ್ದೀರಿ, ತಕ್ಷಣವೇ ಪಡೆದುಕೊಳ್ಳಬೇಕು ಎಂಬ ಮೆಸೇಜ್​ಗೆ ಬಲಿಪಶುವಾಗುತ್ತಾರೆ.  ಬಹುಮಾನಕ್ಕಾಗಿ ಆಹ್ವಾನವನ್ನು ಅಥವಾ ಸಂದೇಶ ಸ್ವೀಕರಿಸಿದ ನಂತರ ತಿಂಗಳಿಗೆ 30 ಯೂರೋಗಳಷ್ಟು ತಮ್ಮ ಫೋನ್ ಬಿಲ್ ಅನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ. ತಕ್ಷಣಕ್ಕೆ ಈ ವಿಚಾರ ತಿಳಿಯುದಿಲ್ಲ..ಸ್ವಲ್ಪ ದಿನಗಳ ಬಳಿಕ ತಿಳಿದುಬರುತ್ತದೆ

    ಈ ವಿಚಾರವಾಗಿ ಗೂಗಲ್ ಪ್ಲೇ ಸ್ಟೋರ್ನ ಗ್ರಿಫ್‌ಥೋರ್ಸ್ ಆಂಡ್ರಾಯ್ಡ್ ಟ್ರೋಜನ್ಗಳನ್ನು ಒಳಗೊಂಡಿರುವ 136 ಅಪ್ಲಿಕೇಶನ್‌ಗಳ ಸಂಪೂರ್ಣ ಪಟ್ಟಿ ಗುರುತಿಸಿ ನಿಷೇಧಿಸಿದೆ:

    Handy Translator Pro

    Heart Rate and Pulse Tracker

    Geospot: GPS Location Tracker

    iCare – Find Location

    My Chat Translator

    Bus – Metrolis 2021

    Free Translator Photo

    Locker Tool

    Fingerprint Changer

    Call Recoder Pro

    Instant Speech Translation

    Racers Car Driver

    Slime Simulator

    Keyboard Themes

    What’s Me Sticker

    Amazing Video Editor

    Safe Lock

    Heart Rhythm

    Smart Spot Locator

    CutCut Pro

    OFFRoaders – Survive

    Phone Finder by Clapping

    Bus Driving Simulator

    Fingerprint Defender

    Lifeel – scan and test

    Launcher iOS 15

    Idle Gun Tycoo\u202an\u202c

    Scanner App Scan Docs & Notes

    Chat Translator All Messengers

    Hunt Contact

    Icony

    Horoscope : Fortune

    Read Also: Smartphone Hack: ಸ್ಮಾರ್ಟ್​ಫೋನ್​ ಹ್ಯಾಕ್​ ಆದರೆ ತಿಳಿಯುವುದು ಹೇಗೆ?

    Fitness Point

    Qibla AR Pro

    Heart Rate and Meal Tracker

    Mine Easy Translator

    PhoneControl Block Spam Calls

    Parallax paper 3D

    SnapLens – Photo Translator

    Qibla Pass Direction

    Caller-x

    Clap

    Photo Effect Pro

    iConnected Tracker

    Smart Call Recorder

    Daily Horoscope & Life Palmestry

    Qibla Compass (Kaaba Locator)

    Prookie-Cartoon Photo Editor

    Qibla Ultimate

    Truck – RoudDrive Offroad

    GPS Phone Tracker – Family Locator

    Call Recorder iCall

    PikCho Editor app

    Street Cars: pro Racing

    Cinema Hall: Free HD Movies

    Live Wallpaper & Background

    Intelligent Translator Pro

    Face Analyzer

    TrueCaller & TrueRecoder

    iTranslator_ Text & Voice & Photo

    Pulse App – Heart Rate Monitor

    Video & Photo Recovery Manager 2

    Быстрые кредиты 24\7

    Fitness Trainer

    ClipBuddy

    Vector arts

    Ludo Speak v2.0

    Battery Live Wallpaper 4K

    Heart Rate Pro Health Monitor

    Locatoria – Find Location

    GetContacter

    Photo Lab

    AR Phone Booster – Battery Saver

    English Arabic Translator direct

    VPN Zone – Fast & Easy Proxy

    100% Projector for Mobile Phone

    Forza H Mobile 4 Ultimate Edition

    Amazing Sticky Slime Simulator ASMR\u200f

    Clap To Find My Phone

    Screen Mirroring TV Cast

    Free Calls WorldWide

    My Locator Plus

    iSalam Qibla Compass

    Language Translator-Easy&Fast

    WiFi Unlock Password Pro X

    Pony Video Chat-Live Stream

    Zodiac : Hand

    Ludo Game Classic

    Loca – Find Location

    Easy TV Show

    Qibla correct Quran Coran Koran

    Dating App – Sweet Meet

    R Circle – Location Finder

    TagsContact

    Ela-Salaty: Muslim Prayer Times & Qibla Direction

    Qibla Compass

    Soul Scanner – Check Your

    CIAO – Live Video Chat

    Plant Camera Identifier

    Color Call Changer

    Squishy and Pop it

    Keyboard: Virtual Projector App

    Scanner Pro App: PDF Document

    QR Reader Pro

    FX Keyboard

    You Frame

    Call Record Pro

    Free Islamic Stickers 2021

    QR Code Reader – Barcode Scanner

    Bag X-Ray 100% Scanner

    Phone Caller Screen 2021

    Translate It – Online App

    Mobile Things Finder

    Proof-Caller

    Phone Search by Clap

    Second Translate PRO

    CallerID

    3D Camera To Plan

    Qibla Finder – Qibla Direction

    Stickers Maker for WhatsApp

    Qibla direction watch (compass)

    Piano Bot Easy Lessons

    CallHelp: Second Phone Number

    FastPulse – Heart Rate Monitor

    Caller ID & Spam Blocker

    Free Coupons 2021

    KFC Saudi – Get free delivery and 50% off coupons

    Skycoach

    HOO Live – Meet and Chat

    Easy Bass Booster

    Coupons & Gifts: InstaShop

    FindContact

    Launcher iOS for Android

    Call Blocker-Spam Call Blocker

    Call Blocker-Spam Call Blocker

    Live Mobile Number Tracker
    Published by:Harshith AS
    First published: