Childrens Day: ಗೂಗಲ್​ನಿಂದ ಮಕ್ಕಳಿಗೆ 5 ಲಕ್ಷ ಗೆಲ್ಲುವ ಅವಕಾಶ

‘ನಾ ಬೆಳೆದಾಗ, ನನಗೆ ನಂಬಿಕೆ‘​ ಎಂಬ ಶೀರ್ಷಿಕೆ ಈ ವರ್ಷದ ಗೂಗಲ್​ ಡೂಡಲ್​ ಥೀಮ್. ಮಕ್ಕಳು ತಮ್ಮ ಚಿಂತನೆಗೆ ತಕ್ಕಂತೆ ಗೂಗಲ್​ ಎಂಬ ಹೆಸರನ್ನು ಕಡ್ಡಾಯವಾಗಿ ಬಳಸಿಕೊಂಡು ಚಿತ್ರಿಸಬೇಕು.

news18
Updated:August 2, 2019, 8:43 PM IST
Childrens Day: ಗೂಗಲ್​ನಿಂದ ಮಕ್ಕಳಿಗೆ 5 ಲಕ್ಷ ಗೆಲ್ಲುವ ಅವಕಾಶ
ಗೂಗಲ್​ ಡೂಡಲ್
news18
Updated: August 2, 2019, 8:43 PM IST
ಈ ಬಾರಿಯ ಮಕ್ಕಳ ದಿನಾಚರಣೆಯ ಅಂಗವಾಗಿ ಚಿಣ್ಣರರಿಗೆ ಗೂಗಲ್​ ಕಂಪೆನಿಯು 5 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡಿದೆ. ಮಕ್ಕಳಿಗಾಗಿ ಗೂಗಲ್​ ಕಂಪೆನಿ ಡೂಡಲ್​​ ಫಾರ್ ಗೂಗಲ್ ಎಂಬ ವಿಶೇಷ ಸ್ಪರ್ಧೆಯನ್ನು ಎರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಕಲ್ಪನೆಗೆ ತಕ್ಕಂತೆ ಪೇಟಿಂಗ್​ ಮೂಲಕ ಗೂಗಲ್​ ಡೂಡಲ್​ ಚಿತ್ರ ಬಿಡಿಸಬಹುದು.

‘ನಾ ಬೆಳೆದಾಗ, ನನಗೆ ನಂಬಿಕೆ‘​ ಎಂಬ ಶೀರ್ಷಿಕೆ ಈ ವರ್ಷದ ಗೂಗಲ್​ ಡೂಡಲ್​ ಥೀಮ್. ಮಕ್ಕಳು ತಮ್ಮ ಚಿಂತನೆಗೆ ತಕ್ಕಂತೆ ಗೂಗಲ್​ ಎಂಬ ಹೆಸರನ್ನು ಕಡ್ಡಾಯವಾಗಿ ಬಳಸಿಕೊಂಡು ಚಿತ್ರಿಸಬೇಕು.

ಇದನ್ನೂ ಓದಿ: ಕಾಫಿ ಡೇ ಮಾಲೀಕ ಸಿದ್ಧಾರ್ಥ್​​ ಸಾವು; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಏನಿದೆ?

ಇನ್ನು ಮಕ್ಕಳು ಬಿಡಿಸಿದ ಚಿತ್ರವನ್ನು ನವೆಂಬರ್​ 14 ರಂದು ಗೂಗಲ್​ ಕಂಪೆನಿಯು ತನ್ನ ಡೂಡಲ್​ನಲ್ಲಿ ಪ್ರಕಟಿಸಲಿದೆ.  ಜೊತೆಗೆ ಅತ್ಯುತ್ತಮ ಡೂಡಲ್​ಗೆ 5 ಲಕ್ಷ ಬಹುಮಾನವನ್ನು ನೀಡಲಿದೆ. ತೀರ್ಪುಗಾರರು ಹಾಗೂ ಜ್ಯೂರಿವೋಟ್ಸ್​ ಮೂಲಕ ಕ್ರಿಯಾತ್ಮಕವಾಗಿರು 20 ಡೂಡಲ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ನಂತರ ಮೊದಲ ಸ್ಥಾನಕ್ಕಾಗಿ ಅಕ್ಟೋಬರ್​ 21ರಿಂದ ನವೆಂಬರ್ ​6ರ ವರೆಗೆ ಸಾರ್ವಜನಿಕರಿಗೆ ವೋಟ್​ ಮಾಡಲು ಅವಕಾಶವಿರುತ್ತದೆ.
First published:August 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...