ಭಾರತದ ಶೇ.80ರಷ್ಟು ಇಂಟರ್ನೆಟ್ ಯೂಸರ್ಸ್ ವೀಕ್ಷಿಸುತ್ತಾರೆ ಯೂಟ್ಯೂಬ್


Updated:March 26, 2018, 8:55 PM IST
ಭಾರತದ ಶೇ.80ರಷ್ಟು ಇಂಟರ್ನೆಟ್ ಯೂಸರ್ಸ್ ವೀಕ್ಷಿಸುತ್ತಾರೆ ಯೂಟ್ಯೂಬ್

Updated: March 26, 2018, 8:55 PM IST
- ನ್ಯೂಸ್18 ಕನ್ನಡ

ನವದೆಹಲಿ(ಮಾ. 26): ಸ್ಮಾರ್ಟ್​ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದು, ಡೇಟಾ ದರಗಳು ಕಡಿಮೆಯಾಗುತ್ತಿರುವುದು, ಇಂಟರ್ನೆಟ್ ಬಳಕೆ ಯದ್ವಾತದ್ವಾ ಹೆಚ್ಚುತ್ತಿದೆ. ಇಷ್ಟು ಮಂದಿ ಇಂಟರ್ನೆಟ್​ನಲ್ಲಿ ಏನನ್ನು ಹೆಚ್ಚಾಗಿ ನೋಡುತ್ತಾರೆ ಎಂಬ ಕುತೂಹಲ ಇರುವುದು ಸಹಜ. ಗೂಗಲ್ ಸಂಸ್ಥೆ ನೀಡಿರುವ ಒಂದು ವರದಿ ಪ್ರಕಾರ ಭಾರತದ ಶೇ. 80 ಇಂಟರ್ನೆಟ್ ಬಳಕೆದಾರರು ಯೂಟ್ಯೂಬ್ ವೀಕ್ಷಿಸುತ್ತಾರಂತೆ. ಯೂಟ್ಯೂಬ್​ನಂಥ ವಿಡಿಯೋ ಪ್ಲಾಟ್​ಫಾರ್ಮ್​ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದ್ದಂತಿದೆ.

ಕಾಮ್​ಸ್ಕೋರ್ ವಿಡಿಯೋ ಮೆಟ್ರಿಕ್ಸ್ ಮಲ್ಟಿ-ಪ್ಲಾಟ್​ಫಾರ್ಮ್ ವರದಿಯಲ್ಲಿ ಒಂದಷ್ಟು ಕುತೂಹಲಕಾರಿ ಅಂಶಗಳಿವೆ. 18 ವರ್ಷ ಮೇಲ್ಪಟ್ಟ ವಯೋಮಾನದಲ್ಲಿರುವ ಸಕ್ರಿಯ ಇಂಟರ್ನೆಟ್ ಬಳಕೆದಾರರ ಪೈಕಿ ಶೇ.85ರಷ್ಟು ಜನರು ಯೂಟ್ಯೂಬ್ ವೀಕ್ಷಿಸುತ್ತಾರಂತೆ. ಭಾರತದಲ್ಲಿ ಸದ್ಯ 22.5 ಕೋಟಿ ಜನರು ಮೊಬೈಲ್​ನಲ್ಲಿ ಇಂಟರ್ನೆಟ್ ವೀಕ್ಷಿಸುತ್ತಾರೆ. ವರದಿಯ ಅಂಶ ಗಮನಿಸಿದರೆ, ಹೆಚ್ಚೂಕಡಿಮೆ 20 ಕೋಟಿ ಜನರು ತಿಂಗಳಲ್ಲಿ ಒಮ್ಮೆಯಾದರೂ ಯೂಟ್ಯೂಬ್ ನೋಡುತ್ತಾರೆ. 2020ರಲ್ಲಿ ಇಂಟರ್ನೆಟ್​ನಲ್ಲಿ ವಿಡಿಯೋ ವೀಕ್ಷಿಸಲಿರುವ ಜನರ ಪ್ರಮಾಣ 50 ಕೋಟಿ ಮೀರಲಿದೆಯಂತೆ.

ಇದೇ ವೇಳೆ ಯೂಟ್ಯೂಬ್ ಚಾನೆಲ್​ಗಳ ಸಂಖ್ಯೆಯೂ, ವಿಸ್ತರಣೆಯೂ ಅಗಾಧವಾಗಿ ಹೆಚ್ಚಾಗುತ್ತಿದೆ. 2014ರಲ್ಲಿ 10 ಲಕ್ಷ ಸಬ್​ಸ್ಕ್ರೈಬರ್ಸ್ ಹೊಂದಿರುವ ಯೂಟ್ಯೂಬ್ ಚಾನಲ್​ಗಳ ಸಂಖ್ಯೆ ಕೇವಲ 16 ಮಾತ್ರ ಇತ್ತು. ಈಗ ಈ ಸಂಖ್ಯೆ 300 ಮೀರಿದೆ ಎಂದು ಗೂಗಲ್ ಇಂಡಿಯಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.
First published:March 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ