Google Payನಂತೆ UPI ಪಾವತಿಗಳಲ್ಲಿ ಬಳಕೆದಾರರಿಗೆ Cashback ಕೂಪನ್‌ ನೀಡಲಿದೆ WhatsApp..!

WhatsApp ಚಾಟ್‌ಗಳ ಪಟ್ಟಿಯ ಮೇಲೆ ಹೊಸದಾಗಿ ಉಡುಗೊರೆ ಐಕಾನ್‌ವೊಂದು ಕಾಣಿಸಿಕೊಳ್ಳಲಿದ್ದು, "ನಿಮ್ಮ ಮುಂದಿನ ಪಾವತಿಗೆ ಕ್ಯಾಶ್‌ಬ್ಯಾಕ್ ಪಡೆಯಿರಿ" ಮತ್ತು "ಪ್ರಾರಂಭಿಸಲು ಟ್ಯಾಪ್ ಮಾಡಿ" ಎಂಬ ಸಂದೇಶವನ್ನು ತೋರಿಸುತ್ತದೆ.

ವಾಟ್ಸ್ಯಾಪ್​  ಪೇ

ವಾಟ್ಸ್ಯಾಪ್​ ಪೇ

  • Share this:
ಫೇಸ್‌ಬುಕ್(Facebook) ಒಡೆತನದ ಇನ್‌ಸ್ಟ್ಯಾಂಟ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್(WhatsApp) ಪಾವತಿ(Pay) ವೈಶಿಷ್ಟ್ಯವನ್ನು ಸಹ ಹೊಂದಿದೆ. ಆದರೆ, ಭಾರತ ಸೇರಿ ಹಲವು ದೇಶಗಳಲ್ಲಿ ಇದನ್ನು ಹೆಚ್ಚಾಗಿ ಯಾರೂ ಬಳಸುತ್ತಿಲ್ಲ. ಈ ಹಿನ್ನೆಲೆ ಕಂಪನಿ ವಾಟ್ಸ್‌ಆ್ಯಪ್ ಪೇಮೆಂಟ್‌ ಸೇವೆಯ ಜನಪ್ರಿಯತೆ ಹೆಚ್ಚಿಸಲು ಪ್ಲ್ಯಾನ್‌ ಮಾಡಿದೆ ಎನ್ನಲಾಗುತ್ತಿದೆ. ಪ್ರತಿಸ್ಪರ್ಧಿ ಗೂಗಲ್‌ನ ಪೇಮೆಂಟ್‌ ಆ್ಯಪ್ ಗೂಗಲ್ ಪೇ(Google Pay) ರೀತಿ ವಾಟ್ಸ್‌ಆ್ಯಪ್ ಸಹ ತನ್ನ ಆ್ಯಪ್ ಮೂಲಕ ಪಾವತಿ ಸೇವೆ ಬಳಸುವವರಿಗೆ ಕ್ಯಾಶ್‌ಬ್ಯಾಕ್(Cashback) ನೀಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಾಟ್ಸ್‌ಆ್ಯಪ್ ಟ್ರ್ಯಾಕರ್ WABetaInfo ನಲ್ಲಿನ ವರದಿಯ ಪ್ರಕಾರ, ಶೀಘ್ರದಲ್ಲೇ WhatsApp ಮೂಲಕ UPI ಪಾವತಿಗಳಲ್ಲಿ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಬಳಕೆಯನ್ನು ಹೆಚ್ಚಿಸಲು ಮತ್ತು ಅದನ್ನು Google Pay ಮತ್ತು Paytmನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧೆಗಿಳಿಯಲು, WhatsApp ಕ್ಯಾಶ್‌ಬ್ಯಾಕ್ ಕೂಪನ್‌ಗಳನ್ನು ನೀಡಲು ಯೋಜಿಸುತ್ತಿದೆ. ಈ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿಯಲ್ಲಿದೆ ಮತ್ತು ಯಾವುದೇ ಬಳಕೆದಾರರಿಗೂ ಇದು ಸದ್ಯ ಲಭ್ಯವಿಲ್ಲ ಎಂದು WABetaInfo ವರದಿ ಮಾಡಿದೆ. ಆ್ಯಪ್ ಭವಿಷ್ಯದಲ್ಲಿ ನಿರ್ಮಾಣ ಮಾಡುವ ವೇಳೆ ಈ ವೈಶಿಷ್ಟ್ಯ ದೊರೆಯಲಿದೆ ಎಂದು ಹೇಳಲಾಗಿದೆ.

ಇದರೊಂದಿಗೆ, ಮುಂಬರುವ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನೂ ಈ ವರದಿಯು ಹಂಚಿಕೊಳ್ಳುತ್ತಿದೆ. WhatsApp ಚಾಟ್‌ಗಳ ಪಟ್ಟಿಯ ಮೇಲೆ ಹೊಸದಾಗಿ ಉಡುಗೊರೆ ಐಕಾನ್‌ವೊಂದು ಕಾಣಿಸಿಕೊಳ್ಳಲಿದ್ದು, "ನಿಮ್ಮ ಮುಂದಿನ ಪಾವತಿಗೆ ಕ್ಯಾಶ್‌ಬ್ಯಾಕ್ ಪಡೆಯಿರಿ" ಮತ್ತು "ಪ್ರಾರಂಭಿಸಲು ಟ್ಯಾಪ್ ಮಾಡಿ" ಎಂಬ ಸಂದೇಶವನ್ನು ತೋರಿಸುತ್ತದೆ. ಈ ವೈಶಿಷ್ಟ್ಯವು ಭಾರತದ ಬಳಕೆದಾರರಿಗೆ ಸೀಮಿತವಾಗಿರುತ್ತದೆ ಮತ್ತು 10 ರೂ. ಅಥವಾ ಅದಕ್ಕಿಂತ ಹೆಚ್ಚಿನ ಪಾವತಿಗಳು ಕ್ಯಾಶ್‌ಬ್ಯಾಕ್ ಕೂಪನ್‌ಗಳಿಗೆ ಅರ್ಹವಾಗಿರಬಹುದು ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ:Whatsapp Web Screenshot: ವಾಟ್ಸಾಪ್​​​ ವೆಬ್ ಚಾಟ್​​​ನ ಫುಲ್‌ ಪೇಜ್ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಈ ಸಂಬಂಧ ಟ್ವೀಟ್‌ ಮೂಲಕವೂ WABetaInfo ಮಾಹಿತಿ ನೀಡಿದೆ. ಆ್ಯಂಡ್ರಾಯ್ಡ್ 2.21.20.3ಗಾಗಿ ವಾಟ್ಸ್‌ಆ್ಯಪ್‌ ಬೀಟಾ: ಇದರಲ್ಲಿ ಹೊಸತೇನು..? ಎಂದು ಪ್ರಶ್ನೆ ಮಾಡಿದೆ. ನಂತರ, ಭವಿಷ್ಯದ ಅಪ್‌ಡೇಟ್‌ಗಾಗಿ ಭಾರತದಲ್ಲಿ WhatsApp UPI ಪಾವತಿಗಳನ್ನು ಬಳಸಿದ ನಂತರ ಕ್ಯಾಶ್‌ಬ್ಯಾಕ್ ಪಡೆಯುವ ಸಾಧ್ಯತೆಯ ಕುರಿತು WhatsApp ಕಾರ್ಯನಿರ್ವಹಿಸುತ್ತಿದೆ..! ಎಂದೂ ಈ ಟ್ವೀಟ್‌ ಹೇಳುತ್ತದೆ.

2018ರ ಆರಂಭದಲ್ಲಿ ವಾಟ್ಸ್‌ಆ್ಯಪ್‌ ಯುಪಿಐ ಆಧಾರಿತ ಪಾವತಿಗಳನ್ನು ಪ್ರಾರಂಭಿಸಿತು. ಆದರೆ ವಾಟ್ಸ್‌ಆ್ಯಪ್‌ಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ಪಡೆಯುವವರೆಗೂ ಈ ವೈಶಿಷ್ಟ್ಯವು ಸುಮಾರು ಒಂದೆರಡು ವರ್ಷಗಳ ನಂತರ ಬೀಟಾದಲ್ಲಿ ಉಳಿಯಿತು. ಈ ಹಿನ್ನೆಲೆ ವಾಟ್ಸ್‌ಆ್ಯಪ್‌ ಪಾವತಿಗಳನ್ನು ಕಳೆದ ವರ್ಷ ಎಲ್ಲಾ ಬಳಕೆದಾರರಿಗೆ ಪರಿಚಯಿಸಲಾಯಿತು. ಆದರೆ ಭಾರತದಲ್ಲಿ ಗಣನೀಯ ಗಮನ ಸೆಳೆಯುವಲ್ಲಿ ಇದು ವಿಫಲವಾಗಿದೆ. ಇದಕ್ಕೆ ಕಾರಣ ವಾಟ್ಸ್‌ಆ್ಯಪ್‌ ಪೇಮೆಂಟ್‌ ಪ್ರತಿಸ್ಪರ್ಧಿ ಗೂಗಲ್ ಪೇ, ಬಹುತೇಕ ಪ್ರತಿ ವಹಿವಾಟಿನ ಮೇಲೆ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಅಥವಾ ಇತರೆ ಕೂಪನ್‌ಗಳನ್ನು ನೀಡುತ್ತದೆ.

WhatsAppನಲ್ಲಿ ಬರಲಿದೆ ವಾಯ್ಸ್ ಮೆಸೇಜ್ ಟ್ರಾನ್ಸ್‌ಕ್ರಿಪ್ಶನ್' ಫೀಚರ್‌..!

ಇನ್ನು, ವಾಟ್ಸ್‌ಆ್ಯಪ್‌ ನಿಮ್ಮ ಧ್ವನಿ ಒಳಹರಿವುಗಳನ್ನು ಪಠ್ಯವಾಗಿ ಪರಿವರ್ತಿಸುವ 'ವಾಯ್ಸ್ ಮೆಸೇಜ್ ಟ್ರಾನ್ಸ್‌ಕ್ರಿಪ್ಶನ್' ಫೀಚರ್‌ ಅನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ವದಂತಿಗಳಿವೆ. ಈ ವಿಧಾನವು ವ್ಯಕ್ತಿಗಳು ಟೈಪಿಂಗ್ ಅನ್ನು ಅವಲಂಬಿಸುವ ಅಗತ್ಯ ತೆಗೆದುಹಾಕುವ ಪ್ರಯೋಜನ ಹೊಂದಿದೆ, ವಿಶೇಷವಾಗಿ ವಿಸ್ತೃತ ಸಂವಹನಗಳಿಗೆ ಇದು ಪ್ರಯೋಜನಕಾರಿಯಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಈಗಾಗಲೇ ವಾಯ್ಸ್‌ ನೋಟ್‌ ಕಳುಹಿಸಬಹುದಾಗಿದೆ. ಇದನ್ನೂ ಸಹ ಇತ್ತೀಚೆಗೆ ಅಪ್‌ಗ್ರೇಡ್‌ ಮಾಡಲಾಗಿದ್ದು, ವಾಯ್ಸ್ ನೋಟ್‌ ಪ್ಲೇ ಮಾಡುವ ವೇಗವನ್ನು ಆಯ್ಕೆ ಮಾಡಬಹುದಾಗಿದೆ. ವಾಯ್ಸ್ ನೋಟ್‌ ಆಡಿಯೋ ಫೈಲ್ ರೂಪದಲ್ಲಿ ಸುದೀರ್ಘ ಸಂದೇಶಗಳನ್ನು ತಲುಪಿಸುವ ಸರಳತೆಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತದೆ. ಅತ್ಯಂತ ಪ್ರಸ್ತುತ ಧ್ವನಿ ಸಂದೇಶ ಪ್ರತಿಲೇಖನದ ಕಾರ್ಯ ಪ್ರಗತಿಯಲ್ಲಿದೆ ಎಂದೂ ಹೇಳಲಾಗಿದೆ. ಆದರೆ, ನಿರಂತರವಾಗಿ ಡಿಪ್ಲಾಯ್‌ ಆಗುವ ಸ್ಪೆಸಿಫಿಕ್ಸ್‌ ಬಗ್ಗೆ ಈವರೆಗೆ ತಿಳಿದುಬಂದಿಲ್ಲ.
Published by:Latha CG
First published: