ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ (Video Streaming) ಅಪ್ಲಿಕೇಶನ್ ಆಗಿರುವ ಯೂಟ್ಯೂಬ್ (YouTube) ತನ್ನ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಹೊಸ ಫೀಚರ್ಗಳನ್ನು ನೀಡುತ್ತಲೇ ಇದೆ. ಏಕೆಂದರೆ ಇತ್ತೀಚೆಗೆ ಈ ಅಪ್ಲಿಕೇಶನ್ಗಳ ಬಳಕೆ ವ್ಯಾಪಕವಾಗಿ ಹಬ್ಬಿದೆ. ಜೊತೆಗೆ ಯೂಟ್ಯೂಬ್ ತನ್ನ ಬಳಕೆದಾರರಿಗಾಗಿ ಯೂಟ್ಯೂಬ್ ಮ್ಯೂಸಿಕ್ (Youtube Music) ವಿಭಾಗವನ್ನು ಆರಂಭಿಸಿತ್ತು. ಅದೇ ರೀತಿ ಬಳಕೆದಾರರು ಸಹ ಎಲ್ಲಿಗಾದ್ರೂ ಹೋಗ್ಬೇಕಂದ್ರೂ ಯೂಟ್ಯೂಬ್ನಲ್ಲಿ ಹಾಡು ಕೇಳ್ತಾ ಹೋಗ್ತಿದ್ರು. ಈ ಸಂದರ್ಭದಲ್ಲಿ ಯೂಟ್ಯೂಬ್ ತನ್ನ ಯೂಸರ್ಸ್ಗೆ ಹೊಸ ಫೀಚರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಮೂಲಕ ಬಳಕೆದಾರರು ಇನ್ಮುಂದೆ ಆಫ್ಲೈನ್ನಲ್ಲಿಯೂ ಮ್ಯೂಸಿಕ್ ಕೇಳಬಹುದಾಗಿದೆ.
ಹೆಚ್ಚಿನ ಜನರು ಯೂಟ್ಯೂಬ್ನಲ್ಲಿ ಮ್ಯೂಸಿಕ್ ವಿಭಾಗ ಬಂದ ಮೇಲೆ ಮ್ಯೂಸಿಕ್ ಕೇಳಲು ಯೂಟ್ಯೂಬ್ ಅನ್ನೇ ಬಳಸುತ್ತಿದ್ದರು. ಇದೀಗ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಳಕೆದಾರರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
ಯೂಟ್ಯೂಬ್ ಮ್ಯೂಸಿಕ್ನಲ್ಲಿ ಹೊಸ ಫೀಚರ್
ಇದುವರೆಗೆ ಯೂಟ್ಯೂಬ್ ಮ್ಯೂಸಿಕ್ನಲ್ಲಿ ಯಾವುದೇ ಮ್ಯೂಸಿಕ್ ಕೇಳ್ಬೇಕಂದ್ರು ಇಂಟರ್ನೆಟ್ ಸೌಲಭ್ಯ ಅಗತ್ಯವಾಗಿರುತ್ತದೆ. ಆದರೆ ಇನ್ಮುಂದೆ ಯಾವುದೇ ಹಾಡನ್ನು ಕೇಳಿದ್ರು ಅದ ಸ್ವಯಂ ಚಾಲಿತವಾಗಿ ಡೌನ್ಲೋಡ್ ಆಗಿರುತ್ತದೆ. ಇದನ್ನು ಯೂಟ್ಯೂಬ್ ಮ್ಯೂಸಿಕ್ನಲ್ಲಿ ಡಿಫಾಲ್ಟ್ ಆಗಿ ಆನ್ ಮಾಡಲಾಗಿದ್ದು, ಮ್ಯೂಸಿಕ್ ಕೇಳುಗರಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಇದನ್ನೂ ಓದಿ: ಗ್ರೂಪ್ ಅಡ್ಮಿನ್ಗಳಿಗಾಗಿ ವಾಟ್ಸಾಪ್ನಿಂದ ಹೊಸ ಅಪ್ಡೇಟ್! ಹೇಗಿದೆ ಗೊತ್ತಾ ಫೀಚರ್ಸ್?
ಇನ್ನು ಈ ಫೀಚರ್ ಮೂಲಕ ಆಟೋಮ್ಯಾಟಿಕ್ ಆಗಿ 200 ಹಾಡುಗಳು ಡೌನ್ಲೋಡ್ ಆಗುತ್ತದೆ. ಇದರಲ್ಲಿ ನೀವು ಇತ್ತೀಚೆಗೆ ಕೇಳಿರುವ ಅಥವಾ ಪ್ಲೇ ಮಾಡಿರುವ ಹಾಡುಗಳು ಸೇರಿರುತ್ತದೆ.
ಹಾಗೆಯೇ ಡೌನ್ಲೋಡ್ ಆದಂತಹ ಮ್ಯೂಸಿಕ್ಗಳು ಯೂಟ್ಯೂಬ್ನ ಸೆಟ್ಟಿಂಗ್ಸ್ನಲ್ಲಿ ಡೌನ್ಲೋಡ್ ಮತ್ತು ಸ್ಟೋರೇಜ್ ವಿಭಾಗದ ಕೆಳಗೆ ಕಾಣಿಸಿಕೊಳ್ಳುತ್ತದೆ. ಇನ್ನು ಈ ಫೀಚರ್ ಪ್ರೀಮಿಯಂ ಚಂದಾದಾರಿಕೆ ಹೊಂದಿರುವವರಿಗೆ ಮಾತ್ರ ಲಭ್ಯವಿರುತ್ತದೆ.
ಇನ್ಮುಂದೆ ಯೂಟ್ಯೂಬ್ನಲ್ಲಿ ಈ ರೀತಿಯ ಜಾಹೀರಾತುಗಳು ಬರಲ್ಲ
ಇತ್ತೀಚೆಗೆ ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗಿದೆ. ಇದರ ಜೊತೆಗೆ ಓಟಿಟಿ ಪ್ಲಾಟ್ಫಾರ್ಮ್ಗಳ ಬಳಕೆಯೂ ಹೆಚ್ಚುತ್ತಲೇ ಇದೆ. ಉಚಿತವಾಗಿ ವಿಡಿಯೋ ಸ್ಟ್ರೀಮಿಂಗ್ ಮಾಡುವಂತಹ ಒಂದು ಅಪ್ಲಿಕೇಶನ್ ಇದ್ದರೆ ಅದು ಯೂಟ್ಯೂಬ್. ಆದರೆ ಈಗ ಇದರಲ್ಲೂ ಜಾಹೀರಾತು ಹೆಚ್ಚಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಯೂಟ್ಯೂಬ್ ಬಳಕೆ ಮಾಡೇ ಮಾಡುತ್ತಾರೆ. ಇದರ ನಡುವೆ ಏನಾದರೂ ಇಂಟ್ರೆಸ್ಟಿಂಗ್ ಮಾಹಿತಿಯನ್ನು ವೀಕ್ಷಣೆ ಮಾಡುವಾಗ ಕೆಲವು ಜಾಹೀರಾತುಗಳು ಕಾಣಿಸಿಕೊಂಡು ಭಾರೀ ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಯೂಟ್ಯೂಬ್ನ ಈ ಹೊಸ ನಿರ್ಧಾರದಿಂದ ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದು.
ಯಾವುದೇ ಆ್ಯಪ್ಗಳಾಗಲಿ ಅಥವಾ ಪ್ಲಾಟ್ಫಾರ್ಮ್ಗಳಾಗಲಿ ತನ್ನ ಬ್ರಾಂಡ್ನ ಆದಾಯ ಗಳಿಸುವ ಉದ್ದೇಶದಿಂದ ಜಾಹೀರಾತನ್ನೇ ಅವಲಂಬಿಸಿಕೊಂಡಿರುತ್ತವೆ. ಅದರಂತೆ ಯೂಟ್ಯೂಬ್ನಲ್ಲಿ ಯಾವುದಾದರೂ ಒಂದು ವಿಡಿಯೋ ಪ್ಲೇ ಮಾಡಿದರೆ ವಿವಿಧ ರೀತಿಯ ಜಾಹೀರಾತುಗಳು ಕಾಣಿಸಿಕೊಂಡು ನೋಡುಗರ ಸಮಯವನ್ನು ವ್ಯರ್ಥ ಮಾಡುತ್ತದೆ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ಯೂಟ್ಯೂಬ್ ಓವರ್ಲೇ ಜಾಹೀರಾತುಗಳ ಪ್ರಸಾರ ನಿಲ್ಲಿಸಲು ಮುಂದಾಗಿದೆ.
ಓವರ್ಲೇ ಜಾಹೀರಾತು ಎಂದರೇನು?:
ಇನ್ಮುಂದೆ ಈ ಜಾಹೀರಾತುಗಳಿರಲ್ಲ:
ಗೂಗಲ್ ಮಾಲೀಕತ್ವದ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿರುವ ಯೂಟ್ಯೂಬ್ನಲ್ಲಿ ಈವರೆಗೂ ಕಾಣಿಸಿಕೊಳ್ಳುತ್ತಿದ್ದ ಓವರ್ಲೇ ಜಾಹೀರಾತುಗಳು ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಯೂಟ್ಯೂಬ್ ವರದಿ ನೀಡಿದೆ. ಜೊತೆಗೆ ಡೆಸ್ಕ್ಟಾಪ್ ಮತ್ತು ಮೊಬೈಲ್ ಡಿವೈಸ್ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಜಾಹೀರಾತು ಸ್ವರೂಪಗಳಿಗೆ ಇದನ್ನು ಬದಲಾಯಿಸಲು ಯೂಟ್ಯೂಬ್ ಮುಂದಾಗಿದೆ ಎಂದು ಕಂಪೆನಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ