ವಾಟ್ಸಾಪ್ (WhatsApp) ದೇಶದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿದೆ. ಇದು ಮೆಟಾ ಒಡೆತನದಲ್ಲಿರುವ ಅಪ್ಲಿಕೇಶನ್ ಆಗಿದ್ದು, ದಿನದಿಂದ ದಿನಕ್ಕೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ವಾಟ್ಸಾಪ್ ಅಪ್ಲಿಕೇಶನ್ ಬಗ್ಗೆ ಕಳೆದ ವರ್ಷವನ್ನು ಮೆಲುಕು ಹಾಕುವುದಾದರೆ, ವಾಟ್ಸಾಪ್ 2022 ರಲ್ಲಿ ತನ್ನ ಬಳಕೆದಾರರಿಗಾಗಿ ಹಲವಾರು ಅಪ್ಡೇಟ್ಗಳನ್ನು (Updates) ನೀಡಿದೆ. ಇವೆಲ್ಲವೂ ಗ್ರಾಹಕರಿಗೆ ಅನುಕೂಲವಾಗುವಂತಹ ಫೀಚರ್ಸ್ಗಳಾಗಿದ್ದು, ಜನರಿಂದ ಕೂಡ ಬಹಳಷ್ಟು ಮನ್ನಣೆಯನ್ನು ಪಡೆದಿದೆ. ಇನ್ನು2023ರಲ್ಲಿ ಇನ್ನೂ ಹಲವಾರು ಫೀಚರ್ಸ್ಗಳು ಬರಲಿವೆ ಎಂದು ಕಳೆದ ವರ್ಷವೇ ವಾಟ್ಸಾಪ್ ಘೋಷಣೆ ಮಾಡಿತ್ತು. ಅದೇ ರೀತಿ ಈಗ ಮತ್ತೊಂದು ಫೀಚರ್ ಬಿಡುಗಡೆ ಮಾಡಿದೆ.
ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಟೆಕ್ಸ್ಟ್ ಎಡಿಟರ್ ಎಂಬ ಫೀಚರ್ ಅನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮಗೆ ಬೇಕಾದ ಹಾಗೆ ಪಠ್ಯವನ್ನು ಡಿಸೈನ್ ಮಾಡಿಕೊಳ್ಬಹುದಾಗಿದೆ. ಹಾಗೆಯೇ ಇನ್ನೂ ಹಲವಾರು ಫೀಚರ್ಸ್ ಅನ್ನು ಇದು ಹೊಂದಿದ್ದು ಇದರ ಸಂಪೂರ್ಣ ಮಾಹಿತಿ ಇದರಲ್ಲಿದೆ.
ವಾಟ್ಸಾಪ್ ಟೆಕ್ಸ್ಟ್ ಜೊತೆಗೆ 3 ಫೀಚರ್ ಬಿಡುಗಡೆ
ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆದ ವಾಟ್ಸಾಪ್ ತನ್ನ ಡ್ರಾಯಿಂಗ್ ಟೂಲ್ ಇನ್ಮುಂದೆ ಟೆಕ್ಸ್ಟ್ ಎಡಿಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಈ ಡ್ರಾಯಿಂಗ್ ಎಡಿಟರ್ ಅನ್ನು ಸುಧಾರಿಸಲು ಮೂರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ವಾಬೀಟಾಇನ್ಫೋ ತಿಳಿಸಿದೆ.
ವಾಟ್ಸಾಪ್ ಟೆಕ್ಸ್ಟ್ ಸ್ಟೈಲ್ ಬದಲಾವಣೆ
ಇನ್ನು ಈ ಟೆಕ್ಸ್ಟ್ ಎಡಿಟರ್ ಫೀಚರ್ಸ್ ನಲ್ಲಿ ಕೀಬೋರ್ಡ್ ಮೇಲೆ ಪ್ರದರ್ಶಿಸಲಾದ ಫಾಂಟ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡುವ ಮೂಲಕ ವಿವಿಧ ಫಾಂಟ್‌ಗಳನ್ನು ತನಗೆ ಬೇಕಾಗುವ ಹಾಗೆ ಬದಲಾಯಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಈ ಮೂಲಕ ಬಳಕೆದಾರರು ತಮಗಿಷ್ಟವಾದ ಶೈಲಿಯ ಟೆಕ್ಸ್ಟ್ ಅನ್ನು ಬಳಕೆ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಚಾಟ್ ಮಾಡಬಹುದಾಗಿದೆ.
ವಾಟ್ಸಾಪ್ ಟೆಕ್ಸ್ಟ್ ಜೋಡಣೆ
ವಾಟ್ಸಾಪ್ ಟೆಕ್ಸ್ಟ್ ಫೀಚರ್ನಲ್ಲಿ ಎರಡನೆಯ ಫೀಚರ್ಸ್ ಪಠ್ಯ ಜೋಡಣೆ (text alignment) ಮಾಡುವುದಾಗಿದೆ. ಈ ಫೀಚರ್ನ ಸಹಾಯದಿಂದ ಬಳಕೆದಾರರು ಪಠ್ಯವನ್ನು ಎಡ, ಮಧ್ಯ ಅಥವಾ ಬಲಕ್ಕೆ ಸುಲಭವಾಗಿ ಟೆಕ್ಸ್ಟ್ ಅನ್ನು ಸೆಟ್ ಮಾಡಲು ಸಾಧ್ಯವಾಗುತ್ತದೆ. ಅಂದರೆ ಫೋಟೋಗಳು, ವಿಡಿಯೋ, ಜಿಐಎಫ್ ಗಳ ಮೇಲೆ ಪಠ್ಯವನ್ನು ಫಾರ್ಮಾಟ್ ಮಾಡಲು ಬಳಕೆದಾರರಿಗೆ ಹೆಚ್ಚಿನ ಕಂಟ್ರೋಲ್ ಅನ್ನು ಈ ಫೀಚರ್ಸ್ ನೀಡಲಿದೆ.
ವಾಟ್ಸಾಪ್ ಟೆಕ್ಸ್ಟ್ನ ಬಣ್ಣದ ಬದಲಾವಣೆ
ಇನ್ನು ವಾಟ್ಸಾಪ್ನ ಮೂರನೇ ಫೀಚರ್ಸ್ ಎಂದರೆ ಟೆಕ್ಟ್ನಲ್ಲಿರುವ ಬ್ಯಾಕ್ಗ್ರೌಂಡ್ನ ಬಣ್ಣವನ್ನು ಬದಲಾವಣೆ ಮಾಡುವುದು. ಈ ಫೀಚರ್ ಬಳಕೆದಾರರಿಗೆ ಸುಲಭವಾಗಿ ಪಠ್ಯದ ಬಣ್ಣವನ್ನು ಬದಲಾಯಿಸುವಲ್ಲಿ ಸಹಕಾರ ನೀಡುವುದರ ಜೊತೆಗೆ ಪಠ್ಯವನ್ನು ಪ್ರತ್ಯೇಕಿಸಲು ಇದು ಸುಲಭವಾಗಿ ಸಹಾಯ ಮಾಡಲಿದೆ. ಈ ಫೀಚರ್ನಿಂ ನೀವು ಟೈಪ್ ಮಾಡುವಂತಹ ಟೆಕ್ಸ್ಟ್ ಇನ್ನಷ್ಟು ಆಕರ್ಷಕವಾಗಿ ಕಾಣಲು ಸಹಕಾರಿಯಾಗುತ್ತದೆ.
ಫೋಟೋ ಶೇರ್ ಮಾಡುವ ಅಪ್ಡೇಟ್
ಇನ್ನು ವಾಟ್ಸಾಪ್ ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಫೋಟೋ ಶೇರ್ ಮಾಡುವುದಕ್ಕೆ ಅನುಕೂಲಕರ ಫೀಚರ್ ಒಂದನ್ನು ಪರಿಚಯಿಸತ್ತು. ಈ ಹಿಂದೆ ಫೋಟೋಗಳನ್ನು ಇನ್ನೊಬ್ಬರಿಗೆ ಶೇರ್ ಮಾಡುವಾ್ ಅದರ ಮೂಲ ಗುಣಮಟ್ಟವನ್ನು ಕಳೆದುಕೊಳ್ಳುತ್ತಿತ್ತು. ಆದರೆ ಇನ್ಮುಂದೆ ಅದೇ ಗುಣಮಟ್ಟದಲ್ಲಿ ಶೇರ್ ಮಾಡಲು ವಾಟ್ಸಾಪ್ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಡಾಕ್ಯುಮೆಂಟ್ ಮಾಡುವಂತಹ ಅವಶ್ಯಕತೆಗಳಿರುವುದಿಲ್ಲ.
ಇದನ್ನೂ ಓದಿ: ಒಪ್ಪೋ ರೆನೋ 8ಟಿ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ
ವಾಟ್ಸಾಪ್ ವಾಯ್ಸ್ ನೋಟ್ ಫೀಚರ್
ವಾಟ್ಸಾಪ್ನ ಸ್ಟೇಟಸ್ನಲ್ಲಿ ಈ ಹಿಂದೆ ಕೇವಲ ಫೋಟೋ, ವಿಡಿಯೋಗಳನ್ನು ಮಾತ್ರ ಶೇರ್ ಮಾಡಬಹುದಿತ್ತು. ಆದರೆ ಇನ್ಮುಂದೆ ವಾಟ್ಸಾಪ್ ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅನ್ನು ಸಹ ಶೇರ್ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ