• Home
  • »
  • News
  • »
  • tech
  • »
  • Whatsapp Feature: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್:‌ ಡೆಸ್ಕ್​ಟಾಪ್​ನಲ್ಲಿ ಗೌಪ್ಯತೆ ಕಾಪಾಡುವ ಫೀಚರ್

Whatsapp Feature: ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್:‌ ಡೆಸ್ಕ್​ಟಾಪ್​ನಲ್ಲಿ ಗೌಪ್ಯತೆ ಕಾಪಾಡುವ ಫೀಚರ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಪಂಚದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್, ವಾಟ್ಸಪ್ ನಿರಂತರವಾಗಿ ಬೆಳೆಯುತ್ತಿರುವ ಬಳಕೆದಾರರ ನೆಲೆಗೆ ಉತ್ತಮ ಇಂಟರ್ಫೇಸ್ ಅನ್ನು ನೀಡಲು ಹೊಸತನಕ್ಕೆ ಹೆಸರುವಾಸಿಯಾಗಿದೆ. ಇದೀಗ ಹೊಸ ಅಪ್​ಡೇಟ್ಸ್​​ ಅನ್ನು ವಾಟ್ಸಪ್ ಪರಿಚಯಿಸುತ್ತಿದೆ. ಹಾಗಿದ್ರೆ ಏನು ಆ ಫೀಚರ್ಸ್​ ಇಲ್ಲಿದೆ ಮಾಹಿತಿ.

ಮುಂದೆ ಓದಿ ...
  • Share this:

    ಸೋಶಿಯಲ್‌ ಮೀಡಿಯಾಗಳ (Social Media) ಹೆಚ್ಚಿನ ಬಳಕೆಯಿಂದಾಗಿ ಬಳಕೆದಾರರು ಗೌಪ್ಯತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಗಳು ಸಹ ಗ್ರಾಹಕರ ಗೌಪ್ಯತೆ, ಭದ್ರತೆ, ಸುರಕ್ಷತೆ ಬಗ್ಗೆ ಹೆಚ್ಚು ಆದ್ಯತೆ ನೀಡಲು ದಿನಕ್ಕೊಂದು ಹೊಸ ಫೀಚರ್‌ಗಳೊಂದಿಗೆ ಬರುತ್ತಿವೆ. ವಾಟ್ಸಪ್ ಕೂಡ ಇದೇ ಹಾದಿಯಲ್ಲಿದ್ದು, ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ (End - To - End Encription) ನಂತಹ ಸೆಕ್ಯುರಿಟಿಗೆ ಸಂಬಂಧಿಸಿದ ಹಲವು ವೈಶಿಷ್ಟ್ಯವನ್ನು ಪರಿಚಯಿಸಿದೆ. ಇತ್ತೀಚೆಗೆ ವಾಟ್ಸಪ್​ನಲ್ಲಿ (Whatsapp) ಬಹಳಷ್ಟು ಅಪ್​ಡೇಟ್ಸ್​​ಗಳು (Updates) ಆಗುತ್ತಿದ್ದು ಇದು ಬಳಕೆದಾರರಿಗೆ ಬಹಳಷ್ಟು ಸರಳವಾಗುವಂತೆ ರೂಪಿಸುತ್ತಿದೆ.


    ಪ್ರಪಂಚದ ಅತ್ಯಂತ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್, ವಾಟ್ಸಪ್ ನಿರಂತರವಾಗಿ ಬೆಳೆಯುತ್ತಿರುವ ಬಳಕೆದಾರರ ನೆಲೆಗೆ ಉತ್ತಮ ಇಂಟರ್ಫೇಸ್ ಅನ್ನು ನೀಡಲು ಹೊಸತನಕ್ಕೆ ಹೆಸರುವಾಸಿಯಾಗಿದೆ. ವಿನ್ಯಾಸ ಸಂಬಂಧಿತ ಬದಲಾವಣೆಗಳಿಂದ ಹಿಡಿದು ಗೌಪ್ಯತೆಯನ್ನು ಹೆಚ್ಚಿಸಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವವರೆಗೂ ಮೆಟಾ-ಮಾಲೀಕತ್ವದ ಅಪ್ಲಿಕೇಶನ್ ಕಳೆದ ಕೆಲವು ತಿಂಗಳುಗಳಲ್ಲಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ.


    ಡೆಸ್ಕ್‌ಟಾಪ್‌ ಬಳಕೆದಾರರಿಗೆ ಸ್ಕ್ರೀನ್ ಲಾಕ್


    ವಾಟ್ಸಪ್ ಪ್ರಸ್ತುತ ಡೆಸ್ಕ್‌ಟಾಪ್‌ ಬಳಕೆದಾರರಿಗೆ ಹೊಸದೊಂದು ಫೀಚರ್‌ ಅನ್ನು ತಂದಿದೆ. ಈ ಫೀಚರ್‌ ವೆಬ್‌ ಬಳಕೆದಾರರಿಗೆ ಗೌಪ್ಯತೆಯ ಬಗ್ಗೆ ಹೆಚ್ಚು ಭದ್ರತೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ. ಮೆಟಾ ಮಾಲೀಕತ್ವದ ಕಂಪನಿ ಬಳಕೆದಾರರಿಗೆ ಈಗ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೀವು ಪ್ರತಿ ಬಾರಿ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಪ್ ಅನ್ನು ತೆರೆದಾಗ, ನಿಮ್ಮ ಪಾಸ್‌ವರ್ಡ್‌ ಅನ್ನು ನಮೂದಿಸಲು ನಿಮ್ಮನ್ನು ಇದು ಕೇಳುತ್ತದೆ.


    ಇದನ್ನೂ ಓದಿ: ಇದೀಗ ಕೇವಲ 1000 ರೂಪಾಯಿಗೆ ಫ್ಲಿಪ್​ಕಾರ್ಟ್​ನಲ್ಲಿ ಸ್ಮಾರ್ಟ್​ಟಿವಿ ಖರೀದಿಸಬಹುದು!


    ಡೆಸ್ಕಾಟಾಪ್‌ ಬಳಕೆದಾರರಿಗೆ ಪಾಸ್‌ವರ್ಡ್‌ ನೀಡುವ ಮೂಲಕ ಬಳಕೆದಾರರು ಮಾಡುವ ಚಾಟಿಂಗ್‌ಗೆ ಹೆಚ್ಚಿನ ಸುರಕ್ಷತೆ ನೀಡುತ್ತದೆ. ಒಟ್ಟಾರೆ ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಈ ಹೊಸ ವೈಶಿಷ್ಟ್ಯವು ಯಾವುದೇ ಅನಧಿಕೃತ ಪ್ರವೇಶದಿಂದ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ರಕ್ಷಿಸಲು ಪಾಸ್‌ವರ್ಡ್ ಅನ್ನು ಹೊಂದಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಅಂದರೆ ಬಳಕೆದಾರರು ತಮ್ಮ ಡೆಸ್ಕ್​​ಟಾಪ್‌ನಲ್ಲಿ ವಾಟ್ಸಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ.


    ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೆ ಲಭ್ಯ


    ಪ್ರಸ್ತುತ ಈ ವೈಶಿಷ್ಟ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲೇ ಸಾಮಾನ್ಯ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.


    ವರದಿಯ ಪ್ರಕಾರ


    Wabetainfo ವರದಿ ಮಾಡಿರುವ ಪ್ರಕಾರ, ವೈಶಿಷ್ಟ್ಯವು ಹೊಸದಾಗಿದೆ. ಬಳಕೆದಾರರು ತಮ್ಮ ಚಾಟ್‌ಗಳನ್ನು ಹೆಚ್ಚು ಸುರಕ್ಷಿತವಾಗಿರಿಸುವ ಮೂಲಕ ಅಪ್ಲಿಕೇಶನ್ ಪಾಸ್‌ವರ್ಡ್ ರಕ್ಷಣೆಯನ್ನು ಯಾವಾಗ ಹೊಂದಿರಬೇಕು ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.


    ಡೆಸ್ಕ್‌ಟಾಪ್ ಬಳಕೆದಾರರಿಗೆ ಇದೇ ಮೊದಲ ಬಾರಿಗೆ ವೈಶಿಷ್ಟ್ಯ ಪರಿಚಯ


    ವಾಟ್ಸಪ್ ಬಗ್ಗೆ ಡೆಸ್ಕ್‌ಟಾಪ್ ಆವೃತ್ತಿಯ ಅಪ್ಲಿಕೇಶನ್ ಇಲ್ಲಿಯವರೆಗೆ ಪಾ‌ಸ್‌ವರ್ಡ್ ಸುರಕ್ಷತೆಯನ್ನು ಹೊಂದಿರಲಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ, ಅಪ್ಲಿಕೇಶನ್ Android ಮತ್ತು iOS ಗಾಗಿ ವಾಟ್ಸಪ್ ಬೀಟಾಗಾಗಿ ಸ್ಕ್ರೀನ್ ಲಾಕ್ ಅನ್ನು ಬಿಡುಗಡೆ ಮಾಡಿತು.


    ಆದಾಗ್ಯೂ, ಇದನ್ನು ವೆಬ್ ಮತ್ತು ಡೆಸ್ಕ್‌ಟಾಪ್ ಕ್ಲೈಂಟ್‌ಗಳಲ್ಲಿ ಪರಿಚಯಿಸಲಾಗಿಲ್ಲ. ಈಗ, ಬಳಕೆದಾರರ ಆಗ್ರಹದ ಮೇರೆಗೆ ಇನ್‌ಸ್ಟಂಟ್‌ ಮೆಸೇಜ್‌ ಆ್ಯಪ್‌ ಡೆಸ್ಕ್‌ಟಾಪ್ ಬೀಟಾಗಾಗಿ ಭದ್ರತೆ, ಗೌಪ್ಯತೆ ದೃಷ್ಟಿಯಿಂದ ಸ್ಕ್ರೀನ್ ಲಾಕ್ ಆಯ್ಕೆಯನ್ನು ಪರಿಚಯಿಸಲು ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದೆ.


    ಸ್ಕ್ರೀನ್ ಲಾಕ್ ಪಾಸ್‌ವರ್ಡ್ ಮರೆತು ಹೋದರೆ?


    ಡೆಸ್ಕ್‌ಟಾಪ್ ಬಳಕೆದಾರರು‌ ಸ್ಕ್ರೀನ್ ಲಾಕ್ ಪಾಸ್‌ವರ್ಡ್ ಮರೆತರೆ ವಾಟ್ಸಪ್ ಡೆಸ್ಕ್‌ಟಾಪ್‌ನಿಂದ ಲಾಗ್ ಔಟ್ ಮಾಡಬೇಕಾಗುತ್ತದೆ ಮತ್ತು QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಲಾಗ್ ಇನ್ ಮಾಡಬಹುದು.


    ಇತರೆ ಫೀಚರ್ಸ್‌


    ಇತ್ತೀಚಿನ ವೈಶಿಷ್ಟ್ಯಗಳಲ್ಲಿ ವಾಟ್ಸಪ್ ಪೋಲ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ವೈಶಿಷ್ಟ್ಯವು Android ಮತ್ತು iPhone ಎರಡಕ್ಕೂ ಕಾರ್ಯನಿರ್ವಹಿಸುತ್ತದೆ. ಮೊದಲು, ಈ ವೈಶಿಷ್ಟ್ಯವು ಬಳಕೆದಾರರಿಗೆ ಗುಂಪುಗಳಲ್ಲಿ ಪೋಲ್‌ಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು ಆದರೆ ಈಗ ವಾಟ್ಸ್‌ಆ್ಯಪ್‌ ಬಳಕೆದಾರರು ಇದನ್ನು ವೈಯಕ್ತಿಕ ಚಾಟ್‌ಗಳಲ್ಲಿಯೂ ಬಳಸಬಹುದು.


    ಜೊತೆಗೆ ಸಮುದಾಯ, ಗುಂಪಿನಲ್ಲಿ ಭಾಗವಹಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಆಡಿಯೋ/ವೀಡಿಯೋ ಕರೆಗಳಿಗೆ ಲಿಂಕ್ ಅನ್ನು ರಚಿಸುವ ಆಯ್ಕೆಯನ್ನು ಒಳಗೊಂಡಿರುವ ಹಲವು ಹೊಸ ವೈಶಿಷ್ಟ್ಯಗಳನ್ನು ಇತ್ತೀಚೆಗೆ ಪ್ರಾರಂಭಿಸಿದೆ.

    Published by:Prajwal B
    First published: