ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್ ಇತ್ತೀಚೆಗೆ ಗ್ರಾಹಕರಿಗಾಗಿ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇದೆ. ವಾಟ್ಸಾಪ್ (WhatsApp) ಈ ಹಿಂದೆ ತನ್ನ ಬಳಕೆದಾರರಿಗಾಗಿ ಅಪ್ಲಿಕೇಶನ್ನಲ್ಲಿ ಹಲವಾರು ಫೀಚರ್ಸ್ಗಳು ಬರಲಿದೆ ಎಮದು ಹೇಳಿತ್ತು. ಅದೇ ರೀತಿ ಈ ಬಾರಿ ಆರಂಭದಿಂದಲೇ ಬಹಳಷ್ಟು ತನ್ನ ಅಪ್ಲಿಕೇಶನ್ನಲ್ಲಿ ಬಹಳಷ್ಟು ಅಪ್ಡೇಟ್ (Update) ಅನ್ನು ಮಾಡಿದೆ. ಕಾಲ್ ಫೀಚರ್ಸ್ ಆಗಿರಬಹುದು, ಮೆಸೇಜಿಂಗ್ನಲ್ಲಾಗಿರಬಹುದು ಹೀಗೆ ಹಲವಾರು ಫೀಚರ್ಸ್ಗಳನ್ನು ಬಳಕೆದಾರರಿಗಾಶಗಿ ಪರಿಚಯಸಿದೆ. ಇದೀಗ ಹೊಸ ಫೀಚರ್ ಹೊರತರಲು ಪ್ಲ್ಯಾನ್ ಮಾಡಿದ್ದು, ಇದು ವಾಟ್ಸಾಪ್ ಗ್ರೂಪ್ ಮತ್ತು ಅಡ್ಮಿನ್ಗಳಿಗಾಗಿ ಪರಿಚಯಿಸುತ್ತಿರುವ ಫೀಚರ್ ಆಗಿದೆ.
ವಾಟ್ಸಾಪ್ ಗ್ರೂಪ್ಗೆ ಇದುವರೆಗೆ ಯಾರು ಬೇಕಾದರು ಜಾಯಿನ್ ಆಗ್ಬಹುದಿತ್ತು. ಆದರೆ ಇನ್ಮುಂದೆ ಇದಕ್ಕೂ ಹೊಸ ನಿಯಮಗಳನ್ನು ಹೊರತಂದಿದೆ. ಇದು ಅಡ್ಮಿನ್ಗಳಿಗೂ ಅನ್ವಯಿಸಲಿದ್ದು ಇನ್ಮುಂದೆ ಯಾವುದೇ ವಾಟ್ಸಾಪ್ ಗ್ರೂಪ್ಗೆ ಸೇರಬೇಕಾದ್ರೂ ಅಡ್ಮಿನ್ಗಳ ಅನುಮತಿಬೇಕು.
ವಾಟ್ಸಾಪ್ನ ಹೊಸ ಫೀಚರ್ ಯಾವುದು?
ವಾಟ್ಸಾಪ್ ಇದೀಗ ‘ಅಪ್ರೂವ್ ನ್ಯೂ ಪಾರ್ಟಿಸಿಪೇಂಟ್ಸ್‘ (Approve New Participants) ಎಂಬ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್ ಮೂಲಕ ಇನ್ಮುಂದೆ ಯಾರೇ ಆಗಲಿ ವಾಟ್ಸಾಪ್ ಗ್ರೂಪ್ಗೆ ಸೇರ್ಬೇಕಾದ್ರು ಅಡ್ಮಿನ್ಗಳ ಪರ್ಮಿಶನ್ ಬೇಕು. ಯಾರೇ ಆಗಲಿ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ಗೆ ಸೇರಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಆ್ಯಡ್ ಮಾಡ್ಬೇಕಾ ಅಥವಾ ರಿಜೆಕ್ಟ್ ಮಾಡುವ ಆಯ್ಕೆ ಅಡ್ಮಿನ್ಗೆ ಸಿಗಲಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಜೊತೆಗೆ ಉಚಿತ ಸ್ಮಾರ್ಟ್ ಫೋನ್ ಆಫರ್! ಫ್ರೀ ಸಿಕ್ತು ಅಂತ ಖರೀದಿಸಿದವಳ 7 ಲಕ್ಷ ಮಂಗಮಾಯ!
ಇದರಿಂದ ಉಪಯೋಗ ಏನು?
ಇದುವರೆಗೆ ಯಾರು ಬೇಕಾದ್ರು ಯಾವುದೇ ವಾಟ್ಸಾಪ್ ಗ್ರೂಪ್ಗೆ ಸೇರಲು ಅನುಮತಿ ಇತ್ತು. ಕೇವಲ ಒಂದು ಲಿಂಕ್ ಕಳಿಸಿದರೆ ಸಾಕು ಅದಕ್ಕೆ ಕ್ಲಿಕ್ ಕೊಡುವ ಮೂಲಕ ವಾಟ್ಸಾಪ್ ಗ್ರೂಪ್ಗೆ ಸೇರಬಹುದಿತ್ತು. ಆದರೆ ಇನ್ಮುಂದೆ ಈ ರೀತಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿಯೇ ವಾಟ್ಸಾಪ್ ಈ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಇನ್ಮುಂದೆ ಬಳಕೆದಾರರಿಗೆ ಇಷ್ಟ ಬಂದ ಹಾಗೆ ಗ್ರೂಪ್ ಸೇರಲಾಗುವುದಿಲ್ಲ.
ಹೇಗೆ ಬಳಸೋದು?
ಇನ್ನು ಈ ಫೀಚರ್ಗಾಗಿಯೇ ವಾಟ್ಸಾಪ್ ಗ್ರೂಪ್ನಲ್ಲಿ ಹೊಸ ಆಯ್ಕೆಯನ್ನು ನೀಡಲಾಗುತ್ತದೆ. ಈ ಮೂಲಕ ವಾಟ್ಸಾಪ್ನ ಈ ಹೊಸ ಫೀಚರ್ ಅನ್ನು ಸಕ್ರಿಯಗೊಳಿಸಬಹುದು.
ಯಾರಿಗೆಲ್ಲಾ ಲಭ್ಯವಿರುತ್ತದೆ?
ವಾಟ್ಸಾಪ್ನ ಈ ಹೊಸ ಫೀಚರ್ ಅನ್ನು ಐಓಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಟೆಸ್ಟ್ ಮಾಡಲಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಆದರೆ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಲ್ಲಿ ಯಾರಿಗೆ ಮೊದಲು ಲಭ್ಯವಾಗುತ್ತದೆ ಎಂದು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಕೆಲವೇ ದಿನಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುವುದು ಗ್ಯಾರಂಟಿ.
ವಾಟ್ಸಾಪ್ನಲ್ಲಿ ಹೊಸ ಫೀಚರ್\
ವಾಟ್ಸಾಪ್ ಐಒಎಸ್ ಬೀಟಾ ವರ್ಷನ್‌ನಲ್ಲಿ ಚಾಟ್ ಲೀಸ್ಟ್ನಲ್ಲಿ ಬರುವಂತಹ ಅನ್ನೌನ್ ನಂಬರ್ಗಳ ಬದಲಿಗೆ ಪುಶ್ ನೇಮ್ಗಳನ್ನು ನೀಡಲು ಮುಂದಾಗಿದೆ. ಇದರಿಂದ ಇನ್ಮುಂದೆ ಯಾವುದೇ ಅಪರಿಚಿತ ನಂಬರ್ಗಳಿಂದ ಮೆಸೇಜ್ ಬಂದ್ರೂ ಬೇಗನೆ ಗುರುತಿಸಬಹುದು.
ಯಾವ ರೀತಿ ಕಾರ್ಯನಿರ್ವಹಿಸುತ್ತದೆ?
ವಾಟ್ಸಾಪ್ ಐಒಎಸ್ ಬೀಟಾ ವರ್ಷನ್‌ಪರಿಚಯಿಸಿರುವ ಈ ಫೀಚರ್ ವಾಟ್ಸಾಪ್ ಗ್ರೂಪ್ನಲ್ಲಿ ಯಾವುದೇ ನಮಗೆ ಗೊತ್ತಿಲ್ಲದ ನಂಬರ್ನಿಂದ ಮೆಸೇಜ್ಗಳು ಬಂದಾಗ ಫೋನ್ ನಂಬರ್ ಬದಲಿಗೆ ಅದರ ಪುಶ್ ನೇಮ್ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಯಾವುದೇ ಚಾಟ್ ಅನ್ನು ಓಪನ್ ಮಾಡುವ ಮೊದಲಿಗೆ ಅದರ ಪುಶ್ ನೇಮ್ ಮೊದಲು ಕಾಣುತ್ತದೆ. ಇದರಿಂದ ಯಾವುದೇ ಚಾಟ್ ಅನ್ನು ಧೈರ್ಯದಿಂದ ಓಪನ್ ಮಾಡಬಹುದಾಗಿದೆ.
ಅನೌನ್ ನಂಬರ್ ಪತ್ತೆ ಹಚ್ಚಬಹುದು
ಇನ್ನು ವಾಟ್ಸಾಪ್ ಪರಿಚಯಿಸುತ್ತಿರುವ ಈ ಫೀಚರ್ನಿಂದ ಬಳಕೆದಾರರಿಗೆ ಯಾವುದೇ ವಾಟ್ಸಾಪ್ ಗ್ರೂಪ್ನಿಂದ ಅಪರಿಚಿತ ಕಾಲ್ಗಳು ಬಂದಾ ತಕ್ಷಣ ಪತ್ತೆಹಚ್ಚಬಹುದು. ಹಾಗೆಯೇ ಇದರಿಂದ ಯಾವುದೇ ತೊಂದರೆಗಳು ಸಹ ಇನ್ಮುಂದೆ ಎದುರಾಗುವುದಿಲ್ಲ.ಇದುವರೆಗೆ ಯಾವುದೇ ಅನೌನ್ ನಂಬರ್ನಿಂದ ಮಸೇಜ್ಗಳು ಬಂದಾಗ ಕೇವಲ ನಂಬರ್ಗಳು ಬರುತ್ತಿತ್ತು. ಆದರೆ ಇನ್ನುಂದೆ ಪುಶ್ ನೇಮ್ಗಳು ಬರ್ತದೆ ಎಂದು ವರದಿಯೊಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ