WhatsApp Update: ವೆಬ್ ವಾಟ್ಸಾಪ್​ ಬಳಕೆದಾರರಿಗೆ ಗುಡ್​ ನ್ಯೂಸ್​! ಹಿಂದೆಂದೂ ನೋಡಿರದ ಫೀಚರ್ಸ್ ಬಿಡುಗಡೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಕಂಪೆನಿಯ ಈ ಹೊಸ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಹಾಗೂ ಫೈಲ್‌ಗಳನ್ನು ಬೇಕಾದವರಿಗೆ ಸೆಂಡ್‌ ಮಾಡಬಹುದು ಎಂದು ವಾಟ್ಸಾಪ್‌ ತಿಳಿಸಿದೆ. ಹಾಗಿದ್ರೆ. ಯಾವೆಲ್ಲಾ ಬಳಕೆದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ

ಮುಂದೆ ಓದಿ ...
 • Share this:

  ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್​​ ಇತ್ತೀಚೆಗೆ ತನ್ನ ಸ್ಮಾರ್ಟ್​​ಫೋನ್​ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಕಳೆದ ವರ್ಷ ವಾಟ್ಸಾಪ್​ (WhatsApp) ಬಹಳಷ್ಟು ಫೀಚರ್ಸ್​ಗಳನ್ನು ಬಿಡುಗಡೆ ಮಾಡಿತ್ತು. ಜೊತೆಗೆ ಮುಂದಿನ ವರ್ಷದಲ್ಲಿ ಇನ್ನೂ ಹಲವಾರು ಅಪ್ಡೇಟ್​ಗಳ ಬರಲಿವೆ ಎಂದು ಹೇಳಿದ್ದರು. ಅದೇ ರೀತಿ ಈ ವರ್ಷದ ಆರಂಭದಿಂದು ಹಿಡಿದು ಇಲ್ಲಿಯವರೆಗೆ ಸಾಕಷ್ಟು ಫೀಚರ್ಸ್​ಗಳನ್ನು ಪರಿಚಯಿಸಿದೆ. ಇದೀಗ ವೆಬ್​ ವಾಟ್ಸಾಪ್​ ಬಳಕೆದಾರರಿಗೆ ಹೊಸ  ಫೀಚರ್ ಒಂದನ್ನು ಪರಿಚಯಿಸಿದೆ. ಈ ಮೂಲಕ ಇನ್ಮುಂದೆ ವೆಬ್​ ಬಳಕೆದಾರರು ಸಹ ವಾಟ್ಸಾಪ್​ನಲ್ಲಿ ಕ್ವಾಲಿಟಿಯ ಫೋಟೋಗಳನ್ನು (Quality Photos) ಅದೇ ಗುಣಮಟ್ಟದಲ್ಲಿ ಶೇರ್​ ಮಾಡಬಹುದಾಗಿದೆ. ಈ ಫೀಚರ್​ ಈಗಾಗಲೇ ಸ್ಮಾರ್ಟ್​​ಫೋನ್​ ಬಳಕೆದಾರರಿಗೆ ಲಭ್ಯವಿದೆ.


  ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಕಂಪೆನಿಯ ಈ ಹೊಸ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಹಾಗೂ ಫೈಲ್‌ಗಳನ್ನು ಬೇಕಾದವರಿಗೆ ಸೆಂಡ್‌ ಮಾಡಬಹುದು ಎಂದು ವಾಟ್ಸಾಪ್‌ ತಿಳಿಸಿದೆ. ಹಾಗಿದ್ರೆ. ಯಾವೆಲ್ಲಾ ಬಳಕೆದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ.


  ವೆಬ್​ ಬಳಕೆದಾರರಿಗೆ ಲಭ್ಯ


  ಈಗಾಗಲೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಯಾವುದೇ ಫೋಟೋವನ್ನು ಮೂಲ ಗುಣಮಟ್ಟದಲ್ಲಿಯೇ ಸೆಂಡ್‌ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅದರಂತೆ ಈಗ ಯಾರೆಲ್ಲಾ ವೆಬ್‌ ಮೂಲಕ ವಾಟ್ಸಾಪ್‌ ಬಳಕೆ ಮಾಡುತ್ತಾರೋ ಅವರಿಗೆ ಇನ್ಮುಂದೆ ಈ ಫೀಚರ್​ ಲಭ್ಯವಾಗಲಿದೆ ಎಮದು ವಾಟ್ಸಾಪ್ ತಿಳಿಸಿದೆ. ಅಂದರೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡಲಾಗುತ್ತದೆ.


  ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಒಪ್ಪೋ ಫೈಂಡ್ ಎನ್2 ಫ್ಲಿಪ್​ ಸ್ಮಾರ್ಟ್​​ಫೋನ್​!


  ಈ ಫೋಟೋ ವಿಚಾರದಲ್ಲಿ ವಾಟ್ಸಾಪ್‌ ಶೀಘ್ರಗತಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಯಾಕೆಂದರೆ ವಾಟ್ಸಾಪ್‌ನಲ್ಲಿ ಚಾಟ್​​ನಷ್ಟೇ ಮುಖ್ಯವಾಗಿ ಫೋಟೋಗಳನ್ನೂ ಸೆಂಡ್‌ ಮಾಡಲಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಟ್ಸಾಪ್‌ ಬಾಕಿ ಉಳಿದಿದ್ದ ವೆಬ್‌ ಬಳಕೆದಾರರಿಗೂ ಈ ಫೀಚರ್ಸ್‌ ಪರಿಚಯಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.


  ಯಾವಾಗದಿಂದ ಲಭ್ಯ?


  ವಾಬೀಟಾಇನ್ಫೋ ಸಂಸ್ಥೆಯ ವರದಿಯ ಪ್ರಕಾರ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ಮೂಲ ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಬಳಕೆದಾರರನ್ನು ಅನುಮತಿಸಲು ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಉಲ್ಲೇಖಿಸಿದೆ. ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು, ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಭವಿಷ್ಯದ ನವೀಕರಣದೊಂದಿಗೆ ಇದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.


  ಸಾಂಕೇತಿಕ ಚಿತ್ರ


  ಯಾವ ರೀತಿ ಬಳಕೆ ಮಾಡ್ಬಹುದು?


  ಫೋಟೋ ಗುಣಮಟ್ಟದ ಫೀಚರ್ಸ್‌ ಪ್ರಸ್ತುತ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಿದ್ದು, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರು ಈಗ ಮೀಸಲಾದ ಫೋಟೋ ಅಪ್‌ಲೋಡ್ ಗುಣಮಟ್ಟದ ವಿಭಾಗವನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ. ಮೊದಲು ವಾಟ್ಸಾಪ್‌ ಓಪನ್‌ ಮಾಡಿ ನಂತರ ಸೆಟ್ಟಿಂಗ್‌ ವಿಭಾಗವನ್ನು ಗಮನಿಸಿ, ಅಲ್ಲಿ ಸ್ಟೋರೇಜ್‌ ಹಾಗೂ ಡೇಟಾ ಮೇಲೆ ಕ್ಲಿಕ್‌ ಮಾಡಿದರೆ ಮೀಡಿಯಾ ಅಪ್‌ಲೋಡ್ ಗುಣಮಟ್ಟದ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
  ಈ ವಿಭಾಗದಲ್ಲಿ ನೀವು ಫೋಟೋವನ್ನು ಯಾವ ಗುಣಮಟ್ಟದಲ್ಲಿ ಸೆಂಡ್‌ ಮಾಡಬೇಕು ಎಂದು ಮೂರು ಆಯ್ಕೆಗಳನ್ನು ನೀಡಲಾಗುತ್ತದೆ. ಅಂದರೆ ಆಟೋ, ಬೆಸ್ಟ್‌ ಕ್ವಾಲಿಟಿ ಹಾಗೂ ಡಾಟಾ ಸೇವರ್‌ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಮೂಲಕ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಟ್ಯಾಪ್‌ ಮಾಡಿ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ವಿಡಿಯೋದಂತೆ ಫೋಟೋ ಸಹ ಶೇರ್ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ.

  Published by:Prajwal B
  First published: