• Home
 • »
 • News
 • »
 • tech
 • »
 • IPhone 14 Offers: ಐಫೋನ್​ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಗುಡ್ ನ್ಯೂಸ್​! 12 ಸಾವಿರಕ್ಕೂ ಅಧಿಕ ರಿಯಾಯಿತಿ ಲಭ್ಯ

IPhone 14 Offers: ಐಫೋನ್​ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಗುಡ್ ನ್ಯೂಸ್​! 12 ಸಾವಿರಕ್ಕೂ ಅಧಿಕ ರಿಯಾಯಿತಿ ಲಭ್ಯ

ಐಫೋನ್ 14

ಐಫೋನ್ 14

ಆ್ಯಪಲ್​ ಕಂಪೆನಿಯ ಇತ್ತೀಚೆಗೆ ಬಿಡುಗಡೆಯಾದ ಐಫೋನ್​ 14 ಸ್ಮಾರ್ಟ್​ಫೋನ್​ ಆ್ಯಪಲ್​ ಸ್ಟೋರ್​ನಲ್ಲಿ ಭಾರೀ ಅಗ್ಗದಲ್ಲಿ ಮಾರಾಟವಾಗುತ್ತಿದೆ. ಅಂದರೆ ಈ ಐಫೋನ್​ 14 ಮೊಬೈಲ್ ಮೇಲೆ ಬರೋಬ್ಬರಿ 12 ಸಾವಿರ ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ.

 • Share this:

  ಆ್ಯಪಲ್ ಕಂಪೆನಿಯ (Apple Company) ಸ್ಮಾರ್ಟ್​​ಫೋನ್​ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದರ ಫೀಚರ್ಸ್​ ಮೂಲಕವೇ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಐಫೋನ್ (IPhone)​ ಅನ್ನು ಖರೀದಿ ಮಾಡಬೇಕೆಂದ ಆಸೆ ಇರುತ್ತದೆ. ಆದರೆ ಆಸೆಗೆ ಅಡ್ಡಿಯಾಗುವ ಮುಖ್ಯ ಕಾರಣವೆಂದರೆ ಅದರ ಬೆಲೆ. ಐಫೋನ್​ಗಳ ಬೆಲೆ ದುಬಾರಿ ಆದರೆ ಅದರ ಫೀಚರ್ಸ್​​​ ಸಹ ಅಷ್ಟೇ ಗುಣಮಟ್ಟದ್ದಾಗಿರುತ್ತದೆ. ಯಾವು್ದೇ ಸ್ಮಾರ್ಟ್​​​ಫೋನ್​ಗಳಿಲ್ಲದ ಫೀಚರ್ಸ್​ ಈ ಐಫೋನ್​ಗಳು ಹೊಂದಿರುತ್ತದೆ. ಸದ್ಯ ಆ್ಯಪಲ್ ಕಂಪೆನಿಯ ಈ ಸ್ಮಾರ್ಟ್​ಫೋನ್​ ಮೇಲೆ ಸ್ವತ: ಆ್ಯಪಲ್ ಕಂಪೆನಿಯೇ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆ್ಯಪಲ್​ ಸ್ಟೋರ್​ಗಳಲ್ಲಿ (Apple Store) ಈ ಸ್ಮಾರ್ಟ್​​ಫೋನ್ ಲಭ್ಯವಿದೆ.


  ಆ್ಯಪಲ್​ ಕಂಪೆನಿಯ ಇತ್ತೀಚೆಗೆ ಬಿಡುಗಡೆಯಾದ ಐಫೋನ್​ 14 ಸ್ಮಾರ್ಟ್​ಫೋನ್​ ಆ್ಯಪಲ್​ ಸ್ಟೋರ್​ನಲ್ಲಿ ಭಾರೀ ಅಗ್ಗದಲ್ಲಿ ಮಾರಾಟವಾಗುತ್ತಿದೆ. ಅಂದರೆ ಈ ಐಫೋನ್​ 14 ಮೊಬೈಲ್ ಮೇಲೆ ಬರೋಬ್ಬರಿ 12 ಸಾವಿರ ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ.


  ಏನೆಲ್ಲಾ ಆಫರ್ಸ್​ ಲಭ್ಯವಿದೆ?


  ಆ್ಯಪಲ್‌ ಐಫೋನ್‌ 14 ನ 128ಜಿಬಿ ವೇರಿಯಂಟ್‌ನ ಬೆಲೆ ಮೂಲ ಬೆಲೆ 79,900 ರೂಪಾಯಿ ಆಗಿದೆ. ಈ ಫೋನ್‌ ಅನ್ನು ಸದ್ಯ ಆ್ಯಪಲ್ ಸ್ಟೋರೆ್​ನಲ್ಲಿ 7,000 ರೂ.ವರೆಗಿನ ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ನಿಮ್ಮ ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಹೆಚ್ಚುವರಿಯಾಗಿ 5,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಈ ಆಫರ್​ ಕೇವಲ ಐಫೋನ್ ಅಷ್ಟೇ ಅಲ್ಲದೆ ಐಪ್ಯಾಡ್‌, ಮ್ಯಾಕ್‌ಬುಕ್‌, ಮತ್ತು ಆ್ಯಪಲ್‌ ವಾಚ್‌ ಸೇರಿದಂತೆ ಇತರೆ ಆ್ಯಪಲ್‌ ಡಿವೈಸ್‌ಗಳ ಮೇಲೂ ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದೆ.
  ಬ್ಯಾಂಕ್​ ಆಫರ್ಸ್​ ಸಹ ಲಭ್ಯ


  ಮಾರುಕಟ್ಟೆಯಲ್ಲಿ ಅಧಿಕೃತವಾಗಿ 79,900 ರೂಪಾಯಿ ಬೆಲೆಯನ್ನು ಹೊಂದಿರುವ ಈ ಫೋನ್‌ ಅನ್ನು 71,111 ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ನೀವು ಈ ಫೋನ್‌ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿ ಮಾಡಿದರೆ ಹೆಚ್ಚುವರಿಯಾಗಿ 4,000 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಫೋನ್‌ನ ಬೆಲೆ 67,111 ರೂ. ಗಳಷ್ಟು ಇಳಿಕೆಯಾಗುತ್ತದೆ. ಇದಲ್ಲದೆ, ಹಳೆಯ ಫೋನ್ ಅನ್ನು ಕ್ಯಾಶಿಫೈನಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ರಿಯಾಯಿತಿಯನ್ನೂ ಸಹ ಪಡೆಯಬಹುದು.


  ಕ್ಯಾಶಿಫೈನಲ್ಲಿ ಮಾರಾಟದ ಮೂಲಕ ಇನ್ನಷ್ಟು ರಿಯಾಯಿತಿ


  ಕ್ಯಾಶಿಫೈನಲ್ಲಿ ಹಳೆಯ ಐಫೋನ್ 12 ಗೆ ಸಾಮಾನ್ಯವಾಗಿ 35,000 ರೂ. ಗಳ ಬೆಲೆ ಇದ್ದು, ಅದೇ ರೀತಿ ಐಫೋನ್‌ 11 ನ್ನು 24,000 ರೂಪಾಯಿಗಳಿಗೆ ಮಾರಾಟ ಮಾಡಬಹುದು. ಆದರೂ ಈ ಫೋನ್‌ಗಳ ಬ್ಯಾಟರಿಯ ಗುಣಮಟ್ಟ ಚೆನ್ನಾಗಿದ್ದರೆ ಹಾಗೂ ಫೋನ್​ಗೆ ಯಾವುದೇ ರೀತಿಯ ಹಾನಿಯಾಗದಿದ್ದರೆ ನಿಗದಿ ಪಡಿಸಲಾದ ಹಣಕ್ಕಿಂತ ಹೆಚ್ಚಿನ ದರಕ್ಕೆ ಫೋನ್‌ ಅನ್ನು ಮಾರಾಟ ಮಾಡಬಹುದು. ಇದರಿಂದಾಗಿ ನೀವು ಹೊಸ ಐಫೋನ್‌ 14 ಅನ್ನು ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.


  ಐಫೋನ್​ 14 ಸ್ಮಾರ್ಟ್​​​ಫೋನ್​ ಫೀಚರ್ಸ್


  ಐಫೋನ್ 14


  ಡಿಸ್​ಪ್ಲೇ ವಿನ್ಯಾಸ


  ಆ್ಯಪಲ್​ ಕಂಪೆನಿಯ ಈ ಐಫೋನ್‌ 14 ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್​​ಡಿಆರ್​ ಓಎಲ್​ಇಡಿ ಡಿಸ್​ಪ್ಲೇಯನ್ನು ಹೊಂದಿದೆ. ಈ ಡಿಸ್​ಪ್ಲೇಯು 1200 ನಿಟ್ಸ್​ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಹಾಗೆಯೇ 60Hz ನ ರಿಫ್ರೆಶ್ ರೇಟ್‌ ಸಾಮರ್ಥ್ಯದೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ.


  ಪ್ರೊಸೆಸರ್ ಸಾಮರ್ಥ್ಯ


  ಈ ಐಫೋನ್ 14 ಫೋನ್ ಎ15 ಬಯೋನಿಕ್ ಚಿಪ್ ಮೂಲಕ ಕಾರ್ಯನಿರ್ವಹಿಸುತ್ತದೆ. 16 ಕೋರ್ NPU ಮತ್ತು 5 ಕೋರ್ ಗ್ರಾಫಿಕ್ಸ್ ಪ್ರೊಸೆಸರ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 4ಜಿಬಿ ರ್‍ಯಾಮ್ ಆಯ್ಕೆಯೊಂದಿಗೆ 128ಜಿಬಿ, 256ಜಿಬಿ, ಮತ್ತು 512ಜಿಬಿ ಯ ಮೂರು ಇಂಟರ್ನಲ್‌ ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯವಿದೆ.


  ಇದನ್ನೂ ಓದಿ: ನೋಕಿಯಾ ಕಂಪೆನಿಯ ಅತ್ಯಾಕರ್ಷಕ ಹೊಸ ಸ್ಮಾರ್ಟ್​​ಫೋನ್ ಲಾಂಚ್! ಫೀಚರ್ಸ್​, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ


  ಕ್ಯಾಮೆರಾ ಫೀಚರ್ಸ್​


  ಕ್ಯಾಮೆರಾ ವಿಚಾರದಲ್ಲಿ ಈ ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, 12ಎಮ್​ಪಿ ವೈಡ್ ಆ್ಯಂಗಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 12ಎಮ್​ಪಿ ಅಲ್ಟ್ರಾ ವೈಡ್ ಆ್ಯಂಗಲ್​ನ ಸೆಕೆಂಡರಿ ಕ್ಯಾಮೆರಾದಿಂದ ಪ್ಯಾಕ್ ಆಗಲಿದೆ. ಇದರೊಂದಿಗೆ ವಿಡಿಯೋ ರೆಕಾರ್ಡಿಂಗ್‌ ಸಂದರ್ಭದಲ್ಲಿ ಡಾಲ್ಬಿ ವಿಷನ್‌ಗೆ ಬೆಂಬಲವನ್ನು ನೀಡಲಿದೆ.

  Published by:Prajwal B
  First published: