ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ (Telecom Company). ಆದರೆ ಇದರಲ್ಲಿ ಹೆಸರು ಪಡೆದ ಕಂಪನಿಗಳು ಕೆಲವೇ ಕೆಲವು. ಆದರೆ ಇದು ತನ್ನದೇ ಆದ ಆಫರ್ಸ್ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಅದೇ ರೀತಿ ಇದೀಗ ಭಾರತೀಯ ಟೆಲಿಕಾಂ ಕಂಪನಿಗಳಲ್ಲಿ 3 ನೇ ಸ್ಥಾನವನ್ನು ವೊಡಫೋನ್ ಐಡಿಯಾ ಕಂಪನಿ (VI Company) ಗಳಿಸಿದೆ. ಇದು ಈ ಬಾರಿ ಹಲವಾರ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plan) ಪರಿಚಯಿಸಿದೆ. ಅದ್ರಲ್ಲೂ ವೊಡಫೋನ್ ಮತ್ತು ಐಡಿಯಾ ಈ ಎರಡು ಕಂಪನಿಗಳು ವಿಲೀನವಾದ ನಂತ ಈ ಟೆಲಿಕಾಂ ಕಂಪನಿ ಹಲವಾರು ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ. ಇದೀಗ ಗ್ರಾಹಕರಿಗೆ ಮತ್ತೆ ಎರಡು ಡೇಟಾ ರೀಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.
ವೊಡಫೋನ್ ಐಡಿಯಾದ ಇದೀಗ ತನ್ನ ಗ್ರಾಹಕರಿಗಾಗಿ 2 ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಇವೆರಡೂ ಡೇಟಾ ವೋಚರ್ ಪ್ಲಾನ್ಗಳಾಗಿವೆ. ವೊಡಫೋನ್ ಐಡಿಯಾ 25 ರೂಪಾಯಿ ಮತ್ತು 55 ರೂಪಾಯಿಯ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಇದರಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ವಿಐ 25 ರೂಪಾಯಿ ಡೇಟಾ ವೋಚರ್ ಪ್ಲ್ಯಾನ್
ವೊಡಫೋನ್ ಐಡಿಯಾದ ಡೇಟಾ ವೋಚರ್ ಪ್ಲ್ಯಾನ್ಗಳಲ್ಲಿ ಒಂದು 25 ರೂಪಾಯಿಯ ಡೇಟಾ ವೋಚರ್ ಪ್ಲಾನ್ ಆಗಿದೆ. ಈ ರೀಚಾರ್ಜ್ ಅನ್ನು ನೀವು ಮಾಡಿದ್ರೆ ಇದು 24 ಗಂಟೆಗಳ ಮಾನ್ಯತೆಯನ್ ನು ಹೊಂದಿರುತ್ತದೆ. ಹಾಗೆ ಈ ರೀಚಾರ್ಜ್ ಮೂಲಕ 1.1 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ ಈ ರೀಚಾರ್ಜ್ ಮೂಲಕ 7 ದಿನಗಳವರೆಗೆ ಯಾವುದೇ ಜಾಹೀರಾತು ಇಲ್ಲದೆ ಮ್ಯೂಸಿಕ್ ಅನ್ನು ಕೇಳಬಹುದಾಗಿದೆ.
ಇದನ್ನೂ ಓದಿ: ರೆಡ್ಮಿ ಕಂಪನಿಯ ಮತ್ತೊಂದು 5ಜಿ ಸ್ಮಾರ್ಟ್ಫೋನ್ ಜನವರಿ 5ಕ್ಕೆ ಬಿಡುಗಡೆ!
ವೊಡಫೋನ್ ಐಡಿಯಾದ 55 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂ ಕಂಪನಿ ನೂತನವಾಗಿ ಪರಿಚಯಿಸಿರುವ ಎರಡು ಪ್ಲ್ಯಾನ್ ಗಳಲ್ಲಿ ವಿಐ 55 ರೂಪಾಯಿ ಪ್ಲ್ಯಾನ್ ಕೂಡ ಒಂದಾಗಿದೆ. ಇದು 4ಜಿ ಡೇಟಾ ವೋಚರ್ ಪ್ಲ್ಯಾನ್ ಆಗಿದ್ದು ಇದರಲ್ಲಿ ಒಟ್ಟು 3.3 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಯೋಜನೆಯು ಒಟ್ಟು 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ ಈ ಯೋಜನೆಯು ಒಂದು ತಿಂಗಳ ವರೆಗೂ ಜಾಹೀರಾತು ಇಲ್ಲದೆ ಮ್ಯೂಸಿಕ್ ಅನ್ನು ಕೇಳುವ ಅವಕಾಶವನ್ನು ನೀಡುತ್ತದೆ.
ಇತರ ಡೇಟಾ ವೋಚರ್ ಪ್ಲ್ಯಾನ್ಗಳು
ಈ ಮೇಲೆ ತಿಳಿಸಿದಂತೆ ವೊಡಫೋನ್ ಐಡಿಯಾ ಟೆಲಿಕಾಂ ಕಂಪನಿ ಇತರ ಡೇಟಾ ವೋಚರ್ ಪ್ಲ್ಯಾನ್ಗಳನ್ನೂ ಬಿಡುಗಡೆ ಮಾಡಿದೆ. ಅದರಲ್ಲಿ ಮುಖ್ಯವಾಗಿ ವಿಐ 19ರೂ, ವಿಐ 29ರೂ, ವಿಐ 75ರೂ, ವಿಐ 108ರೂ ಹಾಗೂ ವಿಐ 151ರೂಪಾಯಿಗಳ ಡೇಟಾ ವೋಚರ್ ಪ್ಲ್ಯಾನ್ಗಳು ಹೆಚ್ಚು ಗಮನಸೆಳೆದಿದೆ.
ಇದಲ್ಲದೆ ವೊಡಫೋನ್ ಐಡಿಯಾ ಕೆಲವು ಪ್ರೀಪೇಯ್ಡ್ ಯೋಜನೆಗಳನ್ನೂ ಬಿಡುಗಡೆ
ವಿಐ 2999 ರೂಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್
ವಿಐ ಟೆಲಿಕಾಂ ಕಂಪನಿಯ 2,999ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ವಿಶೇಷವಾಗಿ ವಾರ್ಷಿಕ ವ್ಯಾಲಿಡಿಟಿ ಯೋಜನೆಯಾಗಿದೆ. ಈ ರೀಚಾರ್ಜ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಈ ಯೋಜನೆಯು ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 850 ಜಿಬಿ ಡೇಟಾ ಪ್ರಯೋಜನವನ್ನು ಬಳಸುವ ಅವಕಾಶವಿದೆ. ಈ ಪ್ರಕಾರ ಪ್ರತೀದಿನ 2.33 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗೇ ಈ ಪ್ಲ್ಯಾನ್ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಅನ್ಲಿಮಿಟೆಡ್ ಉಚಿತ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದರೊಂದಿಗೆ ಅನ್ಲಿಮಿಟೆಡ್ ಉಚಿತ ವಾಯಿಸ್ ಕಾಲ್ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಪಡೆಯಬಹುದು. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ನಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ. ಇದರೊಂದಿಗೆ ವಿಐ ಮೂವೀಸ್ ಹಾಗೂ ವಿಐ ಕ್ಲಾಸಿಕ್ ಆ್ಯಪ್ಸ್ಗಳು ಕೂಡ ಲಭ್ಯವಾಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ