ಭಾರತೀಯ ಟೆಲಿಕಾಂ ವಲಯದಲ್ಲಿ (Telecom Company) ಒಂದಕ್ಕೊಂದು ಪೈಪೋಟಿ ನೀಡುತ್ತಲ್ಲೇ ಇದೆ. ಅದರಲ್ಲೂ ರಿಲಯನ್ಸ್ ಜಿಯೋ- (Reliance Jio), ಏರ್ಟೆಲ್ (Airtel), ವೊಡಫೋನ್ ಐಡಿಯಾ (Vodafone Idea) ಬಹಳ ಮುಂಚೂಣಿಯಲ್ಲಿರುವಂತಹ ಟೆಲಿಕಾಂ ಕಂಪನಿಗಳು. ಈ ಕಂಪನಿಗಳು ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದೆ. ಜೊತೆಗೆ ಗ್ರಾಹಕರಿಗಾಗಿ ಹೊಸ ಹೊಸ ಪ್ಲ್ಯಾನ್ಗಳನ್ನೂ ಪರಿಚಯಿಸುತ್ತಿದೆ. ಇದೀಗ ಟೆಲೆಕಾಂ ಗ್ರಾಹಕರು ಹೊಸ ವರ್ಷಕ್ಕೆ ಯಾವ ಕಂಪನಿ ಆಫರ್ ನೀಡಿದೆ ಎಂಬ ಕುತೂಹಲದಲ್ಲಿರುವಾಗ, ವೊಡಫೋನ್ ಐಡಿಯಾ ಇದೀಗ ಹೊಸ ರೀಚಾರ್ಜ್ ಪ್ಲ್ಯಾನ್ (Recharge Plan) ಅನ್ನು ಪರಿಚಯಿಸಿದೆ. ಯಾವಾಗ ವೊಡಫೋನ್ ಮತ್ತು ಐಡಿಯಾ ವಿಲೀನವಾಯಿತೋ ಅಂದಿನಿಂದ ಈ ಕಂಪನಿ ಬಹಳಷ್ಟು ಬೆಳವಣಿಗೆಯಾಗುತ್ತಲೇ ಇದೆ. ಅದರ ಜೊತೆಗೆ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಹೌದು, ದೇಶದ ಜನಪ್ರಿಯ ಮೂರನೇ ಟೆಲಿಕಾಂ ಕಂಪನಿಯಾಗಿರುವ ವೊಡಫೋನ್ ಐಡಿಯಾ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಈ ರೀಚಾರ್ಜ್ ಮೂಲಕ ಗ್ರಾಹಕರಿಗೆ ಹಲವಾರು ಸೌಲಭ್ಯಗಳು ದೊರೆಯಲಿದ್ದು, ಜೊತೆಗೆ 16 ಜಿಬಿ ಹೆಚ್ಚುವರಿ ಡೇಟಾ ಸೌಲಭ್ಯವು ದೊರೆಯುತ್ತದೆ.
ವೊಡಫೋನ್ ಐಡಿಯಾದ 601 ರೂಪಾಯಿ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್
ವಿಐ ಟೆಲಿಕಾಂನ 601 ರೂಪಾಯಿ ಪ್ರಿಪೇಯ್ಡ್ ಪ್ಲಾನ್ನಲ್ಲಿ ಗ್ರಾಹಕರು ಒಂದು ವರ್ಷದವರೆಗೆ ಡಿಸ್ನಿ + ಹಾಟ್ಸ್ಟಾರ್ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ಅನ್ಲಿಮಿಟೆಡ್ ಕಾಲ್, ಪ್ರತೀದಿನ 3 ಜಿಬಿ ಡೇಟಾ ಹಾಗೂ ಡೈಲಿ 100 ಎಸ್ಎಮ್ಎಸ್ ಪ್ರಯೋಜನವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಅಪ್ಡೇಟ್ ಮಾಡುವಾಗ ಎಚ್ಚರ! ಫೋಟೋ, ವಿಡಿಯೋ ಎಲ್ಲವೂ ಡಿಲೀಟ್ ಆಗ್ಬಹುದು
ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ 28 ದಿ ನಗಳಲ್ಲಿ ಗ್ರಾಹಕರು ಒಟ್ಟು 84 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಇದರೊಂದಿಗೆ ಹೆಚ್ಚುವರಿಯಾಗಿ 16 ಜಿಬಿ ಡೇಟಾ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ವಿಐ ಆ್ಯಪ್ಸ್ ಸೇವೆ ಹಾಗೂ ಡೇಟಾ ರೋಲ್ ಓವರ್ ಕೂಡ ಮಾಡುವ ಅವಕಾಶವಿರುತ್ತದೆ.
ವೊಡಫೋನ್ ಐಡಿಯಾದ 3099 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂನ 3099 ರೂಪಾಯಿ ರೀಚಾರ್ಜ್ ಪ್ಲ್ಯಾನ್ನಲ್ಲಿ ಪ್ರತೂದಿನ 2 ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ಕಾಲ್ ಕೂಡ ಮಾಡಬಹುದು. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಮಾಡಬಹುದಾಗಿದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 75 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಹಾಗೆಯೇ ಈ ಯೋಜನೆ ಮೂಲಕ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು
ವೊಡಫೋನ್ ಐಡಿಯಾದ 2,899 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವಿಐ ಟೆಲಿಕಾಂ ಕಂಪನಿಯ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ರೀಚಾರ್ಜ್ ಮೂಲಕ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜೊತೆಗೆ ಉಚಿತವಾಗಿ ಅನ್ಲಿಮಿಟೆಡ್ ಕಾಲ್ ಸಹ ಮಾಡಬಹುದಾಗಿದೆ. ಹಾಗೂ ದಿನಕ್ಕೆ 100 ಎಸ್ಎಮ್ಎಸ್ ಅನ್ನು ಮಾಡಬಹುದು.
ವೊಡಫೋನ್ ಐಡಿಯಾದ 1,499 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂ ಕಂಪನಿಯ ಈ ಪ್ಲ್ಯಾನ್ ಮೂಲಕ ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದರೊಂದಿಗೆ ಯಾವುದೇ ನೆಟವರ್ಕ್ಗೆ ಉಚಿತವಾಗಿ ಅನ್ಲಿಮಿಟೆಡ್ ಕಾಲ್ ಕೂಡ ಮಾಡಬಹುದು. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಪ್ರಯೋಜನವನ್ನು ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ