ಒನ್‌ಪ್ಲಸ್ ಕಂಪೆನಿಯಿಂದ (Oneplus Company) ಇತ್ತೀಚೆಗೆ ನಡೆದಂತಹ ಕ್ಲೌಡ್ 11 ಈವೆಂಟ್ನಲ್ಲಿ (Cloud 11 Event) ಹಲವು ಡಿವೈಸ್ಗಳನ್ನು ಅನಾವರಣ ಮಾಡಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ತನ್ನ ಕಂಪೆನಿಗಳಿಂದ ಬಿಡುಗಡೆಗೊಳ್ಳಲಿರುವ ಡಿವೈಸ್ಗಳ ಮಾಹಿತಿಯನ್ನು ಸಹ ಬಹಿರಂಗ ಪಡಿಸಿದೆ. ಈ ಈವೆಂಟ್ನಲ್ಲಿ ಒನ್‌ಪ್ಲಸ್ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಒನ್‌ಪ್ಲಸ್ ಫೋಲ್ಡ್ ಸ್ಮಾರ್ಟ್‌ಫೋನ್ (Oneplus Fold Smartphone) ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಸುದ್ದಿ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಮಾತುಕತೆಯನ್ನು ಸೃಷ್ಟಿ ಮಾಡಿದೆ. ಕಾರಣ ಒನ್‌ಪ್ಲಸ್ ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ, ಈ ಮಧ್ಯೆ ಮತ್ತೆ ಫೋಲ್ಡೇಬಲ್ ಸ್ಮಾರ್ಟ್‌ಫೋನ್ (Foladable Smartphone) ಅನ್ನು ಲಾಂಚ್ ಮಾಡುತ್ತಿದ್ದು, ಇದರ ಫೀಚರ್ಸ್ ಮತ್ತು ಬೆಲೆ ಬಗ್ಗೆಯೇ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಒನ್‌ಪ್ಲಸ್ ಕಂಪೆನಿ ತನ್ನ ಕ್ಲೌಡ್ 11 ಈವೆಂಟ್ನಲ್ಲಿ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಸೂಚನೆ ನೀಡಿದೆ. ಅದರಂತೆಯೇ ಈ ಸ್ಮಾರ್ಟ್‌ಫೋನ್‌ಗಳು ಒನ್‌ಪ್ಲಸ್ ವಿ ಫೋಲ್ಡ್ ಮತ್ತು ವಿ ಫ್ಲಿಪ್ ಎಂಬುದಾಗಿದೆ. ಇದರ ಸಣ್ಣ ಟೀಸರ್ ಸಹ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆ.
ಒನ್‌ಪ್ಲಸ್ ವಿ ಫೋಲ್ಡ್ ಮತ್ತು ಒನ್‌ಪ್ಲಸ್ ವಿ ಫ್ಲಿಪ್ ಸ್ಮಾರ್ಟ್ಫೋನ್ಸ್
ಒನ್‌ಪ್ಲಸ್ ತನ್ನ ಕ್ಲೌಡ್ 11 ಈವೆಂಟ್‌ನ ಕೊನೆಯ ಭಾಗದಲ್ಲಿ ಒನ್‌ಪ್ಲಸ್ ವಿ ಫೋಲ್ಡ್ ಮತ್ತು ಒನ್‌ಪ್ಲಸ್ ವಿ ಫ್ಲಿಪ್ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಶೀಘ್ರದಲ್ಲೇ ಒನ್‌ಪ್ಲಸ್ ವಿ ಫೋಲ್ಡ್ ಮತ್ತು ಒನ್‌ಪ್ಲಸ್ ವಿ ಫ್ಲಿಪ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಒಂದೇ ಕಂಪೆನಿಯಿಂದ ಎರಡು ಸ್ಮಾರ್ಟ್ವಾಚ್ಗಳ ಬಿಡುಗಡೆ! ಫೀಚರ್ಸ್ ಹೇಗಿದೆ ಗೊತ್ತಾ?
ಈ ಮೂಲಕ ಒನ್‌ಪ್ಲಸ್ ಕಂಪೆನಿ ಫೋಲ್ಡೇಬಲ್ ಸ್ಮಾರ್ಟ್‌ಫೊನ್ ವಲಯಕ್ಕೆ ಎಂಟ್ರಿ ನೀಡೋದು ಅಧಿಕೃತವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ಗಳು ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಬಹುದು ಎಂದು ಕಂಪೆನಿ ಈವೆಂಟ್ನಲ್ಲಿ ಹೇಳಿಕೊಂಡಿದೆ.
ಒನ್‌ಪ್ಲಸ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಬಹುದು?
ಒನ್‌ಪ್ಲಸ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ 8.3 ಇಂಚಿನ ಅಮೋಲೆಲ್ಡ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 1080 x 3200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಇನ್ನು ಒನ್‌ಪ್ಲಸ್ ವಿ ಫೋಲ್ಡ್ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಈ ಫೋಲ್ಡೇಬಲ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಒನ್‌ಪ್ಲಸ್ ವಿ ಫ್ಲಿಪ್ ಸ್ಮಾರ್ಟ್‌ಫೋನ್ ಫೀಚರ್ಸ್ ನಿರೀಕ್ಷೆ ಹೇಗಿದೆ?
ಒನ್‌ಪ್ಲಸ್ ವಿ ಫ್ಲಿಪ್ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ನಿರೀಕ್ಷೆಯಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಅಂದಾಜಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಸಹ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ