SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಆ್ಯಪ್ ಬಳಸಿದರೆ 5 ಲೀಟರ್ ಪೆಟ್ರೋಲ್ ಉಚಿತ

ಭಾರತೀಯ ಸರ್ಕಾರದ ಪಾವತಿ ನಿಗಮ BHIM ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್​ ಮೊಬೈಲ್​ಗಳಲ್ಲಿ ಲಭ್ಯವಿದೆ.

zahir | news18india
Updated:December 7, 2018, 4:54 PM IST
SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಆ್ಯಪ್ ಬಳಸಿದರೆ 5 ಲೀಟರ್ ಪೆಟ್ರೋಲ್ ಉಚಿತ
Petrol Pump
zahir | news18india
Updated: December 7, 2018, 4:54 PM IST
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿದೆ. ​ ಈ ಕೊಡುಗೆಯಲ್ಲಿ ಗ್ರಾಹಕರು 100 ರೂ. ಪೆಟ್ರೋಲ್ ಖರೀದಿಸಿದರೆ 5 ಲೀಟರ್ ಉಚಿತ ಪೆಟ್ರೋಲ್​ನ್ನು ಪಡೆಯಬಹುದಾಗಿದೆ. ಆದರೆ ಈ ಆಫರ್ ಪಡೆಯಲು ಎಸ್​ಬಿಐ ಗ್ರಾಹಕರು BHIM ಆ್ಯಪ್ ಬಳಸಿಕೊಳ್ಳಬೇಕಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್​ನ ಯಾವುದೇ ಪಂಪ್​ನಲ್ಲಿ ಪೆಟ್ರೋಲ್ ಖರೀದಿಸಿ ಈ ಅಪ್ಲಿಕೇಶನ್​ ಮೂಲಕ  ಹಣವನ್ನು ಪಾವತಿಸಿದರೆ 5 ಲೀಟರ್ ಉಚಿತ ಪೆಟ್ರೋಲ್ ಸಿಗಲಿದೆ.

ಉಚಿತ ಪೆಟ್ರೋಲ್ ಪಡೆಯುವುದು ಹೇಗೆ?
ನೀವು ಇಂಡಿಯನ್ ಆಯಿಲ್ ಕಾರ್ಪೋರೇಷನ್​ನ​ (IOC) ಯಾವುದೇ ಪೆಟ್ರೋಲ್​ ಪಂಪ್​ನಿಂದ ಪೆಟ್ರೋಲ್ ಕೊಂಡುಕೊಳ್ಳಬಹುದು. ಈ ವೇಳೆ ಭೀಮ್ (BHIM) ಯುಪಿಐ ಆ್ಯಪ್ ಬಳಸಿ ಹಣ ಪಾವತಿಸಬೇಕು. ಈ ಆಫರ್ ಪಡೆಯಲು​ ಕನಿಷ್ಠ 100 ರೂಪಾಯಿ ಪೆಟ್ರೋಲ್ ಖರೀದಿಸಬೇಕಾಗುತ್ತದೆ.

ಭೀಮ್​ ಆ್ಯಪ್​ನಲ್ಲಿ ಪಾವತಿ ಮಾಡಿದಾಗ ಯುಪಿಐ ನಂಬರ್​ ನೀಡಲಾಗಿರುತ್ತದೆ. ಈ ನಂಬರನ್ನು 9222222084 ಸಂಖ್ಯೆಗೆ ಟೈಪ್ ಮಾಡಿ ಕಳುಹಿಸಬೇಕು.

ಕಳುಹಿಸುವ ವಿಧಾನ: < UPI Reference No. (12-Digit) > < DDMM > ಟೈಪ್ ಮಾಡಿ 9222222084 ನಂಬರ್​ಗೆ ಸಂದೇಶ ಕಳುಹಿಸಿ. ಈ ಎಸ್​ಎಂಎಸ್​ಗೆ ಸಾಮಾನ್ಯ ಶುಲ್ಕವನ್ನು ಚಾರ್ಜ್ ಮಾಡಲಾಗುತ್ತದೆ. ನಿಮ್ಮ ಸಂಖ್ಯೆಗೆ ಈ ಆಫರ್ ಲಭ್ಯವಾಗಿದ್ದರೆ ಕರೆ ಮಾಡಿ ತಿಳಿಸಲಾಗುತ್ತದೆ. ಆ ಬಳಿಕ ನಿಮಗೆ 5 ಲೀಟರ್​ ಪೆಟ್ರೋಲ್ ಉಚಿತವಾಗಿ ದೊರೆಯಲಿದೆ.

ಡಿಸೆಂಬರ್ 15 ರವರೆಗೆ ಆಫರ್: ನವೆಂಬರ್ 19 ರಂದು ಪ್ರಾರಂಭಿಸಲಾಗಿದ್ದ ಈ ಆಫರ್​ನ್ನು ಇದೀಗ ಡಿಸೆಂಬರ್​ 15 ರವರೆಗೆ ವಿಸ್ತರಿಸಿದೆ. ಈ ಮೂಲಕ ಎಸ್​ಬಿಐ ಗ್ರಾಹಕರಿಗೆ ಡಿ.15 ರವರೆಗೆ 5 ಲೀಟರ್​ ಪೆಟ್ರೋಲ್​ನ್ನು ಉಚಿತವಾಗಿ ಪಡೆಯುವ ಸುವರ್ಣಾವಕಾಶ ನೀಡಲಾಗಿದೆ.
Loading...

ಇದನ್ನೂ ಓದಿ: ಭಾರತೀಯ ನೌಕಾಪಡೆ ನೇಮಕಾತಿ: ಎಸ್​ಎಸ್​ಎಲ್​ಸಿ, ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ



ಭಾರತೀಯ ಸರ್ಕಾರದ ಪಾವತಿ ನಿಗಮ BHIM ಆ್ಯಪ್ ಅಂಡ್ರಾಯ್ಡ್ ಮತ್ತು ಐಒಎಸ್​ ಮೊಬೈಲ್​ಗಳಲ್ಲಿ ಲಭ್ಯವಿದ್ದು, ಈ ಆ್ಯಪ್​ ಮೂಲಕ ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕ್​ಗೆ ಹಣ ವರ್ಗಾಯಿಸಿಕೊಳ್ಳಬಹುದು. ಹಾಗೆಯೇ ಡಿಜಿಟಲ್ ಪೇಮೆಂಟ್​ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಇದು ವಜ್ರದ ವಿಮಾನ; ಆದರೆ ಅಸಲಿ ವಿಷಯ ಗೊತ್ತಾದರೆ ಅಚ್ಚರಿ ಪಡುತ್ತೀರಿ..!

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626