ಸ್ಮಾರ್ಟ್ಫೋನ್ಗಳು (Smartphones) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಹೊಸ ಹೊಸ ಸ್ಮಾರ್ಟ್ಫೋನ್ಗಳ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಮೊಬೈಲ್ (Mobiles) ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ತನ್ನ ವಿಶಿಷ್ಟ ಶೈಲಿಯಲ್ಲಿ ಪ್ರೊಡಕ್ಟ್ಗಳನ್ನು ಉತ್ಪಾದಿಸುವ ಮೂಲಕ ಎಲ್ಲರ ಗಮನ ಸೆಳೆದಿವೆ. ಆ ಕಂಪನಿಗಳ ಪಟ್ಟಿಯಲ್ಲಿ ಸ್ಯಾಮ್ಸಂಗ್ ಕಂಪನಿ ಕೂಡ ಒಂದು. ಸ್ಯಾಮ್ಸಂಗ್ ಕಂಪನಿ ತನ್ನ ಗ್ಯಾಲಕ್ಸಿ ಎ ಸೀರಿಸ್ (Samsung Galaxy A Series), ಗ್ಯಾಲಕ್ಸಿ ಎಮ್ ಸೀರಿಸ್ (Samsung Galaxy M Series) ಹಾಗೂ ಗ್ಯಾಲಕ್ಸಿ ಎಫ್ ಸೀರಿಸ್ನಲ್ಲಿ (Galaxy F Series) ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ಈ ಪೈಕಿಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ ಮೇಲೆ ಜನಪ್ರಿಯ ಇಕಾಮರ್ಸ್ ವೆಬ್ಸೈಟ್ ಆದ ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ.
ಸ್ಯಾಮ್ಸಂಗ್ ಕಂಪನಿಯಲ್ಲಿ ಬಹಳಷ್ಟು ಬೇಡಿಕೆಯಲ್ಲಿದ್ದ ಸ್ಮಾರ್ಟ್ಫೋನ್ ಎಂದರೆ ಅದು ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್. ಇದೀಗ ಈ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ಆಫರ್ನಲ್ಲಿ ಮಾರಾಟವಾಗುತ್ತಿದೆ. ಫ್ಲಿಪ್ಕಾರ್ಟ್ನಲ್ಲಿ ಸ್ಯಾಮ್ಸಂಗ್ ಮಾತ್ರವಲ್ಲದೇ ಇತರ ಸಾಧನಗಳ ಮೇಲೂ ಆಫರ್ಸ್ಗಳನ್ನು ಘೋಷಿಸಿದ್ದಾರೆ. ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 14,999 ರೂಪಾಯಿಯಾಗಿದೆ ಅದರೆ ಈಗ ಆಫರ್ನಲ್ಲಿ ಕೇವಲ 9,699 ರೂಪಾಯಿಗೆ ಪಡೆಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಮೊಬೈಲ್ನ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ನಲ್ಲಿ 6.6 ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇ ಯನ್ನು ನೀಡಲಾಗಿದೆ. ಈ ಡಿಸ್ಪ್ಲೇ 2408 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ವನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ ವಾಟರ್ ಡ್ರಾಪ್ ನಾಚ್ ಡಿಸೈನ್ ಅನ್ನು ಸಹ ಒಳಗೊಂಡಿದೆ. ಇದು ಸ್ಲಿಮ್ ಬೆಜೆಲ್ ಹೊಂದಿದ್ದು, 60hz ರಿಫ್ರೆಶ್ ರೇಟ್ ಅನ್ನು ನೀಡಲಿದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ಕೇವಲ 1299 ರೂಪಾಯಿಗೆ ಬೋಟ್ ಸ್ಮಾರ್ಟ್ವಾಚ್ ಲಭ್ಯ! 2 ದಿನ ಮಾತ್ರ ಆಫರ್
ಪ್ರೊಸೆಸರ್ ಸಾಮರ್ಥ್ಯ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ ಎಕ್ಸಿನೋಸ್ 850 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ ಎರಡು ವಿಧಗಳಲ್ಲಿ ಲಭ್ಯವಿದೆ.
ಇದು 4ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಹಾಗೂ 4ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ಕೂಡ ಇದೆ. ಇನ್ನು ವಿಶೇಷವಾಗಿ ರ್ಯಾಮ್ ಪ್ಲಸ್ ಫೀಚರ್ಸ್ ಅನ್ನು ಒಳಗೊಂಡಿದೆ. ಈ ಮೂಲಕ ನಿಮ್ಮ ಮೊಬೈಲ್ನ ರ್ಯಾಮ್ ಅನ್ನು ಜಾಸ್ತಿ ಮಾಡುವ ಅವಕಾಶವಿದೆ.
ಕ್ಯಾಮೆರಾ ಸೆಟಪ್ ಹೇಗಿದೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ನೀಡಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ನೊಂದಿಗೆ ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್13 ಸ್ಮಾರ್ಟ್ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲುಟೂತ್ ವಿ5.0, ವೈಫೈ, ಯುಎಸ್ಬಿ ಪೋರ್ಟ್, 3.5ಮಿ.ಮೀ ಹೆಡ್ಫೋನ್ ಜ್ಯಾಕ್ ಅನ್ನು ಹೊಂದಿದೆ. ಇದಲ್ಲದೆ ಗೂಗಲ್ ಕ್ರೋಮ್, ಸ್ಯಾಮ್ಸಂಗ್ ಬ್ರೌಸರ್ 14.0 ಪ್ರಿ ಇನ್ಸ್ಟಾಲ್ಡ್ ಹೊಂದಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಫಿಂಗರ್ಪ್ರಿಂಟ್ ಸೆನ್ಸಾರ್, ಜಿಯೋಮ್ಯಾಗ್ನೆಟಿಕ್ ಸೆನ್ಸಾರ್, ವರ್ಚುವಲ್ ಲೈಟ್ ಸೆನ್ಸಿಂಗ್, ವರ್ಚುವಲ್ ಪ್ರಾಕ್ಸಿಮಿಟಿ ಸೆನ್ಸಿಂಗ್ ಅನ್ನು ಕೂಡ ಇದರಲ್ಲಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ