• Home
  • »
  • News
  • »
  • tech
  • »
  • Battlegrounds in iOS: ಇನ್ಮುಂದೆ ಐಒಎಸ್​ ಫೋನ್​ಗಳಲ್ಲೂ ಬ್ಯಾಟಲ್​ಗ್ರೌಂಡ್ಸ್ ಗೇಮ್ ಆಡಬಹುದು! ಯಾವಾಗಿಂದ ಲಭ್ಯ? ಹೊಸಾ ಫೀಚರ್ ಏನು? ಫುಲ್ ಡೀಟೆಲ್ಸ್

Battlegrounds in iOS: ಇನ್ಮುಂದೆ ಐಒಎಸ್​ ಫೋನ್​ಗಳಲ್ಲೂ ಬ್ಯಾಟಲ್​ಗ್ರೌಂಡ್ಸ್ ಗೇಮ್ ಆಡಬಹುದು! ಯಾವಾಗಿಂದ ಲಭ್ಯ? ಹೊಸಾ ಫೀಚರ್ ಏನು? ಫುಲ್ ಡೀಟೆಲ್ಸ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Battlegrounds for PUBG Fans: ಕಳೆದ ವರ್ಷ ದೇಶದಲ್ಲಿ ಪಬ್‌ಜಿ ನಿಷೇಧಿಸಿದ ನಂತರ ಬಿಜಿಎಂಐ ಭಾರತದಲ್ಲಿ ಗರಿಷ್ಠ ದೈನಂದಿನ ಸಕ್ರಿಯ ಬಳಕೆದಾರರು 16 ಮಿಲಿಯನ್ ಮತ್ತು ಗರಿಷ್ಠ ಏಕಕಾಲಿಕ ಬಳಕೆದಾರರ ಸಂಖ್ಯೆ 2.4 ಮಿಲಿಯನ್ ತಲುಪಿದೆ

  • Share this:

PUBG: ಭಾರತದಲ್ಲಿ ಪಬ್‌ಜಿಯನ್ನು ಬ್ಯಾನ್‌ ಮಾಡಲಾಗಿದೆ. ನಂತರ ಬ್ಯಾಟಲ್‌ ಗ್ರೌಂಡ್ಸ್‌ (Battlegrounds) ಮೊಬೈಲ್ ಇಂಡಿಯಾ ಎನ್ನುವ ಪಬ್‌ಜಿ ರೀತಿಯ ಗೇಮ್‌ ಅನ್ನು ಜುಲೈ ಆರಂಭದಲ್ಲಿ ಆ್ಯಂಡ್ರಾಯ್ಡ್ (Android) ಬಳಕೆದಾರರಿಗಾಗಿ ಪರಿಚಯಸಲಾಗಿತ್ತು. ಇದೀಗ ಪಬ್‌ಜಿ ಮೊಬೈಲ್ ಇಂಡಿಯಾ, ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ)ನ ಭಾರತೀಯ ಆವೃತ್ತಿಯನ್ನು ಆ್ಯಪಲ್‌ ಐಓಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕರು ಶನಿವಾರ ಖಚಿತಪಡಿಸಿದ್ದಾರೆ. ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿ ಕ್ರಾಫ್ಟನ್‌ನ ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ವಿಭಾಗದ ಮುಖ್ಯಸ್ಥ ವೂಯೋಲ್ ಲಿಮ್, ಭಾರತದಲ್ಲಿ ಐಒಎಸ್ ಬಳಕೆದಾರರಿಗೆ ಬಿಜಿಎಂಐ ಅನ್ನು ಆದಷ್ಟು ಬೇಗ ಪರಿಚಯಿಸಲು ಡೆವಲಪರ್‌ಗಳು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.


"ನಮ್ಮ ಅಭಿಮಾನಿಗಳಿಗೆ ಬಿಜಿಎಂಐ ಅಪ್‌ಡೇಟ್‌ ಅನ್ನು ಶೀಘ್ರದಲ್ಲೇ ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಘೋಷಣೆಗಳನ್ನು ಮಾಡುತ್ತೇವೆ" ಎಂದು ಲಿಮ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಈ ಸುದ್ದಿ ಆ್ಯಪಲ್‌ ಬಳಕೆದಾರರಿಗೆ ಬಹಳಷ್ಟು ಖುಷಿ ಕೊಟ್ಟಿದೆ.


ಕಳೆದ ವರ್ಷ ದೇಶದಲ್ಲಿ ಪಬ್‌ಜಿ ನಿಷೇಧಿಸಿದ ನಂತರ ಬಿಜಿಎಂಐ ಭಾರತದಲ್ಲಿ ಗರಿಷ್ಠ ದೈನಂದಿನ ಸಕ್ರಿಯ ಬಳಕೆದಾರರು 16 ಮಿಲಿಯನ್ ಮತ್ತು ಗರಿಷ್ಠ ಏಕಕಾಲಿಕ ಬಳಕೆದಾರರ ಸಂಖ್ಯೆ 2.4 ಮಿಲಿಯನ್ ತಲುಪಿದೆ ಎಂದು ಲಿಮ್ ಹೇಳಿದ್ದಾರೆ. ಹಾಗೂ "ನಮ್ಮ ಮುಖ್ಯ ಗಮನ ನಿರಂತರವಾಗಿ ಭಾರತೀಯರನ್ನು ಹೆಚ್ಚು ಆಕರ್ಷಸುವುದು, ವಿಶ್ವ ದರ್ಜೆಯ ಸಹಯೋಗ ಮತ್ತು ವಿಭಿನ್ನ ವಿಷಯವನ್ನು ಪರಿಚಯಿಸುವುದು" ಎಂದು ಲಿಮ್ ಹೇಳಿದ್ದಾರೆ.


ಇದನ್ನೂ ಓದಿ: Smartphone: ಅಪ್ಪ-ಅಮ್ಮ ಈ Appಗಳ ಮೂಲಕ ಮಕ್ಕಳ ಫೋನ್​ ಮೇಲೆ ಅವರಿಗೆ ಗೊತ್ತಾಗದಂತೆ ಕಣ್ಣಿಡಬಹುದು!

"ಕ್ರಾಫ್ಟನ್ ಬ್ಯಾಟಲ್‌ ಗ್ರೌಂಡ್‌ ಮತ್ತು ಭಾರತ-ನಿರ್ದಿಷ್ಟ ಘಟನೆಗಳು ಸೇರಿದಂತೆ ಬ್ಯಾಟಲ್‌ ಗ್ರೌಂಡ್‌ ಮೊಬೈಲ್ ಇಂಡಿಯಾದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈಶಿಷ್ಟ್ಯಗಳು ಮತ್ತು ವಸ್ತುಗಳನ್ನು ಪರಿಚಯಿಸುವ ಗುರಿಯನ್ನು ಕ್ರಾಫ್ಟನ್ ಹೊಂದಿದೆ" ಎಂದು ಲೀಮ್‌ ಹೇಳಿದ್ದಾರೆ.


ಬಿಜಿಎಂಐ ತನ್ನ ಆಟಗಾರರು ಹೆಚ್ಚು ಸಮಯ ಆಡಿದರೆ ವಿರಾಮ ತೆಗೆದುಕೊಳ್ಳುವಂತೆ ನೆನಪಿಸುತ್ತದೆ, ಇದು ಅನೇಕ ಆಟಗಾರರಿಗೆ ಕಿರಿಕಿರಿ ಉಂಟುಮಾಡುತ್ತದೆ. ಈ ಕುರಿತು ಮಾತನಾಡಿದ ಲಿಮ್‌, ಸುರಕ್ಷಿತ ಗೇಮಿಂಗ್ ಅನುಭವ ಒದಗಿಸುವುದು ಕಂಪನಿಗೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: Tata Tiago NRG: ಹೊಸಾ ರೂಪದೊಂದಿಗೆ ಬಂದಿದೆ ಟಿಯಾಗೊ, ಹೊಸಾ ಫೀಚರ್ಸ್ ಏನಿದೆ, ಬೆಲೆ ಎಷ್ಟು? ಫುಲ್ ಡೀಟೆಲ್ಸ್

"ನಾವು ಜವಾಬ್ದಾರಿಯುತ ಗೇಮಿಂಗ್‌ನ ಪ್ರಬಲ ವಕೀಲರು ಮತ್ತು ನಮ್ಮ ಅಭಿಮಾನಿಗಳು ಬ್ಯಾಟಲ್‌ ಗ್ರೌಂಡ್‌ ವರ್ಚುವಲ್ ಜಗತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಆಟದ ಸಮಯದ ಮಿತಿ ಹೊಂದಿಸಿ ಮತ್ತು ಪೋಷಕರಿಗೆ ಒಟಿಪಿ ನಿಯಂತ್ರಣ ನೀಡುತ್ತೇವೆ" ಎಂದು ಲಿಮ್ ತಿಳಿಸಿದ್ದಾರೆ.


ಜುಲೈ ಮಧ್ಯದಲ್ಲಿ, ಕ್ರಾಫ್ಟನ್ ತನ್ನ ಮೊದಲ ಸ್ಪೋರ್ಟ್ಸ್ ಪಂದ್ಯಾವಳಿಯನ್ನು ಘೋಷಿಸಿತು - ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸರಣಿ 2021. ಪಂದ್ಯಾವಳಿಯ ನೋಂದಣಿಗಳು ಜುಲೈ 19ರಂದು ಆರಂಭಗೊಂಡವು ಮತ್ತು ಈವೆಂಟ್ ಮೂರು ತಿಂಗಳು ನಡೆಯಲಿದ್ದು ಐದು ಹಂತಗಳನ್ನು ಹೊಂದಿರುತ್ತದೆ. ಈ ಉದ್ಘಾಟನಾ ಸರಣಿಗೆ ವಿಡಿಯೋ ಗೇಮ್ ಡೆವಲಪರ್ 1 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: