ಭಾರತದಲ್ಲಿ ಸೆಲ್ ಫೋನ್‌ಗಳನ್ನು ಪರಿಚಯಿಸಿದಾಗ ಮಾರಾಟಕ್ಕೆ ಹಲವಾರು ಮೊಬೈಲ್ಗಳು (Mobile) ಕಾಲಿಟ್ಟಿವೆ. ಆ ಫೋನ್‌ಗಳಲ್ಲಿ ನೋಕಿಯಾ ಕಂಪನಿಯ (Nokia Company) ಫೋನ್ ಕೂಡಾ ಒಂದು. ಒಂದು ಕಾಲದಲ್ಲಿ ಬಳಕೆದಾರರು ಅತೀ ಹೆಚ್ಚು ಬಳಕೆ ಮಾಡುತ್ತಿದ್ದ ಸೆಲ್ ಫೋನ್ ಅಂದರೆ ಅದು ನೋಕಿಯಾ ಫೋನ್ ಆಗಿತ್ತು. ನೋಕಿಯಾ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ತುಂಬಾ ಜನಪ್ರಿಯತೆಯನ್ನು ಪಡೆದ ಕಂಪನಿಯಾಗಿದೆ. ಆದರೆ ಸತತವಾಗಿ ವಿವಿಧ ಪ್ರಮುಖ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಬಹಳ ವಿಶಿಷ್ಟ ಫೀಚರ್ಸ್ (Features)ನೊಂದಿಗೆ ಮಾರಕಟ್ಟೆಗೆ ಮೊಬೈಲ್ಗಳನ್ನು ಪರಿಚಯಿಸಿದೆ. ಇದರಿಂದ ನೋಕಿಯಾ ಅವರಿಗೆ ಪೈಪೋಟಿ ನೀಡಲು ಸಾಧ್ಯವಾಗದೆ ಮಾರುಕಟ್ಟೆಯಲ್ಲಿ ಹಿಂದುಳಿದಿದೆ. ಆದರೆ ನೋಕಿಯಾ ಇಂದಿಗೂ ಅದರ ಸ್ಥಾನವನ್ನು ಮಾತ್ರ ಮಾರುಕಟ್ಟೆಯಲ್ಲಿ ಬಿಟ್ಟುಕೊಟ್ಟಿಲ್ಲ.
ನೋಕಿಯಾ ಕಂಪನಿ ಬಹಳ ಹಿಂದಿನಿಂದ ಜನಪ್ರಿಯತೆಯನ್ನು ಪಡೆದುಕೊಂಡಂತಹ ಕಂಪನಿಯಾಗಿದೆ. ಆದರೆ ಕೆಲವು ಕಂಪನಿಗಳ ಮುಂದೆ ಪೈಪೋಟಿ ಕೊಡಲು ಸಾಧ್ಯವಾಗದೆ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಉಳಿದಿದತ್ತು. ಆದರೆ ಕೆಲವು ಗ್ರಾಹಕರು ಮಾತ್ರ ಇಂದಿಗೂ ನೋಕಿಯಾ ಕಂಪನಿಯ ಮೊಬೈಲ್ಗಳನ್ನು ಕಾದು ಖರೀದಿಸುತ್ತಾರೆ. ಇದೀಗ ನೋಕಿಯಾದಿಂದ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಇದರ ಫೀಚರ್ಸ್, ಬೆಲೆ ಮಾಹಿತಿ ಇಲ್ಲಿದೆ.
ಬಜೆಟ್ ಬೆಲೆಯಲ್ಲಿ ನೋಕಿಯಾದ ಹೊಸ ಸ್ಮಾರ್ಟ್‌ಫೋನ್
ನೋಕಿಯಾ ಬಜೆಟ್ ಬೆಲೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ನೋಕಿಯಾದಿಂದ ಬಿಡುಗಡೆಯಾಗುತ್ತಿರುವ ಹೊಸ ಸ್ಮಾರ್ಟ್‌ಫೋನ್ ನೋಕಿಯಾ ಸಿ31 ಎಂಬುದಾಗಿದೆ. ಇದು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ. ಈ ಸ್ಮಾರ್ಟ್ಫೋನ್ನ ಬಿಡುಗಡೆ ಮತ್ತು ಫೀಚರ್ಸ್ ಮಾತ್ರ ತಿಳಿದಿದ್ದು ಇದರ ಮಾರಾಟದ ದಿನಾಂಕವನ್ನು ಇನ್ನೂ ಪ್ರಕಟಿಸಬೇಕಾಗಿದೆ.
ಇದನ್ನೂ ಓದಿ: 2022ರ ನಂಬರ್ 1 ಸ್ಮಾರ್ಟ್‌ಫೋನ್ ಯಾವುದು? ಊಹೆ ಮಾಡಿರ್ಲಿಕ್ಕೂ ಸಾಧ್ಯ ಇಲ್ಲ
ಆದರೂ, ಹೊಸ ನೋಕಿಯಾ ಸಿ31 ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನೋಕಿಯಾ ಸಿ31 ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ನೋಕಿಯಾ ಸಿ31 ಸ್ಮಾರ್ಟ್‌ಫೋನ್ ಫೀಚರ್ಸ್
ಕ್ಯಾಮೆರಾ ಫೀಚರ್ಸ್
ಇನ್ನು ನೋಕಿಯಾ ಸಿ31 ಸ್ಮಾರ್ಟ್‌ಫೋನ್ 4ಜಿಬಿ ರ್‍ಯಾಮ್ ಮತ್ತು 64ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿ ಮೆಮೊರಿಗಾಗಿ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇದೆ. ನೋಕಿಯಾ ಸಿ31 ಫೋನ್ 5050 mAh ಬ್ಯಾಟರಿ ಬ್ಯಾಕಪ್ ಅನ್ನು ಕೂಡ ಹೊಂದಿದೆ. ಒಮ್ಮೆ ಈ ಸ್ಮಾರ್ಟ್‌ಫೋನ್ ಅನ್ನು ಫುಲ್ ಚಾರ್ಜ್ ಮಾಡಿದ್ರೆ 3 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡ್ಬಹುದು. ಅಲ್ಲದೇ ಈ ಹೊಸ ನೋಕಿಯಾ ಫೋನ್ 10 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ಫೀಚರ್ಸ್ಗಳನ್ನು ಈ ನೋಕಿಯಾ ಸಿ31 ಸ್ಮಾರ್ಟ್‌ಫೋನ್ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ನೋಕಿಯಾ ಸಿ31 ಸ್ಮಾರ್ಟ್‌ಫೋನ್ 11,499 ರೂಪಾಯಿಯಲ್ಲಿ ಮಾರುಕಟ್ಟೆಗೆ ಬರಲಿದೆ ಎಮದು ಹೇಳಲಾಗಿದೆ.ಇನ್ನು ಈ ಫೋನ್ ಕಪ್ಪು, ಬೂದು ಮತ್ತು ನೀಲಿ ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ವರದಿಯಾಗಿದೆ. ಹೊಸ ನೋಕಿಯಾ ಸಿ31 ಸ್ಮಾರ್ಟ್‌ಫೋನ್ ಬಗ್ಗೆ ನೋಕಿಯಾದ ಟ್ವಿಟರ್ ಪೇಜ್ನಲ್ಲಿ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ