ಮ್ಯೂಸಿಕ್ ಗ್ಯಾಜೆಟ್ಸ್ಗಳಿಗೆ (Music Gadgets) ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಈ ಸಾಧನಗಳನ್ನೇ ಬಿಡುಗಡೆ ಮಾಡಲೆಂದೇ ಕಂಪೆನಿಗಳು ಸಹ ಹುಟ್ಟಿಕೊಂಡಿವೆ. ನಾಯ್ಸ್ ಕಂಪೆನಿ (Noise Company) ಮಾರುಕಟ್ಟೆಯಲ್ಲಿ ಇಯರ್ಫೋನ್, ಇಯರ್ಬಡ್ಸ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯನ್ನು ಹೊಂದಿಕೊಂಡಿದೆ. ನಾಯ್ಸ್ ಕಂಪೆನಿ ಬಿಡುಗಡೆ ಮಾಡಿರುವಂತಹ ಎಲ್ಲಾ ಡಿವೈಸ್ಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದು, ಇದೀಗ ಇದೇ ಕಂಪೆನಿ ಹೊಸ ಬಡ್ಸ್ ಅನ್ನು ಪರಿಚಯಿಸಿದೆ. ಇದು ಅದ್ಭುತ ಫೀಚರ್ಸ್ಗಳನ್ನು ಹೊಂದಿದ್ದು, ನಾಯ್ಸ್ ಬಡ್ಸ್ ಕನೆಕ್ಟ್ (Noise Buds Connect) ಎಂದು ಹೆಸರಿಸಲಾಗಿದೆ.
ಹೌದು, ನಾಯ್ಸ್ ಕಂಪೆನಿಯಿಂದ ಕೆಲವೇ ದಿನಗಳಲ್ಲಿ ನಾಯ್ಸ್ ಬಡ್ಸ್ ಕನೆಕ್ಟ್ ಎಂಬ ಇಯರ್‌ಬಡ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದು ಕ್ವಾಡ್ ಮೈಕ್ನೊಂದಿಗೆ ತಯಾರಾಗಿದೆ. ಹಾಗಿದ್ರೆ ಇದರ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ನಾಯ್ಸ್ ಬಡ್ಸ್ ಕನೆಕ್ಟ್ ಫೀಚರ್ಸ್
ನಾಯ್ಸ್ ಬಡ್ಸ್ ಕನೆಕ್ಟ್ ಇಯರ್‌ಬಡ್ಸ್ 13mm ಡ್ರೈವರ್ ಘಟಕವನ್ನು ಹೊಂದಿದ್ದು, ಈ ಮೂಲಕ ಡೀಪ್ ಬೇಸ್ ಹಾಗೂ ಸ್ಪಷ್ಟವಾದ ಸೌಂಡ್ ಪಡೆಯಬಹುದಾಗಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ 5.2 ಅನ್ನು ಬೆಂಬಲಿಸುತ್ತದೆ. ಜೊತೆಗೆ ENC ಬೆಂಬಲದೊಂದಿಗೆ ಕ್ವಾಡ್ ಮೈಕ್ ಆಯ್ಕೆ ಪಡೆದುಕೊಂಡಿರುವ ಈ ಇಯರ್‌ಬಡ್ಸ್, ಕರೆ ಸಮಯದಲ್ಲಿ ಅನಗತ್ಯ ಸೌಂಡ್ ಅನ್ನು ತೆಗೆದುಹಾಕುತ್ತದೆ. ಇದಿಷ್ಟೇ ಅಲ್ಲದೆ IPX5 ರೇಟಿಂಗ್ ಹೊಂದಿರುವ ಬಡ್ಸ್ ಬೆವರು ಮತ್ತು ನೀರು ನಿರೋಧಕವಾಗಿವೆ. ಇನ್ನು ಈ ಹೊಸ ಬಡ್ಸ್ ಹೆಚ್ಚಾಗಿ ಪ್ರಯಾಣ ಮಾಡುವ ಜನರಿಗೆ ಉತ್ತಮವಾಗಿದೆ ಎಂದು ಇದರ ಸಹ ಸಂಸ್ಥಾಪಕ ಅಮಿತ್ ಖತ್ರಿ ಅವರು ಹೇಳಿದ್ದಾರೆ.
ಕನೆಕ್ಟಿವಿಟಿ ಫೀಚರ್ಸ್
ನಾಯ್ಸ್ ಬಡ್ಸ್ ಕನೆಕ್ಟ್ ಅನ್ನು ಎಲ್ಲಾ ಡಿವೈಸ್ಗಳಿಗೂ, ಯಾವುದೇ ಸಂದರ್ಭದಲ್ಲೂ ಸುಲಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ ಮ್ಯೂಸಿಕ್ ಆಲಿಸಲು, ಗೇಮಿಂಗ್ ಆಡುವಾಗ, ಚಲನಚಿತ್ರ ವೀಕ್ಷಣೆ ಸೇರಿದಂತೆ ಇತರೆ ಎಲ್ಲಾ ಅಗತ್ಯ ವಿಷಯಗಳಲ್ಲೂ ಈ ಇಯರ್‌ಬಡ್ಸ್ ಬಳಸಬಹುದಾಗಿದ್ದು, ವಿಶೇಷ ಸೌಂಡ್ ಫೀಚರ್ಸ್ ನೀಡಲಿದೆ.
ಇನ್ನು ವಿಶೇಷವಾಗಿ ಹೈಪರ್‌ಸಿಂಕ್ ತಂತ್ರಜ್ಞಾನವನ್ನು ಇದು ಹೊಂದಿದ್ದು, ಚಾರ್ಜಿಂಗ್ ಕೇಸ್‌ನಿಂದ ತೆಗೆದ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ಗೆ ತ್ವರಿತವಾಗಿ ಕನೆಕ್ಟ್ ಆಗುತ್ತದೆ. ಇದರೊಂದಿಗೆ ಬಡ್‌ಗಳು ಪವರ್-ಸೇವಿಂಗ್ ಫೀಚರ್ಸ್ ಅನ್ನು ಸಹ ಹೊಂದಿದ್ದು, ಈ ಮೂಲಕ ಬಳಕೆದಾರರು ಅಧಿಕ ಸಮಯಗಳ ಕಾಲ ಬಳಕೆ ಮಾಡಬಹುದು.
ಬ್ಯಾಟರಿ ಸಾಮರ್ಥ್ಯ
ಈ ಹೊಸ ನಾಯ್ಸ್ ಬಡ್ಸ್ ಕನೆಕ್ಟ್ ಇಯರ್‌ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 10 ಗಂಟೆಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದು. ಹಾಗೆಯೇ ಇನ್‌ಸ್ಟಾಚಾರ್ಜ್ ಫೀಚರ್ಸ್ ಇರುವ ಈ ಇಯರ್‌ಬಡ್ಸ್‌ನಲ್ಲಿ ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 120 ನಿಮಿಷಗಳ ಪ್ಲೇಬ್ಯಾಕ್ ಅನ್ನು ಆನಂದಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ನ ಫಸ್ಟ್ ಸೇಲ್ ಆರಂಭ! ಆಫರ್ಸ್ ಏನೆಲ್ಲಾ ಇದೆ?
ನಾಯ್ಸ್ ಬಡ್ಸ್ ಬೆಲೆ ಮತ್ತು ಲಭ್ಯತೆ
ನಾಯ್ಸ್ ಬಡ್ಸ್ ಕನೆಕ್ಟ್ ಗೆ 1,299 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದ್ದು, ಈ ಇಯರ್‌ಬಡ್ಸ್ ಕಾರ್ಬನ್ ಬ್ಲಾಕ್, ಮಿಂಟ್ ಗ್ರೀನ್ ಮತ್ತು ಐವರಿ ವೈಟ್ ಎಂಬ ಮೂರು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ನಾಯ್ಸ್ ಬಡ್ಸ್ ಕನೆಕ್ಟ್ ಇಯರ್‌ಬಡ್ಸ್ ಅನ್ನು ಕಂಪೆನಿಯ ಅಧಿಕೃತ ವೆಬ್ಸೈಟ್ ಹಾಗೂ ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಮೂಲಕ ಖರೀದಿಸಬಹುದಾಗಿದೆ. ಇದು ನಾಯ್ಸ್ ಕಂಪೆನಿ ಈ ಬಾರಿ ಬಿಡುಗಡೆ ಮಾಡಿರುವ ಹೊಸ ಇಯರ್ ಬಡ್ಸ್ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ