ಮ್ಯೂಸಿಕ್ (Music) ಕೇಳುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟನೇ. ಕೆಲವರು ಈ ಹಾಡು, ಸಿನೆಮಾಗಳನ್ನು ನೋಡಬೇಕಾದರೆ ಇಯರ್ಫೋನ್ (Earphone) ಅಥವಾ ಇಯರ್ ಬಡ್ಸ್ (Earbuds) ಅನ್ನು ಕನೆಕ್ಟ್ ಮಾಡಿಕೊಂಡು ನೋಡುತ್ತಾರೆ. ಆದರೆ ಇತ್ತೀಚಿಗೆ ಹೆಚ್ಚಾಗಿ ಕೆಲವರು ಸೌಂಡ್ ಬಾರ್ಗಳನ್ನು ಬಳಸಲು ಆರಂಭಿಸಿದ್ದಾರೆ. ಈ ಸೌಂಡ್ಬಾರ್ಗಳನ್ನು (Soundbar) ಮೊಬೈಲ್ಗೂ, ಟಿವಿಗೂ ಎರಡಕ್ಕೂ ಕನೆಕ್ಟ್ ಮಾಡಬಹುದಾದ ಫೀಚರ್ಸ್ ಅನ್ನು ಹೊಂದಿರುವುದರಿಂದ ಇದು ಈಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇದೀಗ ಫಿಲಿಪ್ಸ್ ಕಂಪನಿ ತನ್ನಬ್ರಾಂಡ್ ಮೂಲಕ 2 ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಫಿಲಿಪ್ಸ್ TAB8947 3.1.2 CH ಮತ್ತು TAB7807 3.1 CH ಸೌಂಡ್ಬಾರ್ ಎಂದು ಹೆಸರಿಡಲಾಗಿದೆ.
ಫಿಲಿಪ್ಸ್ ಕಂಪನಿ ತನ್ನ ಕಂಪನಿಯಿಂದ ಸ್ಮಾರ್ಟ್ಟಿವಿ, ಆಡಿಯೋ ಆ್ಯಕ್ಸಸರೀಸ್, ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ. ಇದೀಗ ಫಿಲಿಪ್ಸ್ ತನ್ನ ಕಂಪನಿಯ ಅಡಿಯಲ್ಲಿ ಎರಡು ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡುತ್ತಿದೆ.
ಹೌದು, ಫಿಲಿಪ್ಸ್ ತನ್ನ ಕಂಪನಿಯ ಅಡಿಯಲ್ಲಿ ಫಿಲಿಪ್ಸ್ TAB8947 3.1.2 CH ಮತ್ತು TAB7807 3.1 CH ಎಂಬ ಎರಡು ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ. ಇದು ವಯರ್ಲೆಸ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಹೊಂದಿದೆ.
ಇದನ್ನೂ ಓದಿ: ಜಿಯೋದಿಂದ ಕೇವಲ 222 ರೂಪಾಯಿಯ ಭರ್ಜರಿ ರೀಚಾರ್ಜ್ ಪ್ಲಾನ್! ಏನೇನೆಲ್ಲಾ ಆಫರ್ಸ್ ಇದೆ?
ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ನ ಫೀಚರ್ಸ್
ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇದು 3.1.2 ಚಾನೆಲ್ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಹೊಂದಿರಲಿದೆ. ಇನ್ನು ಈ ಸೌಂಡ್ಬಾರ್ ಕ್ಲಿಯರ್ ಸೌಂಡ್ ಮಾತ್ರವಲ್ಲದೆ ಹೆಚ್ಚಿನ ಬಾಸ್ಅನ್ನು ಕೂಡ ಹೊಂದಿರಲಿದೆ.
ಇದಲ್ಲದೆ ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಹೊಂದಿರುವುದರಿಂದ ಉತ್ತಮ ಸೌಂಡ್ ಅನುಭವವನ್ನು ನೀಡಲಿದೆ. ಜೊತೆಗೆ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್ಸ್ಟಾರ್ ಮತ್ತು ಝೀ 5 ನಂತಹ ಒಟಿಟಿ ಸೇವೆಗಳಲ್ಲಿ ಕೂಡ ಡಾಲ್ಬಿ ಅಟ್ಮೋಸ್ ಅನ್ನು ಕಾರ್ಯನಿರ್ವಹಿಸುತ್ತದೆ.
ಇನ್ನು ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ ಗೆ ಬೆಂಬಲವನ್ನು ನೀಡುತ್ತದೆ. ಜೊತೆಗೆ ನೀವು ಕ್ರೋಮಾಕಾಸ್ಟ್ ಮತ್ತು ಏರ್ಪ್ಲೇ ಡೌನ್ಲೋಡ್ ಮಾಡಿಕೊಂಡು ನಿಮ್ಮ ಫೋನ್ನಿಂದ ಯಾವುದನ್ನು ಕೂಡ ಪ್ಲೇ ಮಾಡಬಹುದಾಗಿದೆ. ಹಾಗೆಯೇ HDMI eARC ನೊಂದಿಗೆ, ಟಿವಿ ಗೆ ಕನೆಕ್ಟ್ ಮಾಡಿದಾಗ ಟಿವಿ ರಿಮೋಟ್ ಮೂಲಕ ಸೌಂಡ್ಬಾರ್ ಕಂಟ್ರೋಲ್ ಮಾಡಬಹುದು.
ಆದರೆ ರೆಸಲ್ಯೂಶನ್ ನಷ್ಟವಿಲ್ಲದೆ 4K ಪಾಸ್-ಥ್ರೂ ಅನ್ನು ಅನುಮತಿಸುತ್ತದೆ. ಇನ್ನು ಈ ಸೌಂಡ್ಬಾರ್ನಲ್ಲಿ ಕೇವಲ ಒಂದು ರಿಮೋಟ್ ಕಂಟ್ರೋಲ್ ಮೂಲಕ EQ ಮೋಡ್ಗಳು, ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಸೆಟ್ಟಿಂಗ್ಗಳನ್ನು ಸೆಟ್ ಮಾಡಬಹುದಾಗಿದೆ.
ಫಿಲಿಪ್ಸ್ TAB7807 3.1 CH
ಫಿಲಿಪ್ಸ್ TAB7807 3.1 CH ಸೌಂಡ್ಬಾರ್ ಕೂಡ 3.1-ಚಾನೆಲ್ ಅನ್ನು ಹೊಂದಿದೆ. ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ಗಳನ್ನು ಹೊಂದಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್ಗೆ ವಯರ್ಲೆಸ್ ಮೂಲಕ ಕನೆಕ್ಟ್ ಮಾಡುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದೆ. ಈ ಫಿಲಿಪ್ಸ್ ಸೌಂಡ್ಬಾರ್ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಸ್ಪೀಕರ್ಗಳನ್ನು ನೀಡಿದ್ದೇವೆ ಎಂದು ಫಿಲಿಪ್ಸ್ ಕಂಪನಿ ಹೇಳಿಕೊಂಡಿದೆ.
ಫಿಲಿಪ್ಸ್ನ ಈ ಸೌಂಡ್ಬಾರ್ ಕೂಡ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುತ್ತದೆ. ಆದ್ದರಿಂದ ಇದರ ಮೂಲಕ ನೀವು ಉತ್ತಮ ಗುಣಮಟ್ಟದ ಆಡಿಯೋ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರಗಳನ್ನು ವೀಕ್ಷಿಸುವಾಗ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳುವಂತಹ ಫೀಚರ್ಸ್ ಅನ್ನು ಇದು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಫಿಲಿಪ್ಸ್ TAB8947 3.1.2 CH ಸೌಂಡ್ಬಾರ್ನ ಬೆಲೆ 35,990ರೂಪಾಯಿ ಆಗಿದೆ. ಹಾಗೆಯೇ ಫಿಲಿಪ್ಸ್ TAB7807 3.1 CH ಸೌಂಡ್ಬಾರ್ನ ಬೆಲೆ 28,990ರೂಪಾಯಿ ಆಗಿದೆ. ಈ ಎರಡು ಸೌಂಡ್ಬಾರ್ಗಳು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್ಗಳಲ್ಲಿ ಮತ್ತು ಕಂಪೆನಿಯ ಶೋರೂಂಗಳಲ್ಲಿ ಖರೀದಿ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ