• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • PVR Cinema: ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​! ಮತ್ತೆ 4 ಸ್ಥಳಗಳಲ್ಲಿ ಥಿಯೇಟರ್ ಸ್ಥಾಪಿಸಿದ ಪಿವಿಆರ್​ ಸಂಸ್ಥೆ

PVR Cinema: ಸಿನಿಮಾ ಪ್ರಿಯರಿಗೆ ಗುಡ್​ ನ್ಯೂಸ್​! ಮತ್ತೆ 4 ಸ್ಥಳಗಳಲ್ಲಿ ಥಿಯೇಟರ್ ಸ್ಥಾಪಿಸಿದ ಪಿವಿಆರ್​ ಸಂಸ್ಥೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Theater: ಜನಪ್ರಿಯ ಪಿವಿಆರ್‌ ಸಿನಿಮಾಸ್, ತನ್ನ ಮೂರನೇ ಆಸ್ತಿಯನ್ನು ಫರಿದಾಬಾದ್‌ನಲ್ಲಿ ಫೆಬ್ರವರಿ 5 ರಮದು ಪೆಬಲ್ ಡೌನ್‌ಟೌನ್, ಸೆಕ್ಟರ್ 12, ಮಥುರಾ ರಸ್ತೆಯಲ್ಲಿ ತೆರೆಯುವುದಾಗಿ ಘೋಷಿಸಿತು. ಪಿವಿಆರ್ ಪ್ರಾರಂಭಿಸಿರುವ ಹೊಸ ನಾಲ್ಕು ಸ್ಕ್ರೀನ್‌ಗಳು ಅಲ್ಟ್ರಾ-ಹೈ ರೆಸಲ್ಯೂಶನ್ ಹೊಂದಿದ್ದು, ಹೆಚ್ಚು ಬ್ರೈಟ್ನೆಸ್‌ ಅನ್ನು ಹೊಂದಿವೆ.

ಮುಂದೆ ಓದಿ ...
 • Share this:

  ಸಿನಿಮಾ (Cinema) ಎಂಬುದು ಮನರಂಜನೆಯ ಬಹಳ ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಬಹುತೇಕ ಹೆಚ್ಚಿನ ಜನರಿಗೆ ಮೊಬೈಲ್​, ಟಿವಿಗಳಿಗಿಂತ ಥಿಯೇಟರ್​ಗಳಲ್ಲೇ (Movie Theater) ಸಿನಿಮಾ ನೋಡೋದು ಅಭ್ಯಾಸವಾಗಿಬಿಟ್ಟಿದೆ. ಹಿಂದೆ ಒಂದು ಊರಿಗೆ ಕೇವಲ ಒಂದೇ ಥಿಯೇಟರ್​​ಗಳಿದ್ದವು. ಅದೂ ಸಹ ರೀಲ್​ ಮಾದರಿಯಲ್ಲಿ ಸಿನೆಮಾ ಪ್ಲೇ ಆಗುತ್ತಿತ್ತು. ಆದರೆ ಈಗ ಥಿಯೇಟರ್​ಗಳಲ್ಲಿ ಬಹಳಷ್ಟು ಬದಲಾವಣೆಯಾಗಿಬಿಟ್ಟಿದೆ. ಥಿಯೇಟರ್​ಗಳಲ್ಲೂ ಹೊಸ ಹೊಸ ಟೆಕ್ನಾಲಜಿಗಳು ಬಂದುಬಿಟ್ಟಿದೆ. ಮುಖ್ಯವಾಗಿ ನಾವು ಥಿಯೇಟರ್​ಗಳ ಸ್ಕ್ರೀನ್​ಗಳಲ್ಲಾದ ಬದಲಾವಣೆಯನ್ನು ಕಾಣಬಹುದು. ಇದೀಗ ಭಾರತದ ಅತ್ಯುತ್ತಮ ಸ್ಕ್ರೀನ್ ಹೊಂದಿದ ಟಾಕೀಸ್​ಗಳಲ್ಲಿ ಪಿವಿಆರ್ (PVR)​ ಸಹ ಒಂದು. ಇದೀಗ ಪಿವಿಆರ್​ ಸಿನಿ ಪ್ರಿಯರಿಗೆ ಗುಡ್​ನ್ಯೂಸ್​ ನೀಡಿದೆ.


  ಜನಪ್ರಿಯ ಪಿವಿಆರ್‌ ಸಿನಿಮಾಸ್, ತನ್ನ ಮೂರನೇ ಆಸ್ತಿಯನ್ನು ಫರಿದಾಬಾದ್‌ನಲ್ಲಿ ಫೆಬ್ರವರಿ 5 ರಮದು ಪೆಬಲ್ ಡೌನ್‌ಟೌನ್, ಸೆಕ್ಟರ್ 12, ಮಥುರಾ ರಸ್ತೆಯಲ್ಲಿ ತೆರೆಯುವುದಾಗಿ ಘೋಷಿಸಿತು. ಪಿವಿಆರ್ ಪ್ರಾರಂಭಿಸಿರುವ ಹೊಸ ನಾಲ್ಕು ಸ್ಕ್ರೀನ್‌ಗಳು ಅಲ್ಟ್ರಾ-ಹೈ ರೆಸಲ್ಯೂಶನ್ ಹೊಂದಿದ್ದು, ಹೆಚ್ಚು ಬ್ರೈಟ್ನೆಸ್‌ ಅನ್ನು ಸಹ ಹೊಂದಿವೆ.


  3ಡಿ ತಂತ್ರಜ್ಞಾನ


  ಪಿವಿಆರ್‌ ಸಿನಿಮಾಸ್, ನೂತನ ಸ್ಕ್ರೀನ್‌ ಪರಿಚಯಿಸುವ ಮೂಲಕ ಹರಿಯಾಣದಲ್ಲಿ 13 ಪ್ರಾಪರ್ಟಿಗಳಲ್ಲಿ 50 ಸ್ಕ್ರೀನ್‌ಗಳು ಮತ್ತು ಉತ್ತರದಲ್ಲಿ 65 ಪ್ರಾಪರ್ಟಿಗಳಲ್ಲಿ 286 ಸ್ಕ್ರೀನ್‌ಗಳೊಂದಿಗೆ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಅಂದಹಾಗೆ ಪಿವಿಆರ್‌ನ ಹೊಸ ಸ್ಕ್ರೀನ್‌ ಆಡಿಸ್ ಸುಧಾರಿತ ಡಾಲ್ಬಿ ಸರೌಂಡ್ ಸೌಂಡ್ ಮತ್ತು ನೆಕ್ಸ್ಟ್‌ ಜನರೇಷನ್‌ನ 3ಡಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನೋಡುಗರಿಗೆ ಇನ್ನಷ್ಟು ಉತ್ತಮ ಅನುಭವ ನೀಡಲಿದೆ ಎಂದು ಪಿವಿಆರ್ ಹೇಳಿದೆ.


  ಆನ್​ಲೈನ್​ನಲ್ಲಿ ಈ ರೀತಿ ಟಿಕೆಟ್​ ಬುಕ್​ ಮಾಡಿ


  ಪಿವಿಆರ್​ ಸಿನಿಮಾ


  ಪಿವಿಆರ್​ ಸಿನಿಮಾಗಳು ಭಾರತೀಯರಲ್ಲಿ ಹಾಟ್ ಫೆವರೀಟ್​ ಆಗಿದ್ದು, ಪ್ರಮುಖ ಊರುಗಳ ವಿವಿಧ ಮಾಲ್‌ಗಳಲ್ಲಿ ಪಿವಿಆರ್‌ ಸಿನಿಮಾ ಇವೆ. ಸಿನಿ ಪ್ರಿಯರು ಪಿವಿಆರ್ ಸಿನಿಮಾದಲ್ಲಿ ಸಿನಿಮಾ ವೀಕ್ಷಿಸಲು ಟಿಕೆಟ್ ಬುಕ್ ಮಾಡಬಹುದಾಗಿದೆ.


  ಇದನ್ನೂ ಓದಿ: ಅಮೆಜಾನ್​ನ ಈ ಸೇಲ್​ನಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಶೇ.40 ರಷ್ಟು ಆಫರ್​ನಲ್ಲಿ ಖರೀದಿಸಿ! ಕೆಲವೇ ದಿನಗಳವರೆಗೆ ಮಾತ್ರ


  ಅದರಲ್ಲಿ ಸಿನಿಮಾ ಉದ್ಯಮದಲ್ಲಿನ ಇತ್ತೀಚಿನ ಅಪ್‌ಡೇಟ್‌ಗಳು ಹಾಗೂ ಮುಂಬರುವ ಸಿನಿಮಾ ಬಿಡುಗಡೆಗಳ ಮಾಹಿತಿಯನ್ನು ತಿಳಿಯಬಹುದಾಗಿದೆ. ಇವುಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಅಥವಾ ಓದಬಹುದು.


  ಬುಕ್​ ಮೈ ಶೋ ಆ್ಯಪ್​


  ಬುಕ್‌ ಮೈ ಶೋ ಭಾರತದ ಚಲನಚಿತ್ರ ಪ್ರೇಮಿಗಳಲ್ಲಿ ಅತ್ಯುತ್ತಮ ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಆಗಿದೆ. ಬುಕ್‌ ಮೈ ಶೋ ಆ್ಯಪ್​ನ ಅತ್ಯುತ್ತಮ ಫೀಚರ್‌ಯೆಂದರೆ, ಫಿಲ್ಮ್ ಬುಕ್ ಮಾಡುವುದರ ಜೊತೆಗೆ ನಿರ್ದಿಷ್ಟ ಸಿನೆಮಾವನ್ನು ಎಷ್ಟು ಜನರು ವೀಕ್ಷಿಸಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ. ಹಾಗೆಯೇ ಬುಕ್‌ ಮೈ ಶೋ ನಲ್ಲಿ ಸಿನಿಮಾವು ತಿಳಿಸುವ ಕಥೆಯ ಸಾರಾಂಶವನ್ನು ನೀವು ರೈಟಿಂಗ್ಸ್​​ ಮೂಲಕವೂ ಓದಬಹುದು. ನಿಮಗೆ ಇಷ್ಟವಾದ ಸಿನಿಮಾ ಪ್ರಕಾರಗಳ ಮೂಲಕ ನಿಮಗೆ ಬೇಕಾದ ಸಿನಿಮಾವನ್ನು ನೋಡಬಹುದು.


  ಸಾಂಕೇತಿಕ ಚಿತ್ರ


  ಐನಾಕ್ಸ್​ ಆ್ಯಪ್


  ಜನಪ್ರಿಯ ಚಲನಚಿತ್ರ ಟಿಕೆಟ್ ಬುಕಿಂಗ್ ಅಪ್ಲಿಕೇಶನ್​ಗಳಲ್ಲಿ ಐನಾಕ್ಸ್​ ಆ್ಯಪ್​ ಸಹ ಓಮದಾಗಿದೆ. ಸಿನೆಮಾ ಟಿಕೆಟ್‌ಗಳನ್ನು ಬುಕ್ ಮಾಡಲು ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಈ ಅಪ್ಲಿಕೇಶನ್​ ಅನ್ನು ಡೌನ್‌ಲೋಡ್ ಮಾಡಬಹುದು. ಇನ್ನು ಥಿಯೇಟರ್​ಗಳಲ್ಲಿ ಉತ್ತಮ ಆಡಿಯೋ, ವಿಡಿಯೋ ಗುಣಮಟ್ಟವನ್ನು ಬಯಸುವ ಸಿನಿಪ್ರಿಯರು ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಾರೆ. ಇನ್ನು ಈ ಅಪ್ಲಿಕೇಶನ್​ನಿಂದ ನಿಮಗೆ ಸಂತೋಷವಾಗದಿದ್ದರೆ, ಕಮೆಂಟ್ ಮೂಲಕ ಅಭಿಪ್ರಾಯ ತಿಳೀಸಬಹುದು.
  ಟಿಕೆಟ್​ ನ್ಯೂ ಆ್ಯಪ್​


  ಟಿಕೆಟ್‌ ನ್ಯೂ ಎಂಬುದು ಒಂದು ಅದ್ಭುತವಾದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಆಗಿದ್ದು, ರಿಯಾಯಿತಿ ದರದಲ್ಲಿ ಸಿನಿಮಾ ಟಿಕೆಟ್ ಪಡೆಯಲು ಈ ಆ್ಯಪ್ ಉತ್ತಮವಾಗಿದೆ. ಇನ್ನು ಈ ವೆಬ್‌ಸೈಟ್ ಮತ್ತು ಆ್ಯಪ್​ನಲ್ಲಿ ಅಮೆಜಾನ್ ಪೇ ಮತ್ತು ಪೇಟಿಎಂನಂತಹ ಅಪ್ಲಿಕೇಶನ್​ನಿಂದ ಪಾವತಿ ಮಾಡುವುದರಿಂದ ಕೂಪನ್‌ಗಳು, ಬ್ಯಾಂಕ್‌ಗಳು ಒದಗಿಸಿದ ಮೊಬೈಲ್ ವ್ಯಾಲೆಟ್‌ಗಳು ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಸ್ವೀಕರಿಸಲಾಗುತ್ತದೆ. ಈ ವೆಬ್‌ಸೈಟ್ ಮತ್ತು ಆ್ಯಪ್ ಭಾರತದಾದ್ಯಂತ ವಿವಿಧ ಚಿತ್ರಮಂದಿರಗಳು, ಐನಾಕ್ಸ್​, ಕಾರ್ನಿವಲ್, ವೇವ್ ಮತ್ತು ಇನ್ನೋವೇಟಿವ್ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾಗಳನ್ನು ಪ್ರದರ್ಶಿಸುತ್ತದೆ.

  Published by:Prajwal B
  First published: