• Home
 • »
 • News
 • »
 • tech
 • »
 • Jio Recharge Plans: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ಭಾರೀ ಅಗ್ಗದ ಎರಡು ರೀಚಾರ್ಜ್​ ಪ್ಲ್ಯಾನ್​ಗಳ ಬಿಡುಗಡೆ

Jio Recharge Plans: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ಭಾರೀ ಅಗ್ಗದ ಎರಡು ರೀಚಾರ್ಜ್​ ಪ್ಲ್ಯಾನ್​ಗಳ ಬಿಡುಗಡೆ

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ

ಜಿಯೋ ಕಂಪೆನಿ ಸದ್ಯ ತನ್ನ ಗ್ರಾಹಕರಿಗಾಗಿ ಆಕರ್ಷಕ ಎರಡು ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ. ಇದು ಈ ಬಾರಿಯ ಜಿಯೋ ಬಿಡುಗಡೆ ಮಾಡಿದಂತಹ ಹೊಸ ಯೋಜನೆಗಳಾಗಿದ್ದು, ಇದರಲ್ಲಿ ಡೇಟಾ ಸೌಲಭ್ಯಗಳು ಉತ್ತಮವಾಗಿದೆ.

 • Share this:

  ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Company). ಆದರೆ ಅವುಗಳಲ್ಲಿ ಕೆಲವೊಂದು ಕಂಪೆನಿಗಳು ಮಾತ್ರ ಜನಪ್ರಿಯತೆಯನ್ನು ಪಡೆದಿದೆ. ಟೆಲಿಕಾಂ ಕಂಪೆನಿಗಳಲ್ಲಿ ನಂಬರ್​ 1 ಕಂಪೆನಿ ಎಂದು ಗುರುತಿಸಿರುವ ಜಿಯೋ ಟೆಲಿಕಾಂ (Jio Telecom) ತನ್ನ ಗ್ರಾಹಕರಿಗೆ ಅನುಕೂಲಕರವಾದ ರೀಚಾರ್ಜ್​ ಯೋಜನೆಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನತ್ತ ಸೆಳೆಯುತ್ತಿವೆ. ರಿಲಯನ್ಸ್​ ಜಿಯೋ ಅಗ್ಗದ ಬೆಲೆಯ ರೀಚಾರ್ಜ್​ ಯೋಜನೆಗಳಿಗೆ ಭಾರೀ ಪ್ರಚಲಿತವಾಗಿದೆ. ಜಿಯೋದಿಂದ ಬಿಡುಗಡೆಯಾಗುವಂತಹ ಎಲ್ಲಾ ರೀಚಾರ್ಜ್ ಪ್ಲ್ಯಾನ್​ಗಳು (Recharge Plans) ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಇದು ಉತ್ತಮ ಡೇಟಾ, ಅನ್ಲಿಮಿಟೆಡ್​ ಉಚಿತವಾಗಿ ಕಾಲ್​ ಮಾಡುವ ಸೌಲಭ್ಯ, ಎಸ್​ಎಮ್​ಎಸ್​ ಸೌಲಭ್ಯಗಳು ದೊರೆಯುತ್ತವೆ.


  ಜಿಯೋ ಕಂಪೆನಿ ಸದ್ಯ ತನ್ನ ಗ್ರಾಹಕರಿಗಾಗಿ ಆಕರ್ಷಕ ಎರಡು ಪ್ರೀಪೇಯ್ಡ್​ ರೀಚಾರ್ಜ್​ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ. ಇದು ಈ ಬಾರಿಯ ಜಿಯೋ ಬಿಡುಗಡೆ ಮಾಡಿದಂತಹ ಹೊಸ ಯೋಜನೆಗಳಾಗಿದ್ದು, ಇದರಲ್ಲಿ ಡೇಟಾ ಸೌಲಭ್ಯಗಳು ಉತ್ತಮವಾಗಿದೆ.


  ಜಿಯೋನ ಹೊಸ 899 ರೂಪಾಯಿ ರೀಚಾರ್ಜ್​ ಪ್ಲ್ಯಾನ್​


  ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ 899 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು​ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯು ಗ್ರಾಹಕರಿಗೆ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನಗಳನ್ನು ನೀಡುತ್ತದೆ. ಒಟ್ಟಾರೆಯಾಗಿ ಇದರ ಪೂರ್ಣ ವ್ಯಾಲಿಡಿಟಿ ಅವಧಿಗೆ 225ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ.
  ಹಾಗೆಯೇ ಅನ್ಲಿಮಿಟೆಡ್​ ವಾಯ್ಸ್​ ಕಾಲ್​ ಪ್ರಯೋಜನ, ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಜಿಯೋ ಆ್ಯಪ್ಸ್​ಗಳ ಸೌಲಭ್ಯ ಸಹ ದೊರೆಯುತ್ತದೆ.


  ಜಿಯೋ 349 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್​


  ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ 349 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್​ ಮಾತ್ರ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಈ ಯೋಜನೆಯು ಪ್ರತಿದಿನ 2.5 ಜಿಬಿ ಡೇಟಾ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತದೆ. ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 75GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ, ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಜಿಯೋ ಆ್ಯಪ್ಸ್‌ಗಳು ಸಹ ಲಭ್ಯವಾಗಲಿವೆ.


  ಜಿಯೋ 719 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಜಿಯೋ ಟೆಲಿಕಾಂನ 719 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿಕೊಂಡಟಿದೆ. ಈ ರೀಚಾರ್ಜ್​ ಪ್ಲ್ಯಾನ್​ ಮೂಲಕ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಅನ್ನು ಸಹ ಮಾಡಬಹುದಾಗಿದೆ.


  ಜಿಯೋ ಟೆಲಿಕಾಂ


  ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನ್ಲಿಮಿಟೆಡ್​ ಉಚಿತ ವಾಯ್ಸ್​ ಕಾಲ್ ಮಾಡುವ ಸೌಲಭ್ಯ ದೊರೆಯುತ್ತದೆ.. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168ಜಿಬಿ ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆ್ಯಪ್​ಗಳ ಸೌಲಭ್ಯವೂ ಇದರಲ್ಲಿದೆ.


  ಜಿಯೋ 666 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಜಿಯೋ 666 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ವ್ಯಾಲಿಡಿಯ ಸಮಯದಲ್ಲಿ ಜಿಯೋ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ.


  ಇದನ್ನೂ ಓದಿ: ಐಫೋನ್​ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಗುಡ್ ನ್ಯೂಸ್​! 12 ಸಾವಿರಕ್ಕೂ ಅಧಿಕ ರಿಯಾಯಿತಿ ಲಭ್ಯ


  ಹಾಗೆಯೇ ಪ್ರತಿದಿನ 100  ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡುವ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಮಾಡುವ ಸೌಲಭ್ಯವೂ ಇದೆ.

  Published by:Prajwal B
  First published: