• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Valentine's Day 2023: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ರೀಚಾರ್ಜ್ ಬೆಲೆಯಲ್ಲಿ ಭಾರೀ ರಿಯಾಯಿತಿ

Valentine's Day 2023: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ರೀಚಾರ್ಜ್ ಬೆಲೆಯಲ್ಲಿ ಭಾರೀ ರಿಯಾಯಿತಿ

ಜಿಯೋ

ಜಿಯೋ

ಜಿಯೋ ಕಂಪೆನಿ ಸದ್ಯ ಪ್ರೇಮಿಗಳ ದಿನದ ಪ್ರಯುಕ್ತ ಭರ್ಜರಿ ಆಫರ್ಸ್​​​ ಅನ್ನು ಘೋಷಿಸಿದೆ. ಈ ಮೂಲಕ ಒಮ್ಮೆ ರೀಚಾರ್ಜ್​ ಮಾಡಿದ್ರೆ ಹೆಚ್ಚುವರಿ ಡೇಟಾ, ಉಡುಗೊರೆಗಳು ಮತ್ತು ಫುಡ್​ ಆರ್ಡರ್ ಮಾಡುವಂತಹ ಆಫರ್​ಗಳು ದೊರೆಯಲಿದೆ. ಹಾಗಿದ್ರೆ ಯಾವ ರೀಚಾರ್ಜ್​ ಬೆಲೆಯಲ್ಲಿ ಈ ಸೌಲಭ್ಯಗಳಿವೆ ಎಂಬುದನ್ನು ಈ ಲೇಖನದಲ್ಲಿ ಓದಿ.

ಮುಂದೆ ಓದಿ ...
  • Share this:

    ವ್ಯಾಲೆಂಟೈನ್ಸ್​ ದಿನದ (Valentine's Day) ಪ್ರಯುಕ್ತ ಹಲವಾರು ಸ್ಮಾರ್ಟ್​​ ಗ್ಯಾಜೆಟ್ಸ್ (Smart Gadgets)​, ಸ್ಮಾರ್ಟ್​​​ಫೋನ್​ ತಯಾರಿಕಾ ಕಂಪೆನಿಗಳು ತಮ್ಮ ಬ್ರಾಂಡ್​ಗಳ ಮೇಲೆ ವಿಶೇಷ ಆಫರ್​ ಸೇಲ್​ ಅನ್ನು ಆರಂಭಿಸಿದೆ. ಈ ಆಫರ್​ಗಳು ಪ್ರೇಮಿಗಳಿಗೆ ಭರ್ಜರಿ ಕೊಡುಗೆಯಾಗಿದೆ. ಇದರಿಂದ ಯಾರಿಗೆ ಬೇಕಾದರು  ಗಿಫ್ಟ್ (Gift)​​ ಕೊಡಲು ಅಥವಾ ಹೊಸ ಸ್ಮಾರ್ಟ್​​​ಫೋನ್​​ಗಳನ್ನು ಖರೀದಿಸುವವರಿಗೆ ತುಂಬಾನೇ ಸಹಕಾರಿಯಾಗಲಿದೆ. ಈ ಮಧ್ಯೆ ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ (Telecom Company) ರಿಲಯನ್ಸ್ ಜಿಯೋ ಪ್ರೇಮಿಗಳಿಗಾಗಿ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಇದು ಪ್ರೇಮಿಗಳ ದಿನದ ಪ್ರಯುಕ್ತ ನೀಡುತ್ತಿರುವಂತಹ ಆಫರ್​​ಗಳಾಗಿದ್ದು, ಈ ಮೂಲಕ ಜಿಯೋ (Jio) ಗ್ರಾಹಕರು ಹೆಚ್ಚುವರಿ ಡೇಟಾ ಸೌಲಭ್ಯಗಳ ಜೊತೆಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ.


    ಜಿಯೋ ಕಂಪೆನಿ ಸದ್ಯ ಪ್ರೇಮಿಗಳ ದಿನದ ಪ್ರಯುಕ್ತ ಭರ್ಜರಿ ಆಫರ್ಸ್​​​ ಅನ್ನು ಘೋಷಿಸಿದೆ. ಈ ಮೂಲಕ ಒಮ್ಮೆ ರೀಚಾರ್ಜ್​ ಮಾಡಿದ್ರೆ ಹೆಚ್ಚುವರಿ ಡೇಟಾ, ಉಡುಗೊರೆಗಳು ಮತ್ತು ಫುಡ್​ ಆರ್ಡರ್ ಮಾಡುವಂತಹ ಆಫರ್​ಗಳು ದೊರೆಯಲಿದೆ. ಹಾಗಿದ್ರೆ ಯಾವ ರೀಚಾರ್ಜ್​ ಬೆಲೆಯಲ್ಲಿ ಈ ಸೌಲಭ್ಯಗಳಿವೆ ಎಂಬುದನ್ನು ಈ ಲೇಖನದಲ್ಲಿ ಓದಿ.


    ಜಿಯೋನ ಆಫರ್ಸ್​​ಗಳು ಏನೆಲ್ಲಾ ಇದೆ?


    ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಜಿಯೋ ಗ್ರಾಹಕರಿಗಾಗಿ ನಾಲ್ಕು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಈ ಆಫರ್​​ ಮೂಲಕ ಬಳಕೆದಾರರು ಹೆಚ್ಚುವರಿ 12ಜಿಬಿ 4ಜಿ ಡೇಟಾ, 4,500 ಅಥವಾ ಅದಕ್ಕಿಂತ ಹೆಚ್ಚಿನ ದರದ ಫ್ಲೈಟ್ ಬುಕಿಂಗ್‌ನಲ್ಲಿ 750 ರೂಪಾಯಿವರೆಗೆ ರಿಯಾಯಿತಿ, ಫರ್ನ್ಸ್ ಮತ್ತು ಪೆಟಲ್ಸ್‌ನಿಂದ 799 ರೂಪಾಯಿಗಳ ಕನಿಷ್ಠ ಆರ್ಡರ್‌ನಲ್ಲಿ 150 ರೂಪಾಯಿಗಳ ರಿಯಾಯಿತಿ ಹಾಗೂ 199 ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ಆಹಾರ ಖರೀದಿ ಮಾಡಿದರೆ ಮೆಕ್‌ಡೊನಾಲ್ಡ್ಸ್‌ನಲ್ಲಿ 105 ರೂಪಾಯಿ ಬೆಲೆಯ ಉಚಿತ ಬರ್ಗರ್‌ ಸಿಗಲಿದೆ.


    ಇದನ್ನೂ ಓದಿ: ಮೊದಲ ಮಾರಾಟದಲ್ಲೇ ಆಫರ್ಸ್​ ಘೋಷಿಸಿದ ಒಪ್ಪೋ ಕಂಪೆನಿ! 20 ಸಾವಿರ ರಿಯಾಯಿತಿ ಲಭ್ಯ


    ಈ ಆಫರ್​​ಗಳನ್ನು ಬಳಕೆ ಮಾಡುವುದು ಹೇಗೆ?


    ಇನ್ನು 12ಜಿಬಿ ಹೆಚ್ಚುವರಿ 4G ಡೇಟಾವನ್ನು ರಿಡೀಮ್ ಮಾಡಲು ಜಿಯೋ ಬಳಕೆದಾರರು ಮೈ ಜಿಯೋ ಆ್ಯಪ್​​ನಲ್ಲಿ 'ವೋಚರ್' ವಿಭಾಗಕ್ಕೆ ಹೋಗಿ ಚೆಕ್​ ಮಾಡಬಹುದು. ಅಲ್ಲಿ ಹೆಚ್ಚುವರಿ ಡೇಟಾವು ನಿಮ್ಮ ಅಸ್ತಿತ್ವದಲ್ಲಿರುವ ಪ್ಲ್ಯಾನ್‌ನಂತೆಯೇ ಅದೇ ಮಾನ್ಯತೆಯನ್ನು ಹೊಂದಿರುತ್ತದೆ.


    ನೀವು ಫ್ಲೈಟ್ ಬುಕಿಂಗ್‌ನಲ್ಲಿ 750 ರೂಪಾಯಿ ರಿಯಾಯಿತಿ ಪಡೆಯಬೇಕು ಎಂದುಕೊಂಡರೆ ಕೂಪನ್ ಕೋಡ್ ವಿವರಗಳಿಗಾಗಿ ಮೈ ಜಿಯೋ ಆ್ಯಪ್​​ನಲ್ಲಿರುವ 'ಕೂಪನ್‌ಗಳು ಮತ್ತು ವಿನ್ನಿಂಗ್ಸ್‌' ಟ್ಯಾಬ್‌ಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ನಂತರ ರಿಯಾಯಿತಿಯನ್ನು ಇಕ್ಸಿಗೋ ಆ್ಯಪ್​​ ಮೂಲಕ ಪಡೆಯಬಹುದು. ಹಾಗೆಯೇ ಫರ್ನ್ಸ್ ಮತ್ತು ಪೆಟಲ್ಸ್‌ ಮೂಲಕ 150 ರೂಪಾಯಿಗಳ ಕೂಪನ್ ಪಡೆಯಬೇಕು ಎಂದರೆ 'ಕೂಪನ್‌ಗಳು ಮತ್ತು ವಿನ್ನಿಂಗ್ಸ್‌' ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.


    ಜಿಯೋ


    ಇದರೊಂದಿಗೆ ಮೆಕ್‌ಡೊನಾಲ್ಡ್ಸ್ ವಿಷಯಕ್ಕೆ ಬಂದರೆ ಬಳಕೆದಾರರು 200 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆರ್ಡರ್ ಮಾಡಿದರೆ 105 ರೂಪಾಯಿ ಮೌಲ್ಯದ ಉಚಿತ ಮೆಕ್‌ಆಲೂ ಟಿಕ್ಕಿ ಅಥವಾ ಚಿಕನ್ ಕಬಾಬ್ ಬರ್ಗರ್ ಅನ್ನು ಪಡೆಯಬಹುದಾಗಿದೆ. ಇದನ್ನು ಸಹ 'ಕೂಪನ್‌ಗಳು ಮತ್ತು ವಿನ್ನಿಂಗ್ಸ್‌' ಅನ್ನು ಸೆಲೆಕ್ಟ್​ ಮಾಡುವ ಮೂಲಕ ಚೆಕ್ ಮಾಡಬಹುದು.




    ಯಾರಿಗೆಲ್ಲಾ ಲಭ್ಯವಾಗುತ್ತದೆ?


    ಈ ಮೇಲೆ ತಿಳಿಸಿದ ಎಲ್ಲಾ ಆಫರ್‌ 249 ರೂ., 899 ರೂ. ಹಾಗೂ 2,999 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ ಲಭ್ಯವಾಗಲಿದ್ದು, ಫೆಬ್ರವರಿ 10 ಅಥವಾ ನಂತರ ರೀಚಾರ್ಜ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಸಿಗಲಿದೆ. ಇನ್ನು ಈ ಕೂಪನ್‌ಗಳು ರೀಚಾರ್ಜ್ ಮಾಡಿದ 72 ಗಂಟೆಗಳ ಒಳಗೆ ಮೈ ಜಿಯೋ ಆ್ಯಪ್​ ಅಕೌಂಟ್​ಗೆ ಕ್ರೆಡಿಟ್ ಆಗಲಿದ್ದು, ಈ ಕೂಪನ್‌ಗಳು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ.

    Published by:Prajwal B
    First published: