ದೇಶದ ಟೆಲಿಕಾಂ ಕಂಪೆನಿಗಳಲ್ಲಿ (Telecom Company) ನಂಬರ್ ಒನ್ ಎಂದು ಗುರುತಿಸಿಕೊಂಡಿರುವ ಜಿಯೋ ಕಂಪೆನಿ (Jio Company) ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ರೀಚಾರ್ಜ್ ಬೆಲೆಗಳನ್ನು ಪರಿಚಯಿಸುತ್ತಲೇ ಇದೆ. ಜಿಯೋ ಕಂಪೆನಿ ಈ ಬಾರಿ ತನ್ನ ಗ್ರಾಹಕರಿಗಾಗಿ ಹಲವಾರು ಪೋಸ್ಟ್‌ಪೇಯ್ಡ್, ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು (Recharge Plans) ನೀಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಜಿಯೋ ಟೆಲಿಕಾಂ ಪ್ರತಿದಿನ ಅಧಿಕ ಡೇಟಾ ಸೌಲಭ್ಯದ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಇರುವ ಕೆಲವು ಪ್ಲ್ಯಾನ್‌ಗಳನ್ನು ಹೊಂದಿದೆ. ಇದರೊಂದಿಗೆ ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನಗಳ ಪೋಸ್ಟ್‌ಪೇಯ್ಡ್ ಆಯ್ಕೆಗಳನ್ನು ಹೊಂದಿದೆ.
ಜಿಯೋ ಇದುವರೆಗೆ ಹಲವಾರು ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಪೋಸ್ಟ್‌ಪೇಯ್ಡ್ ಯೋಜನೆಗಳು ಬಹಳಷ್ಟು ಜನಪ್ರಿಯತೆಯಲ್ಲಿದೆ. ಇತ್ತೀಚೆಗೆ ಜಿಯೋ ಕಡಿಮೆ ಬೆಲೆಯ ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಜಿಯೋ 399 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ 399 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 75ಜಿಬಿ ಡೇಟಾದೊಂದಿಗೆ ಅನಿಯಮಿತ ವಾಯ್ಸ್ ಕರೆ ಮಾಡುವ ಸೌಲಭ್ಯ ಸಹ ದೊರೆಯುತ್ತದೆ. ಇದರ ಜೊತೆಗೆ ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್ನಲ್ಲಿ 200ಜಿಬಿವರೆಗೆ ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಪ್ರಯೋಜನ ಲಭ್ಯವಾಗಲಿದೆ.
ಇದನ್ನೂ ಓದಿ: ಮೊಬೈಲ್ ಚಾರ್ಜರ್ಗಳು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಮಾತ್ರ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ
ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್, ಒಂದು ವರ್ಷದ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 599 ರೂಪಾಯಿ ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್
ಜಿಯೋ 599 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಒಟ್ಟು 100 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಅದೇ ರೀತಿ ಅನಿಯಮಿತ ವಾಯ್ಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇನ್ನು ಈ ಯೋಜನೆ ಮೂಲಕ ಗ್ರಾಹಕರು ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಪ್ರಯೋಜನ ಸಹ ದೊರೆಯುತ್ತದೆ.
ಹಾಗೆಯೇ ಈ ಪ್ಲ್ಯಾನ್ನಲ್ಲಿ 200ಜಿಬಿ ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇನ್ನುಳಿದಂತೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸೌಲಭ್ಯ ಸಹ ಪಡೆಯಬಹುದು. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 799 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ 799 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 150ಜಿಬಿ ಡೇಟಾದೊಂದಿಗೆ ಅನ್ಲಿಮಿ ವಾಯ್ಸ್ ಕರೆ ಮಾಡುವ ಸೌಲಭ್ಯ ದೊರೆಯುತ್ತದೆ. ಇದರ ಜೊತೆಗೆ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್ನಲ್ಲಿ 200ಜಿಬಿಯಷ್ಟು ಡೇಟಾ ರೋಲ್ ಓವರ್ ಆಯ್ಕೆಯೂ ದೊರೆಯಲಿದೆ. ಇದರೊಂದಿಗೆ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿಯಾಗಿ ಗ್ರಾಹಕರಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಸಿಗಲಿದೆ. ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ